Saturday, 7th September 2024

ಕುತಂತ್ರ ನಡೆಗೆ ನೀಡಬೇಕಿದೆ ತಕ್ಕ ಉತ್ತರ

೨೦೨೦ರ ಜೂನ್ ಮಾಸದಲ್ಲಿ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಮೇಲೆ ದಾಳಿನಡೆಸುವ ಮೂಲಕ ಚೀನಾ ಗಡಿ ಸಂಘರ್ಷ ಸೃಷ್ಟಿಸಿತು. ಅಂದಿನ ಸಂಘರ್ಷದಲ್ಲಿ 20 ಭಾರತೀಯ ಯೋಧರು ಮೃತರಾಗುವುದರೊಂದಿಗೆ ಸಂಘರ್ಷ ತೀವ್ರ ಗೊಂಡಿತು.

ಚೀನಾದ ಈ ನಡೆಗೆ ತಕ್ಕ ಉತ್ತರ ನೀಡಲು ನಿರ್ಧರಿಸಿದ ಭಾರತ, ಸೈಬರ್ ಸುರಕ್ಷತೆಯ ದೃಷ್ಟಿಯಿಂದ ಚೀನಿ ಆಪ್‌ಗಳನ್ನು ನಿಷೇಧಿಸಿ, ತಕ್ಕ ಉತ್ತರ ನೀಡಿತು. ಹತ್ತು ಸುತ್ತಿನ ಮಾತುಗಳ ನಂತರ ಗಡಿಬಿಕ್ಕಟ್ಟನ್ನು ಶಮನಗೊಳಿಸಲಾಯಿತು. ಆದರೂ ತನ್ನ ನಡೆಯಲ್ಲಿ ಬಲಾವಣೆಗೊಳ್ಳದ ಚೀನಾ ಇದೀಗ ಮತ್ತೊಮ್ಮೆ ಹ್ಯಾಕ್ ಮೂಲಕ ತನ್ನ ಕುತಂತ್ರ ನಡೆಯನ್ನು ಪ್ರದರ್ಶಿಸುತ್ತಿದೆ. ಈ ವೇಳೆ ಭಾರತ ತಾಂತ್ರಿಕವಾಗಿಯೂ ಪ್ರಬಲತೆಯನ್ನು ಸಾಧಿಸುವ ಮೂಲಕ ಚೀನಾಕ್ಕೆ ತಕ್ಕ ಉತ್ತರ ನೀಡುವ ಅಗತ್ಯವಿದೆ.

ಭಾರತದ ವಿದ್ಯುತ್ ವ್ಯವಸ್ಥೆ, ಲಸಿಕೆ ಕಂಪನಿಗಳ ಐಟಿ ವ್ಯವಸ್ಥೆ ಹಾಗೂ ಮೈಕ್ರೋಸಾಪ್ಟ್ ಎಕ್ಸ್‌ಚೆಂಜ್‌ನ ಸರ್ವರ್‌ಗಳನ್ನು ಹ್ಯಾಕ್
ಮಾಡಿರುವುದು ಬಹಿರಂಗ ಗೊಂಡಿದೆ. ತಾಂತ್ರಿಕವಾಗಿ ಪ್ರಬಲತೆಯನ್ನು ಸಾಧಿಸಿರುವ ಚೀನಾ ಇದೀಗ ಹ್ಯಾಕ್ ಮೂಲಕ ಅನೇಕ ಮಾಹಿತಿಗಳನ್ನು ಕದಿಯಲು ಮುಂದಾಗಿದೆ. ಇಂಥ ಒಂದು ನಡೆಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಚೀನಾದಿಂದ ಮತ್ತಷ್ಟು ಸಮಸ್ಯೆ ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಭಾರತ ಗಂಭೀರವಾಗಿ ಯೋಚಿಸಬೇಕಿರುವ ಅಗತ್ಯತೆ ಹಾಗೂ ಅನಿವಾರ್ಯತೆ ಉಂಟಾಗಿದೆ.

ಈಗಾಗಲೇ ಭಾರತವು ರಕ್ಷಣಾ ವ್ಯವಸ್ಥೆಯಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಪ್ರಬಲತೆ ಸಾಧಿಸಿದ್ದರೂ ಪದೇ ಪದೆ ಭಾರತಕ್ಕೆ ಸಮಸ್ಯೆಗಳನ್ನು ತೊಂದೊಡ್ಡುತ್ತಿರುವ ಚೀನಾಕ್ಕೆ ತಕ್ಕ ಪಾಠ ಕಲಿಸ ಬೇಕಿರುವುದು ಭಾರತ ಪ್ರಮುಖ ಜವಾಬ್ದಾರಿ.

Leave a Reply

Your email address will not be published. Required fields are marked *

error: Content is protected !!