ಲಖನೌ: ದೇವಾಲಯದೊಳಗೇ ಅನ್ಯ ಕೋಮಿನ ಯುವಕನೋರ್ವ ಹಿಂದೂ ಯುವತಿಯ ಜತೆ ಚಕ್ಕಂದ ಆಡುತ್ತಿದ್ದ ಶಾಕಿಂಗ್ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಹರ್ದೋಯ್ನ ಪಾಲಿ ನಗರದ ದೇವಾಲಯವೊಂದರಲ್ಲಿ ಹಿಂದೂ ಭಕ್ತರು, ದೇವಾಲಯದ ಆವರಣದೊಳಗೆ ಅನ್ಯಕೋಮಿನ ಯುವಕ ಮತ್ತು ಹಿಂದೂ ಯುವತಿ ಅಶ್ಲೀಲತೆಯಲ್ಲಿ ತೊಡಗಿಕೊಂಡಿರುವುದನ್ನು ಕಂಡು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.
ಪೊಲೀಸ್ ವಿಚಾರಣೆಯ ಸಮಯದಲ್ಲಿ, ಆ ಯುವಕ ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದು, ಆತನ ಹೆಸರು ಶಾದಾಬ್ ಎಂಬುದಾಗಿ ತಿಳಿದುಬಂದಿದೆ. ದೇವಾಲಯದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ದೃಶ್ಯ ಸೆರೆಯಾಗಿದ್ದು, ಈ ವಿಡಿಯೊದಲ್ಲಿ ಯುವತಿ ಮತ್ತು ಯುವಕ ದೇವಾಲಯದ ಆವರಣದೊಳಗೆ ಗೋಡೆಯ ಹಿಂದೆ ಹೋಗಿದ್ದಾರೆ. ದೇವಸ್ಥಾನದಲ್ಲಿ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯೊಂದಿಗೆ ಇರುವುದನ್ನು ಗಮನಿಸಿದ ಭಕ್ತರಲ್ಲಿ ಅನುಮಾನ ಬಂದಿದೆ. ಅವರಿಬ್ಬರು ದೇವಸ್ಥಾನದ ಗೋಡೆಯ ಹಿಂದೆ ಅಶ್ಲೀಲತೆಯಲ್ಲಿ ತೊಡಗಿಕೊಳ್ಳುವುದನ್ನು ಕಂಡು ಅವರನ್ನು ಸ್ಥಳದಲ್ಲೇ ಹಿಡಿದು ನಂತರ, ಪಾಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಅವರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Hardoi, UP: Muslim youth and Hindu girl caught in compromising position in temple premises. Shadaab from Alhaiganj, was detained by police for questioning. Investigation underway amidst local tension. #HardoiTempleIncident #lovejihad pic.twitter.com/T3Sxq1wr6W
— Angry Saffron (@AngrySaffron) November 6, 2024
ವರದಿಯ ಪ್ರಕಾರ, ಪೊಲೀಸರು ಶಾದಾಬ್ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಮತ್ತು ಅವನ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಪಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಸುನಿಲ್ ಕುಮಾರ್ ದುಬೆ ಅವರು ತಿಳಿಸಿದ ಪ್ರಕಾರ, ವಿಚಾರಣೆಯ ಸಮಯದಲ್ಲಿ, ಯುವಕನನ್ನು ಶಹಜಹಾನ್ಪುರ ಜಿಲ್ಲೆಯ ಅಲ್ಹಾಗಂಜ್ನ ನಿಷಾದ್ ಅವರ ಮಗ ಶಾದಾಬ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಟೇಬಲ್ ಮೇಲೆ ಜೋಡಿಸಿದ್ದ ಆಹಾರದ ಮೇಲೆ ಮೂತ್ರ ವಿಸರ್ಜನೆ ಮಾಡಿದ ಮಗ; ವಿಡಿಯೊ ಹಂಚಿಕೊಂಡ ತಾಯಿ; ನೆಟ್ಟಿಗರು ಫುಲ್ ಗರಂ
ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಘಜಿಯಾಬಾದ್ನ ಥಾನಾ ಭೋಜ್ಪುರ ಪ್ರದೇಶದ ಫರೀದ್ನಗರ ಪಟ್ಟಣದಲ್ಲಿರುವ ದೇವಸ್ಥಾನದೊಳಗೆ ವ್ಯಕ್ತಿಯೊಬ್ಬ ಅಶ್ಲೀಲ ಕೃತ್ಯ ಎಸಗುತ್ತಿರುವುದು ಕಂಡುಬಂದಿದೆ. ಆತ ದೇವಸ್ಥಾನದ ಒಳಗೆ ತನ್ನ ಮೊಬೈಲ್ ಫೋನ್ನಲ್ಲಿ ನೀಲಿಚಿತ್ರದ ವಿಡಿಯೊಗಳನ್ನು ವೀಕ್ಷಿಸುತ್ತಾ ಹಸ್ತಮೈಥುನ ಮಾಡಿಕೊಂಡಿದ್ದು, ಇದನ್ನು ಅಪರಿಚಿತ ವ್ಯಕ್ತಿಯೊಬ್ಬರು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಇದು ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.