Sunday, 8th September 2024

ಆರೋಪ-ಪ್ರತ್ಯಾರೋಪ ಎಲ್ಲೆ ಮೀರದಿರಲಿ

ಅಭಿವೃದ್ಧಿಿ ಹೆಸರಲ್ಲಿ ನಡೆಯಬೇಕಾದ ಚುನಾವಣೆ ಪ್ರಚಾರವನ್ನು ವೈಯಕ್ತಿಿಕ ಟೀಕೆ ಮತ್ತು ಎಲ್ಲೆೆ ಮೀರಿದ ನಡೆತೆಯಿಂದ ಹಲ್ಲೆೆಗಳಾಗುವ ಮಟ್ಟಕ್ಕೆೆ ಕೊಂಡೊಯ್ಯುವ ಬದಲು ಸಭ್ಯತೆಯಿಂದಲೇ ಮತದಾರರ ಮನಗೆದ್ದು ಚುನಾವಣೆ ಎದುರಿಸುವುದನ್ನು ರಾಜಕಾರಣಿಗಳು ರೂಢಿಸಿಕೊಳ್ಳಬೇಕು.

ಚುನಾವಣೆ ಅಖಾಡ ಸಿದ್ಧವಾಗುತ್ತಿಿದ್ದಂತೆ ಆರೋಪ-ಪ್ರತ್ಯಾಾರೋಪಗಳಿಂದ ನಾಯಕರು ಪರಸ್ಪರ ಕೆಸರೆರಚಾಟ ನಡೆಸುತ್ತಾಾರೆ. ಚುನಾವಣೆಯ ಅಬ್ಬರ ಮತ್ತು ಅಮಲಿನಲ್ಲಿ ವೈಯಕ್ತಿಿಕ ಟೀಕೆಗಳು ಹೆಚ್ಚಾಾಗುತ್ತಿಿವೆ. ಇದೀ ತಾನೇ ನಾಮಪತ್ರ ಸಲ್ಲಿಕೆ ಪ್ರಕ್ರಿಿಯೆ ಪೂರ್ಣಗೊಂಡಿದ್ದು, ನಾಮಪತ್ರ ಸಲ್ಲಿಕೆ ದಿನವೇ ಕೆ.ಆರ್.ಪೇಟೆಯಲ್ಲಿ ಅನರ್ಹ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಮೇಲೆ ಚಪ್ಪಲಿ ತೂರಾಟ ನಡೆದಿರುವ ಬಗ್ಗೆೆ ವರದಿಯಾಗಿದೆ. ಜತೆಗೆ, ಅವರ ಮೇಲೆ ಹಲ್ಲೆೆ ನಡೆದಿರುವ ಆರೋಪ ಕೂಡ ಕೇಳಿಬಂದಿದೆ. ಇದಕ್ಕೆೆ ಉತ್ತರಿಸಿರುವ ಜೆಡಿಎಸ್ ನಾಯರಕು ಜೆಡಿಎಸ್ ಕಾರ್ಯಕರ್ತರಿಗೆ ನಾರಾಯಣ ಗೌಡ ಮೇಲೆ ಹಲ್ಲೆೆ ಮಾಡುವ ಅನಿವಾರ್ಯತೆ ಏನಿಲ್ಲ. ಆದರೆ, ಸಿಂಪಥಿ ಪಡೆಯುವ ಉದ್ದೇಶದಿಂದ ಇಂತಹ ಆರೋಪ ಮಾಡಲು ನಾರಾಯಣ ಗೌಡ ಮುಂದಾಗಿದ್ದಾಾರೆ ಎಂದಿದ್ದಾಾರೆ.

ಒಟ್ಟಾಾರೆ, ಚುನಾವಣೆಯ ಕಾವು ಹೆಚ್ಚಾಾಗುತ್ತಿಿದ್ದಂತೆ ವೈಯಕ್ತಿಿ ಟೀಕೆಗಳು, ಆರೋಪಗಳು, ಹಲ್ಲೆೆಗಳು ಚುನಾವಣೆ ಸಂದರ್ಭದಲ್ಲಿ ಸಾಮಾನ್ಯ ಎಂಬಂತಾಗಿದೆ. ನಾಯಕರ ಮೇಲೆಯೇ ಇಂತಹ ಪ್ರಯತ್ನಗಳು ನಡೆದರೆ, ಕಾರ್ಯಕರ್ತರ ನಡುವಿನ ಕಿತ್ತಾಾಟ, ಬಡಿದಾಟಗಳು ಎಲ್ಲಿಗೆ ಹೋಗಿ ಮುಟ್ಟುತ್ತವೇಯೋ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಚುನಾವಣೆಯನ್ನು ಸೈದ್ಧಾಾಂತಿಕ ಅಥವಾ ಅಭಿವೃದ್ಧಿಿಯ ಹೆಸರಲ್ಲಿ ನಡೆಸಲು ಸಾಧ್ಯವಿಲ್ಲವೇ ಎಂಬ ಅನುಮಾನ ಮೂಡುವುದು ಸಹಜ.

ಅಭಿವೃದ್ಧಿಿ ಹೆಸರಲ್ಲಿ ನಡೆಯಬೇಕಾದ ಚುನಾವಣೆ ಪ್ರಚಾರವನ್ನು ವೈಯಕ್ತಿಿಕ ಟೀಕೆ ಮತ್ತು ಎಲ್ಲೆೆ ಮೀರಿದ ನಡೆತೆಯಿಂದ ಹಲ್ಲೆೆಗಳಾಗುವ ಮಟ್ಟಕ್ಕೆೆ ಕೊಂಡೊಯ್ಯುವ ಬದಲು ಸಭ್ಯತೆಯಿಂದಲೇ ಮತದಾರರ ಮನಗೆದ್ದು ಚುನಾವಣೆ ಎದುರಿಸುವುದನ್ನು ರಾಜಕಾರಣಿಗಳು ರೂಢಿಸಿಕೊಳ್ಳಬೇಕು. ಸಮಾಜಕ್ಕೆೆ ಮಾದರಿಯಾಗಬೇಕಾದ ರಾಜಕಾರಣಿಗಳು, ನಾಯಕರು ತಮ್ಮ ವೈಯಕ್ತಿಿಕ ಟೀಕೆಯ ಮೂಲಕ ಸಣ್ಣವರಾಗುವ ಬದಲು ಸೌಮ್ಯತೆಯಿಂದ ನಡೆದುಕೊಂಡು ತಮ್ಮ ಅಭಿವೃದ್ಧಿಿ ಮತ್ತು ಕನಸುಗಳ ಮೂಲಕ ಮತಬೇಟೆ ನಡೆಸಿದರೆ ಸಮಾಜವೂ ಶಾಂತಿಯಿಂದ ಕೂಡಿರುತ್ತದೆ.

ದೇಶದ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಬೇಕು ಎಂಬ ಕಾರಣದಿಂದ ಚುನಾವಣಾ ಆಯೋಗ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಬಿಗಿ ಪೊಲೀಸ್ ಬಂದೋಬಸ್‌ತ್‌ ಒದಗಿಸಲಾಗಿದೆ. ಅರೆಮಿಲಿಟರಿ ಪಡೆಗಳನ್ನು ನೇಮಿಸಲಾಗಿದೆ. ಆದರೆ, ಇದೆಲ್ಲವೂ ತಾತ್ಕಾಾಲಿಕ ಕ್ರಮಗಳಾಗಿದ್ದು, ಆಯಾ ಪಕ್ಷದ ನಾಯಕರು ತಮ್ಮ ನಾಲಿಗೆಯ ಮೇಲೆ ಹಿಡಿತವನ್ನಿಿಟ್ಟುಕೊಂಡು ಮಾತನಾಡುವ ಮೂಲಕ ತಮ್ಮ ಕಾರ್ಯಕರ್ತರನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಇಂತಹ ಯಾವುದೇ ಅನಾಹುತಗಳಿಗೆ ಅವಕಾಶವಿಲ್ಲದಂತೆ ಚುನಾವಣೆ ನಡೆಸಬಹುದು. ಇದಕ್ಕೆೆ ಎಲ್ಲ ಪಕ್ಷದ ನಾಯಕರ ಸಹಕಾರ ಅಗತ್ಯವಾಗಿರುತ್ತದೆ.

ಚುನಾವಣೆಯಲ್ಲಿ ಪಕ್ಷದ ಸಿದ್ಧಾಾಂತ ಮತ್ತು ಅಭಿವೃದ್ಧಿಿ ವಿಷಯಗಳನ್ನಿಿಟ್ಟುಕೊಂಡು ಮತ ಕೇಳುವ ಮೂಲಕ ಸಾಮಾಜಿಕ ಸಾಮರಸ್ಯ ಕಾಪಾಡುವ ನಿಟ್ಟಿಿನಲ್ಲಿ ರಾಜಕಾರಣಿಗಳು ಗಮನ ನೀಡಲಿ. ಜತೆಗೆ ಪ್ರಜಾಪ್ರಭುತ್ವ ವ್ಯವಸ್ಥೆೆಯ ಒಂದು ಅಮೂಲ್ಯ ಭಾಗವಾದ ಚುನಾವಣೆ ಮತ್ತು ಮತದಾನವನ್ನು ಯಾವುದೇ ಆತಂಕಗಳಿಲ್ಲದೆ ಮತದಾರ ನಿರ್ವಹಿಸುವಂತಹ ವಾತಾವರಣ ಸೃಷ್ಟಿಿಸಲಿ ಎಂಬುದಷ್ಟೇ ಪ್ರತಿಯೊಬ್ಬರ ಆಶಯ.

Leave a Reply

Your email address will not be published. Required fields are marked *

error: Content is protected !!