Saturday, 30th November 2024

Murder Case: ಅಸ್ಸಾಮಿ ಪ್ರೇಯಸಿಯನ್ನು ಕೊಂದು ಪರಾರಿಯಾಗಿದ್ದ ಕೇರಳದ ಹಂತಕನ ಬಂಧನ

girlfriend murder case

ಬೆಂಗಳೂರು: ಪ್ರಿಯತಮೆಯನ್ನು ((Girlfriend) ) ಕೊಂದು (murder case) ಒಂದು ದಿನ ಶವದೊಂದಿಗೆ ಕಳೆದು ಬಳಿಕ ರಾಜ್ಯ ಬಿಟ್ಟು ಪರಾರಿಯಾಗಿದ್ದ ಕೇರಳದ ಹಂತಕನನ್ನು ಕಡೆಗೂ ಪೊಲೀಸರು ಬೆಂಗಳೂರಿನಲ್ಲೇ (Bengaluru Crime News) ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಪ್ರಿಯತಮೆಯನ್ನು ಬರ್ಬರ ಹತ್ಯೆ ಮಾಡಿ ಹೊರ ರಾಜ್ಯಗಳಿಗೆ ಪರಾರಿಯಾಗಿ ಸುತ್ತಾಡುತ್ತಿದ್ದ ಆರೋಪಿ ಕೊನೆಗೆ ದೇವನಹಳ್ಳಿ ಬಳಿ ಪೊಲೀಸರ ಕೈಗೆ ಲಾಕ್​ ಆಗಿದ್ದಾನೆ. ಕೇರಳ ಮೂಲದ ಆರವ್ ಹನೋವ್‌(21) ಬಂಧಿತ ಕೊಲೆ ಆರೋಪಿ. ಅಸ್ಸಾಂ ಮೂಲದ ಪ್ರಿಯತಮೆ ಮಾಯಾ ಗೊಗೊಯ್‌ಳನ್ನು ಈತ ಕೊಲೆಗೈದಿದ್ದ. ಬಳಿಕ ಹೊರ ರಾಜ್ಯಕ್ಕೆ ಎಸ್ಕೇಪ್ ಆಗಿದ್ದ. ಪೊಲೀಸರು 2 ತಂಡಗಳನ್ನು ರಚಿಸಿ ಆತನ ಬೆನ್ನು ಬಿದ್ದಿದ್ದರು.

ಇಂದಿರಾನಗರದ ಸರ್ವಿಸ್‌ ಅಪಾರ್ಟ್‌ಮೆಂಟ್‌ಗೆ ಇವರಿಬ್ಬರೂ ನವೆಂಬರ್ 23ರಂದು ಒಟ್ಟಿಗೆ ಬಂದಿದ್ದರು. ನಂತರ ಆರವ್ ಹನೋವ್,​ ಮಾಯಾ ಗೊಗೊಯ್‌ಳನ್ನು ಕೊಲೆಗೈದಿದ್ದಾನೆ. ಬಳಿಕ ಒಂದು ದಿನ ಮೃತದೇಹದ ಜೊತೆಗೆ ಕಾಲ ಕಳೆದಿದ್ದು, ನ. 26ರ ಬೆಳಗ್ಗೆ ಕ್ಯಾಬ್ ಬುಕ್ ಮಾಡಿಕೊಂಡು ಘಟನಾ ಸ್ಥಳದಿಂದ ಎಸ್ಕೇಪ್‌ ಆಗಿದ್ದ. ಸ್ಥಳಕ್ಕೆ ಭೇಟಿ ನೀಡಿದ ಇಂದಿರಾನಗರ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು.

ಈ ಬಗ್ಗೆ ಪೂರ್ವ ವಿಭಾಗ ಡಿಸಿಪಿ ದೇವರಾಜ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದು, 4 ದಿನಗಳ ಹಿಂದೆ ಸರ್ವೀಸ್ ಅಪಾರ್ಟ್​ಮೆಂಟ್​ನಲ್ಲಿ ಮಹಿಳೆ ಕೊಲೆ‌ ಆಗಿದೆ. ಆರೋಪಿ ಆರವ್ ಹನೋವ್‌ ಕೇರಳ ಮೂಲದವನು. ಸಿಸಿಟಿವಿಯಲ್ಲಿ ಆತ ಅಪಾರ್ಟ್​ಮೆಂಟ್​ನಿಂದ ಹೊರಗಡೆ ಹೋಗುವುದು ಗೊತ್ತಾಗಿತ್ತು. ಆತನ ಪತ್ತೆಗೆ ಮೂರು ತಂಡ ರಚನೆ ಮಾಡಲಾಗಿತ್ತು. ಕೇರಳ, ಉತ್ತರ ಕರ್ನಾಟಕಕ್ಕೆ ತಂಡಗಳನ್ನು ಕಳುಹಿಸಲಾಗಿತ್ತು. ಕೊನೆಗೆ ದೇವನಹಳ್ಳಿ ಬಳಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ವೈಯಕ್ತಿಕ ವಿಚಾರಕ್ಕೆ ಕೊಲೆ ಮಾಡಿದ್ದಾನೆ. ಕೊಲೆ ಮಾಡುವ ಉದ್ದೇಶದಿಂದ ರೂಂಗೆ ಕರೆದುಕೊಂಡು ಹೋಗಿದ್ದಾನೆ. ಹಗ್ಗವನ್ನು ಮೊದಲೇ ಖರೀದಿ ಮಾಡಿದ್ದಾನೆ. ಜೆಪ್ಟೋದಲ್ಲಿ ನೈಲಾನ್, ಚಾಕು ತರಿಸಿಕೊಂಡಿದ್ದ. ಕೊಲೆಯಾದ ಮಹಿಳೆ ಹೆಚ್​ಎಸ್​ಆರ್​ ಲೇಔಟ್ ಕೌನ್ಸಲಿಂಗ್ ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದರು. ಬೊಂಬಲ್ ಅನ್ನೋ ಆ್ಯಪ್​ ಮೂಲಕ ಪರಿಚಯ ಆಗಿದ್ದಾರೆ. ಆರೋಪಿ ಇಲ್ಲಿಂದ ರೈಲ್ವೆ ಸ್ಟೇಷನ್ ಮೂಲಕ ಉತ್ತರ ಪ್ರದೇಶ, ವಾರಣಾಸಿ ಸೇರಿ ಹಲವು ಕಡೆಗಳಲ್ಲಿ ಹೋಗಿದ್ದಾನೆ. ಕೊನೆಗೆ ದೇವನಹಳ್ಳಿ ಬಳಿ ಬಂದಿದ್ದಾನೆ. ಮಾಹಿತಿ ಪಡೆದು ಬಂಧಿಸಲಾಗಿದೆ. ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಸೈನೈಡ್ ಹಂತಕನ ಸೆರೆ: ಹಣ ಹಾಗೂ ಚಿನ್ನ ವಶ