Saturday, 7th September 2024

ಬಯಲಾಯ್ತು ಶಿವಸೇನೆಯ ಇನ್ನೊಂದು ಮುಖ

ನೂರಕ್ಕೂ ಹೆಚ್ಚು ಸ್ಥಾಾನ ಪಡೆದ ಬಿಜೆಪಿಗೆ ಶಿವಸೇನೆ ಸರಕಾರ ನಡೆಸಲು ಬೆಂಬಲಿಸಬೇಕಿತ್ತು. ಆದರೆ, ಅದು ಕೊನೆಯವರೆಗೂ ಚೌಕಾಸಿ ಮಾಡಿ ಕಡೆಗೆ ತನ್ನ ಎಲ್ಲಾಾ ಸಿದ್ಧಾಾಂತಕ್ಕೂ ವಿರುದ್ಧವಾದ ಕಾಂಗ್ರೆೆಸ್ ಮತ್ತು ಎನ್‌ಸಿಪಿಯೊಂದಿಗೆ ಮಾತುಕತೆಗಿಳಿದದ್ದು ದುರದೃಷ್ಟರಕರ ಸಂಗತಿ.

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಬಂದಿದೆ. ಆದರೆ, ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ಫಲಿತಾಂಶ ಬಂದು ಸುಮಾರು ಇಪ್ಪತ್ತು ದಿನಗಳಾದರೂ ಜನರು ಆರಿಸಿಕಳುಹಿಸಿದ ಜನಪ್ರತಿನಿಧಿಗಳಿರುವ ಪಕ್ಷಗಳು ಅಧಿಕಾರದ ಗದ್ದುಗೆ ಏರದಿದ್ದರೆ ಏನನ್ನಬೇಕು? ಬಿಜೆಪಿ-ಶಿವಸೇನೆ ಮಿತ್ರರಾಗಿ ಚುನಾವಣೆಯನ್ನು ಎದುರಿಸಿ ಆಡಳಿತಕ್ಕೆೆ ಬರುವ ಸನ್ನಿಿವೇಶ ನಿರ್ಮಾಣವಾದರೂ ಅಧಿಕಾರದ ಗದ್ದುಗೆಗೇರಲಿಲ್ಲ. ಎರಡೂ ಪಕ್ಷಗಳ ‘ರಾಜಕೀಯ ಚೌಕಾಸಿ’ 25 ವರ್ಷಗಳ ಮೈತ್ರಿಿಯು ಮುಕ್ತಗೊಳಿಸಿದ್ದು ಮತದಾರರಿಗೆ ಮಾಡಿದ ಅನ್ಯಾಾಯವೆಂದೇ ಪರಿಗಣಿಸಬೇಕಾಗಿದೆ. ರಾಜ್ಯಪಾಲರು ಕೊಟ್ಟ ಸಮಯಾವಕಾಶವನ್ನು ಪ್ರಮುಖ ಪಕ್ಷಗಳು ಬಳಸಿಕೊಳ್ಳಲಿಲ್ಲವೆಂದ ಮೇಲೆ ರಾಷ್ಟ್ರಪತಿ ಆಡಳಿತಕ್ಕೆೆ ಶಿಫಾರಸು ಮಾಡದೇ ರಾಜ್ಯಪಾಲರು ಬೇರೇನು ಮಾಡಬೇಕಿತ್ತು ಎನ್ನುವುದು ಸಹಜವಾಗಿ ಏಳುವ ಪ್ರಶ್ನೆೆಯೇ.

ಇಡೀ ದೇಶದಲ್ಲಿನ ಶಾಸಕಾಂಗವು ಸಂವಿಧಾನವನ್ನು ಮತ್ತು ಪ್ರಜಾಪ್ರಭುತ್ವವನ್ನು ಸಮನಾಗಿ ಗೌರವಿಸಬೇಕಿದೆ. ಇವು ಎರಡನ್ನೂ ರಾಜಕಾರಣವು ಪ್ರಾಾಮಾಣಿಕವಾಗಿ ಸ್ವೀಕರಿಸಿದರೆ ಮಾತ್ರ ಸಾರ್ಥಕವಾಗುತ್ತದೆ. ಒಟ್ಟಿಿನಲ್ಲಿ ಮೂರು ಪಕ್ಷಗಳ ಮುಖಂಡರಿಗೂ ತಮ್ಮದೇ ಆದ ಸ್ವಾಾರ್ಥ ಚಿಂತನೆಗಳು, ಹಠ, ಅಹಂಕಾರಗಳು ಮೇಳೈಸಿದ ಪರಿಣಾಮ ಈಗಿನ ಸನ್ನಿಿವೇಶ ನಿರ್ಮಾಣವಾಗಿದ್ದನ್ನು ನೋಡಬೇಕಾಯಿತು.

ಬಿಜೆಪಿ ಮತ್ತು ಶಿವಸೇನೆಯದು ಒಂದೇ ಸಿದ್ಧಾಾಂತವಾಗಿದ್ದು, ಈ ಎರಡೂ ಪಕ್ಷಗಳು ದೇಶದ ಪರಂಪರೆ, ಸಂಸ್ಕೃತಿ, ಹಿಂದುತ್ವವನ್ನು ಪ್ರತಿಪಾದಿಸುವ ಅಂಶಗಳನ್ನೇ ಹೊಂದಿದ್ದವು. ಆದರೆ, ಅಧಿಕಾರದಲ್ಲಿ ಮಾತ್ರ ಇವರು ಕಳೆದ ಹಲವು ದಿನಗಳಿಂದ ಚೌಕಾಸಿಗಿಳಿದದ್ದು ನೋಡಿದರೆ ಕರ್ನಾಟಕದ ಜೆಡಿಎಸ್ ಮತ್ತು ಕಾಂಗ್ರೆೆಸ್ ಪಕ್ಷಗಳೇ ವಾಸಿ. ಈ ಎರಡೂ ಪಕ್ಷಗಳು ಜಾತ್ಯತೀತ ಸಿದ್ಥಾಾಂತವೆಂದು ಹೇಳಿಕೊಂಡು ಹದಿನಾಲ್ಕು ತಿಂಗಳ ಕಾಲವಾದರೂ ಆಡಳಿತ ನಡೆಸಿದರು. ಆದರೆ, ಸಹಜವಾಗಿ ನೂರಕ್ಕೂ ಹೆಚ್ಚು ಸ್ಥಾಾನ ಪಡೆದ ಬಿಜೆಪಿಗೆ ಶಿವಸೇನೆ ಸಹಕಾರ ನೀಡಿ ಸರಕಾರ ನಡೆಸಲು ಬೆಂಬಲಿಸಬೇಕಿತ್ತು. ಆದರೆ, ಅದು ಕೊನೆಯವರೆಗೂ ಚೌಕಾಸಿ ಮಾಡಿ ಕಡೆಗೆ ತನ್ನ ಎಲ್ಲಾಾ ಸಿದ್ಧಾಾಂತಕ್ಕೂ ವಿರುದ್ಧವಾದ ಕಾಂಗ್ರೆೆಸ್ ಮತ್ತು ಎನ್‌ಸಿಪಿಯೊಂದಿಗೆ ಮಾತುಕತೆಗಿಳಿದದ್ದು ಶಿವಸೇನೆಯ ಇನ್ನೊೊಂದು ಮುಖವನ್ನು ನೋಡುವಂತಾಗಿದೆ.

ಇದು ಶಿವಸೇನೆಗೆ ಮತಚಲಾಯಿಸಿದ ಮತದಾರನಿಗೆ ಮಾಡಿದ ‘ಕಪಾಳ ಮೋಕ್ಷ’ವೆಂದರೆ ತಪ್ಪಲ್ಲ. ರಾಜಕೀಯದಲ್ಲಿ ಏನು ಬೇಕಾದರು ಆಗಬಹುದು ಎಂಬುದಕ್ಕೆೆ ತಾಜಾ ಉದಾಹರಣೆಯಾಗಿದೆ. ಆದರೆ, ಅಧಿಕಾರ ಎಂಬುದು ಹುಲಿಯನ್ನೂ ಶ್ವಾಾನವನ್ನಾಾಗಿ ಮಾಡಿಸುತ್ತದೆ ಎಂಬುದು ದುರದೃಷ್ಟಕರ.

Leave a Reply

Your email address will not be published. Required fields are marked *

error: Content is protected !!