Friday, 21st June 2024

ರಿಲಾಕ್‌ಸ್‌ ಆದ ಸತ್ಯ !

ಕ್ರೈಂ, ಥ್ರಿಲ್ಲರ್ ಹಾಗೂ ಕಾಮಿಡಿ ಜಾನರ್ ಹೊಂದಿರುವ ‘ರಿಲ್ಯಾಾಕ್‌ಸ್‌ ಸತ್ಯ’ ಚಿತ್ರ ತೆರೆಗೆ ಬರಲು ಸಜ್ಜಾಾಗಿದೆ. ಬದುಕಿನಲ್ಲಿ ಮನುಷ್ಯನ ಭಾವನೆಗಳು ಗರಿಷ್ಠ ಮಟ್ಟಕ್ಕೆೆ ತಲುಪುತ್ತದೆ. ಈ ಹಂತದಲ್ಲಿ ಹತಾಶಗೆ ಒಳಗಾದಾಗ ಆತನ ಅಂತರಾಳದ ಮನಸ್ಸು ಗೊಂದಲ ಬೇಡ, ರಿಲಾಕ್‌ಸ್‌ ಎಂದು ಹೇಳುತ್ತಿಿರುತ್ತದೆ. ಹೀಗಾದಾಗ ಮುಂದೇನು ಎಂಬುದನ್ನು ನಿರ್ದೇಶಕ ನವೀನ್‌ರೆಡ್ಡಿಿ ಕುತೂಹಲ ಕಾಯ್ದಿಿರಿಸಿದ್ದಾಾರೆ.ೀ ಹಿಂದೆ ‘ಅಕಿರಾ’ ನಿರ್ದೇಶನ ಮಾಡಿರುವ ಇವರಿಗೆ ಎರಡನೆ ಅನುಭವ. ವಾಹನ ಚಾಲನ ತರಬೇತಿ ಶಾಲೆಯಲ್ಲಿ ಶಿಕ್ಷಕನಾಗಿ ಕಾಣಿಸಿಕೊಂಡಿರುವ ಪ್ರಭುಮುಂಡೇಕರ್ ನಾಯಕನಾಗಿ ಕಾಣಿಸಿಕೊಂಡಿದ್ದಾಾರೆ. ನಂದೇ, ನನ್ನಲೇ, ನನ್ನಿಿಂದ ಎಂದು ಸ್ವಗತವಾಗಿ ಮಾತನಾಡಿಕೊಳ್ಳುವ ಪಾತ್ರ ನಾಯಕನ್ನದ್ದಾಾಗಿದೆ. ಕೆಂಡಸಂಪಿಗೆಯ ಚೆಲುವೆ, ಟಗರು ಪುಟ್ಟಿಿ ನಟಿ ಮಾನ್ವಿಿತಾ ಹರೀಶ್ ನಾಯಕಿಯಾಗಿ ನಟಿಸಿದ್ದಾಾರೆ. ಚಿತ್ರದಲ್ಲಿ ಶ್ರೀಮಂತ ಉದ್ಯಮಿ ಮಗಳಾಗಿ ಬಣ್ಣಹಚ್ಚಿಿದ್ದಾಾರೆ.

ಬಹುತೇಕ ಚಿತ್ರಗಳಲ್ಲಿ ಖಳನಾಗಿರುವ ಉಗ್ರಂಮಂಜು ದಾಸಣ್ಣ ಹೆಸರಿನೊಂದಿಗೆ ವಿನೂತನ ಗೆಟಪ್‌ನಲ್ಲಿ ತೆರೆಯ ಮೇಲೆ ದರ್ಶನ ಕೊಡಲಿದ್ದಾಾರೆ. ಹಾಗೆಯೇ ಸ್ವಯಂವರಚಂದ್ರು ಕೂಡ ಚಿತ್ರದಲ್ಲಿದ್ದಾಾರೆ. ಭ್ರಷ್ಟ ಇನ್‌ಸ್‌‌ಪೆಕ್ಟರ್ ಆಗಿ ಮೈಕಲ್ ಜಾಕ್ಸನ್‌ರಂತೆ ಕುಣಿಯುತ್ತಾಾ ಅಪರಾದಿಗಳನ್ನು ಹಿಡಿಯುತ್ತಾಾರೆ ಪಾತ್ರ ಒಂದು ರೀತಿ ಹಾಸ್ಯಮಯವಾಗಿದ್ದರೂ, ಮನರಂಜನೆಗೆ ಪೂರಕವಾಗಿದೆ. ಈ ನಾಲ್ಕು ಪಾತ್ರಗಳ ಸುತ್ತ ಕತೆಯು ಸಾಗುತ್ತದೆ.

ಶಾಸಕ ರಾಮಲಿಂಗರೆಡ್ಡಿಿ ಚಿತ್ರದ ಟೀಸರನ್ನು ಬಿಡುಗಡೆಗೊಳಿಸಿದರು. ಜನರಿಗೆ ಮೊದಲ ಆಹ್ವಾಾನ ಪತ್ರಿಿಕೆ ಧ್ವನಿಸಾಂದ್ರಿಿಕೆ ಎಂದು ಹೇಳುತ್ತಿಿದ್ದರು. ತಂತ್ರಜ್ಞಾಾನ ಬೆಳೆದಂತೆ ಟೀಸರ್, ಟ್ರೇಲರ್ ಸಹ ಈ ಸಾಲಿಗೆ ಸೇರಿಕೊಂಡಿದೆ. ಎಂದು ಹೇಳಿ ಚಿತ್ರತಂಡಕ್ಕೆೆ ಶುಭಕೋರಿದರು. ನಟಿ ಮೇಘನಾಗಾಂವ್ಕರ್, ಕೃಷಿತಾಪಂಡ, ಸೂರಜ್‌ಗೌಡ, ಅಯೋಗ್ಯ ನಿರ್ದೇಶಕ ಮಹೇಶ್‌ಕುಮಾರ್ ಮುಂತಾದವರು ಹಾಜರಿದ್ದು ಚಿತ್ರ ಶತದಿನ ಪೂರೈಸಲೆಂದು ಶುಭಕೋರಿದರು. ನಾಲ್ಕು ಹಾಡುಗಳಿಗೆ ಆನಂದ್‌ರಾಜ್‌ವಿಕ್ರಂ ಸಂಗೀತ, ಯೋಗಿ ಛಾಯಾಗ್ರಹಣ, ಕೆಜಿಎಫ್ ಖ್ಯಾಾತಿ ಶ್ರೀಕಾಂತ್ ಸಂಕಲನ, ರಾಷ್ಟ್ರ ಪ್ರಶಸ್ತಿಿ ವಿಜೇತ ವಿಕ್ರಂಮೋರ್ ಸಾಹಸ, ಸಂಭಾಷಣೆ ಶಂಕರ್‌ರಮನ್, ಕಲರಿಸ್‌ಟ್‌ ಗೌತಂನಾಯಕ್ ನಿರ್ವಹಿಸಿದ್ದಾಾರೆ. ಮೋಹನ್‌ಕುಮಾರ್.ಹೆಚ್.ಆರ್, ಮೋಹನ್‌ರೆಡ್ಡಿಿ.ಜಿ ಮತ್ತು ಚೇತನ್.ಆರ್.ಬಿ. ಜಂಟಿಯಾಗಿ ನಿರ್ಮಾಣ ಮಾಡಿರುವ ಚಿತ್ರವು ನವೆಂಬರ್ 15ರಂದು ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *

error: Content is protected !!