ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಉತ್ಸವಕ್ಕೆ ಹೊರಟವರು ಮಸಣ ಸೇರಿದ್ರು; ಶಾಕಿಂಗ್‌ ವಿಡಿಯೊವನ್ನೊಮ್ಮೆ ನೋಡಿ

ಕೆನಡಾದ ವ್ಯಾಂಕೋವರ್‌ನಲ್ಲಿ ನಡೆದ ಫಿಲಿಪಿನೋ ಉತ್ಸವಕ್ಕೆ ಹೋಗುವವರ ಗುಂಪೊಂದಕ್ಕೆ ಎಸ್‍ಯುವಿ ಡಿಕ್ಕಿ ಹೊಡೆದ ಪರಿಣಾಮ ಅನೇಕ ಜನರು ಸಾವನಪ್ಪಿದ್ದಾರೆ ಮತ್ತು ಕೆಲವರಿಗೆ ಗಾಯಗಳಾಗಿವೆ. ಚಾಲಕ 20 ವರ್ಷದ ಏಷ್ಯನ್ ವ್ಯಕ್ತಿಯಾಗಿದ್ದು, ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ. ಆತನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.ಇದೀಗ ವೈರಲ್‌(Viral News) ಆಗಿದೆ.

ಉತ್ಸವಕ್ಕೆ ಹೊರಟವರು ಮಸಣ ಸೇರಿದ್ರು; ಏನಿದು ಘನಘೋರ ದುರಂತ?

Profile pavithra Apr 28, 2025 3:33 PM

ಕೆನಡಾದ ವ್ಯಾಂಕೋವರ್‌ನಲ್ಲಿ ನಡೆದ ಬೀದಿ ಉತ್ಸವದಲ್ಲಿ ದುರಂತವೊಂದು ಸಂಭವಿಸಿದ್ದು, ಎಸ್‍ಯುವಿ ಚಾಲಕ ಫಿಲಿಪಿನೋ ಉತ್ಸವಕ್ಕೆ ಹೋಗುವವರ ಗುಂಪಿಗೆ ಡಿಕ್ಕಿ ಹೊಡೆದ ಪರಿಣಾಮ ಅನೇಕ ಜನರು ಸಾವನಪ್ಪಿದ್ದಾರೆ ಮತ್ತು ಕೆಲವರಿಗೆ ಗಾಯಗಳಾಗಿವೆ ಎಂಬುದಾಗಿ ವರದಿಯಾಗಿದೆ. ಆದರೆ ಸಾವುನೋವುಗಳ ನಿಖರ ಸಂಖ್ಯೆಯನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಚಾಲಕ 20 ವರ್ಷದ ಏಷ್ಯನ್ ವ್ಯಕ್ತಿಯಾಗಿದ್ದು, ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ. ಶಂಕಿತನ ಹೆಸರನ್ನು ಅಧಿಕಾರಿಗಳು ಇನ್ನೂ ಬಿಡುಗಡೆ ಮಾಡಿಲ್ಲವಾದರೂ, ಪೊಲೀಸರು ತಕ್ಷಣ ಆತನನ್ನು ಬಂಧಿಸಿ ತನಿಖೆ ನಡೆಸಿದ್ದಾರಂತೆ.

ಘಟನಾ ಸ್ಥಳದಲ್ಲಿದ್ದ ಜನರು ಆತ 20 ವರ್ಷದ ಏಷ್ಯನ್ ವ್ಯಕ್ತಿ ಮತ್ತು ಆತ ಮಾನಸಿಕ ಅಸ್ವಸ್ಥ ಎಂದು ಹೇಳಿ ಅಪಘಾತದ ವಿಡಿಯೊಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಂತಹ ವ್ಯಕ್ತಿಗೆ ವಾಹನ ಚಲಾಯಿಸಲು ಹೇಗೆ ಅನುಮತಿ ನೀಡಲಾಯಿತು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...



ಫಿಲಿಪಿನೋ ಸಂಸ್ಕೃತಿಯ ಆಚರಣೆಯಾದ ವಾರ್ಷಿಕ ಲಾಪು ಲಾಪು ಹಬ್ಬದ ಸಮಯದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಉತ್ಸವದಲ್ಲಿ ಭಾಗವಹಿಸಿದ್ದ ಪಾದಚಾರಿಗಳ ಗುಂಪಿಗೆ ವಾಹನವು ಡಿಕ್ಕಿ ಹೊಡೆದಿದೆ. ಇದರಿಂದ ಅನೇಕ ಸಾವುನೋವುಗಳು ಸಂಭವಿಸಿವೆ. ಘಟನೆಗೆ ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ ಸಂತಾಪ ಸೂಚಿಸಿದ್ದಾರೆ. ವ್ಯಾಂಕೋವರ್‌ನಲ್ಲಿ ನಡೆದ ಲಾಪು ಲಾಪು ಉತ್ಸವದಲ್ಲಿ ನಡೆದ ಭಯಾನಕ ಘಟನೆಗಳ ಬಗ್ಗೆ ಕೇಳಿ ನಾನು ಆಘಾತಕ್ಕೊಳಗಾಗಿದ್ದೇನೆ ಎಂದು ಕಾರ್ನೆ ಎಕ್ಸ್‌ನಲ್ಲಿ ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಡೋರ್ ಕ್ಲೋಸ್ ಆಗುತ್ತಿದ್ದಂತೆ ಚಲಿಸುತ್ತಿದ್ದ ಟ್ರೈನ್ ಏರಿದ ಮಹಿಳೆ; ಕೊನೆಗೆ ಆಗಿದ್ದೇನು?

1521 ರಲ್ಲಿ ಮ್ಯಾಕ್ಟಾನ್ ಕದನದಲ್ಲಿ ಸ್ಪ್ಯಾನಿಷ್ ಅನ್ವೇಷಕ ಫರ್ಡಿನಾಂಡ್ ಮೆಗೆಲ್ಲನ್ ವಿರುದ್ಧ ಹೋರಾಡಿ ಸೋಲಿಸಿದ ಮೊದಲ ಫಿಲಿಪಿನೋ ರಾಷ್ಟ್ರೀಯ ನಾಯಕನನ್ನು ಗೌರವಿಸುವ ಸಲುವಾಗಿ ಲಾಪು-ಲಾಪು ಉತ್ಸವವನ್ನು ಆಚರಿಸಲಾಗುತ್ತದೆ. ಇದು ಫಿಲಿಪೈನ್ಸ್‌ನ ಅತಿದೊಡ್ಡ ಆಚರಣೆಗಳಲ್ಲಿ ಒಂದಾಗಿದೆ.