Saturday, 2nd November 2024

ನೂರಾರು ಪ್ರಶ್ನೆಗೆ ಅಮ್ಮನ ಮಡಿಲೇ ಉತ್ತರ

ಕೋವಿಡ್ ಸಮಸ್ಯೆ ಕುರಿತು ಮಾಹಿತಿ

ಆತಸ್ಥೈರ್ಯ ತುಂಬುತ್ತಿರುವ ಅಮ್ಮನ ಮಡಿಲು ಚಾರಿಟಿ

ವಿಶೇಷ ವರದಿ: ಜ್ಞಾನದೀಪ್ತಿ. ಟಿ ವಿಜಯಪುರ

ಎರಡನೇ ಕರೋನಾ ಅಲೆಗೆ ಜನತೆ ತತ್ತರಿಸಿ ಹೋಗಿದ್ದಾರೆ. ಕರೋನಾ ರೋಗ ಲಕ್ಷಣಗಳು ಬಂದಲ್ಲಿ ಬೆಡ್ ಸಿಗುವುದೋ ಇಲ್ಲವೋ, ಯಾವ ಆಸ್ಪತ್ರೆ ಸೂಕ್ತ ಎಂಬ ಹಲವಾರು ಪ್ರಶ್ನೆಗಳು ಎದುರಾಗುವುದು ಸಹಜ. ಇಂತಹ ಸಂದರ್ಭದಲ್ಲಿ ಸೂಕ್ತ ಸಲಹೆ ಸೂಚನೆ ನೀಡುವವರ ಅವಶ್ಯಕತೆ ಇದ್ದು, ಜನರ ಪ್ರತಿಯೊಂದು ಪ್ರಶ್ನೆಗಳಿಗೆ ಅತ್ಯುತ್ತಮ ಸಲಹೆ ಸೂಚನೆ, ಉತ್ತರಗಳನ್ನು ಅಮ್ಮನ ಮಡಿಲು ಚಾರಿಟಿ ಸದ್ದಿಲ್ಲದೇ ಮಾಡುತ್ತಿರುವುದು ಖುಷಿಯ ವಿಚಾರ.

ಕೋವಿಡ್ ಸಮಯದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತಿವೆ. ಸರಿಯಾದ ಮಾಹಿತಿ ಇರದೆ, ಸೂಕ್ತ ಸಲಹೆಗಳಿರದೇ ಜನತೆ
ಪರಿತಪಿಸುವಂತಾಗಿದೆ. ಇಂತಹ ಸಮಯದಲ್ಲಿ ಅಮ್ಮನ ಮಡಿಲು ಚಾರಿಟಿ ವಿಶೇಷ ಸಹಾಯವಾಣಿಯೊಂದನ್ನು ಆರಂಭಿಸುವ
ಮೂಲಕ ಜನರಿಗೆ ಆತ್ಮಸ್ಥ್ಯರ್ಯ ತುಂಬುವ ಒಂದು ಉತ್ತಮ ಕಾರ್ಯ ಮಾಡುತ್ತಿದೆ. ವಿವಿಧ ಮಾಹಿತಿಗಾಗಿ ಕರೆ ಮಾಡಿದವರಿಗೆ ಮಾರ್ಗದರ್ಶನ ಮಾಡುವ ಮೂಲಕ ಸಲಹೆ ಸೂಚನೆಗಳ ಮಾಹಿತಿ ನೀಡುತ್ತಿದೆ.

ಏ. ೨೦ ರಂದು ವಿಜಯಪುರದ ಅಮ್ಮನ ಚಾರಿಟೆಬಲ್ ಟ್ರಸ್ಟ್ ಮತ್ತು ಎಂ.ಬಿ.ಪಾಟೀಲ ಫೌಂಡೇಶನ್ ಸಹಾಯವಾಣಿ ಆರಂಭಿಸಿ ದ್ದವು. ಈಗ ಈ ಸಹಾಯವಾಣಿಗೆ ನಿತ್ಯ ನೂರಾರು ಸಾರ್ವಜನಿಕರು ಕರೆ ಮಾಡಿ, ಅಗತ್ಯ ಮಾರ್ಗದರ್ಶನ, ಸಹಾಯ ಪಡೆದು ಕೊಳ್ಳುತ್ತಿದ್ದಾರೆ. ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಪ್ರಧಾನ ಕಾರ್ಯದರ್ಶಿ ಬಸವರಾಜ ಕೌಲಗಿ ಮತ್ತು ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಹಾಗೂ ಎಂ.ಬಿ.ಪಾಟೀಲ ಫೌಂಡೇಶನ್ ಅಧ್ಯಕ್ಷ ಸುನೀಲಗೌಡ ಪಾಟೀಲ ಅವರ ನೇತೃತ್ವದಲ್ಲಿ ಈ ಫೌಂಡೇಶನ್ ಈಗ ವಿಜಯಪುರ ಜನರಿಗೆ ಸಹಾಯ ಮಾಡುತ್ತಿದ್ದು, ಸಂಕಷ್ಟದ ಸಮಯದಲ್ಲಿ
ಸಾರ್ವಜನಿಕರ ಸೇವೆಗೆ ನಿಲ್ಲುವ ಮೂಲಕ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ.

ಅಧ್ಯಕ್ಷ ಸಂಗಮೇಶ ಇಂದ ಅನನ್ಯ ಸೇವೆ: ಅಮ್ಮನ ಮಡಿಲು ಚಾರಿಟಿಯ ಅಧ್ಯಕ್ಷರಾದ ಸದಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ನ್ಯಾಯವಾದಿ ಸಂಗಮೇಶ ಬಬಲೆಶ್ವರ ಕರೋನಾ ಮೊದಲ ಅಲೆಯ ಸಂದರ್ಭದಲ್ಲಿಯೂ ತಮ್ಮ ಎಂ.ಎಸ್. ವಿದ್ಯಾವರ್ಧಕ ಸಂಘದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ ಕೇವಲ ಅರ್ಧ ಶುಲ್ಕ ತೆಗೆದುಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗುವಂತಹ ಕೆಲಸವನ್ನು ಮಾಡಿದ್ದರು.

ಕರೆ ಮಾಡಿ ಮಾಹಿತಿ ಪಡೆಯಿರಿ: ಕರೋನಾಗೆ ಸಂಬಂಧಪಟ್ಟ ಯಾವುದೇ ರೀತಿಯ ಮಾಹಿತಿ ಬೇಕಾದಲ್ಲಿ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ನೀಡಿರುವ ವಿಶೇಷ ಸಹಾಯವಾಣಿ ಸಂಖ್ಯೆ ೭೪೮೩೯೫೯೦೪೧ ಅಥವಾ ೭೪೮೩೯೧೨೬೮೦ ಗೆ
ಸಂಪರ್ಕಿಸಬಹುದಾಗಿದೆ.