Friday, 20th September 2024

ಕ್ರಿಕೆಟ್ ಉತ್ಸಾಹಿಗಳಿಗೆ ಕೋಟಕ್ ಮೈಟೀಮ್ ಕಾರ್ಡ್ 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಕೋಟಕ್ ಪಾಲುದಾರಿಕೆ

ಆರ್ ಸಿಬಿ ಅಭಿಮಾನಿಗಳಿಗಾಗಿ ಮೈಟೀಮ್ ಇಮೇಜ್ ಕಾರ್ಡ್ ಅನ್ನು ಬಿಡುಗಡೆ 

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರಿನ (ಆರ್‌ಸಿಬಿ) ಹೆಮ್ಮೆಯ ಅಧಿಕೃತ ಪಾಲುದಾರನಾಗಿ ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ (ಕೆಎಂಬಿಎಲ್) ಇಂದು ನೇಮಕಗೊಂಡಿದೆ.

ಇದೇ ಮೊದಲ ಬಾರಿಗೆ ಆರ್‌ಸಿಬಿ ಫ್ರ್ಯಾಂಚೈಸ್‌ನೊಂದಿಗೆ ಕೋಟಕ್ ಒಡನಾಟ ಆರಂಭಗೊಂಡಿದೆ. ಈ ಸಂದರ್ಭದಲ್ಲಿ ಕೆಎಂಬಿಎಲ್ ಕೋಟಕ್ ಮೈಟೀಮ್ ಇಮೇಜ್ ಕಾರ್ಡ್ ಅನ್ನು ಪರಿಚಯಿಸಿದೆ – ಇದು ಕ್ರಿಕೆಟ್-ಥೀಮ್ ಅನ್ನು ಒಳಗೊಂಡಿರುವ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಶ್ರೇಣಿಯಾಗಿದೆ, ಇದನ್ನು ವಿಶೇಷವಾಗಿ ಆರ್‌ಸಿಬಿ ಅಭಿಮಾನಿಗಳಿಗೆಂದೇ ವಿನ್ಯಾಸಗೊಳಿಸ ಲಾಗಿದೆ.

ಕೋಟಕ್ ಮೈಟೀಮ್ ಇಮೇಜ್ ಕ್ರಿಕೆಟ್ ಎಡಿಷನ್ ಶ್ರೇಣಿಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಆಟಗಾರರ ತಂಡದ ದೃಶ್ಯಗಳು, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಲೋಗೋ ಮತ್ತು ವಾಟರ್‌ಮಾರ್ಕ್ ಮತ್ತು ಆರ್‌ಸಿಬಿ ತಂಡದ ಅಧಿಕೃತ ಬಣ್ಣಗಳನ್ನು ಒಳಗೊಂಡಿದ್ದು, ಕಾರ್ಡ್ ಪ್ರತಿ ಆರ್‌ಸಿಬಿ ಬೆಂಬಲಿಗರಿಗೆ ಅತ್ಯುತ್ತಮ ಮತ್ತು ಪರಿಪೂರ್ಣ ಬಹುಮಾನವನ್ನು ನೀಡುತ್ತದೆ. ಕೋಟಕ್ ಮೈಟೀಮ್ ಇಮೇಜ್ ಕಾರ್ಡ್ 199 / – ರೂಗಳಿಗೆ ಲಭ್ಯವಿದೆ.

ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ ನ ಉತ್ಪನ್ನಗಳು, ಪರ್ಯಾಯ ಚಾನೆಲ್ ಗಳು, ಗ್ರಾಹಕ ಅನುಭವ ವಿಭಾಗದ ಅಧ್ಯಕ್ಷರು ಪುನೀತ್ ಕಪೂರ್, “ರಾಯಲ್ ಚಾಲೆಂಜರ್ಸ್ ಬೆಂಗಳೂರಿನೊಂದಿಗೆ ನಮ್ಮ ಪಾಲುದಾರಿಕೆಯನ್ನು ಘೋಷಿಸಲು ನಮಗೆ ಸಂತಸವಾಗುತ್ತದೆ.

ಆಸ್ಟ್ರೇಲಿಯಾದೊಂದಿಗಿನ ಅದ್ಭುತ ಸರಣಿಯ ಬಳಿಕ, ಇಂಗ್ಲೆಂಡ್ ಜೊತೆಗಿನ ಪಂದ್ಯಗಳ ನಂತರ, ಕ್ರಿಕೆಟ್ ನೊಂದಿಗೇ ಉಸಿರಾ ಡುವ ಮತ್ತು ಜೀವಿಸುವ ಕ್ರಿಕೆಟ್-ಪ್ರೀತಿಯ ರಾಷ್ಟ್ರವು ಮತ್ತೂ ಹೆಚ್ಚಿನ ಸವಿ ಉಣ್ಣಲು ಸಜ್ಜಾಗಿದೆ. ಕೋಟಕ್ ಅಭಿಮಾನಿಗಳಿಗೆ ಈ ಸಂತಸಕರ ಸಂದರ್ಭವನ್ನು ಅರ್ಪಿಸಲು ಸಿದ್ಧವಾಗಿದೆ. ತಂಡವನ್ನು ಹುರಿದುಂಬಿಸುವ ಜೊತೆಗೆ, ಆರ್‌ಸಿಬಿ ಅಭಿಮಾನಿಗಳು ಕೋಟಕ್ ಮೈಟೀಮ್ ಕಾರ್ಡ್‌ನೊಂದಿಗೆ ತಮ್ಮ ಫೇವರಿಟ್ ತಂಡದ ಪಾಕೆಟ್ ಗಾತ್ರದ ರೆಪ್ಲಿಕಾವನ್ನು ಹೊಂದಬಹುದು” ಎಂದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಉಪಾಧ್ಯಕ್ಷ ಮತ್ತು ರಾಜೇಶ್ ವಿ ಮೆನನ್, ‘ದೇಶದ ಪ್ರಮುಖ ಹಣಕಾಸು ಸೇವೆಗಳು ಮತ್ತು ಬ್ಯಾಂಕಿಂಗ್  ಸಂಸ್ಥೆಗಳಲ್ಲಿ ಒಂದಾದ ಕೋಟಕ್  ಜತೆ ಪಾಲುದಾರಿಕೆ ಹೊಂದಲು ನಾವು ಸಂತೋಷ ಪಡುತ್ತೇವೆ.ಕೋಟಕ್ ಅವರ ಕ್ರೆಡಿಟ್ ಮತ್ತಜ ಡೆಬಿಟ್ ಇಮೇಜ್ ಕಾರ್ಡ್ ಗಳು ಈ ಸಂಘವನ್ನು ಇನ್ನಷ್ಟು ಉದ್ದೇಶಪೂರ್ವಕವಾಗಿ ಮಾಡುತ್ತದೆ. ಇದು ನಮ್ಮ ಅಭಿಮಾನಿಗಳಿಗೆ ಸ್ಪಷ್ಟವಾದ ಪಾಲುದಾರ ಉತ್ಪನ್ನ ಅನುಭವವನ್ನು ನೀಡುತ್ತದೆ.

ಈಗಾಗಲೇ ಕಾರ್ಡ್ ಬಳಸುತ್ತಿರುವವರು ಮತ್ತು ಹೊಸ ಕೆಎಂಬಿಎಲ್ ಗ್ರಾಹಕರು ತಮ್ಮ ಆದ್ಯತೆಯ ಕೋಟಕ್ ಮೈಟೀಮ್ ಇಮೇಜ್ ಡೆಬಿಟ್ ಮತ್ತು / ಅಥವಾ ಕ್ರೆಡಿಟ್ ಕಾರ್ಡ್‌ಗಾಗಿ www.kotak.com ವೆಬ್‌ಸೈಟ್‌ಗೆ ಭೇಟಿ ನೀಡಿ. ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್‌ಗೆ ಲಾಗ್ ಇನ್ ಮಾಡುವ ಮೂಲಕವೂ ಅರ್ಜಿ ಸಲ್ಲಿಸಬಹುದು.