Vishweshwar Bhat : ಹತ್ತರ ಹುರುಪು, ಮಾಗಿದ ಅನುಭವ
‘ಸತ್ಯವೇ ಶೀಲ’ ಎಂಬ ಘೋಷವಾಕ್ಯದೊಂದಿಗೆ ಆರಂಭವಾದ ಪತ್ರಿಕೆ, ಈಗ ‘ವಿಶ್ವಾಸವೇ ವಿಶ್ವ’ ಎಂಬ ಧ್ಯೇಯವಾಕ್ಯವನ್ನು ಧರಿಸಿದೆ. ಹೀಗಾಗಿ ‘ವಿಶ್ವವಾಣಿ’ಯಲ್ಲಿ ಅರವತ್ತೇಳರ ಪ್ರಬುದ್ಧತೆ, ಮಾಗಿದ ಅನುಭವ ಮತ್ತು ಹತ್ತರ ಹರೆಯದ ಹುರುಪು ಮೇಳೈಸಿವೆ.
Source : Vishwavani Daily News Paper
ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕರು
ಡಾ.ಪುಟ್ಟಪ್ಪನವರ ಸಾರಥ್ಯದಲ್ಲಿ ಜಿಲ್ಲಾ ಪತ್ರಿಕೆಯಾಗಿದ್ದ ‘ವಿಶ್ವವಾಣಿ’, ಈಗ ಕರ್ನಾಟಕದ ಆರು ಆವೃತ್ತಿಗಳೊಂದಿಗೆ ಏಕಕಾಲಕ್ಕೆ ಪ್ರಕಟವಾಗುವ ಮೂಲಕ ರಾಜ್ಯಮಟ್ಟದ ಪತ್ರಿಕೆ ಯಾಗಿ ಬೆಳೆದಿದೆ. ‘ಸತ್ಯವೇ ಶೀಲ’ ಎಂಬ ಘೋಷವಾಕ್ಯದೊಂದಿಗೆ ಆರಂಭವಾದ ಪತ್ರಿಕೆ, ಈಗ ‘ವಿಶ್ವಾಸವೇ ವಿಶ್ವ’ ಎಂಬ ಧ್ಯೇಯವಾಕ್ಯವನ್ನು ಧರಿಸಿದೆ. ಹೀಗಾಗಿ ‘ವಿಶ್ವವಾಣಿ’ಯಲ್ಲಿ ಅರವತ್ತೇಳರ ಪ್ರಬುದ್ಧತೆ, ಮಾಗಿದ ಅನುಭವ ಮತ್ತು ಹತ್ತರ ಹರೆಯದ ಹುರುಪು ಮೇಳೈಸಿವೆ.
ಡಾ.ಪುಟ್ಟಪ್ಪನವರ ಸಾರಥ್ಯದಲ್ಲಿ ಜಿಲ್ಲಾ ಪತ್ರಿಕೆಯಾಗಿದ್ದ ‘ವಿಶ್ವವಾಣಿ’, ಈಗ ಕರ್ನಾಟಕದ ಆರು ಆವೃತ್ತಿಗಳೊಂದಿಗೆ ಏಕಕಾಲಕ್ಕೆ ಪ್ರಕಟವಾಗುವ ಮೂಲಕ ರಾಜ್ಯಮಟ್ಟದ ಪತ್ರಿಕೆಯಾಗಿ ಬೆಳೆದಿದೆ.
‘ಸತ್ಯವೇ ಶೀಲ’ ಎಂಬ ಘೋಷವಾಕ್ಯದೊಂದಿಗೆ ಆರಂಭವಾದ ಪತ್ರಿಕೆ, ಈಗ ‘ವಿಶ್ವಾಸವೇ ವಿಶ್ವ’ ಎಂಬ ಧ್ಯೇಯವಾಕ್ಯವನ್ನು ಧರಿಸಿದೆ. ಹೀಗಾಗಿ ‘ವಿಶ್ವವಾಣಿ’ಯಲ್ಲಿ ಅರವತ್ತೇಳರ ಪ್ರಬುದ್ಧತೆ, ಮಾಗಿದ ಅನುಭವ ಮತ್ತು ಹತ್ತರ ಹರೆಯದ ಹುರುಪು ಮೇಳೈಸಿವೆ.
ಈಗಾಗಲೇ ’ವಿಶ್ವವಾಣಿ’ಯ ವಿಶಾಲ ವೃಕ್ಷದಡಿ,’ವಿಶ್ವವಾಣಿ ಟಿವಿ’, ’ವಿಶ್ವವಾಣಿ ಟಿವಿ ಸ್ಪೆಷಲ್’ ಮತ್ತು ’ವಿಶ್ವವಾಣಿ ಮನಿ’ ಎಂಬ ಡಿಜಿಟಲ್ ಚಾನೆ್, ’ವಿಶ್ವವಾಣಿ ಪುಸ್ತಕ’ ಎಂಬ ಪ್ರಕಾಶನ ಸಂಸ್ಥೆ, ’ವಿಶ್ವವಾಣಿ ಮಾಧ್ಯಮ ವಿದ್ಯಾಪೀಠ’ ಎಂಬ ಶಿಕ್ಷಣ ಸಂಸ್ಥೆ, ’ವಿಶ್ವವಾಣಿ ಕ್ಲಬ್ ಹೌಸ್’ ಎಂಬ ನಿತ್ಯ ಮಾತಿನ ಮಂಟಪ, ’ವಿಶ್ವವಾಣಿ ಗ್ಲೋಬಲ್ ಫಾರಂ’ ಎಂಬ ಅಂತಾರಾಷ್ಟ್ರೀಯ ಕನ್ನಡ ಸಾಧಕರ ಸಮಾವೇಶ, ’ವಾಗ್ದೇವಿ ವಿದ್ಯಾವರ್ಧಕ ಟ್ರಸ್ಟ್’ ಎಂಬ ಬಹು ಆಯಾಮದ ಸಾಂಸ್ಕೃತಿಕ ಸಂಘಟನೆ ತಲೆಯೆತ್ತಿ ನಿಂತಿದೆ.
ಮುಂದಿನ ತಿಂಗಳ ಈ ಹೊತ್ತಿಗೆ ಟ್ರಾವೆಲ್-ಟೂರಿಸಂಗೆ ಸಂಬಂಧಿಸಿದ, ಜಾಗತಿಕ ಗುಣಮಟ್ಟದ, ಬ್ರಾಡ್ ಶೀಟ್ ಆಕಾರದ ವಾರಪತ್ರಿಕೆಯನ್ನೂ ನಿಮ್ಮ ಕೈಗಿಡಲಿದ್ದೇವೆ. ಇದು ಕನ್ನಡ ಪತ್ರಿಕೋ ದ್ಯಮದಲ್ಲಿ ಏಕೈಕ ಮತ್ತು ಪ್ರಪ್ರಥಮ ಪ್ರಯತ್ನ! ಇಂದು ’ವಿಶ್ವವಾಣಿ’, ’ಲೋಕಧ್ವನಿ’, ’ವಿಶ್ವವಾಣಿ ಟಿವಿ’ ಬಳಗದಲ್ಲಿ ನೂರೈವತ್ತಕ್ಕೂ ಹೆಚ್ಚು ಪತ್ರಕರ್ತರು ವೃತ್ತಿಗರಿಮೆ, ಘನತೆಯನ್ನು ಕಾಣುತ್ತಿzರೆ. ಇಂದು ’ವಿಶ್ವವಾಣಿ’ ಮತ್ತು ಅದರ ಬಳಗದ ಪ್ರಕಟಣೆಗಳು ಪ್ರಿಂಟ, ವೆಬ, ಡಿಜಿಟಲ್ ಮತ್ತು
ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳಲ್ಲೂ ಬಲವಾದ ಅಸ್ತಿತ್ವವನ್ನು ಹೊಂದಿವೆ. ಕಳೆದ ಒಂದೇ ವರ್ಷದಲ್ಲಿ, ’ವಿಶ್ವವಾಣಿ ಗ್ಲೋಬಲ್ ಫಾರಂ’ ಆರು ದೇಶಗಳಲ್ಲಿ (ಕಾಂಬೋಡಿಯಾ, ವಿಯೆಟ್ನಾಂ, ಇಂಡೋನೇಷಿಯಾ, ಮಾರಿಷಸ್, ಮಾಲ್ಡೀ ಮತ್ತು ಜಪಾನ್) ಅಪ್ರತಿಮ ಸಾಧನೆ
ಮಾಡಿದ ಕನ್ನಡಿಗರ ಸಮಾವೇಶವನ್ನು ಏರ್ಪಡಿಸಿದೆ. ಈ ತಿಂಗಳ ಕೊನೆಯಲ್ಲಿ ಒಮಾನ್ ದೇಶದಲ್ಲಿ ಏಳನೇ ಸಮಾವೇಶ ನಡೆಯಲಿದೆ. ಮುಂಬರುವ ದಿನಗಳು ಪತ್ರಿಕೆ ಪಾಲಿಗೆ ಅವಿಶ್ರಾಂತ. ಹತ್ತಾರು ಹೊಸ ಯೋಜನೆಗಳನ್ನು ಈಡೇರಿ ಸುತ್ತಾ ನಮ್ಮನ್ನು ಬಿಡಿಸಿಕೊಳ್ಳುವ, ಹಗುರಗೊಳಿಸಿಕೊಳ್ಳುವ, ಆ ಮೂಲಕ ನಿಮ್ಮನ್ನು ಬಿಜಿಯಾಗಿಡುವ ಪ್ರಯತ್ನದಲ್ಲಿದ್ದೇವೆ. ಈ ಮಧ್ಯೆ, ’ವಿಶ್ವವಾಣಿ’ ಪತ್ರಿಕೆಯನ್ನು ನಿತ್ಯ ನೂತನವಾಗಿ, ಸಮೃದ್ಧವಾಗಿ ಕಟ್ಟಿಕೊಡುವ ನಮ್ಮ ಸಂಕಲ್ಪ ಮತ್ತು ಕೈಂಕರ್ಯದಲ್ಲಿ ಯಾವ ರಾಜಿಯೂ ಇಲ್ಲ.
’ವಿಶ್ವಾಸವೇ ವಿಶ್ವ’ ಪತ್ರಿಕೆಯ ಘೋಷವಾಕ್ಯವಷ್ಟೇ ಅಲ್ಲ, ನಮ್ಮ ಪರಮಪವಿತ್ರ ಸಂಕಲ್ಪವೂ ಹೌದು. ’ಭಟ್ರೇ, ಪ್ರತಿ ದಿನ ನೀವು ಕನಿಷ್ಠ ಒಂದು ಗಂಟೆಯನ್ನು ಕಸಿದುಕೊಳ್ಳುತ್ತೀರಿ.
ವಿಶ್ವವಾಣಿಯನ್ನು ಓದಲು ಅಷ್ಟು ಸಮಯವಾದರೂ ಬೇಕು’ ಎಂಬ ಅಸಂಖ್ಯ ಓದುಗರ ಆಶಯಕ್ಕೆ ಸ್ವಲ್ಪವೂ ಮುಕ್ಕಾಗದಂತೆ ಪತ್ರಿಕೆ ಮುಂದಿನ ದಿನಗಳಲ್ಲಿ ಹೊಸ ಸ್ವರೂಪ, ಇನ್ನಷ್ಟು ವೈವಿಧ್ಯ ಮಯ ಹೂರಣಗಳಿಂದ ಮೈದುಂಬಿಕೊಳ್ಳಲಿದೆ. ಓದುವ ಮನಸ್ಸುಗಳು ಇರುವ ತನಕ, ತಂಪನ್ನೆರೆ ಯುವ ವಿಷಯಗಳನ್ನು ತಂದು ಸುರಿಯುವುದು ನಮಗೆ ಸಿದ್ಧಿಸಿದ ಕಲೆ. ಹೀಗಾಗಿ ಪತ್ರಿಕೆ
ಯಾವತ್ತೂ ವಿಷಯವಂತ ಮತ್ತು ಜೀವಂತ. ಇದು ನನ್ನ ಭರವಸೆ.
ಈ ಎಲ್ಲ ಕಷ್ಟ-ಸುಖಗಳು ಒಂದೆಡೆಯಿರಲಿ. ’ವಿಶ್ವವಾಣಿ’ ಎಂಬ ಈ ಮಹಾವೃಕ್ಷಕ್ಕೆ ಕಾಲಕಾಲದಲ್ಲಿ ನೀರೆರೆದು, ಪೋಷಿಸಿ, ಬೇರುಗಳನ್ನು ಭದ್ರಗೊಳಿಸಿದ ಆ ಎಲ್ಲರ ಬದುಕು ಬಂಗಾರವಾಗಲಿ. ಆ ಎಲ್ಲ ಮನಸ್ಸುಗಳನ್ನು ಈ ತಂಪು ಹೊತ್ತಿನಲ್ಲಿ ನೆನೆಯುತ್ತೇನೆ. ನಿಮ್ಮ ಆಶೀರ್ವಾದ ಮತ್ತು ಬೆಂಬಲ ನಮ್ಮ ಬೆನ್ನಿಗಿರಲಿ.
ನಿಮ್ಮ ವಿಶ್ವಾಸಿ
ವಿಶ್ವೇಶ್ವರ ಭಟ್
ಇದನ್ನೂ ಓದಿ: ಇಂಪಾಸಿಬಲ್ ಪದವನ್ನು ಮನಸ್ಸಿನೊಳಗೆ ಬಿಟ್ಟುಕೊಳ್ಬೇಡಿ