Viral News: ಸರೀಸೃಪಗಳ ಕಳ್ಳಸಾಗಣೆ ಮಾಡುತ್ತಿದ್ದ ಕಿಡಿಗೇಡಿ ಸಿಕ್ಕಿ ಬಿದ್ದಿದ್ದೇ ರೋಚಕ!
ಇತ್ತೀಚೆಗೆ ಥಾಯ್ ಏರ್ವೇಸ್ ವಿಮಾನ TG317ನಲ್ಲಿ ಬ್ಯಾಂಕಾಕ್ನಿಂದ ಆಗಮಿಸುತ್ತಿದ್ದ, ಪ್ರಯಾಣಿಕನೊಬ್ಬನನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.ಈತನ ಬ್ಯಾಗ್ನಲ್ಲಿ 52 ಸರೀಸೃಪಗಳು ಇರುವುದು ಪತ್ತೆಯಾಗಿದೆ.ಈ ಸುದ್ದಿ ಈಗ ವೈರಲ್(Viral News) ಆಗಿದೆ.


ಮುಂಬೈ: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (CSMIA) ಕಸ್ಟಮ್ಸ್ ಅಧಿಕಾರಿಗಳು ಸರಿಸೃಪಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ ಪ್ರಯಾಣಿಕನೊಬ್ಬನನ್ನು ಹಿಡಿದಿದ್ದಾರೆ. ಇತ್ತೀಚೆಗೆ ಥಾಯ್ ಏರ್ವೇಸ್ ವಿಮಾನ TG317 ನಲ್ಲಿ ಬ್ಯಾಂಕಾಕ್ನಿಂದ ಆಗಮಿಸುತ್ತಿದ್ದ ಈ ಪ್ರಯಾಣಿಕನನ್ನು ತಪಾಸಣೆ ಮಾಡಿದಾಗ ಅವನ ಬಳಿ ಹಾವು, ಆಮೆಗಳು ಇರುವುದು ಪತ್ತೆಯಾಗಿದೆ. ಗುಪ್ತಚರ ಮಾಹಿತಿಯ ಮೇರೆಗೆ ಮತ್ತು ಅನುಮಾನಾಸ್ಪದ ನಡವಳಿಕೆಯನ್ನು ಗಮನಿಸಿದ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನ ವಸ್ತುಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಆ ವೇಳೆ ಅವನ ವಸ್ತುಗಳ ಒಳಗೆ, 52 ಸರೀಸೃಪಗಳು ಇರುವುದು ಕಂಡುಬಂದಿದೆ. ಈ ಸುದ್ದಿ ಈಗ ವೈರಲ್ (Viral News)ಆಗಿದೆ.
ಈತನ ಬಳಿ ಮೂರು ಸ್ಪೈಡರ್-ಟೈಲ್ಡ್ ಹಾರ್ನ್ಡ್ ವೈಪರ್, ಐದು ಏಷ್ಯನ್ ಲೀಫ್ ಟರ್ಟಲ್ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹಾಗೇ ಅದರಲ್ಲಿ 44 ಇಂಡೋನೇಷಿಯನ್ ಪಿಟ್ ವೈಪರ್ಗಳು ಪತ್ತೆಯಾಗಿದ್ದು, ಆದರೆ ಅವುಗಳಲ್ಲಿ ಒಂದು ಸಾಗಣೆಯ ಸಮಯದಲ್ಲಿ ಸಾವನ್ನಪ್ಪಿತ್ತು ಎನ್ನಲಾಗಿದೆ.
ಪತ್ತೆಯಾದ ಸರಿಸೃಪಗಳು ಸಾಯುವ ಸ್ಥಿತಿಯಲ್ಲಿದ್ದ ಕಾರಣ ಕಸ್ಟಮ್ಸ್ ಅಧಿಕಾರಿಗಳು ತಕ್ಷಣವೇ ಅವುಗಳನ್ನು ವನ್ಯಜೀವಿ ಮತ್ತು ಅರಣ್ಯ ಅಧಿಕಾರಿಗಳಿಗೆ ನೀಡಿ ಆರೈಕೆ ಮಾಡುವಂತೆ ತಿಳಿಸಿದ್ದಾರೆ. ಹಾಗಾಗಿ ಹೆಚ್ಚಿನ ಪ್ರಾಣಿಗಳು ಈಗ ವಿಶೇಷ ಚಿಕಿತ್ಸೆ ಪಡೆಯುತ್ತಿವೆ.ವಶಪಡಿಸಿಕೊಂಡ ಜೀವಿಗಳನ್ನು ಅಂತರರಾಷ್ಟ್ರೀಯ ಮತ್ತು ಭಾರತೀಯ ವನ್ಯಜೀವಿ ಕಾನೂನಿನಡಿಯಲ್ಲಿ ರಕ್ಷಿಸಲಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ನ್ಯೂಯಾರ್ಕ್ನ ವಾಲ್ಸ್ಟ್ರೀಟ್ನಲ್ಲಿ ಕುಣಿದು ಕುಪ್ಪಳಿಸಿದ ಭಾರತೀಯರು; ವೈರಲ್ ವಿಡಿಯೊ ಇಲ್ಲಿದೆ
ಪ್ರಯಾಣಿಕನನ್ನು ಕಸ್ಟಮ್ಸ್ ಕಾಯ್ದೆ, 1962 ರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಬಂಧಿಸಲಾಗಿದ್ದು, ಅಧಿಕಾರಿಗಳು ಜೂನ್ 1 ರಂದು ಈ ಬಗ್ಗೆ ವರದಿಯನ್ನು ಸಲ್ಲಿಸಿದ್ದಾರೆ.