Saturday, 27th July 2024

ಹೆಜ್ಜೇನು ದಾಳಿ: ದುರ್ವರ್ತನೆ ಸಲ್ಲದು

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಲಕ್ಕೇನಹಳ್ಳಿ ಗೇಟ್ ಬಳಿಯ ತುಳಸಿ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಸೋಮ ವಾರ ಹೆಜ್ಜೇನು ದಾಳಿಗೆ ಒಬ್ಬರು ಮೃತಪಟ್ಟಿದ್ದು, ೨೦ ಜನ ಅಸ್ವಸ್ಥಗೊಂಡಿರುವ ಕುರಿತು ವರದಿಯಾಗಿದೆ. ಈ ಹಿಂದೆಯೂ ಹೂವಿನಹಡಗಲಿಯಲ್ಲಿ ಕಿಡಿಗೇಡಿಗಳು ಹೆಜ್ಜೇನು ಗೂಡಿಗೆ ಕಲ್ಲು ಎಸೆದಿದ್ದರಿಂದ, ಗೂಡಿಗೆ ಸಮೀಪವೇ ಇದ್ದ ಕಾಲೇಜು ವಿದ್ಯಾರ್ಥಿಗಳು ಹೆಜ್ಜೇನು ದಾಳಿಗೆ ತುತ್ತಾಗಿ ಅಸ್ವಸ್ಥರಾಗಿದ್ದು  ವರದಿಯಾಗಿತ್ತು.

ಹೆಜ್ಜೇನು ಸುರಕ್ಷತೆ ಬಗ್ಗೆ ತಜ್ಞರಿಂದ ಹೇರಳವಾದ ಸಲಹೆಗಳು ಲಭ್ಯವಿದ್ದರೂ ಪದೇ ಪದೆ ಇಂಥ ಪ್ರಕರಣಗಳಲ್ಲಿ ಜನರು ಸಿಲುಕಿ ಕೊಳ್ಳುತ್ತಿದ್ದು, ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವುದು ಅಗತ್ಯವಿದೆ. ತಮಗೆ ಶತ್ರುಕಾಟವಿದೆ ಎಂದು ಭಾವಿಸಿದರೆ ಮಾತ್ರ ಹೆಜ್ಜೇನುಗಳು ಕೊಪೋದ್ರೇಕದಿಂದ ಮನುಷ್ಯರ
ಮೇಲೆ ದಾಳಿ ಮಾಡುತ್ತವೆ. ಇದನ್ನು ಹೊರತುಪಡಿಸಿ ಅನಗತ್ಯವಾಗಿ ಇವು ದಾಳಿ ಮಾಡುವುದಿಲ್ಲ. ಕಿಡಿಗೇಡಿಗಳು ಜೇನುಗೂಡಿಗೆ ಕಲ್ಲು ಎಸೆದಿರುವುದು ದುರ್ವರ್ತನೆಯೇ ಸರಿ. ಬಸ್ ನಿಲ್ದಾಣ, ಶಾಲಾ ಕಟ್ಟಡ, ಸಾರ್ವಜನಿಕ ಕಚೇರಿಗಳಂತಹ ಸ್ಥಳಗಳಲ್ಲಿ ಜೇನು ಗೂಡು ಕಂಡುಬಂದರೆ ತಕ್ಷಣವೇ ಗೂಡನ್ನು ಸ್ಥಳಾಂತರ ಮಾಡಿಸುವುದು ಮುಖ್ಯ.

ಇಲ್ಲವಾದರೆ, ಸ್ಥಳೀಯ ಆಡಳಿತವು ಸುತ್ತಮುತ್ತಲಿನ ಜನರನ್ನು ಸೇರಿಸಿ, ಜೇನಿನಿಂದಾಗುವ ಅನುಕೂಲಗಳು ಮತ್ತು ಸುರಕ್ಷತೆ ಕಾಯ್ದು ಕೊಳ್ಳುವ ಬಗ್ಗೆ ಅರಿವು ಮೂಡಿಸಬೇಕು. ಯಾವ ಕಾರಣಕ್ಕೂ ಹೆಜ್ಜೆನಿಗೆ ಔಷಧ ಹೊಡೆಯುವುದಾಗಲೀ, ಬೆಂಕಿ ಹಾಕುವುದಾಗಲೀ ಮಾಡಬಾರದು. ಕಾಡಿನಲ್ಲಿರಲಿ, ನಾಡಿನಲ್ಲಿರಲಿ, ವೆeನಿಕ ಕೊಯ್ಲು ಮುಖಾಂತರವಷ್ಟೆ ಹೆಜ್ಜೆನಿನ ಮರಿಭಾಗವನ್ನು ಬಿಟ್ಟು ತುಪ್ಪದ ಭಾಗ ಮಾತ್ರ ತೆಗೆಯಬೇಕು. ಈ ರೀತಿ ಹೆಜ್ಜೆನು ಕೊಯ್ಲು ಮಾಡುವುದರಿಂದ ಅವುಗಳ ಸಂತತಿ ವೃದ್ಧಿಸುತ್ತ ಹೋಗು ತ್ತದೆ. ಅನಿವಾರ್ಯ ಕಾರಣಗಳಿಂದ ಹೆಜ್ಜೇನು ಪಟ್ಟಣಗಳಲ್ಲಿನ ದೊಡ್ಡ ದೊಡ್ಡ ಗೋಡೆಗಳ ಮೇಲೆ ಗೂಡು ಕಟ್ಟುತ್ತದೆ.

ಅಲ್ಲಿ ಅವು ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಜತೆಗೆ ನಗರದ ಅಶುದ್ಧ ವಾತಾವರಣ ಜೇನಿನ ಸಂತಾನಾಭಿವೃದ್ಧಿ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಜೇನು ಸಂತತಿ ವಿನಾಶದತ್ತ ಸಾಗುತ್ತಿದೆ. ಇದನ್ನು ತಪ್ಪಿಸುವ ಅಗತ್ಯವಿದೆ.

Leave a Reply

Your email address will not be published. Required fields are marked *

error: Content is protected !!