ಮುಂಬಯಿ: ಡಿಸೆಂಬರ್ 22 ರಿಂದ 27 ರವರೆಗೆ ವಡೋದರಾದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ(India’s new ODI jersey) ಮಹಿಳಾ ಟೀಮ್ ಇಂಡಿಯಾದ ಆಟಗಾರ್ತಿಯರು ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ(Jay Shah), ಮತ್ತು ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್(Harmanpreet Kaur) ಜಂಟಿಯಾಗಿ ನೂತನ ಜೆರ್ಸಿ ಬಿಡುಗಡೆ ಮಾಡಿದರು.
📍 BCCI Headquarters, Mumbai
— BCCI (@BCCI) November 29, 2024
Mr Jay Shah, Honorary Secretary, BCCI & Ms Harmanpreet Kaur, Captain, Indian Cricket Team unveiled #TeamIndia's new ODI jersey 👏 👏@JayShah | @ImHarmanpreet | @adidas pic.twitter.com/YujTcjDHRO
ಹೊಸ ಜೆರ್ಸಿಯು ಹಿಂದಿನದಕ್ಕಿಂದ ಸ್ವಲ್ಪ ಬದಲಾವಣೆಯಾಗಿದೆ. ಹೊಸ ಜೆರ್ಸಿಯಲ್ಲಿ ಭುಜಗಳ ಮೇಲೆ ತ್ರಿವರ್ಣದ ಗ್ರೇಡಿಯಂಟ್ ಹೊಂದಿದೆ. ಜೆರ್ಸಿಯ ವಿಡಿಯೋವನ್ನು ಬಿಸಿಸಿಐ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. 2023 ರಲ್ಲಿ ಕ್ರೀಡಾ ಉಡುಪು ತಯಾರಕ ಅಡಿಡಾಸ್ ಕಿಟ್ ಪ್ರಾಯೋಜಕರಾಗಿ ಪಡೆದ ನಂತರ, ಭಾರತ ತಂಡದ ಜೆರ್ಸಿಗಳನ್ನು ನಿಯಮಿತವಾಗಿ ನವೀಕರಿಸಲು ಪ್ರಯತ್ನಿಸುತ್ತಲೇ ಇದೆ. ಕಳೆದ ವರ್ಷ ಪುರುಷರ ಏಕದಿನ ವಿಶ್ವಕಪ್ ಮತ್ತು ಈ ವರ್ಷದ ಆರಂಭದಲ್ಲಿ ಟಿ20 ವಿಶ್ವಕಪ್ಗಾಗಿ ಭಾರತವು ವಿಶೇಷ ಕಿಟ್ಗಳನ್ನು ಹೊಂದಿತ್ತು.
ಇದನ್ನೂ ಓದಿ SMAT 2024: ಕೇವಲ 23 ಎಸೆತಗಳಲ್ಲಿ 77 ರನ್ ಸಿಡಿಸಿದ ಇಶಾನ್ ಕಿಶನ್!
ಡಿಸೆಂಬರ್ 5ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಮಹಿಳಾ ತಂಡ ಈ ಹಿಂದಿನ ಜೆರ್ಸಿಯಲ್ಲೇ ಆಡಲಿದೆ. ಈ ಸರಣಿಯು ಐಸಿಸಿ ಮಹಿಳಾ ಚಾಂಪಿಯನ್ಶಿಪ್ ಭಾಗವಾಗಿದೆ. ಹರ್ಮನ್ಪ್ರೀತ್ ಕೌರ್ ತಂಡವನ್ನು ಮುನ್ನಡೆಸಲಿದ್ದಾರೆ. ಕನ್ನಡತಿ ಶ್ರೇಯಾಂಕಾ ಪಾಟೀಲ್ ಮತ್ತು ಡ್ಯಾಶಿಂಗ್ ಓಪನ್ ಶಫಾಲಿ ವರ್ಮಾ ಕಳೆದ ಫಾರ್ಮ್ನಿಂದಾಗಿ ಸರಣಿಗೆ ಆಯ್ಕೆಯಾಗಲಿಲ್ಲ.
ಆಸೀಸ್ ಸರಣಿಗೆ ಟೀಮ್ ಇಂಡಿಯಾ
ತಂಡ: ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಪ್ರಿಯಾ ಪೂನಿಯಾ, ಜಿಮಿಮಾ ರಾಡ್ರಿಗಸ್, ಹರ್ಲೀನ್ ಡಿಯೊಲ್, ರಿಚಾ ಘೋಷ್ (ವಿಕೆಟ್ಕೀಪರ್), ತೇಜಲ್ ಹಸಬನೀಸ್, ದೀಪ್ತಿ ಶರ್ಮಾ, ಮಿನು ಮಣಿ, ಪ್ರಿಯಾ ಮಿಶ್ರಾ, ರಾಧಾ ಯಾದವ್, ತಿತಾಸ್ ಸಾಧು, ಅರುಂಧತಿ ರೆಡ್ಡಿ, ರೇಣುಕಾಸಿಂಗ್ ಠಾಕೂರ್, ಸೈಮಾ ಠಾಕೂರ್, ಉಮಾ ಚೆಟ್ರಿ (ವಿಕೆಟ್ಕೀಪರ್).