2026ರ ಐಪಿಎಲ್ ಟೂರ್ನಿಯಲ್ಲಿ ತಮ್ಮ ಕನಸನ್ನು ಬಹಿರಂಗಪಡಿಸಿದ ವೈಭವ್ ಸೂರ್ಯವಂಶಿ!
Vaibhav Suryavanshi on his dream: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ನಿಂದ 14 ವರ್ಷದ ಪೋರ ವೈಭವ್ ಸೂರ್ಯವಂಶಿ ಎಲ್ಲರ ಗಮನವನ್ನು ಸೆಳೆದಿದ್ದರು. ತಮ್ಮ ಚೊಚ್ಚಲ ಐಪಿಎಲ್ ಪಯಣದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿರುವ ಅವರು, 2026ರ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಫೈನಲ್ಗೆ ತಲುಪಿಸುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ.

ವೈಭವ್ ಸೂರ್ಯವಂಶಿ

ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ನ 2026ರ ಐಪಿಎಲ್ (IPL 2026) ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಫೈನಲ್ಗೆ ತಲುಪಿಸುವ ಗುರಿ ಹೊಂದಿದ್ದೇನೆ ಎಂದು ಯುವ ಸ್ಫೋಟಕ ಆಟಗಾರ ವೈಭವ್ ಸೂರ್ಯವಂಶಿ (Vaibhav Suryavanshi) ಹೇಳಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ತಾವು ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಲ್ಲದೆ, 35 ಎಸೆತಗಳಲ್ಲೇ ಸ್ಫೋಟಕ ಶತಕ ಸಿಡಿಸಿದ್ದ ವೈಭವ್ ಸೂರ್ಯವಂಶಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಆ ಮೂಲಕ 2025ರ ಐಪಿಎಲ್ ಟೂರ್ನಿಯಲ್ಲಿ ಸೂಪರ್ ಸ್ಟ್ರೈಕರ್ ಆಫ್ ದಿ ಅವಾರ್ಡ್ ಅನ್ನು ಪಡೆದಿದ್ದರು.
ಐಪಿಎಲ್ ಟೂರ್ನಿಯನ್ನು ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಬರೆದ ಸೂರ್ಯವಂಶಿ, 7 ಇನಿಂಗ್ಸ್ಗಳಲ್ಲಿ 206.55ರ ಸ್ಟ್ರೆಕ್ ರೇಟ್ನಲ್ಲಿ ಒಂದು ಶತಕ ಹಾಗೂ ಅರ್ಧಶತಕಗಳ ನೆರವಿನಿಂದ 14ರ ಬಾಲಕ, 252 ರನ್ಗಳನ್ನು ಗಳಿಸಿದ್ದರು. ಟೂರ್ನಿಯಲ್ಲಿ ಅತಿ ಹೆಚ್ಚು ಸ್ಟ್ರೆಕ್ ರೇಟ್ ಹೊಂದಿದ್ದ ಸೂರ್ಯವಂಶಿ ಸೂಪರ್ ಸ್ಟ್ರೆಕರ್ ಪ್ರಶಸ್ತಿ ಪಡೆದು ಗಮನ ಸೆಳೆದಿದ್ದಾರೆ.
IPL 2025: ʻಫೈನಲ್ನಲ್ಲಿ ಅಪರಾಧವೆಸಗಿದ ಶ್ರೇಯಸ್ ಅಯ್ಯರ್ʼ-ಯೋಗರಾಜ್ ಸಿಂಗ್ ಆರೋಪ!
ರಾಜಸ್ಥಾನ್ ರಾಯಲ್ಸ್ ತಂಡವನ್ನು ಫೈನಲ್ಗೆ ತಲುಪಿಸುತ್ತೇನೆ: ಸೂರ್ಯವಂಶಿ
ಐಪಿಎಲ್ನ ಅಧಿಕೃತ ವೆಬ್ ಸೈಟ್ ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡ ವೈಭವ್ ಸೂರ್ಯವಂಶಿ, 2026ರ ಐಪಿಎಲ್ ಟೂರ್ನಿಯಲ್ಲಿ ತಾನು ಪ್ರತಿನಿಧಿಸುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು ಫೈನಲ್ಗೆ ತಲುಪಿಸುತ್ತೇನೆ ಎಂದು ಹೇಳಿದ್ದಾರೆ.
"ನನ್ನ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಸಾಕಷ್ಟು ಸಂಗತಿಗಳನ್ನು ಕಲಿತುಕೊಂಡಿದ್ದೇನೆ. 2026ರ ಐಪಿಎಲ್ ಟೂರ್ನಿಯಲ್ಲಿ ಈ ಸೀಸನ್ಗಿಂತ ಮತ್ತಷ್ಟು ಉತ್ತಮ ಪ್ರದರ್ಶನ ತೋರಿಸುತ್ತೇನೆ. ಆ ಮೂಲಕ ತಂಡವನ್ನು ಫೈನಲ್ಗೆ ತಲುಪಿಸುತ್ತೇನೆ. ತಂಡಕ್ಕೆ ಟ್ರೋಫಿ ಗೆದ್ದುಕೊಡುವಲ್ಲಿ ನನ್ನ ಪಾತ್ರ ಹೇಗಿರಬೇಕು ಎಂಬುದರ ಕಡೆ ಹೆಚ್ಚಿನ ಗಮನ ಹರಿಸುತ್ತೇನೆ," ಎಂದು ವೈಭವ್ ಸೂರ್ಯವಂಶಿ ತಿಳಿಸಿದ್ದಾರೆ.
IPL 2025: ಆರ್ಸಿಬಿ ಎದುರು ಪಂಜಾಬ್ ಕಿಂಗ್ಸ್ ಸೋಲಿಗೆ ಕಾರಣ ತಿಳಿಸಿದ ರಿಕಿ ಪಾಂಟಿಂಗ್!
ತಪ್ಪುಗಳನ್ನು ತಿದ್ದಿಕೊಳ್ಳುತ್ತೇನೆ
"ಐಪಿಎಲ್ ಟೂರ್ನಿಯಲ್ಲಿ ಆಡುವ ಕನಸನ್ನು ಪ್ರತಿಯೊಬ್ಬ ಯುವ ಆಟಗಾರನೂ ಹೊಂದಿರುತ್ತಾನೆ. ನನ್ನ ಮೊದಲ ಆವೃತ್ತಿಯಲ್ಲೇ ಸಾಕಷ್ಟು ಸಂಗತಿಗಳನ್ನು ಕಲಿತುಕೊಂಡೆ. ಈ ಆವೃತ್ತಿಯಲ್ಲಿ ನಾನು ಯಾವ ಕ್ಷೇತ್ರದಲ್ಲಿ ಎಡವಿದ್ದೆನೋ, ಅದರ ಕಡೆಗೆ ಹೆಚ್ಚು ಗಮನಹರಿಸಿ ಮುಂದಿನ ಸೀಸನ್ನಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡುತ್ತೇನೆ," ಎಂದು ಆರ್ಆರ್ ಓಪನರ್ ಹೇಳಿದ್ದಾರೆ.
ಐಪಿಎಲ್ ಟೂರ್ನಿಯ ನಂತರ ರಾಷ್ಟ್ರೀಯ ತಂಡದ ಸೇವೆಗೆ ಲಭ್ಯವಾಗಿರುವ ಅಂಡರ್ -19 ಆಟಗಾರ ವೈಭವ್ ಸೂರ್ಯವಂಶಿ, ಜೂನ್ 24 ರಿಂದ ಜುಲೈ 23 ರವರೆಗೂ ಇಂಗ್ಲೆಂಡ್ ಕಿರಿಯರ ತಂಡದ ವಿರುದ್ಧ 5 ಪಂದ್ಯಗಳ ಏಕದಿನ ಸರಣಿ ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದ್ದಾರೆ.