Monthly Horoscope: ಮೇಷ ರಾಶಿಯವರಿಗೆ ಸಾಡೇಸಾತ್ ಇದ್ದರೂ ಗುರುವಿನಿಂದ ಆದಾಯ
ಮೇ, ಕೆಲವು ರಾಶಿಚಕ್ರಗಳ ಮೇಲೆ ಹಲವು ರೀತಿಯ ಬದಲಾವಣೆಗಳು ಬೀರಲಿದ್ದು, ಗ್ರಹ ಸಂಚಾರದಿಂದಾಗಿ ಕೆಲ ಯೋಗಗಳು ಉಂಟಾಗಲಿವೆ. 2025ರ ಮೇ ಭವಿಷ್ಯದಲ್ಲಿ ಕೆಲವು ರಾಶಿಗೆ ಉತ್ತಮ ಫಲ ಇದ್ದರೆ ಇನ್ನು ಕೆಲವು ರಾಶಿಯವರಿಗೆ ಸವಾಲುಗಳು ಎದುರಾಗುತ್ತವೆ. ಹಾಗಾಗಿ ಮೇಷ ರಾಶಿಯವರಿಗೆ ಮೇ ತಿಂಗಳ ರಾಶಿಫಲ ಭವಿಷ್ಯ ಹೇಗಿದೆ? ಏನೆಲ್ಲಾ ಬದಲಾವಣೆ ಇದೆ ಎಂಬುದನ್ನು ಖ್ಯಾತ ಜ್ಯೋತಿಷ್ಯ ವೇ|ಬ್ರ| ಶ್ರೀ ವಿಜಯಾನಂದ ಜೋಯ್ಸ್ ತಿಳಿಸಿದ್ದಾರೆ.

may Horoscope Mesh Rash

ಬೆಂಗಳೂರು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನ ಪಲ್ಲಟ ಮತ್ತು ಗ್ರಹಗಳು ಒಟ್ಟಿಗೆ ಸೇರಿದಾಗ ರಾಶಿ ಭವಿಷ್ಯದಲ್ಲಿ ಹಲವು ರೀತಿಯ ಬದಲಾವಣೆ ಕಂಡು ಬರುತ್ತದೆ. ಅದರಂತೆ 2025ರ ಮೇ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಮೇ, ಕೆಲವು ರಾಶಿಚಕ್ರಗಳ ಮೇಲೆ ಹಲವು ರೀತಿಯ ಬದಲಾವಣೆಗಳು ಬೀರಲಿದ್ದು ಗ್ರಹ ಸಂಚಾರದಿಂದಾಗಿ ಕೆಲ ಯೋಗಗಳು ಉಂಟಾಗಲಿವೆ. 2025ರ ಮೇ ಭವಿಷ್ಯದಲ್ಲಿ ಕೆಲವು ರಾಶಿಗೆ ಉತ್ತಮ ಫಲ ಇದ್ದರೆ ಇನ್ನು ಕೆಲವು ರಾಶಿಯವರಿಗೆ ಸವಾಲುಗಳು ಎದುರಾಗುತ್ತವೆ. ಹಾಗಾಗಿ ಮೇಷ ರಾಶಿಯವರಿಗೆ ಮೇ ರಾಶಿಫಲ (Horoscope Mesh Rashi) ಭವಿಷ್ಯ ಹೇಗಿದೆ? ಏನೆಲ್ಲ ಬದಲಾವಣೆ ಇದೆ ಎಂಬುದನ್ನು ಖ್ಯಾತ ಜ್ಯೋತಿಷ್ಯ ವೇ|ಬ್ರ| ಶ್ರೀ ವಿಜಯಾನಂದ ಜೋಯ್ಸ್ ತಿಳಿಸಿದ್ದಾರೆ.
ಅಶ್ವಿನಿ ನಕ್ಷತ್ರ, ಭರಣಿ ನಕ್ಷತ್ರ, ಕೃತಿಕೆ ನಕ್ಷತ್ರ ಮೇಷ ರಾಶಿಯಲ್ಲಿ ಬರಲಿದ್ದು ಏಪ್ರಿಲ್ 28ರಿಂದ ವೈಶಾಖ ಮಾಸ ಆರಂಭವಾಗಲಿದೆ. ಮೇಷ ರಾಶಿಯವರಿಗೆ ಮೇ ದೈವ ಬಲದಿಂದ ಅನೇಕ ಅನುಗ್ರಹ ಪ್ರಾಪ್ತಿ ಆಗಲಿದೆ. ಅಂದುಕೊಂಡಂತ ಕೆಲಸ ಕಾರ್ಯಗಳು ಸಿದ್ದಿಯಾಗಿ ಆದಾಯಗಳು ಬರುವ ಸಮಯ ಮೇ ತಿಂಗಳಿನಲ್ಲಿ ಆಗಲಿದೆ. ಆರ್ಥಿಕವಾಗಿ ಮೇ ಮೊದಲಾರ್ಧವು ನಿಮಗೆ ತುಂಬಾ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ ನೀವು ವ್ಯವಹಾರದಲ್ಲಿ ಅಪೇಕ್ಷಿತ ಲಾಭವನ್ನು ಗಳಿಸುತ್ತೀರಿ.
ಗುರುವಿನ ಅನುಗ್ರಹ
ಮೇಯಲ್ಲಿ ಮಾನಸಿಕ ನೋವು ಉಂಟಾಗಿದ್ದರೂ ಗುರುವಿನ ಅನುಗ್ರಹದಿಂದ ಮಾನಸಿಕ ನೋವಿಗೆ ಪರಿಹಾರ ಸಿಗಲಿದೆ. ಶನಿಯು ಸಾಡೇ ಸಾತಿಯಲ್ಲಿ ಅಂದರೆ 12 ಮನೆಯಲ್ಲಿ ಶನಿ ಇರುವುದರಿಂದ ಇತ್ತೀಚೆಗೆ ಒಂದಷ್ಟು ಮಾನಸಿಕ ಹಿಂಸೆ, ನೋವು ,ಕೆಲಸ ಕಾರ್ಯದಲ್ಲಿ ತೊಂದರೆ ಇತ್ಯಾದಿ ಸಮಸ್ಯೆ ಎದುರಾಗಿತ್ತು. ಆದರೆ ಮೇ 14 ಸೂರ್ಯನು ಸಂಕ್ರಮಣಕ್ಕೆ ಬಂದಾಗ ಒಳ್ಳೆಯ ಸುದ್ದಿಗಳು ಪ್ರಾಪ್ತ ವಾಗುತ್ತವೆ.
ಉತ್ತಮ ಲಾಭ
ಮೇಷ ರಾಶಿಯವರಿಗೆ ಮೇ ಯಶಸ್ಸಿನಿಂದ ತುಂಬಿರುವ ತಿಂಗಳಾಗಲಿದೆ. ಈ ತಿಂಗಳು, ಶನಿಯ ಕೃಪೆಯಿಂದ ಅದೃಷ್ಟವು ನಿಮ್ಮ ಕಡೆ ಒಲಿದು ಬರುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಈ ತಿಂಗಳು ಪ್ರತಿಫಲ ಸಿಗುತ್ತದೆ. ಅದೇ ಸಮಯದಲ್ಲಿ, ವ್ಯಾಪಾರ ಮಾಡುತ್ತಿರುವವರಿಗೆ ಉತ್ತಮ ಲಾಭ ಒದಗಿ ಬರಲಿದೆ. ಈ ತಿಂಗಳಿನಲ್ಲಿ ಈ ರಾಶಿಯವರಿಗೆ ತಾವು ಪ್ರೀತಿಸುವ ವ್ಯಕ್ತಿಯಿಂದಲೇ ಅಪಮಾನಗಳು ಉಂಟಾಗುತ್ತದೆ. ಹಾಗಾಗಿ ಮೌನ, ತಾಳ್ಮೆಯನ್ನು ವಹಿಸಿಕೊಳ್ಳಿ. ಅನಗತ್ಯ ಖರ್ಚುಗಳ ಬಗ್ಗೆ ನೀವು ಜಾಗರೂಕರಾಗಿರಬೇಕು.
ಇದನ್ನು ಓದಿ: Ugadi Horoscope: ಮೀನ ರಾಶಿಗೆ ಸಾಡೇಸಾತ್ ಪರಿಣಾಮ ಏನು? ಯಾವಾಗ ಪರಿಹಾರ?
ಗಣಪತಿ ಆರಾಧನೆ ಮಾಡಿ
ಮೇಷ ರಾಶಿಗೆ ಆರ್ಥಿಕವಾಗಿ ಮೇ ತಿಂಗಳ ಮೊದಲಾರ್ಧವು ಮಂಗಳಕರವಾಗಿದ್ದು ಅರ್ಧ ಫಲ, ಅರ್ಧ ನಿಷ್ಪಲ ಹೊಂದುವ ಕಾರಣ ತಿಂಗಳೂ ಪೂರ್ತಿ ಗಣಪತಿಯನ್ನು ಪೂಜಿಸಿ. ಅರಶಿನ ಕೊಂಬಿನ ಕುಂಕುಮದಿಂದ ಕೈಯಾರೆ ಗಣಪತಿ ರಚಿಸಿ 21 ದಿನ ಪೂಜಿಸಿ. ಅದಕ್ಕೆ ಹೂವಿನಿಂದ ಆಲಕಂರಿಸಿ ಇಷ್ಟಾರ್ಥಗಳನ್ನು ಬೇಡಿಕೊಳ್ಳಿ. ಅದೇ ರೀತಿ ದಿನ ನಿತ್ಯ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ. ಜತೆಗೆ ಪರಶುರಾಮನ ದರ್ಶನ ಮಾಡಿದರೆ ಒಳಿತಗಾಲಿದೆ.