Saturday, 14th December 2024

ಬಾಂಗ್ಲಾದೇಶ ಟೆಸ್ಟ್‌ ತಂಡದ ನಾಯಕ ಮೊಮಿನುಲ್‌ ಹಕ್‌’ಗೆ ಕೋವಿಡ್ ದೃಢ

ಢಾಕಾ: ಬಾಂಗ್ಲಾದೇಶ ಕ್ರಿಕೆಟ್‌ ಟೆಸ್ಟ್‌ ತಂಡದ ನಾಯಕ ಮೊಮಿನುಲ್‌ ಹಕ್‌ ಅವರಿಗೆ ಕೋವಿಡ್-19 ಸೋಂಕು ಅಂಟಿಕೊಂಡಿರು ವುದು ದೃಢಪಟ್ಟಿದೆ. ತಂಡದ ಮತ್ತೋರ್ವ ಪ್ರಮುಖ ಆಟಗಾರ ಮೊಹಮದುಲ್ಲ ರಿಯಾದ್‌ ಅವರಿಗೆ ಕೋವಿಡ್ ಸೋಂಕು ತಗುಲಿದ ಎರಡೇ ದಿನಗಳಲ್ಲಿ ಬಾಂಗ್ಲಾದಿಂದ ಈ ಆಘಾತ ಸುದ್ದಿ ಬಂದಿದೆ.

ಮೊಮಿನುಲ್‌ ಹಕ್‌ ಅವರ ಪತ್ನಿಯಲ್ಲೂ ಕೋವಿಡ್-19 ಪಾಸಿಟಿವ್‌ ಕಂಡುಬಂದಿದ್ದು, ಇಬ್ಬರೂ ಹೋಮ್‌ ಐಸೊಲೇಶನ್‌ ನಲ್ಲಿದ್ದಾರೆ ಎಂದು ಬಿಸಿಬಿಯ ಫಿಸಿಯೋ ಡಾ| ದೇಬಶಿಷ್‌ ಚೌಧರಿ ಹೇಳಿದ್ದಾರೆ.

“ನಿನ್ನೆಯಷ್ಟೇ ಫ‌ಲಿತಾಂಶ ಕೈಸೇರಿತು. ಕೋವಿಡ್‌-19 ಪಾಸಿಟಿವ್‌ ಎಂದು ಬಂದಿದೆ. ಕಳೆದ ಎರಡು ದಿನಗಳಿಂದ ನನಗೆ ಜ್ವರ ಇತ್ತು. ಇವತ್ತು ಕೂಡ ಇದೆ. ಉಳಿದಂತೆ ಯಾವ ಸಮಸ್ಯೆಯೂ ಇಲ್ಲ’ ಎಂದು ಹಕ್‌ ತಿಳಿಸಿದ್ದಾರೆ. ಇದಕ್ಕೂ ಮುನ್ನ ಕೋವಿಡ್ ಸೋಂಕಿಗೆ ಒಳಗಾಗಿದ್ದ ಬಾಂಗ್ಲಾ ಕ್ರಿಕೆಟಿಗರಾದ ಮಶ್ರಫೆ ಮೊರ್ತಜಾ, ಅಬು ಜಾಯೇದ್‌, ಸೈಫ್ ಹಸನ್‌ ಅವರೀಗ ಸಂಪೂರ್ಣ ಗುಣಮುಖ ರಾಗಿದ್ದಾರೆ.