Wednesday, 11th December 2024

ಮಧ್ಯಮ ವರ್ಗದವರ ಕಥೆ ವ್ಯಥೆ ಬಡ್ಡಿಮಗನ್ ಲೈಫ್

ಪ್ರಚಲಿತ ಸಮಾಜದಲ್ಲಿ ಮದ್ಯಮ ವರ್ಗದ ಜನರು ಜೀವನ ನಡೆಸಲು ಸಾಕಾಗದೆ ಸಾಲ ಪಡೆಯುತ್ತಾಾರೆ. ಮುಂದೆ ಅಸಲಿನೊಂದಿಗೆ ಬಡ್ಡಿಿ ಪಾವತಿಸಲು ಹೆಣಗಬೇಕಾಗುತ್ತದೆ. ಇಂತಹ ಘಟನೆಗಳು ಘಟಿಸುತ್ತಾಾ ಬದುಕಿನೊಂದಿಗೆ ಹೋರಾಟ ಮಾಡಬೇಕಾಗುತ್ತದೆ. ಇವೆಲ್ಲಾಾ ಅಂಶಗಳನ್ನು ದಾಖಲಿಸುವ ಜತೆಗೆ ಮುದ್ದಾಾದ ಪ್ರೀತಿ ಕತೆಯು ‘ಬಡ್ಡಿಿ ಮಗನ್ ಲೈಫು’ ಚಿತ್ರದಲ್ಲಿ ತೋರಿಸಲಾಗುತ್ತಿಿದೆ. ನೋಡುಗನಿಗೆ ನಮ್ಮ ಅಕ್ಕ ಪಕ್ಕದ ಮನೆಯಲ್ಲಿ ನಡೆಯುತ್ತಿಿರುವಂತೆ ಭಾಸವಾಗುತ್ತದೆ. ಇದಕ್ಕೆೆ ಪೂರಕವಾಗಿ ಅಕ್ಕಪಕ್ಕದವರ ಕತೆಯ ಅನುಭವಗಳೆಂದು ಇಂಗ್ಲೀಷ್ ಅಡಬರಹದೊಂದಿಗೆ ಹೇಳಿಕೊಂಡಿದ್ದಾಾರೆ. ಪವನ್‌ಕುಮಾರ್, ಪ್ರಸಾದ್ ಜಂಟಿಯಾಗಿ ನಿರ್ದೇಶನ, ಇದರಲ್ಲಿ ಮೊದಲನೆಯವರು ಸಂಕಲನ ಮತ್ತು ಗ್ರೀನ್ ಚಿಲ್ಲಿ ಎಂಟರ್‌ಟೈನ್ ಮೆಂಟ್ ಮೂಲಕ ಬಂಡವಾಳ ಹೂಡಿದ್ದಾಾರೆ. ಶೇಕಡ 70ರಷ್ಟು ಚಿತ್ರೀಕರಣವು ಚಾಮುಂಡಿಬೆಟ್ಟ, ಉಳಿದಂತೆ ಮೈಸೂರು ಮತ್ತು ಮಂಡ್ಯಾಾದಲ್ಲಿ ಇಲ್ಲಿಯವರೆಗೂ ಯಾರೂ ನೋಡದ ಜಾಗದಲ್ಲಿ ಸೆರೆಹಿಡಿದಿರುವುದು ವಿಶೇಷ.

ಬ್ರಾಹ್ಮಣ ಹುಡುಗ, ಮನೆಯಲ್ಲಿ ಭಯಸ್ಥ, ಹೊರಗಡೆ ಧೈರ್ಯಶಾಲಿಯಾಗಿರುವ ಸಚ್ಚಿಿನ್ ಶ್ರೀಧರ್ ನಾಯಕ. ನಟಿ ಐಶ್ವರ್ಯರಾವ್ ನಾಯಕಿಯಾಗಿ ನಟಿಸಿದ್ದು, ಊರಿನ ಗೌಡರ ಮಗಳಾಗಿ ಕಾಣಿಸಿಕೊಂಡಿದ್ದಾಾರೆ. ಬಡ್ಡಿಿ ಬಸಪ್ಪನಾಗಿ ಬಲರಾಜವಾಡಿ ನಾಯಕಿಯ ತಂದೆ. ದುಡ್ಡು ಮಾಡೋ ಆಸೆ, ಅದು ಒಳ್ಳೆೆಯ-ಕೆಟ್ಟದಾದರೂ ಪರವಾಗಿಲ್ಲ. ಇದರಿಂದ ಬೇರೆಯವರು ತೊಂದರೆ ಅನುಭವಿಸಬೇಕಾಗುತ್ತದೆ. ಇದೇ ಗುಣವುಳ್ಳ ಪಾತ್ರಕ್ಕೆೆ ರಜನಿಕಾಂತ್. ಸುಸ್ತಿಿದಾರರಿಂದ ಹಣ ವಸೂಲಿ ಮಾಡುವ ವಸೂಲಿಗಾರನಾಗಿ ಅರ್ಜುನ್‌ಸುಹಾಸ್, ಸಂಗೀತ ಒದಗಿಸುತ್ತಿಿದ್ದ ಪೂರ್ಣಚಂದ್ರತೇಜಸ್ವಿಿ ಮೊದಲಬಾರಿ ನಟನಾಗಿ ಬಣ್ಣ ಹಚ್ಚಿಿದ್ದಾಾರೆ. ಇದಲ್ಲದೆ ರಸ್ತೆೆಯಲ್ಲಿ ಕಾಣುವ ಒಂದಷ್ಟು ಭಿಕ್ಷುಕರಿಗೆ ಬಣ್ಣ ಹಚ್ಚಿಿಸಿ ಕ್ಯಾಾಮಾರ ಮುಂದೆ ನಿಲ್ಲಿಸಿದ್ದಾಾರಂತೆ. ನಾಲ್ಕು ಹಾಡುಗಳಿಗೆ ಆಶಿಕ್‌ಅರ್ಜುನ್ ಹಾಗೂ ಪ್ರೊೊಮೋಷನ್ ಗೀತೆಗೆ ಪೂರ್ಣಚಂದ್ರತೇಜಸ್ವಿಿ ಸಂಗೀತ ಒದಗಿಸಿದ್ದಾಾರೆ. ಛಾಯಾಗ್ರಹಣ ಲಿವಿತ್, ನೃತ್ಯ ಸಚಿನ್‌ಕುಮಾರ್ ನಿರ್ವಹಿಸಿದ್ದಾಾರೆ. ಈಗಾಗಲೇ ‘ಏನ್ ಚಂದಾನೊ ತಕೊ…’ ವಿಡಿಯೋ ಹಾಡು ವೈರಲ್ ಆಗಿರುವುದು ಪ್ಲಸ್ ಪಾಯಿಂಟ್ ಆಗಿದೆ. ಸೆನ್ಸಾಾರ್‌ನವರು ಯಾವುದೇ ದೃಶ್ಯಕ್ಕೆೆ ಆಕ್ಷೇಪಣೆ ವ್ಯಕ್ತಪಡಿಸದೆ ಶುದ್ಧ ‘ಯು’ ಪ್ರಮಾಣ ಪತ್ರ ನೀಡಿರುವುದು ಮತ್ತೊೊಂದು ಹಿರಿಮೆಯಾಗಿದೆ. ಒಟ್ಟಾಾರೆ ಜೀವನದ ಸರಳತೆಯನ್ನು ಹೇಳಿರುವ ಚಿತ್ರವು ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ.