ಕನ್ನಡದಲ್ಲಿ ಮರ್ಡರ್ ಮಿಸ್ಟಿç ಕಥೆಯ ಸಾಕಷ್ಟು ಸಿನಿಮಾಗಳು ತೆರೆಗೆ ಬಂದಿವೆ. ಆ ಸಾಲಿಗೆ ಈಗ ೪ಎನ್೬ ಕೂಡ ಸೇರಿದೆ. ನಿಗೂಢ ಕೊಲೆಗಳ ಸುತ್ತ ಚಿತ್ರದ ಕಥೆ ಸಾಗುತ್ತದೆ. ಆಕೆ ನೈಶಾ, ಚುರುಕು ಬುದ್ದಿಯ ಹುಡುಗಿ ಬಾಲ್ಯದಲ್ಲಿಯೇ ಮನೆಯಲ್ಲಿ ಕಳೆದು ಹೋದ ವಸ್ತುಗಳನ್ನು ಹುಡುಕಿಕೊಡುವ ಬುದ್ದಿವಂತೆ.
ಆಕೆ ಮುಂದೆ ಪೊಲೀಸ್ ಅಧಿಕಾರಿಯಾಗಬೇಕು ಎಂಬುದು ಆಕೆಯ ಪೋಷಕರ ಆಸೆ ಅಂತೆಯೇ ನೈಶಾ ಪೊರೆನ್ಸಿಕ್ ಅಧಿಕಾರಿಯಾಗುತ್ತಾಳೆ. ಹೀಗಿರು ವಾಗಲೇ ಕೆಲವು ಪ್ರಾಮಾಣಿಕ ವೈದ್ಯರು ನಿಗೂಢವಾಗಿ ಸಾವನ್ನಪ್ಪುತ್ತಿರುತ್ತಾರೆ. ಇದಕ್ಕೆ ಕಾರಣ ಕಗ್ಗಂಟಾಗಿರುತ್ತದೆ. ಆಗ ಪೊಲೀಸ್ ಅಧಿಕಾರಿಗಳು ನೈಶಾಳ ಸಹಾಯ ಪಡೆದು ತನಿಖೆ ಮಾಡುತ್ತಾರೆ, ಸತ್ಯಾಂಶ ತಿಳಿಯುತ್ತಾರೆ. ಇಲ್ಲಿ ನಾಲ್ಕು ಕೊಲೆಗಳು ನಡೆದಿರುತ್ತವೆ. ಅದರ ಹಿಂದೆ ಆರು ಜನ ಪ್ರಭಾವಿಗಳ ಕೈವಾಡವಿರುತ್ತದೆ. ಕೊಲೆಯಾಗಿದ್ದು ಯಾಕೆ, ಅದರ ಕಾರಣ ಏನು ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕು.
ಪೊರೆನ್ಸಿಕ್ ಅಧಿಕಾರಿಯಾಗಿ ರಚನಾ ಇಂದರ್ ಮೆಚ್ಚುವ ಅಭಿನಯ ತೋರಿದ್ದಾರೆ. ಈ ಹಿಂದಿನ ಸಿನಿಮಾಗಿಂತ ರಚನಾ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡು ಗಮನಸೆಳೆದಿದ್ದಾರೆ. ಭವಾನಿ ಪ್ರಕಾಶ್ ಪೊಲೀಸ್ ಅಧಿಕಾರಿಯಾಗಿ ರಗಡ್ ಆಗಿ ಮಿಂಚಿದ್ದಾರೆ. ನವೀನ್ ಮೊದಲ ಚಿತ್ರವಾದರೂ ನಟನೆ ಯಲ್ಲಿ ಮನಗೆದ್ದಿದ್ದಾರೆ. ಉಳಿದಂತೆ ಆದ್ಯಾ, ಆಶಿತಾ, ಅರ್ಜುನ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ನಿರ್ದೇಶಕ ದರ್ಶನ್ ಶ್ರೀನಿವಾಸ್ ಗಟ್ಟಿ ಕಥೆ ಇಟ್ಟುಕೊಂಡು ಚಿತ್ರವನ್ನು ತೆರೆಗೆ ತಂದಿದ್ದಾರೆ. ಆದರೆ ಕಥೆಗೆ ಇನ್ನಷ್ಟು ವೇಗ ಕೊಟ್ಟು, ರೋಚಕತೆ ಹೆಚ್ಚಿಸಿದ್ದರೆ ಚಿತ್ರ ಇನ್ನೂ ಉತ್ತಮವಾಗಿ ಮೂಡಿಬರುತ್ತಿತ್ತು. ಹಿನ್ನೆಲೆ ಸಂಗೀತ ಕೊಂಚ ಬೋರ್ ಹೊಡೆಸುತ್ತದೆ, ಛಾಯಾ ಗ್ರಹಣಕ್ಕೆ ಫುಲ್ ಮಾರ್ಕ್ಸ್ ನೀಡಬಹುದು. ಒಟ್ಟಾರೆ ೪ಎನ್೬ ಚಿತ್ರವನ್ನು ಒಮ್ಮೆ ಕಣ್ತುಂಬಿಕೊಳ್ಳಲು ಅಡ್ಡಿ ಇಲ್ಲ.
ಬಾಕ್ಸ್
ಚಿತ್ರ : ೪ ಎನ್ ೬
ನಿರ್ದೇಶನ : ದರ್ಶನ್ ಶ್ರೀನಿವಾಸ್
ನಿರ್ಮಾಣ: ಎಸ್.ಸಾಯಿ ಪ್ರೀತಿ
ತಾರಾಗಣ : ರಚನಾ ಇಂದರ್, ನವೀನ್, ಭವಾನಿ ಪ್ರಕಾಶ್, ಆದ್ಯಾ ಮುಂತಾದವರು
ರೇಟಿAಗ್ : ***