ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂಗ್ಲೆಂಡ್‌ ಪ್ರವಾಸದ ಭಾರತ ಅಂಡರ್‌-19 ತಂಡದಲ್ಲಿ ಸ್ಥಾನ ಪಡೆದ ವೈಭವ್‌ ಸೂರ್ಯವಂಶಿ!

India's U-19 Squad for England Tour: ಇಂಗ್ಲೆಂಡ್‌ ಪ್ರವಾಸದ ಭಾರತ ಅಂಡರ್‌-19 ಕ್ರಿಕೆಟ್‌ ತಂಡವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮೇ 22 ರಂದು ಪ್ರಕಟಿಸಿದೆ. 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ವೈಭವ್‌ ಸೂರ್ಯವಂಶಿ ಕಿರಿಯರ ತಂಡದಲ್ಲಿ ಸ್ಥಾನವನ್ನು ಪಡೆದಿದ್ದಾರೆ.

ಭಾರತ ಅಂಡರ್‌-19 ತಂಡದಲ್ಲಿ ಸ್ಥಾನ ಪಡೆದ ವೈಭವ್‌ ಸೂರ್ಯವಂಶಿ!

ಭಾರತ ಅಂಡರ್‌ -19 ತಂಡ ಪ್ರಕಟ.

Profile Ramesh Kote May 22, 2025 3:11 PM

ನವದೆಹಲಿ: ಮುಂಬರುವ ಇಂಗ್ಲೆಂಡ್‌ ಪ್ರವಾಸದ (IND vs ENG) ಭಾರತ 19ರ ವಯೋಮನ ಕ್ರಿಕೆಟ್‌ ತಂಡವನ್ನು (Indian U-19 Squad) ಮೇ 22 ರಂದು ಗುರುವಾರ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಪ್ರಕಟಿಸಿದೆ. 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪರ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ ಎಲ್ಲರ ಗಮನ ಸೆಳೆದಿದ್ದ 14ರ ವಯಸ್ಸಿನ ಪೋರ ವೈಭವ್‌ ಸೂರ್ಯವಂಶಿ ಭಾರತ ಅಂಡರ-19 ತಂಡದಲ್ಲಿ ಚೊಚ್ಚಲ ಅವಕಾಶವನ್ನು ಪಡೆದಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಯುವ ಆರಂಭಿಕ ಆಯುಷ್‌ ಮ್ಹಾತ್ರೆ ಅವರು ಭಾರತ ಕಿರಿಯರ ತಂಡಕ್ಕೆ ನಾಯಕನನ್ನಾಗಿ ನೇಮಿಸಲಾಗಿದೆ.

ಜೂನ್‌ 24 ರಿಂದ ಜುಲೈ 23ರವರೆಗೂ ಭಾರತ ತಂಡ ಇಂಗ್ಲೆಂಡ್‌ ಪ್ರವಾಸವನ್ನು ಹಮ್ಮಿಕೊಳ್ಳಲಿದೆ. ಇಂಗ್ಲೆಂಡ್‌ ಹಾಗೂ ಭಾರತ ತಂಡಗಳು ಮೊದಲಿಗೆ ಅಭ್ಯಾಸವನ್ನು ಪಂದ್ಯವನ್ನು ಆಡಲಿದೆ. ನಂತರ ಐದು ಪಂದ್ಯಗಳ ಯುವ ಏಕದಿನ ಸರಣಿಯಲ್ಲಿ ಉಭಯ ತಂಡಗಳು ಕಾದಾಟ ನಡೆಸಲಿವೆ. ನಂತರ ಎರಡು ದಿನಗಳ ಹಲವು ಪಂದ್ಯಗಳನ್ನು ಉಭಯ ತಂಡಗಳು ಕಾದಾಟ ನಡೆಸಲಿವೆ. ಇಂಗ್ಲೆಂಡ್‌ನಲ್ಲಿ ವೇಗದ ಬೌಲಿಂಗ್‌ ಕಂಡೀಷನ್ಸ್‌ ಇರುವ ಕಾರಣ ಭಾರತ ಅಂಡರ್‌-19 ತಂಡಕ್ಕೆ ಕಠಿಣ ಸವಾಲು ಎದುರಾಗಲಿದೆ.

IPL 2025: ಮುಂಬೈಗೆ ಇನ್ನೂ ಇದೆ ಅಗ್ರ 2ರಲ್ಲಿ ಸ್ಥಾನ ಪಡೆಯುವ ಅವಕಾಶ; ಈ ಲೆಕ್ಕಾಚಾರ ಇಲ್ಲಿದೆ

ಇಂಗ್ಲೆಂಡ್‌ ಪ್ರವಾಸದ ಭಾರತ ಅಂಡರ್‌-19 ತಂಡ

ಆಯುಷ್‌ ಮ್ಹಾತ್ರೆ (ನಾಯಕ), ವೈಭವ್‌ ಸೂರ್ಯವಂಶಿ, ವಿಹಾನ್‌ ಮಲ್ಹೋತ್ರ, ಮೌಲ್ಯರಾಜಸಿನ್ಹ ಚಾವ್ಡಾ, ರಾಹುಲ್‌ ಕುಮಾರ್‌, ಅಭಿಜ್ಞಾನ ಕುಂದು (ಉಪ ನಾಯಕ, ವಿ.ಕೀ), ಹರ್ವಾಂಶು ಸಿಂಗ್‌(ವಿ.ಕೀ), ಆರ್‌ ಎಸ್‌ ಅಂಬರೀಶ್‌, ಕಾನಿಷ್ಕ ಚೌವ್ಹಾನ್‌, ಖಿಲಾನ್‌ ಪಟೇಲ್‌, ಹೆನಿಲ್‌ ಪಟೇಲ್‌, ಯುಧಜೀತ್‌ ಗುಹಾ, ಪ್ರಣವ್‌ ರಾಘವೇಂದ್ರ, ಮೊಹಮ್ಮದ್‌ ಎನಾನ್‌, ಆದಿತ್ಯ ರಾಣಾ, ಅನ್ಮೋಲ್‌ಜೋತ್‌ ಸಿಂಗ್‌

ಸ್ಟ್ಯಾಂಡ್‌ ಬೈ ಪ್ಲೇಯರ್ಸ್‌: ನಮನ್‌ ಪುಷ್ಪಕ್‌, ಡಿ ದೀಪೇಶ್‌, ವೇದಾಂತ್‌ ತ್ರಿವೇದಿ, ವಿಕಲ್ಪ್‌ ತಿವಾರಿ, ಅಲಂಕೃತ್‌ ರಾಪೋಲ್‌ (ವಿ.ಕೀ)



ಭಾರತ ಅಂಡರ್‌-19 ತಂಡದ ಇಂಗ್ಲೆಂಡ್‌ ಪ್ರವಾಸದ ವೇಳಾಪಟ್ಟಿ

50 ಓವರ್‌ಗಳ ಅಭ್ಯಾಸ ಪಂದ್ಯ- ಜೂನ್‌ 24-ಲೌಬರೋ ವಿಶ್ವವಿದ್ಯಾಲಯ

ಮೊದಲನೇ ಏಕದಿನ ಪಂದ್ಯ-ಜೂನ್‌ 27- ಹೊವ್‌

ಎರಡನೇ ಏಕದಿನ ಪಂದ್ಯ- ಜೂನ್‌ 30-ನಾರ್ಥ್‌ಹ್ಯಾಮ್ಟನ್‌

ಮೂರನೇ ಏಕದಿನ ಪಂದ್ಯ-ಜುಲೈ 2-ನಾರ್ಥ್‌ಹ್ಯಾಮ್ಟನ್‌

ನಾಲ್ಕನೇ ಏಕದಿನ ಪಂದ್ಯ-ಜುಲೈ 5-ವಾರ್ಸೆಸ್ಟರ್‌

ಐದನೇ ಏಕದಿನ ಪಂದ್ಯ-ಜುಲೈ 7- ವಾರ್ಸೆಸ್ಟರ್‌

ಮೊದಲನೇ ಮಲ್ಟಿ ಡೇ ಪಂದ್ಯ-ಜುಲೈ 12 ರಿಂದ 15-ಬೆಕನ್‌ಹ್ಯಾಮ್‌

ಎರಡನೇ ಮಲ್ಟಿ ಡೇ ಪಂದ್ಯ-ಜುಲೈ 20 ರಿಂದ 23-ಚೆಲ್ಮ್ಸ್‌ಫೋರ್ಡ್

IPL 2025: ʼನಮಗೆ ಅನ್ಯಾಯವಾಗಿದೆʼ- ನಿಯಮ ಬದಲಿಸಿದ ಬಿಸಿಸಿಐ ವಿರುದ್ಧ ತಿರುಗಿಬಿದ್ದ ಕೆಕೆಆರ್‌ ಸಿಇಒ!

2025ರ ಐಪಿಎಲ್‌ ಟೂರ್ನಿಯಲ್ಲಿ ವೈಭವ್‌ ಸೂರ್ಯವಂಶಿ ಪ್ರದರ್ಶನ

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ವೈಭವ್‌ ಸೂರ್ಯವಂಶಿ ಬರೆದಿದ್ದರು. ರಾಹುಲ್‌ ದ್ರಾವಿಸ್‌ ಗರಡಿಯಲ್ಲಿ ಪಳಗಿದ ವೈಭವ್‌ ಸೂರ್ಯವಂಶಿ ಆರಂಭಿಕ ಪಂದ್ಯಗಳಲ್ಲಿ ಬೆಂಚ್‌ ಕಾದಿದ್ದರು. ಆದರೆ, ಸಂಜು ಸ್ಯಾಮ್ಸನ್‌ ಗಾಯಕ್ಕೆ ತುತ್ತಾದ ಬಳಿಕ ವೈಭವ್‌ ಸೂರ್ಯವಂಶಿ ಅವರನ್ನು ಐಪಿಎಲ್‌ ಟೂರ್ನಿಯಲ್ಲಿ ಅವಕಾಶ ನೀಡಲಾಗಿತ್ತು. ಗುಜರಾತ್‌ ಟೈಟನ್ಸ್‌ ವಿರುದ್ದದ ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿ ಕೇವಲ 34 ಎಸೆತಗಳಲ್ಲಿ ಶತಕವನ್ನು ಸಿಡಿಸುವ ಮೂಲಕ ಎರಡನೇ ಅತ್ಯಂತ ವೇಗದ ಐಪಿಎಲ್‌ ಶತಕವನ್ನು ಬಾರಿಸಿದ್ದರು. ಅಲ್ಲದೆ ಭಾರತದ ಪರ ವೇಗವಾಗಿ ಐಪಿಎಲ್‌ ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು.

ತಮ್ಮ ಚೊಚ್ಚಲ ಐಪಿಎಲ್‌ ಸೀಸನ್‌ನಲ್ಲಿ 14ರ ಪ್ರಾಯದ ಬ್ಯಾಟ್ಸ್‌ಮನ್‌ ಆಡಿದ 7 ಪಂದ್ಯಗಳಿಂದ 36ರ ಸರಾಸರಿ ಮತ್ತು 206.56ರ ಸ್ಟ್ರೈಕ್‌ ರೇಟ್‌ನಲ್ಲಿ 252 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ವಿಶ್ವ ಕ್ರಿಕೆಟ್‌ ಗಮನವನ್ನು ಸೆಳೆದಿದ್ದರು. ಇದೀಗ ಅವರಿಗೆ ಭಾರತ ಅಂಡರ್‌-19 ತಂಡದಲ್ಲಿಯೂ ಅವಕಾಶವನ್ನು ನೀಡಲಾಗಿದೆ. ಇಲ್ಲಿ ಅವರು ಉತ್ತಮ ಪ್ರದರ್ಶನ ತೋರಿದರೆ, ಭಾರತ ಹಿರಿಯರ ತಂಡದಲ್ಲಿಯೂ ಅವಕಾಶ ನೀಡಬಹುದು.