Thursday, 19th September 2024

ಅರ್ನಾಬ್ ಬಿಡುಗಡೆ ಮಾಧ್ಯಮ ಕ್ಷೇತ್ರಕ್ಕೆ ದೊರೆತ ಬಲ

ರಾಜಕಾರಣಿಗಳನ್ನು ಹಾಗೂ ಸರಕಾರಗಳನ್ನು ಎದುರುಹಾಕಿಕೊಂಡು ಕಾರ್ಯನಿರ್ವಹಿಸುವ ಪತ್ರಕರ್ತರ ಸ್ಥೈರ್ಯವನ್ನು ಕುಗ್ಗಿಸಲು ಅಗಾಗ್ಗೆ ಬಂಧನದಂಥ ಪ್ರಯತ್ನಗಳು ನಡೆಯಲಿವೆ. ಇಂಥದ್ದೆ ಕಾರಣದಿಂದಾಗಿ ಇತ್ತೀಚೆಗೆ ರಾಷ್ಟ್ರದ ಗಮನ ಸೆಳೆದ ಮಹತ್ವದ ಪ್ರಕರಣ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಬಂಧನ.

2018ರಲ್ಲಿ ನಡೆದಿದ್ದ ಆತ್ಮಹತ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪ್ರಚೋದನೆ ನೀಡಿದ್ದಾರೆ ಎನ್ನುವ ಆರೋಪದಲ್ಲಿ ಪತ್ರ ಕರ್ತ ಹಾಗೂ ರಿಪಬ್ಲಿಕನ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಅರ್ನಬ್‌ರಿಗೆ ನ.11ರಂದು ಜಾಮೀನು ದೊರೆತ್ತಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದಡಿ ಕಾರ್ಯ ನಿರ್ವಹಿಸುವ ಮಾಧ್ಯಮಕಾರರಿಗೆ ದೊರೆತ ಮಹತ್ವದ ಬಲ.

ಅರ್ನಾಬ್ ಬಂಧನವು ಜನತೆಯ ದೃಷ್ಟಿಯಲ್ಲಿ ಮಹತ್ವವಾಗಿ ಕಾಣಲಿಲ್ಲ. ಏಕೆಂದರೆ ಜನಸಾಮಾನ್ಯರಿಗೆ ಪತ್ರಕರ್ತರ ಬಂಧನ ಮಹತ್ವವೆನಿಸುವುದಿಲ್ಲ. ಪತ್ರಕರ್ತರ ಬಂಧನ ಕೇವಲ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ್ದು ಎಂಬ ಭಾವನೆಯಿದೆ. ಪತ್ರಕರ್ತರ ಬಗ್ಗೆ ಜನರ ನಿರಾಸಕ್ತಿ ಒಂದೆಡೆಯಾದರೆ, ಮತ್ತೊಂದೆಡೆ ಸ್ವಹಿತಾಸಕ್ತಿಗಳಿಂದಾಗಿ ಮಾಧ್ಯಮ ಕ್ಷೇತ್ರಗಳಲ್ಲಿಯೇ ವಿರೋಧ ಅಭಿಪ್ರಾ ಯಗಳು ವ್ಯಕ್ತವಾಗಿದ್ದವು.

ಇಂಥ ಸಂದರ್ಭದಲ್ಲಿ ಅರ್ನಾಬ್ ಗೋಸ್ವಾಮಿಗೆ ದೊರೆತಿರುವ ಜಾಮೀನು; ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಧಿಯಲ್ಲಿ ಕಾರ್ಯ ನಿರ್ವಹಿಸುವ ಬಹುತೇಕ ಪತ್ರಕರ್ತರಿಗೆ ನೈತಿಕ ಸ್ಥೈರ್ಯ ಒದಗಿಸಿದೆ. ಬಂಧನ ಹಾಗೂ ಪ್ರಕರಣದ ಮರು ವಿಚಾರಣೆ ವಿರುದ್ಧ
ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು  ಕೋರಿ ಸುಪ್ರೀಂ ಕೋರ್ಟ್ ಮೊರೆ ತೆರಳಿದ್ದರು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ 50 ಸಾವಿರ ರು. ಬಾಂಡ್ ಆಧಾರದ ಮೇಲೆ
ಜಾಮೀನು ಮಂಜೂರು ಮಾಡಿದೆ. ಈ ಜಾಮೀನು ಅರ್ನಾಬ್‌ರಿಗೆ ಮಾತ್ರವಲ್ಲದೆ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ
ಪ್ರತಿಯೊಬ್ಬರಿಗೂ ದೊರೆತ ನೈತಿಕ ಸ್ಥೈರ್ಯ.

Leave a Reply

Your email address will not be published. Required fields are marked *