Saif Ali Khan: ಸೈಫ್ ಆಲಿಖಾನ್ ಹಲ್ಲೆ ಪ್ರಕರಣ; ಸಿಸಿಟಿವಿಯಲ್ಲಿ ಸೆರೆಸಿಕ್ಕ ದುಷ್ಕರ್ಮಿ!
ಬಾಲಿವುಡ್‌ನ ಖ್ಯಾತ ನಟ ಸೈಫ್ ಆಲಿಖಾನ್ಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ದುಷ್ಕರ್ಮಿಯ ಫೋಟೋವೊಂದು, ಸಿಸಿಟಿವಿ ದೃಶ್ಯಾವಳಿಯಲ್ಲಿ ಇದೀಗ ಬಹಿರಂಗಗೊಂಡಿದೆ.
ಮುಂಬೈ: ಇಂದು(ಜ.16) ಮುಂಜಾನೆ ಬಾಲಿವುಡ್‌ನ ಬಹು ಬೇಡಿಕೆಯ ನಟ ಸೈಫ್ ಆಲಿಖಾನ್ (Saif Ali Khan) ಮೇಲೆ ಹಲ್ಲೆ ನಡೆದಿದೆ. ಮುಂಬೈನ ಬಾಂದ್ರಾದಲ್ಲಿರುವ ನಟನ ಮನೆಗೆ ದುಷ್ಕರ್ಮಿಗಳು ಏಕಾಏಕಿ ನುಗ್ಗಿ ಹಲ್ಲೆ ನಡೆಸಿದ್ದಾರೆ. ಚಾಕುವಿನಿಂದ 6 ಬಾರಿ ಇರಿದು, ನಟನ ಕೈ-ಕುತ್ತಿಗೆ ಮತ್ತು ಬೆನ್ನು ಮೂಳೆಗೆ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಇದೀಗ ಶಂಕಿತ ಆರೋಪಿಯ ಮೊದಲ ಫೋಟೋ ಮತ್ತು ಸಿಸಿಟಿವಿ ದೃಶ್ಯಾವಳಿ ಬಹಿರಂಗವಾಗಿದೆ.
ಸೈಫ್ ಆಲಿಖಾನ್ ಮೇಲಿನ ಹಲ್ಲೆಯಿಂದಾಗಿ ಇಡೀ ಮುಂಬೈ ನಗರ ಬೆಚ್ಚಿ ಬಿದ್ದಿದೆ. ಕೃತ್ಯ ಎಸಗಿದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸ್ ಅಧಿಕಾರಿಗಳು ಸೈಫ್ ಮನೆಯಲ್ಲಿ ಬೆಳಗ್ಗೆಯಿಂದ ಬೀಡು ಬಿಟ್ಟಿದ್ದಾರೆ. ಇದೀಗ ನಟನ ಅಪಾರ್ಟ್ಮೆಂಟ್ನ ಮೆಟ್ಟಿಲುಗಳಲ್ಲಿ ಇಳಿದು ಹೋಗುತ್ತಿರುವ ಶಂಕಿತ ಆರೋಪಿಯೊಬ್ಬ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮುಂಬೈ ಪೊಲೀಸರು ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
CCTV visual of accused who attacked actor Saif Ali Khan.
— Mr Sinha (@MrSinha_) January 16, 2025
The question is, if he is the one who stabbed Saif, how come there are no bloodstains on his hands or clothes? He looks so clean...pic.twitter.com/ZPktQoC7Yr
ಶಂಕಿತ ಆರೋಪಿ ಫೋಟೋ ಮತ್ತು ಸಿಸಿಟಿವಿ ದೃಶ್ಯಾವಳಿಯನ್ನು ಮುಂಬೈ ಪೊಲೀಸರೇ ಬಹಿರಂಗಪಡಿಸಿದ್ದಾರೆ. ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿರುವ ಶಂಕಿತ ಆರೋಪಿ ಬೆನ್ನಿಗೆ ಬ್ಯಾಗ್ ಒಂದನ್ನು ನೇತು ಹಾಕಿಕೊಂಡಿದ್ದಾನೆ. ಭುಜದ ಮೇಲೆ ಆರೆಂಜ್ ಕಲರ್ ಸ್ಕಾರ್ಫ್ ಧರಿಸಿದ್ದಾನೆ. ಶಂಕಿತ ವ್ಯಕ್ತಿಯು ಮೆಟ್ಟಿಲುಗಳ ಕೆಳಗೆ ನಡೆದುಕೊಂಡು ಹೋಗುತ್ತಿರುವಾಗ ಹಲವು ಬಾರಿ ಕ್ಯಾಮೆರಾ ನೋಡಿರುವುದನ್ನು ವಿಡಿಯೊದಲ್ಲಿ ಗಮನಿಸಬಹುದು.
ಸೈಫ್ ಆಲಿ ಖಾನ್ ಮತ್ತು ಪತ್ನಿ ಕರೀನಾ ಕಪೂರ್ ಖಾನ್ ಮತ್ತು ಅವರ ಮಕ್ಕಳು ಬಾಂದ್ರಾದಲ್ಲಿರುವ 12 ಅಂತಸ್ತಿನ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದಾರೆ. ಸೈಫ್ ಮಾತ್ರವಲ್ಲ, ಬಾಲಿವುಡ್‌ನ ಹಲವು ನಟರು ಇದೇ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದಾರೆ. ಅಪಾರ್ಟ್ಮೆಂಟ್ಗೆ ಭಾರೀ ಭದ್ರತೆ ಇದ್ದರೂ ಅಪಾರ್ಟ್ಮೆಂಟ್ನ ಪಕ್ಕದ ಕಾಂಪೌಂಡ್ ಮೂಲಕ ದುಷ್ಕರ್ಮಿಗಳು ಒಳ ಪ್ರವೇಶಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಸೈಫ್ ಮನೆಯೊಳಗೆ ಹೋಗಲು ಆರೋಪಿಗಳು ಫೈಯರ್ ಎಸ್ಕೇಪ್ ಮೆಟ್ಟಿಲುಗಳನ್ನು ಬಳಿಸಿರಬಹುದು ಎಂದು ಹೇಳಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ:Mahakumbh 2025: ಮಹಾ ಕುಂಭಮೇಳ;ಬೆಂಗಳೂರು-ಪ್ರಯಾಗರಾಜ್ ವಿಮಾನಗಳು 41% ದುಬಾರಿ!
ಸೈಫ್ ಆಲಿಖಾನ್ ಹಲ್ಲೆಯ ಪ್ರಕರಣದ ತನಿಖೆಯನ್ನು ಮುಂಬೈನ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ಕೈಗೆತ್ತಿಕೊಳ್ಳಲ್ಲಿದ್ದಾರೆ ಎನ್ನಲಾಗುತ್ತಿದೆ.