ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

IT Raid: ಪುಷ್ಪಾ ಡೈರೆಕ್ಟರ್‌ಗೂ ಐಟಿ ಬಿಸಿ; ಸುಕುಮಾರ್‌ ಮನೆ, ಆಫೀಸ್‌ ಮೇಲೆ ರೇಡ್‌!

ತೆಲುಗು ಚಿತ್ರರಂಗಕ್ಕೆ ತೆರಿಗೆ ಇಲಾಖೆ ಬಿಗ್‌ ಶಾಕ್‌ ನೀಡುತ್ತಿದೆ. ನಿನ್ನೆ ಗೇಮ್‌ಚೇಂಜರ್‌ ಚಿತ್ರದ ನಿರ್ಮಾಪಕ ದಿಲ್‌ ರಾಜು, ಪುಷ್ಪಾ 2 ನಿರ್ಮಾಪಕ ನವೀನ್‌ ಯಾರ್ಯೆನಿ ಮತ್ತು ರವಿಶಂಕರ್‌ ಮನೆ ಮತ್ತು ಅವರಿಗೆ ಸಂಬಂಧಪಟ್ಟ ಹಲವು ಸ್ಥಳಗಳ ಮೇಲೆ ಐಟಿ ದಾಳಿಯಾಗಿತ್ತು. ಅದರ ಬೆನ್ನಲ್ಲೇ ಇಂದು ಪುಷ್ಪಾ ಚಿತ್ರದ ನಿರ್ದೇಶಕ ಸುಕುಮಾರ್‌ ಮನೆ ಮತ್ತು ಆಫೀಸ್‌ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವ ಸುದ್ದಿ ಹೊರ ಬಿದ್ದಿದೆ.

ಪುಷ್ಪಾ ಡೈರೆಕ್ಟರ್‌ ಸುಕುಮಾರ್‌ ಮನೆ ಮತ್ತು ಆಫೀಸ್‌ ಮೇಲೆ ಐಟಿ ರೇಡ್‌!

IT Raid

Profile Deekshith Nair Jan 22, 2025 6:02 PM

ಹೈದರಾಬಾದ್:‌ ತೆಲುಗು ಚಿತ್ರರಂಗದ ಗಣ್ಯರಿಗೆ ತೆರಿಗೆ ಇಲಾಖೆ ಶಾಕ್ ನೀಡುತ್ತಿದೆ. ನಿನ್ನೆಯಷ್ಟೇ ತೆಲುಗು ಚಿತ್ರರಂಗದ ಹೆಸರಾಂತ ನಿರ್ಮಾಪಕ ಗೇಮ್‌ ಚೇಂಜರ್‌ ಖ್ಯಾತಿಯ ದಿಲ್ ರಾಜು (Dil Raju) ಅವರ ಮನೆ ಮೇಲೆ ಐಟಿ ದಾಳಿಯಾಗಿತ್ತು.(IT Raid) ಅದರ ಬೆನ್ನಲ್ಲೇ ಪುಷ್ಪ 2 (Pushpa 2) ನಿರ್ದೇಶಕ (Director) ಮನೆಗೂ ಐಟಿ ಆಧಿಕಾರಿಗಳು ಲಗ್ಗೆ ಇಟ್ಟಿದ್ದಾರೆ. ಪುಷ್ಪ 2 ನಿರ್ದೇಶಕ ಸುಕುಮಾರ್ ಅವರ ಆಫೀಸ್, ಮನೆ, ಕಚೇರಿಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದು ತಿಳಿದು ಬಂದಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು(ಜ.22) ಮುಂಜಾನೆ ಹೈದರಾಬಾದ್‌ನಲ್ಲಿರುವ ಸಿನಿಮಾ ನಿರ್ದೇಶಕ ಸುಕುಮಾರ್(Sukumar) ಅವರ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ಬೆಳಗ್ಗೆ ಪ್ರಾರಂಭವಾಗಿದ್ದು, ಹಲವಾರು ಗಂಟೆಗಳ ಕಾಲ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ವರದಿಗಳ ಪ್ರಕಾರ, ಸುಕುಮಾರ್ ಅವರು ಐಟಿ ದಾಳಿಯ ವೇಳೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿದ್ದರು. ಅವರನ್ನು ತೆರಿಗೆ ಇಲಾಖೆಯ ಅಧಿಕಾರಿಗಳು ಅವರನ್ನಿ ಮರಳಿ ಮನೆಗೆ ಕರೆದೊಯ್ದಿರುವುದು ತಿಳಿದು ಬಂದಿದೆ. ಖುದ್ದು ಸುಕುಮಾರ್‌ ಅವರ ಮುಂದೆಯೇ ಪರಿಶೀಲನೆ ನಡೆಸಲಾಗಿದೆ.



ದಾಳಿಯ ಉದ್ದೇಶದ ವಿವರಗಳನ್ನು ಸದ್ಯಕ್ಕೆ ಬಹಿರಂಗಪಡಿಸಲಾಗಿಲ್ಲ. ಆದಾಯ ತೆರಿಗೆ ಇಲಾಖೆಯ ಯಾವುದೇ ಅಧಿಕಾರಿಯೂ ದಾಳಿ ಕುರಿತು ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಸುಕುಮಾರ್ ಇತ್ತೀಚೆಗೆ ಬಿಡುಗಡೆಯಾದ ತಮ್ಮ ಚಿತ್ರ ಪುಷ್ಪ 2: ದಿ ರೂಲ್‌ನ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಪುಷ್ಪ ಮತ್ತು ಪುಷ್ಪ 2 ಎರಡೂ ಸಿನಿಮಾಗಳು ಬ್ಲಾಕ್​ಬಸ್ಟರ್ ಹಿಟ್ ಎನಿಸಿಕೊಂಡಿವೆ. ಸಕ್ಸಸ್‌ ಖುಷಿಯಲ್ಲಿರುವಾಗಲೇ ಐಟಿ ದಾಳಿ ನಡೆದಿದ್ದು ಶಾಕ್ ನೀಡಿದಂತಾಗಿದೆ. ಪುಷ್ಪಾ 2 ಚಿತ್ರದಲ್ಲಿ ನಾಯಕನಾಗಿ ಅಲ್ಲು ಅರ್ಜುನ್, ನಾಯಕ ನಟಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸಿನಿಮಾ 1500 ಕೋಟಿ ರೂ. ಹೆಚ್ಚು ಗಳಿಸಿದೆ.

ಈ ಸುದ್ದಿಯನ್ನೂ ಓದಿ:Dil Raju: 'ಗೇಮ್‌ ಚೇಂಜರ್‌' ನಿರ್ಮಾಪಕನಿಗೆ ಬಿಗ್‌ ಶಾಕ್‌ ! ದಿಲ್‌ ರಾಜು ಮನೆ ಮೇಲೆ IT ರೇಡ್‌

ದಿಲ್ ರಾಜು ಮನೆ ಮೇಲೆ ಐಟಿ ದಾಳಿ

ನಿನ್ನೆ(ಜ.22) ನಿರ್ಮಾಪಕ ದಿಲ್ ರಾಜು ಅವರ ಆಸ್ತಿಗಳ ಮೇಲೆ ಐಟಿ ದಾಳಿ ನಡೆಸಲಾಗಿತ್ತು. ಐಟಿ ಅಧಿಕಾರಿಗಳು ತೆರಿಗೆ ವಂಚನೆ ಮಾಡಿರುವ ಶಂಕೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಆಪಾದಿತ ಹಣಕಾಸಿನ ಅವ್ಯವಹಾರ ಮತ್ತು ಲೆಕ್ಕಕ್ಕೆ ಸಿಗದ ಆದಾಯದ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿತ್ತು.