Friday, 18th October 2024

ಮೋಟಾರ್ ಬೈಕ್ ನಲ್ಲಿ ಆತ್ಮಾಹುತಿ ಬಾಂಬರ್ ಸ್ಫೋಟ: ಮೂವರ ಸಾವು

ಇಸ್ಲಮಾಬಾದ್: ಕ್ವೆಟ್ಟಾದಲ್ಲಿ ಆತ್ಮಾಹುತಿ ಬಾಂಬರ್ ಮೋಟಾರ್ ಬೈಕ್ ನಲ್ಲಿ ಬಂದು ಸ್ಫೋಟಿಸಿಕೊಂಡಿದ್ದರಿಂದ ಕನಿಷ್ಠ ಮೂರು ಜನರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 20 ಜನರು ಗಾಯಗೊಂಡಿದ್ದಾರೆ. ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ ದಾಳಿಯ ಹೊಣೆ ಹೊತ್ತಿದೆ. ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾ ದಿಂದ 25 ಕಿ.ಮೀ ದೂರದಲ್ಲಿರುವ ಕ್ವೆಟ್ಟಾ-ಮಸ್ತುಂಗ್ ರಸ್ತೆಯಲ್ಲಿರುವ ಅರೆಸೈನಿಕ ಗಡಿನಾಡು ದಳದ ಸಿಬ್ಬಂದಿ ಯಿರುವ ಚೆಕ್‌ ಪೋಸ್ಟ್‌ನಲ್ಲಿ ಸ್ಫೋಟ ಸಂಭವಿಸಿದೆ. ಆತ್ಮಹತ್ಯಾ ಬಾಂಬರ್ ತನ್ನ ಬೈಕ್ ಅನ್ನು ಚೆಕ್‌ಪೋಸ್ಟ್‌ನ ಭದ್ರತಾ ಪಡೆಗಳ ವಾಹನಕ್ಕೆ ಢಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. […]

ಮುಂದೆ ಓದಿ