ಬೈಕೋಬೇಡಿ
ಅಶೋಕ್ ನಾಯಕ್
ಬೈಕಿನ ಮೈಲೇಜ್ ಉತ್ತಮವಿದ ರೆ, ಯಾರನ್ನೂ ಆಕರ್ಷಿಸುತ್ತದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಇತ್ತೀಚಿನ ದಿನಗಳಲ್ಲಿ ಮಾಡೆಲ್ ಲುಕ್ ಕೂಡ ಬಹು ಮುಖ್ಯ ಎನಿಸಿದೆ.
ಟ್ರಿಯಂಪ್ ರಾಕೆಟ್ ೩
ಪ್ರತಿ ಲೀಟರು ಇಂಧನಕ್ಕೆ ಸುಮಾರು ೧೪.೬ ಕಿ.ಮೀ ಮೈಲೇಜ್ ನೀಡುವ ಈ ಬೈಕಿನಲ್ಲಿ ೨,೪೫೮ ಸಿಸಿ ಎಂಜಿನ್ ಅಳವಡಿಸಲಾಗಿದೆ. ೧೮ ಲೀಟರಿನಷ್ಟು ಇಂಧನ ಸಂಗ್ರಹ ಸಾಧ್ಯ. ವಾಹನದ ಖರೀದಿ ಬೆಲೆ ೨೦,೧೯,೩೬೧ ರೂ. ಈ ಮಾಡೆಲಿನಲ್ಲಿ ಇತರ ರೂಪಾಂತರಗಳ ವಾಹನಗಳ ಬೆಲೆ ಆಸುಪಾಸಿನಲ್ಲಿದೆ. ರಾಕೆಟ್ ೩ ಜಿಟಿ, ರಾಕೆಟ್ ೩ಆರ್ ಹಾಗೂ ರಾಕೆಟ್ ೩ ಜಿಟಿ ಮುಂತಾದವುಗಳ ದರ ಕ್ರಮವಾಗಿ, ೨೦,೭೯,೦೪೭ ರೂ., ೨೦,೮೦ ಲಕ್ಷ ಹಾಗೂ ೨೧,೪೦ ಲಕ್ಷ ರೂ. ಗಳಿವೆ. ಇದೊಂದು ಕ್ರೂಸರ್ ಬೈಕಾಗಿದ್ದು, ನಾಲ್ಕು ರೂಪಾಂತರ ಹಾಗೂ ಏಳು ಬಣ್ಣಗಳಲ್ಲಿವೆ. ಈ ಬೈಕಿನ ತೂಕ ೩೦೪ ಕೆಜಿ. ಬೈಕುಗಳ ಉತ್ಪಾದನೆ ಯಲ್ಲಿ ಈ ಮಾಡೆಲ್ ವಿಶೇಷ ಗುರುತನ್ನು ಹೊಂದಿದೆ. ಈ ಹಿಂದಿನ ಬೈಕಿನ ಮಾಡೆಲ್ ಉತ್ಪಾದನೆಯನ್ನು ನಿಲ್ಲಿಸಿದ ಬ್ರಿಟನ್ ಮೂಲದ ಬೈಕ್ ತಯಾರಿಕೆ ಸಂಸ್ಥೆಯು, ಈ ಹೊಸ ಮಾಡೆಲನ್ನು ಪರಿಚಯಿಸಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಾಕೆಟ್ ೩ ರೂಪಾಂತರವು ಜಿಟಿಯಲ್ಲಿ ಹಾಗೂ ಆರ್ ರೂಪಾಂತರವು ಭಾರತ ದಲ್ಲಿ ಲಭ್ಯವಿದೆ. ಇದಕ್ಕಿರುವ ಟ್ವಿನ್ ಸರ್ಕುಲರ್ ಹೆಡ್ ಲ್ಯಾಂಪ್, ಕನ್‌ವೆಂಶ ನಲ್ ಬಲ್ಬು ಗಳು ಬದಲಿ ಹೊಂದಿದ್ದು, ರ‍್ಯಾಡಿಕಲ್ ಎಲ್‌ಇಡಿ ಲ್ಯಾಂಪುಗಳಂತೆ ಕಾಣುತ್ತದೆ. ಈ ಸ್ಪರ್ಧಾ ತ್ಮಕ ಯುಗದಲ್ಲಿ ಹೊಸ ಮಾಡೆಲಿಗೆ ಹೊಸ ಡುಕಾಟಿ ಡೈವೆಲ್ ೧೨೬೦ ನಿಕಟ ಸ್ಪರ್ಧೆ ನೀಡಬಲ್ಲದು.
ಹೀರೋ ಕ್ಷೂಮ್
೧೦೮ ತೂಕದ ಈ ಮಾಡೆಲ್ ವಾಹನದಲ್ಲಿ ೫.೨ ಲೀಟರು ಇಂಧನ ಸಂಗ್ರಹ ಸಾಧ್ಯ. ೪೯ ಕಿ.ಮೀ ಮೈಲೇಜ್. ಎಂಜಿನ್ ಕೆಪಾಸಿಟಿ ೧೧೦.೯ ಸಿಸಿ ಆಗಿದೆ.
ಈ ಮಾಡೆಲ್‌ಗೆ ಮೂರು ರೂಪಾಂತರ ಹಾಗೂ ಐದು ಬಣ್ಣಗಳಿವೆ. ಹೀರೋ ಕಂಪನಿಯ ಈ ಮಾಡೆಲ್ ಆಧುನಿಕವಾಗಿದೆ. ಇದರ ಮೂರು ರೂಪಾಂತರ ಗಳೆಂದರೆ, ಎಲ್‌ಎಕ್ಸ್, ವಿಎಕ್ಸ್ ಹಾಗೂ ಜೆಡ್ ಎಕ್ಸ್.
ಈ ಮಾಡೆಲ್‌ಗಳ ರೂಪಾಂತರಗಳ ಬೆಲೆಗಳು ಕ್ರಮವಾಗಿ ೬೮,೫೯೯, ವಿಎಕ್ಸ್ ಮತ್ತು ಜೆಡ್‌ಎಕ್ಸ್ ಗಳ ಬೆಲೆ ೭೧,೭೯೯ ರೂ ಮತ್ತು ೭೬,೬೯೯ ರೂ.ಗಳಾಗಿವೆ. ಈ ಮಾಡೆಲಿನಲ್ಲಿ ಎಲ್‌ಇಡಿ ಇಲ್ಯುಮಿನೇಷನ್, ಕಾರ್ನರಿಂಗ್ ಲೈಟುಗಳು, ಎಲ್ ಸಿಡಿ ಜತೆ ಬ್ಲೂಟೂಥ್ ಕನೆಕ್ಟಿವಿಟಿ, ಯುಎಸ್‌ಬಿ ಚಾಜಿಂಗ್ ಪೋರ್ಟ್ ಲಭ್ಯವಿದ್ದು, ಸ್ಮಾರ್ಟ್ ಫೋನ್ ಕಾಂಪಿಟೆಬಿಲಿಟಿಯು ಫೋನ್ ಕರೆ, ಸಂದೇಶ ಹಾಗೂ ಇನ್ನಿತರ ಸೌಲಭ್ಯ ನೀಡಲಾಗಿದೆ.