Vishweshwar Bhat Column: ಜಪಾನಿಯರ ಭಾಷಾ ಪ್ರೇಮ

ತನಗೆ ಇಂಗ್ಲಿಷ್ ಗೊತ್ತಿದ್ದರೂ, ತನ್ನ ಮಾತೃಭಾಷೆಯಲ್ಲಿಯೇ ಮಾತಾಡಲು ಬಯಸುತ್ತಾನೆ. ಅಷ್ಟೇ ಅಲ್ಲ, ‘ನನಗೆ ಇಂಗ್ಲಿಷ್ ಬರೊಲ್ಲ’ ಎಂದು ಧೈರ್ಯವಾಗಿ, ಸ್ವಲ್ಪವೂ ಸಂಕೋಚ ವಿಲ್ಲದೇ ಹೇಳುತ್ತಾನೆ.

japanese-cuisine-food-menu-
Profile Ashok Nayak January 18, 2025

Source : Vishwavani Daily News Paper

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ನೀವು ಕನ್ನಡಿಗರ ಬಳಿ, ಇಂಗ್ಲಿಷಿನಲ್ಲಿ ಮಾತಾಡಿ. ಅವರು ತಮಗೆ ಇಂಗ್ಲಿಷ್ ಭಾಷೆ ಮಾತಾ ಡಲು ಬರದಿದ್ದರೂ, ಅಪ್ಪಿತಪ್ಪಿಯೂ ಬರುವುದಿಲ್ಲ ಎಂದು ಹೇಳುವುದಿಲ್ಲ. ತಮ್ಮ ಹರಕು-ಮುರುಕು ಇಂಗ್ಲಿಷಿನಲ್ಲಿಯೇ ಮಾತಾಡುತ್ತಾರೆ. ಆದರೆ ನೀವು ಒಬ್ಬ ಜಪಾನಿ ಬಳಿ ಇಂಗ್ಲಿಷಿ ನಲ್ಲಿ ಮಾತಾಡಿ. ತನಗೆ ಇಂಗ್ಲಿಷ್ ಗೊತ್ತಿದ್ದರೂ, ತನ್ನ ಮಾತೃಭಾಷೆಯಲ್ಲಿಯೇ ಮಾತಾ ಡಲು ಬಯಸುತ್ತಾನೆ. ಅಷ್ಟೇ ಅಲ್ಲ, ‘ನನಗೆ ಇಂಗ್ಲಿಷ್ ಬರೊಲ್ಲ’ ಎಂದು ಧೈರ್ಯವಾಗಿ, ಸ್ವಲ್ಪವೂ ಸಂಕೋಚವಿಲ್ಲದೇ ಹೇಳುತ್ತಾನೆ.

ನಾನು ಟೋಕಿಯೋದಲ್ಲಿ ಒಂದು ಹೋಟೆಲಿಗೆ ಹೋದಾಗ, ಅಲ್ಲಿನ ಮೆನು ಕಾರ್ಡಿನಲ್ಲಿ, ‘ Can you read or speak Japanese? We can't speak English. Menu is in Japanese only ’ ಎಂದು ಬರೆದಿರುವುದು ಕಾಣಿಸಿತು. ನನಗೆ ಆ ಕ್ಷಣ ತುಸು ಕಿರಿಕಿರಿಯಾದರೂ, ನಿಜಕ್ಕೂ ಅವರ ಭಾಷಾಭಿಮಾನದ ಬಗ್ಗೆ ಹೆಮ್ಮೆಯೆನಿಸಿತು.

ಜಪಾನಿಯರಿಗೆ ತಮ್ಮ ಭಾಷೆ ಮೇಲೆ ಎಲ್ಲಿಲ್ಲದ ಅಭಿಮಾನವನ್ನು ಕಾಣಬಹುದು. ಈ ಪ್ರೀತಿ ಕೇವಲ ಮಾತುಗಳಲ್ಲಿ ಮಾತ್ರವಲ್ಲ, ಅದು ಅವರ ಸಾಹಿತ್ಯ, ಕಲೆ, ಜೀವನ ಶೈಲಿ, ಆಚರಣೆ, ದೈನಂದಿನ ಬಳಕೆ ಮತ್ತು ಪ್ರಾದೇಶಿಕ ಸ್ವಭಾವದಲ್ಲಿ ಎದ್ದು ಕಾಣಿಸುತ್ತದೆ. ಜಪಾನೀಸ್ ಭಾಷೆ ಪುರಾತನವಾದುದು.

ಜಪಾನೀಸ್ ಭಾಷೆಯ ಆರಂಭವನ್ನು ಬೌದ್ಧ ಧರ್ಮದ ಪ್ರವೇಶ ಮತ್ತು ಚೀನಾ ದೇಶದ ಸಾಹಿತ್ಯದೊಂದಿಗೆ ಜೋಡಿಸಲಾಗುತ್ತದೆ. ಅದರ ಲಿಪಿಗಳು, ವಿಶೇಷವಾಗಿ ಕಾಂಜಿ, ಹಿರಾ ಗಾನಾ ಮತ್ತು ಕಟಕಾನಾ ಭಾಷೆಯ ಪ್ರತಿ ಅಕ್ಷರದಲ್ಲಿ ಜಪಾನ್ ದೇಶದ ಐತಿಹಾಸಿಕ ಪರಂಪರೆಯನ್ನು ಗುರುತಿಸಬಹುದು. ಕಾಂಜಿ ಚೀನಾದಿಂದ ಬಂದ ಲಿಪಿ. ಇದು ಅತ್ಯಂತ ಪುರಾತನ ಮತ್ತು ಸೂಕ್ಷ್ಮ ಅರ್ಥಗಳನ್ನು ಹೊಂದಿದೆ.

ಹಿರಾಗಾನಾ ಸ್ಥಳೀಯವಾಗಿ ಅಭಿವೃದ್ಧಿ ಹೊಂದಿದ ಸರಳ ಲಿಪಿ. ಕಟಕಾನಾ ವಿದೇಶೀ ಪದಗಳು ಮತ್ತು ವೈeನಿಕ ಅರ್ಥಗಳನ್ನು ಬರೆಯಲು ಬಳಸುವ ಸ್ವಚ್ಛ, ಆಧುನಿಕ ಮತ್ತು ನಾವೀನ್ಯದ ಸಂಕೇತ. ಈ ಮೂರೂ ಲಿಪಿಗಳ ವಿನ್ಯಾಸ ಮತ್ತು ಪ್ರಾಮುಖ್ಯವನ್ನು ಅರ್ಥ ಮಾಡಿಕೊಳ್ಳುವುದೇ ಜಪಾನಿಯರ ಭಾಷೆ ಮತ್ತು ಸಂಸ್ಕೃತಿಯ ಮೇಲಿರುವ ಪ್ರೀತಿಯ ಭಾವನೆಯನ್ನು ತೋರಿಸುತ್ತದೆ.

ಜಪಾನೀಸ್ ಭಾಷೆಯ ಪ್ರೀತಿ ಕೇವಲ ಮಾತುಗಳಿಗೆ ಮಾತ್ರ ಸೀಮಿತವಲ್ಲ. ಅದು ವಾಸ್ತವ ವಾಗಿ ವ್ಯಕ್ತಿಯ ಆತ್ಮೀಯತೆಯನ್ನು ಬಿಂಬಿಸುತ್ತದೆ. ಭಾಷೆಯಲ್ಲಿ ಆಳವಾದ ಗೌರವ ಮತ್ತು ಅರ್ಥಸಂಪತ್ತನ್ನು ಹೊಂದಿರುವ ಪದಗಳನ್ನು ಬಳಸುವ ಮೂಲಕ, ಅವರು ತಮ್ಮ ಆತ್ಮ ಸಂಬಂಧವನ್ನು ವ್ಯಕ್ತಪಡಿಸುತ್ತಾರೆ. ಉದಾಹರಣೆಗೆ, ‘ಸೊರೇ ಸೊರೇ’ (ತಡೆದಿಡುವ ಪ್ರಯತ್ನ) ಅಥವಾ ‘ವಾಬಿ ಸಾಬಿ’ (ಅಪೂರ್ಣತೆಯ ಸೌಂದರ್ಯ) ಎಂಬ ಪದಗಳು ಕೇವಲ ಶಬ್ದವಲ್ಲ, ಅದು ಒಂದು ಭಾವನೆ ಮತ್ತು ತತ್ತ್ವ.

ತಮ್ಮ ಭಾಷೆಯಲ್ಲಿಯೇ ಮಕ್ಕಳೊಂದಿಗೆ ಮಾತಾಡುತ್ತಾ ಅವರು ಮನೆಯಲ್ಲಿಯೇ ಭಾಷಾ ಪ್ರೇಮವನ್ನು ಬಿತ್ತುತ್ತಾರೆ. ಜಪಾನಿನ ಶಾಲಾ ಶಿಕ್ಷಣದಲ್ಲಿ ಪ್ರಾಥಮಿಕ ತರಗತಿಗಳಿಂದಲೇ ಕಾಂಜಿ ಮತ್ತು ಹಿರಾಗಾನಾ ಕಲಿಕೆಗೆ ಮಹತ್ವ ನೀಡಲಾಗುತ್ತದೆ. ಪ್ರತಿ ವಿದ್ಯಾರ್ಥಿಯೂ ಸುಮಾರು ಎರಡು ಸಾವಿರ ಕಾಂಜಿ ಅಕ್ಷರಗಳ ಅರ್ಥ ಮತ್ತು ಬಳಕೆಯನ್ನು ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಸಂಪೂರ್ಣವಾಗಿ ತಿಳಿದುಕೊಂಡಿರುತ್ತಾನೆ.

ಮಕ್ಕಳು ಪ್ರೌಢಶಾಲೆ ತಲುಪುವ ಹೊತ್ತಿಗೆ ಅವರ ಪಾಠಗಳಲ್ಲಿ ಪದಸಂಪತ್ತು ಮತ್ತು ಭಾಷಾ ಸೌಂದರ್ಯಕ್ಕೆ ಒತ್ತು ನೀಡಲಾಗುತ್ತದೆ. ‘ಜೆನ್ಜಿ ಮೊನೋಗತಾರಿ’ (ಹೆಯನ್ ಕಾಲದ ಕಥೆ) ಅಥವಾ ‘ಹೈಕು’ ಕವಿತೆ ಸೇರಿದಂತೆ ನೂರಾರು ವರ್ಷಗಳ ಸಾಹಿತ್ಯಕ, ಐತಿಹಾಸಿಕ ಕೃತಿ ಗಳನ್ನು ಆಧ್ಯಯನಕ್ಕೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತಾರೆ.

ಜಪಾನಿನ ಕಲೆಯ ಮತ್ತು ಸಾಹಿತ್ಯದ ಅಭಿವ್ಯಕ್ತಿ ಅವರ ಭಾಷೆಯ ಸೌಂದರ್ಯವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದೆ. ಜಪಾನಿನ ಭಾಷಾ ಕೌಶಲ ಮತ್ತು ಭಾವನೆಗಳಿಗೆ ಮೆರಗು ನೀಡುವ ಹೈಕು, ಜಗತ್ತಿನಾದ್ಯಂತ ಪ್ರಚಲಿತವಾದ ಕವನಶೈಲಿಯಾಗಿರುವುದು ಗಮನಾರ್ಹ. ಕೇವಲ 17 ಅಕ್ಷರಗಳಲ್ಲಿ ಪ್ರಕೃತಿಯ ಅರ್ಥವನ್ನು ಬಿಂಬಿಸುವ ಶ್ರೇಷ್ಠತೆಯನ್ನು ಅದು ಬಿಂಬಿಸುತ್ತದೆ. ಜಪಾನಿಯರಿಗೆ ಅವರ ಭಾಷೆ ಕೇವಲ ಮಾತುಕತೆಯ ಸಾಧನವಲ್ಲ, ಅದು ಅವರ ಜೀವನದ ಪ್ರತಿ ಕ್ಷಣದ ಭಾಗವಾಗಿದೆ.

ಇದನ್ನೂ ಓದಿ: Vishweshwar Bhat Column: ಅಪರಿಚಿತ, ಅಬ್ಬೇಪಾರಿ ದೇಶಗಳು !

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ