#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ಮಹಾಕುಂಭ ಮೇಳದಲ್ಲಿ ಆರ್‌ಸಿಬಿ ಜೆರ್ಸಿಗೆ ಸ್ನಾನ ಮಾಡಿಸಿದ ಕ್ರಿಕೆಟ್ ಅಭಿಮಾನಿ!

ಮಹಾಕುಂಭಮೇಳದಲ್ಲಿ ಭಾಗವಹಿಸಿದ ಕೋಟ್ಯಾಂತರ ಭಕ್ತರು ಮೂರು ಪವಿತ್ರ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಪುಣ್ಯ ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಕ್ರಿಕೆಟ್‌ ಅಭಿಮಾನಿ ಆರ್‌ಸಿಬಿ ಜೆರ್ಸಿಗೆ ಈ ಪವಿತ್ರ ನದಿಯಲ್ಲಿ ಸ್ನಾನ ಮಾಡಿಸಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ಆರ್‌ಸಿಬಿ ಜೆರ್ಸಿಗೆ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ! ವಿಡಿಯೊ ವೈರಲ್‌

RCB jersey Viral

Profile pavithra Jan 22, 2025 7:41 PM

ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳದ ರೀಲ್‍ಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಈ ಹಿಂದೆ ವ್ಯಕ್ತಿಯೊಬ್ಬ ತನ್ನ ಅಗಲಿದ ತಾಯಿಯ ಫೋಟೋದೊಂದಿಗೆ ಪವಿತ್ರ ಸ್ನಾನ ಮಾಡುತ್ತಿರುವ ವಿಡಿಯೊ ವೈರಲ್ ಆದ ನಂತರ, ಇದೀಗ ಐಪಿಎಲ್ ಕ್ರಿಕೆಟ್ ಅಭಿಮಾನಿಯೊಬ್ಬ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಜೆರ್ಸಿಗೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿಸಿದ ವಿಡಿಯೊ ಈಗ ವೈರಲ್(Viral Video) ಆಗಿ ನೆಟ್ಟಿಗರ ಗಮನ ಸೆಳೆದಿದೆ.

ಆರ್‌ಸಿಬಿ ಅಭಿಮಾನಿಯಾದ ಹರೀಶ್ ಯುಪಿಯಲ್ಲಿ ನಡೆದ ಮಹಾಕುಂಭಮೇಳಕ್ಕೆ ಭೇಟಿ ನೀಡಿ ಗಂಗಾ, ಯಮುನಾ ಮತ್ತು ಸರಸ್ವತಿ ಎಂಬ ಮೂರು ಪವಿತ್ರ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವಾಗ ಆರ್‌ಸಿಬಿ ಜೆರ್ಸಿಯನ್ನು ನೀರಿನಲ್ಲಿ ಮುಳುಗಿಸಿದ್ದಾನೆ.

ಹರೀಶ್ ಮತ್ತು ಆತನೊಂದಿಗೆ ಕುಂಭಮೇಳಕ್ಕೆ ಬಂದಿದ್ದ ಸ್ನೇಹಿತರು ಈ ದೃಶ್ಯವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ರೀಲ್ ಈಗಾಗಲೇ 6.6 ಮಿಲಿಯನ್ ವ್ಯೂವ್ಸ್‌ ಮತ್ತು ಲಕ್ಷಾಂತರ ಲೈಕ್‍ಗಳನ್ನು ಪಡೆದಿದೆ.

ಈ ಸುದ್ದಿಯನ್ನೂ ಓದಿ:Mahakumbh Mela 2025: ಕುಂಭಮೇಳದಲ್ಲಿ ಬಾಲಕಿಗೆ ಮಾದಕ ವಸ್ತು ನೀಡಿದ್ದಾರೆಂದು ಸಾಧು ವಿರುದ್ಧ ಪೋಸ್ಟ್‌; ಇದು ನಿಜವೇ?

ಈ ವಿಡಿಯೊಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಜೆರ್ಸಿಯನ್ನು ಪ್ರದರ್ಶಿಸಿದ್ದಕ್ಕಾಗಿ ಮತ್ತು ಅದರ ಬಗ್ಗೆ ರೀಲ್‍ಗಳನ್ನು ರಚಿಸಿದ್ದಕ್ಕಾಗಿ ಕೆಲವರು ಆತನನ್ನು ಖಂಡಿಸಿದರೆ, ಆರ್‌ಸಿಬಿ ಅಭಿಮಾನಿಗಳು ಲೈಕ್ ಬಟನ್ ಒತ್ತಿ ಕಾಮೆಂಟ್‍ ವಿಭಾಗದಲ್ಲಿ 'ಫೈರ್' ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. "ದಯವಿಟ್ಟು ಈ ತರಹದ ಅಸಂಬದ್ಧ ಕೆಲಸಗಳನ್ನು ಮಾಡಬೇಡಿ" ಎಂದು ಒಬ್ಬರು ಹೇಳಿದರೆ, ಕ್ರಿಕೆಟ್ ಅಭಿಮಾನಿಗಳು ಅವರ ಈ ವಿಡಿಯೊಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.