Saturday, 7th September 2024

ಅಯೋಧ್ಯೆಗೆ ಬೇಕಿದೆ ಮೂಲಭೂತ ಸೌಕರ್ಯ

ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿಗರನ್ನೂ ಮತ್ತು ಭಕ್ತರನ್ನೂ ತನ್ನೆೆಡೆಗೆ ಸೆಳೆಯಲಿದೆ. ನೂತನ ರಾಮಮಂದಿರ ವೀಕ್ಷಿಿಸಲು ಹರಿದು ಬರಲಿರುವ ಜನಸಾಗರದ ನಿರೀಕ್ಷೆೆಯನ್ನು ಮುಟ್ಟುವಂತೆ, ಈ ಪಟ್ಟಣವನ್ನು ಅಭಿವೃದ್ಧಿಿ ಪಡಿಸುವ ಹೊಸ ಜವಾಬ್ದಾಾರಿ ಸರಕಾರದ ಮೇಲಿದೆ.

ದೇಶಕ್ಕೆೆ ಸ್ವಾಾತಂತ್ರ್ಯ ದೊರೆತ ನಂತರ ನಡೆದ ಅತ್ಯಂತ ಪ್ರಮುಖ ವಿದ್ಯಮಾನಗಳಲ್ಲಿ ರಾಮಮಂದಿರ ನಿರ್ಮಾಣಕ್ಕೆೆ ಸುಪ್ರೀಂ ಕೋರ್ಟ್ ನೀಡಿದ ಅನುಮತಿಯೂ ಒಂದು. ಭಾವನಾತ್ಮಕ ಸಂಬಂಧದೊಂದಿಗೆ, ಕಾನೂನಾತ್ಮಕ ತೊಡಕುಗಳನ್ನೂ ಹೊಂದಿದ್ದ ರಾಮಮಂದಿರ ನಿರ್ಮಾಣದ ವಿವಾದವು ಈಗ ಪರಿಹಾರಗೊಂಡು, ಅಯೋಧ್ಯೆೆಯಲ್ಲಿ ರಾಮಜನ್ಮಭೂಮಿಯ ಸ್ಥಳದಲ್ಲಿ ದೇಗುಲ ನಿರ್ಮಾಣಕ್ಕೆೆ ಹಸಿರು ನಿಶಾನೆ ದೊರೆತಿದೆ. ಆ ಮೂಲಕ ದೇಶದ ಬಹುಸಂಖ್ಯಾಾತ ಧರ್ಮೀಯರ ಒತ್ತಾಾಸೆಗೆ ಗೌರವ ದೊರೆತಂತಾಗಿದೆ. ಜತೆ ಜತೆಯಲ್ಲೇ, ರಾಮಜನ್ಮಭೂಮಿಯ ಜಾಗದಲ್ಲಿ ಹಕ್ಕನ್ನು ಕೇಳಿದ್ದ ಅನ್ಯಧರ್ಮೀಯರಿಗೂ, ಮಸೀದಿ ನಿರ್ಮಾಣಕ್ಕಾಾಗಿ ಬೇರೊಂದು ಪ್ರದೇಶದಲ್ಲಿ ಐದು ಎಕರೆ ಜಮೀನನ್ನು ನೀಡಬೇಕೆಂದು ನಿರ್ದೇಶಿಸುವ ಮೂಲಕ ಸುಪ್ರೀಂ ಕೋರ್ಟ್, ಅವರಿಗೂ ಗೌರವ ನೀಡಿದಂತಾಗಿದೆ.

ಅಯೋಧ್ಯೆೆಯ ರಾಮಜನ್ಮಭೂಮಿಯಲ್ಲಿ ಇನ್ನು ನಾಲ್ಕಾಾರು ವರ್ಷಗಳಲ್ಲಿ ರಾಮಮಂದಿರ ತಲೆ ಎತ್ತುವುದು ನಿಶ್ಚಿಿತ. ಅಯೋಧ್ಯೆೆ ಪಟ್ಟಣಕ್ಕೆೆ ಇನ್ನಷ್ಟು ಪ್ರಾಾಮುಖ್ಯತೆ ದೊರೆಯಲಿದ್ದು, ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿಗರನ್ನೂ ಮತ್ತು ಭಕ್ತರನ್ನೂ ತನ್ನೆೆಡೆಗೆ ಸೆಳೆಯಲಿದೆ. ನೂತನ ರಾಮಮಂದಿರ ವೀಕ್ಷಿಿಸಲು ಹರಿದು ಬರಲಿರುವ ಜನಸಾಗರದ ನಿರೀಕ್ಷೆೆಯನ್ನು ಮುಟ್ಟುವಂತೆ, ಈ ಪಟ್ಟಣವನ್ನು ಅಭಿವೃದ್ಧಿಿ ಪಡಿಸುವ ಹೊಸ ಜವಾಬ್ದಾಾರಿ ಸರಕಾರದ ಮೇಲಿದೆ. 1990ರ ದಶಕದಲ್ಲಿ ಅಯೋಧ್ಯೆೆಯ ವಿವಾದವು ಮುನ್ನೆೆಲೆಗೆ ಬರುವ ತನಕವೂ, ಈ ಪಟ್ಟಣವು ಯಾವುದೇ ಅಭಿವೃದ್ಧಿಿ ಕಾಣದೇ ಹಿಂದುಳಿದ ಸ್ವರೂಪವನ್ನೇ ಹೊಂದಿತ್ತು. ರಾಜಕೀಯ ಮತ್ತು ಧಾರ್ಮಿಕ ಕಾರಣಗಳಿಂದಾಗಿ, ಕಳೆದ ನಾಲ್ಕು ನೂರು ವರ್ಷಗಳಲ್ಲಿ ಅಯೋಧ್ಯೆೆ ಪಡೆದದ್ದು ಸರಕಾರದ ಮತ್ತು ಆಳುವವರ ನಿರ್ಲಕ್ಷ್ಯ, ನಿರಾಸಕ್ತಿಿ.

ದೇಶಕ್ಕೆ ಸ್ವಾಾತಂತ್ರ್ಯ ದೊರೆತ ನಂತರ, ಅರಸರು ಮತ್ತು ಸಂಸ್ಥಾಾನಗಳು ತಮ್ಮ ಆದಾಯವನ್ನು ಕಳೆದುಕೊಂಡ ಪರಿಣಾಮವಾಗಿ, ಅಯೋಧ್ಯೆೆಯಲ್ಲಿ ಅವರು ನಿರ್ಮಿಸಿದ್ದ ಛತ್ರಗಳು, ಅರಮನೆಗಳು ಅನಾಸಕ್ತಿಿಗೆ ಒಳಗಾದವು. ಇಂದಿಗೂ ಅಯೋಧ್ಯೆೆಯ ಬೀದಿಗಳಲ್ಲಿ ಸಂಚರಿಸಿದರೆ, ನಾನಾ ರಾಜರುಗಳು ನಿರ್ಮಿಸಿದ್ದ, ಈಗ ಪಾಳು ಬಿದ್ದಿರುವ ಹಲವು ಅಥವಾ ದುಸ್ಥಿಿತಿಯಲ್ಲಿರುವ ಛತ್ರಗಳು ಕಾಣಿಸುತ್ತವೆ. ಅದೇ ರೀತಿಯಲ್ಲಿ, ಅಯೋಧ್ಯೆೆಯ ಮೂಲೆ ಮೂಲೆಗಳಲ್ಲಿ, ನಾನಾ ಕಾಲಘಟ್ಟಗಳಲ್ಲಿ ನಿರ್ಮಾಣಗೊಂಡಿರುವ ಹಲವು ಗುಡಿ-ಗೋಪುರಗಳು ಸಹ, ಸೂಕ್ತ ಪ್ರಾಾಶಸ್ತ್ಯವನ್ನು ಪಡೆಯುವಲ್ಲಿ ವಿಫಲವಾಗಿವೆ.

ನಮ್ಮ ದೇಶಕ್ಕೆೆ ಸ್ವಾಾತಂತ್ರ್ಯ ದೊರೆತ ನಂತರವೂ, ಅಯೋಧ್ಯೆೆ, ಕಾಶಿ ಮೊದಲಾದ ಪಟ್ಟಣಗಳು ಮೂಲಭೂತ ಸೌಕರ್ಯಗಳ ಅಭಿವೃದ್ಧಿಿಯನ್ನು ಕಾಣದೇ, ಹಿಂದಿನಂತೆಯೇ ಮುಂದುವರಿದಿದ್ದು ಒಂದು ಕಟುವಾಸ್ತವ. ಇದಕ್ಕೆೆ ಸ್ವಾಾತಂತ್ರ್ಯ ದೊರೆತ ಮೊದಲ ದಶಕಗಳ ತಲ್ಲಣ ಒಂದು ಕಾರಣವೆನಿಸಿದರೆ, ಮೊದಮೊದಲು ಆಳ್ವಿಿಕೆ ನಡೆಸಿದ ಸರಕಾರಗಳು ಅನುಸರಿಸಿದ ಹುಸಿ ಸೆಕ್ಯುಲರ್ ಸಿದ್ಧಾಾಂತವೂ ಇನ್ನೊೊಂದು ಕಾರಣ. ಈಚಿನ ಒಂದು ದಶಕದಲ್ಲಿ ಅಯೋಧ್ಯೆೆಯಂತಹ ಪಟ್ಟಣಗಳು ಸರಕಾರದ ಗಮನ ಸೆಳೆದು, ಮೂಲಭೂತ ಸೌಕರ್ಯಗಳನ್ನು ಪಡೆಯುತ್ತಿಿವೆ. ರಾಮಜನ್ಮಭೂಮಿಯಲ್ಲಿ ದೇಗುಲ ನಿರ್ಮಾಣ ಪೂರ್ತಿಯಾಗುವ ಹೊತ್ತಿಿಗೆ, ಅಯೋಧ್ಯೆೆಯು ಇನ್ನಷ್ಟು ಮೂಲಭೂತ ಸೌಕರ್ಯಗಳನ್ನು ಹೊಂದಿ, ಅಂತಾರಾಷ್ಟ್ರೀಯ ಮಟ್ಟದ ನಗರವಾಗಿ ಮರುನಿರ್ಮಾಣಗೊಳ್ಳಬೇಕಾದ ಅಗತ್ಯ ಇದೆ.

Leave a Reply

Your email address will not be published. Required fields are marked *

error: Content is protected !!