Road Accident: ತಿರುಪತಿ ಬಳಿ ಭೀಕರ ಅಪಘಾತ; ಲಾರಿಗೆ ಕಾರು ಡಿಕ್ಕಿಯಾಗಿ ಬೆಂಗಳೂರಿನ ಐವರ ದುರ್ಮರಣ
Road Accident: ಎರ್ಟಿಕಾ ಕಾರಿನಲ್ಲಿ ತಿರುಪತಿಯಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾಗ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿಯಾಗಿದೆ. ಇಬ್ಬರು ಪುರುಷರು, ಇಬ್ಬರು ಮಹಿಳೆಯರು, ಓರ್ವ ಮಗು ಸೇರಿದಂತೆ ಐವರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.


ತಿರುಪತಿ: ಆಂಧ್ರ ಪ್ರದೇಶದ ತಿರುಪತಿ ಬಳಿ ಭೀಕರ ಅಪಘಾತ (Road Accident) ನಡೆದಿದ್ದು, ಲಾರಿಗೆ ಕಾರು ಡಿಕ್ಕಿಯಾಗಿ ಬೆಂಗಳೂರು ಮೂಲದ ಐವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ತಿರುಪತಿ ಜಿಲ್ಲೆಯ ಪಾಕಾಲ ಮಂಡಲಂ ತೋಟಪಲ್ಲಿ ಬಳಿಯ ಹೆದ್ದಾರಿಯಲ್ಲಿ ಸೋಮವಾರ ಅಪಘಾತ ನಡೆದಿದೆ. ಇನ್ನು ಘಟನೆಯಲ್ಲಿ ಗಾಯಗೊಂಡ ಇಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರ್ಟಿಕಾ ಕಾರಿನಲ್ಲಿ ತಿರುಪತಿಯಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾಗ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿಯಾಗಿದೆ. ಇಬ್ಬರು ಪುರುಷರು, ಇಬ್ಬರು ಮಹಿಳೆಯರು, ಓರ್ವ ಮಗು ಸೇರಿದಂತೆ ಐವರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ. ಮೃತರು ಬೆಂಗಳೂರು ಮೂಲದವರು ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.
ಈ ಸುದ್ದಿಯನ್ನೂ ಓದಿ | Pahalgam Terror Attack: ಬಿಹಾರ ಚುನಾವಣೆಗೋಸ್ಕರ ಪಹಲ್ಗಾಮ್‌ನಲ್ಲಿ ದಾಳಿ; ಮೋದಿ ಕುರಿತು ಟೀಕಿಸಿದ್ದ ಗಾಯಕಿ ಮೇಲೆ ಬಿತ್ತು ದೇಶದ್ರೋಹಿ ಕೇಸ್
ಮಂತ್ರಾಲಯದಲ್ಲಿ ಹೈ ಅಲರ್ಟ್; ಬಾಂಬ್ ಸ್ಕ್ವಾಡ್‌ನಿಂದ ಪರಿಶೀಲನೆ

ರಾಯಚೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆ ದೇಶಾದ್ಯಂತ ಜನಸಂದಣಿ ಹೆಚ್ಚಾಗಿರುವ ಪ್ರಮುಖ ಸ್ಥಳಗಳು, ಪುಣ್ಯಕ್ಷೇತ್ರಗಳು ಹಾಗೂ ಬಸ್, ರೈಲು ಹಾಗೂ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅದೇ ರೀತಿ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ (Mantralaya Mutt) ಸನ್ನಿಧಿಯಲ್ಲೂ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್ ಮೂಲಕ ತಪಾಸಣೆ ನಡೆಸಿದ್ದಾರೆ.
ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿರುವುದರಿಂದ ರಾಘವೇಂದ್ರ ಸ್ವಾಮಿ ಮಠ ಹಾಗೂ ಮಂತ್ರಾಲಯದಲ್ಲಿ ತೀವ್ರ ತಪಾಸಣೆ ಮಾಡಲಾಗಿದೆ. ಮಠದ ಪ್ರಾಂಗಣ, ಭೋಜನ ಶಾಲೆ, ತುಂಗಭದ್ರಾ ನದಿ ತೀರ, ಬಸ್ ನಿಲ್ದಾಣ, ವ್ಯಾಪಾರದ ಮಳಿಗೆಗಳು, ವಸತಿಗೃಹಗಳು, ಮಂತ್ರಾಲಯಕ್ಕೆ ಬರುವ ಬಸ್ ,ಕಾರುಗಳಲ್ಲಿ ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್‌ನಿಂದ ತಪಾಸಣೆ ಮಾಡಲಾಗಿದೆ. ಭಕ್ತರ ಬ್ಯಾಗ್‌ಗಳನ್ನೂ ಪರಿಶೀಲನೆ ಮಾಡಲಾಗಿದೆ.
ಮಂತ್ರಾಲಯ ಮಠಕ್ಕೆ ಸಾವಿರಾರು ಭಕ್ತರು ಬರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ತಪಾಸಣೆ ಮೂಲಕ ಸ್ಥಳೀಯರಲ್ಲಿ ಜಾಗೃತಿ ಮೂಡಿಸಲಾಗಿದೆ. ಭದ್ರತೆ ಬಿಗಿಗೊಳಿಸಲು ಮಂತ್ರಾಲಯ ಮಠದ ಆಡಳಿತ ಮಂಡಳಿಗೂ ಪೊಲೀಸರು ಸೂಚನೆ ನೀಡಿದ್ದಾರೆ. ಮಂತ್ರಾಲಯಂ ಹಾಗೂ ಮಾಧವರಂ ಠಾಣೆ ಪೊಲೀಸರಿಂದ ತಪಾಸಣೆ ನಡೆದಿದೆ.
ಮಂತ್ರಾಲಯ ಮಾತ್ರವಲ್ಲದೇ ಆಂಧ್ರದ ತಿರುಪತಿ, ಶ್ರೀಕಾಳಹಸ್ತಿ ಸೇರಿ ವಿವಿಧ ಪ್ರಮುಖ ದೇವಾಲಯಗಳು, ಪ್ರವಾಸಿ ಸ್ಥಳಗಳಲ್ಲಿ ಪೊಲೀಸರು ಅಲರ್ಟ್ ಆಗಿದ್ದು, ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ | Pahalgam Terror Attack: ದಾಳಿಗೂ ಮುನ್ನ ಉಗ್ರರ ಪ್ಲಾನ್ ಹೇಗಿತ್ತು? ಸಂದೇಶ ಕಳುಹಿಸಲು ಬಳಸಿದ್ರು ಚೀನಾ ಮೆಸೆಂಜರ್ ಅಪ್ಲಿಕೇಶನ್!