Wednesday, 11th December 2024

ನಿತ್ಯ ಹರಿಯುವ ಸಂಸಾರದ ನದಿ

* ಜಮುನಾ ರಾಣಿ ಹೆಚ್. ಎಸ್.

ಹೆಣ್ಣು ಹೃದಯದ ಭಾವನಾ ಲೋಕವನ್ನೇ ಬಂಡವಾಳವನ್ನಾಗಿಕೊಂಡಿರುವ ಟಿವಿಯವರು ಅಳುಮುಂಜಿ ಧಾರವಾಹಿಗಳ ಸರಣಿಗಳನ್ನೇ ನಡೆಸುತ್ತಾ ಲಾಭಮಾಡಿಕೊಳ್ಳುತ್ತಿದ್ದಾರೆ. ಆದರೆ ಗಂಡನ್ನು ಈ ರೀತಿ, ಭಾವನೆಗಳ ಬೇಲಿಯೊಳಗೆ ಸೆಳೆದು, ಕಟ್ಟಿ ಕಷ್ಟ.

ಮಿಂಚು ಮತ್ತು ಮಾಧವನದು (ಹೆಸರು ಬದಲಿಸಲಾಗಿದೆ) ಪ್ರೀತಿಯೇ ಎದುರಿಗೆ ಹೊಳೆಯಾಗಿ ಹರಿದರೂ ನಾಚಿಸುವಂತಹ ಸುಖೀ ದಾಂಪತ್ಯ. ಹೀಗೇ ಒಂದು ದಿನ ಮಾತಿಗೆ ಮಾತು ಬೆಳೆದು ಪುಟ್ಟ ವಿಷಯಕ್ಕೆೆ ಜೋರು ಜಗಳ ಮಾಡಿಕೊಂಡರು. ವಾಗ್ವಾಾದ ತಾರಕಕ್ಕೇರಿತು. ಕೊನೆಗೆ ಇಬ್ಬರೂ ಬೇಸತ್ತು ಆಫೀಸಿನ ಹಾದಿ ಹಿಡಿದರು. ಆಫೀಸು ಸೇರಿದ ಮೇಲೆ ಇಬ್ಬರೂ ಕೆಲಸದಲ್ಲಿ ಬ್ಯುಸಿ. ಆದರೂ ಇವಳಿಗೆ ಮನಸ್ಸು ನಿಲ್ಲುತ್ತಿಿಲ್ಲ. ಜೋರು ಅಳಬೇಕೆನ್ನಿಿಸುತ್ತಿಿದೆ. ವಾಶ್ ರೂಂಗೆ ಹೋಗಿ ಕಣ್ಣೀರಾದಳು. ತಾಳಲೇ ಇಲ್ಲ. ಹೊಯ್ದಾಾಡ ಹತ್ತಿಿತ್ತು. ಆಫೀಸಿಗೆ ಅರ್ಧ ದಿನ ರಜಾ ಹಾಕಿ ಮನೆ ಸೇರಿಕೊಂಡಳು. ಹಾಸಿಗೆ ಮೇಲೆ ಬಿದ್ದು ಅತ್ತಿಿಂದಿತ್ತ ಇತ್ತಿಿಂದತ್ತ ಉರುಳಿದ್ದಷ್ಟೇ ಹಳೆಯ ನೋವುಗಳು, ನೆನಪುಗಳು ಅವಳ ಮನಸ್ಸನ್ನು ಮತ್ತಷ್ಟು ಕದಡಿದವು. ಹಗುರಾಗುವವರೆಗೆ ಅತ್ತು ಅದ್ಯಾಾವಾಗ ನಿದ್ರೆೆಗೆ ಜಾರಿದಳೋ ತಿಳಿಯಲೇ ಇಲ್ಲ.

ಗಂಡನ ಫೋನ್ ಬಂದಾಗಲೇ ಎಚ್ಚರವಾದದ್ದು. ಅವನೊಟ್ಟಿಿಗೆ ಮಾತನಾಡಲು ಮನಸ್ಸಿಿಲ್ಲದೆ ನಾಲ್ಕು ಬಾರಿ ಫೋನ್ ಕಟ್ ಮಾಡಿದಳು. ಐದನೆ ಬಾರಿಯೂ ಫೋನ್ ಬಂದಾಗ ಒಲ್ಲದ ಮನಸ್ಸಿಿನಿಂದಲೇ ಎಂದಳು. ‘ಎಷ್ಟು ಸಾರಿ ಫೋನ್ ಮಾಡೋದು ಎಲ್ಲಿದ್ದೀಯ. ಆಫೀಸಿನ ಕೆಲಸ ಮೇಲೆ ಚಾಮರಾಜಪೇಟೆಗೆ ಬಂದಿದ್ದೆ. ನಿನಗಿಷ್ಟವಾದ ಬ್ರಾಾಹ್ಮಿಿನ್ ಕೆಫೆಯಿಂದ ಇಡ್ಲಿಿ-ವಡೆ ತೊಗೊಂಡು ಬರ್ತೀನಿ. ಟೀ ಮಾಡು. ಇಬ್ಬರೂ ಕೂತು ಒಂದೊಳ್ಳೆೆ ಮೂವಿಯೊಟ್ಟಿಿಗೆ ಸವಿಯೋಣ’ ಎಂದನು. ಬೆಳಿಗ್ಗೆೆ ನಡೆದ ವಾಗ್ವಾಾದದ ನೆನಪೂ ಇಲ್ಲದಂತಿತ್ತು ಅವನ ಮಾತುಗಳಲ್ಲಿ. ಆದರೆ ಅವಳಲ್ಲಿ ಮಾತ್ರ ಇನ್ನೂ ಬೂದಿ ಮುಚ್ಚಿಿದ ಕೆಂಡದಂಗೆ ಹೊಗೆಯಾಡುತ್ತಲೇ ಇತ್ತು ಕೋಪ. ಒಂದೂ ಮಾತನಾಡದೆ ಫೋನಿತ್ತಳು.

ಇದೆಷ್ಟು ವಿಚಿತ್ರ ಅಲ್ವಾಾ ? ತನಗಾದ ನೋವನು ಮರೆಯಲು ಕಣ್ಣೀರಾಗುತ್ತಾಾಳೆ, ಒಂಟಿತನದ ಮೊರೆ ಹೋಗುತ್ತಾಾಳೆ, ಮತ್ತೆೆ ಮತ್ತೆೆ ನೆನೆದು ದುಃಖಿಸುತ್ತಾಾಳೆ. ಆದರೆ ಗಂಡಿಗೆ ಇವ್ಯಾಾವುದೂ ಅನ್ವಯವಾಗುವುದಿಲ್ಲ. ಅವನು ಯಾವಾಗ ಆ ನೋವಿನ ಸಂಗತಿಯನ್ನು ಮರೆತನೆನ್ನುವುದೂ ಕೂಡ ಬಹುಶಃ ಅವನಿಗೂ ಗೊತ್ತಿಿರುವುದಿಲ್ಲ. ನಿಜ ಹೇಳಬೇಕೆಂದರೆ ಭಗವಂತ ಗಂಡನ್ನು ಸೃಷ್ಟಿಿಸುವಾಗ ಬರಗಾಲ ಇತ್ತೆೆಂದು ಕಾಣುತ್ತದೆ. ಅದಕ್ಕೇ ಅವನ ಕಣ್ಣು ಮತ್ತು ಹೃದಯಗಳು ನೋವು-ನಲಿವಿಗೆ ಒಂದೇ ತೆರನಾಗಿ ಸ್ಪಂದಿಸುತ್ತವೆ. ಆದರೆ ಹೆಣ್ಣನ್ನು ಸೃಷ್ಟಿಿಸುವಾಗ ಮಾತ್ರ ಜೋರು ಮಳೆ, ಗುಡುಗು-ಸಿಡಿಲು, ಇತ್ತೆೆನ್ನುವುದು ಮಾತ್ರ ನೂರಕ್ಕೆೆ ನೂರರಷ್ಟು ಸತ್ಯವಿರಲೇ ಬೇಕು. ಅದಕ್ಕೇ ಅವಳದು ಈ ತರಹದ ರೋಧನೆ, ವೇದನೆ – ಪ್ರತೀ ಚಿಕ್ಕ ಚಿಕ್ಕ ವಿಷಯಕ್ಕೂ ಆಕಾಶವೇ ಕಳಚಿ ಬಿತ್ತೇನೋ ಅನ್ನುವಂತಹ ವರ್ತನೆ.

ಅಳುಮುಂಜಿ ಧಾರಾವಾಹಿಗಳ ಬಂಡವಾಳ
ಇದನ್ನೇ ಬಂಡವಾಳವನ್ನಾಾಗಿಕೊಂಡಿರುವ ಟಿವಿಯವರು ಅಳುಮುಂಜಿ ಧಾರವಾಹಿಗಳ ಸರಣಿಗಳನ್ನೇ ನಡೆಸುತ್ತಾಾ ಲಾಭಮಾಡಿಕೊಳ್ಳುತ್ತಿಿದ್ದಾರೆ. ಆದರೆ ಗಂಡನ್ನು ಈ ರೀತಿ ಸೆಳೆದು ಉಪಯೋಗಿಸಿಕೊಳ್ಳಲಿಕ್ಕಾಾಗದು. ಅವನ ಇಷ್ಟದ ರಾಜಕೀಯವಿರಲಿ, ಕ್ರಿಿಕೆಟ್ ಇರಲಿ, ಅಲ್ಲಿ ಅದೆಂತಹುದೇ ಬದಲಾವಣೆಗಳಾದರೂ ಅವನದು ಕೇವಲ ಹೊತ್ತು ಅದರ ಬಗ್ಗೆೆ ಚರ್ಚೆಯಷ್ಟೇ. ಯಾವತ್ತೂ ಏನನ್ನೂ ಮನಸ್ಸಿಿಗಚ್ಚಿಿಕೊಂಡು ಕೊರಗುವುದು, ರೋಧಿಸುವುದೆಲ್ಲವೂ ಅವನಿಂದ ದೂರಾದೂರ.
ಈ ಹೆಣ್ಣು ಮಕ್ಕಳೇ ಇಷ್ಟು. ಬರೀ ಸೆಂಟಿ ಮೆಂಟಲ್ ಫೂಲ್‌ಗಳು. ಭಾವಜೀವಿಗಳು. ಅವರ ಮನಸ್ಸಿಿನ ಸ್ಥಿಿತಿ ನಗುವುನಲ್ಲೂ-ಅಳುವಿನಲ್ಲೂ ಒಂದಷ್ಟು ಹೆಚ್ಚೇ ಮಿಡಿಯುತ್ತದೆ. ಸಂತಸವನ್ನು ಅನುಭವಿಸುತ್ತಾಾ ಹಕ್ಕಿಿಯಂತೆ ಮನಸ್ಸನ್ನು ಹಾರಿ ಬಿಡಬಲ್ಲರು. ಹಾಗೆಯೇ ದುಃಖದ ಸಂದರ್ಭದಲ್ಲಿ ಮತ್ತು ಆ ಸಂದರ್ಭವನ್ನು ನೆನೆದು ಅಳುತ್ತಾಾ ಅಂತರ್ಮುಖಿಯಾಗುತ್ತಾಾರೆ. ಏಕೆಂದರೆ ಹೆಣ್ಣು ಒಂಥರಾ ಗಾಯವಿದ್ದ ಹಾಗೆ. ಅವಳ ಭಾವನೆಗಳು ಹಾಗೆ ಮತ್ತು ಅವು ನಿತ್ಯ ಅವಳ ಮನವನ್ನು ಒಂದಿಲ್ಲಾ ಒಂದು ಯೋಚನೆಯಲ್ಲಿ ಪುರುಸೊತ್ತಿಿಲ್ಲದಂತೆ ಮಾಡುತ್ತವೆ. ಇಲ್ಲದಿದ್ದರೆ ಅವಳಿಗೆ ಬದುಕು ಒಂಥರಾ ರಂಗನು ಕಳೆದುಕೊಂಡ ಪಟದಂತೆನ್ನಿಿಸಿಬಿಡುತ್ತದೆ. ಹಿಂದಿನ, ಮುಂದಿನ, ನಾಳಿನ, ನಿನ್ನೆೆಯ, ಅಕ್ಕಪಕ್ಕದವರ, ಗೊತ್ತೇ ಇಲ್ಲದವರ ಎಲ್ಲರ ಕಷ್ಟ-ಸುಖಗಳನ್ನು ತನ್ನವೆಂದು ಭ್ರಮಿಸಿ, ಭಾವಿಸುತ್ತಾಾಳೆ. ಎಲ್ಲವಕ್ಕೂ ಮಿಡಿಯುತ್ತಾಾಳೆ. ಇನ್ನು ಅವಳದೇ ನೋವುಗಳಾದರೆ ಮುಗಿದೇ ಹೋಯಿತು. ತಿರುಗಾ ಮುರುಗಾ ರಿವೈಂಡ್ ಅಂಡ್ ಪ್ಲೇ ಮಾಡಿಕೊಂಡು ಮನದ ಗಾಯವ ರಾಡಿ ಮಾಡಿಕೊಳ್ಳುತ್ತಾಾಳೆ.
ಭಾವನಾ ಜೀವಿ

ಮೊದಲಿಗೆ ಭಾವನಾ ಜೀವಿ, ಜೊತೆಗೆ ಒಳ್ಳೆೆಯವಳು. ಪ್ರಪಂಚವನ್ನು ಒಳ್ಳೆೆಯ ರೀತಿಯೇ ನೋಡುವವಳು. ಅವಳಿಗೆ ಸಿಕ್ಕವರೆಲ್ಲರೂ ಒಳ್ಳೆೆಯವರಾಗಿರಬೇಕೆಂದು ಬಯಸುವವಳು. ಇವರಲ್ಲಿ ಒಬ್ಬಿಿಬ್ಬರು ಅವಳಿಗೆ ನೋಯಿಸಿದರೆನ್ನಿಿ – ಒಳಗೊಳಗೇ ಕೊರಗುತ್ತಾಾ ತನ್ನ ಬದುಕಿನ ಸುತ್ತ ಅವರನ್ನು ಒಯ್ಯುತ್ತಲೇ ಸಾಗುತ್ತಾಾಳೆ, ನೋಯುತ್ತಾಾಳೆ.

ಆದರೆ ನಮ್ಮ ಹುಡುಗರಿದ್ದಾರಲ್ಲಾ ಅವರು ಹಾಗಲ್ಲ ಬಿಡಿ. ಹಾಗಂತ ಭಾವನೆಗಳೇ ಇಲ್ಲದವರು ಅಂತಲ್ಲ, ಅವರಿಗೆ ಅಳು ಬರಲ್ಲ ಅಂತಲ್ಲ. ಅವರಿಗೆ ಹೇಗೆ ಅವುಗಳನ್ನೆೆಲ್ಲಾ ಪಕ್ಕಕ್ಕಿಿಟ್ಟು ಬದುಕನ್ನು ನೈಜ ರೀತಿಯಲ್ಲಿ ಸ್ವೀಕರಿಸಬೇಕು ಗೊತ್ತಿಿದೆ. ದುಃಖವನ್ನೆೆಲ್ಲಾ ಒತ್ತಟ್ಟಿಿಗಿರಿಸಿ ಬದುಕನ್ನು ಜೀವಿಸುವ ಚತುರತೆ ಗೊತ್ತು. ನೈಜ ಜಗತ್ತಿಿನೊಳಗೆ ಬದುಕುವುದು ಗಂಡಸರಿಗೆ ಹುಟ್ಟಿಿನೊಂದಿಗೆ ದೊರೆತ ವರ. ಹೀಗೆ ಪ್ರಾಾಯೋಗಿಕ ಜಗತ್ತಿಿನಲ್ಲಿ ಬದುಕುವುದಕ್ಕೆೆ ಹೆಣ್ಣು ಅದೆಷ್ಟೋೋ ವರ್ಷಗಳಿಂದ ಪ್ರಯತ್ನ ಪಟ್ಟರೂ ಅದು ಪ್ರಯತ್ನದ ಹಂತದಲ್ಲಿಯೇ ಇದೆ.

ದೇವರು ಒಂಥರಾ ಅತೀ ಬುದ್ಧಿಿವಂತ ಕಣ್ರಿಿ. ಅವನು ಸೃಷ್ಟಿಿಸಿದ ಒಂದು ಜೀವಿಗೆ ಬದುಕಿನ ಭಾವನೆಗಳನ್ನು ಕೊಟ್ಟು ಮತ್ತೊೊಂದು ಜೀವಿಗೆ ಭಾವನೆಗಳನ್ನು ಮೆಟ್ಟಿಿ ನಿಲ್ಲುವ ಶಕ್ತಿಿ ಕೊಟ್ಟಿಿದ್ದಾನೆ ಮತ್ತು ಆ ಎರಡೂ ಕೊನೆವರೆಗೂ ಜೊತೆಜೊತೆಯಾಗಿ ಒಟ್ಟಿಿಗೆ ಇರಲು ಬಿಟ್ಟು ಅವರ ಪ್ರೀತಿ, ಪ್ರೇಮ, ಕಚ್ಚಾಾಟ, ಜಗಳ, ಶೀತಲ ಸಮರ, ಯುದ್ಧ, ಮಹಾಯುದ್ಧ… ಎಲ್ಲವ ನೋಡುತ್ತಾಾ ಮಜಾ ತೆಗೆದುಕೊಳ್ಳುತ್ತಿಿದ್ದಾನೆ. ಜೊತೆಗೆ ಬದುಕನ್ನು ಕೊಳೆತು ನಾರುವ ನಿಂತ ನೀರಾಗಿಸದೆ, ಹರಿಯುವ ನದಿಯಾಗಿಸಿ ಹೊಸತನವ ತುಂಬಿದ್ದಾನೆ. ಆ ನದಿಯ ಓಡದಲ್ಲಿ ರಭಸವಿದೆ, ಶಾಂತಿ ಇದೆ, ನೀರಿನ ರಾಡಿ ಇದೆ, ಕೆಸರಿನಲ್ಲಿ ಅರಳುವ ಕಮಲಗಳಿವೆ. ಅದಕ್ಕೇ ಅಲ್ಲವೆ ನಮ್ಮೆೆಲ್ಲರ ನಾಳೆಗಳೂ ದಿನದಿನಕ್ಕೂ ಕೂತೂಹಲದಿಂದ ಕೂಡಿರುವುದು.