Sunday, 8th September 2024

ಸಿಎಂಸಿಎ ಕ್ಷಮೆ: ಸ್ವಾಗತಾರ್ಹ

ಒಂದು ಜಾತಿಗೋ ಸಮುದಾಯಕ್ಕೋ ಸೀಮಿತರಲ್ಲ. ಈ ದೇಶ ಕಂಡ ರಾಷ್ಟ್ರ ನಾಯಕರು, ಹಾಗೂ ಪ್ರಾಾಮಾಣಿಕ ನಿಷ್ಠಾಾವಂತ ಕಾನೂನು ಪಂಡಿತರು. ಅಂದಿನ ಸರಕಾರದಲ್ಲಿ ಸಚಿವರಾದಾಗ ಹಲವಾರು ರೀತಿಯ ತಪ್ಪುುಗಳನ್ನು ಸರಿಪಡಿಸಿ ನೈಜ ಭಾರತೀಯತೆಯನ್ನು ಪ್ರತಿಪಾದಿಸಿದವರು.

ಸರಕಾರದ ಶಿಕ್ಷಣ ಇಲಾಖೆ ಸಂವಿಧಾನ ದಿನಾಚರಣೆಯ ಸಂಬಂಧ ಹೊರಡಿಸಲಾದ ಕೈಪಿಡಿಯಲ್ಲಿನ ದೋಷವನ್ನು ಒಪ್ಪಿಿಕೊಂಡ ಅದಕ್ಕೆೆ ಬೇಷರತ್ ಕ್ಷಮೆಯಾಚಿಸಿರುವುದು ಸ್ವಾಾಗತಾರ್ಹ. ಸದರಿ ಆಕ್ಷೇಪಾರ್ಹ ಸುತ್ತೋೋಲೆಯನ್ನು ಸಿದ್ದಪಡಿಸಿದ್ದ (ಸಿಎಂಸಿಎ) ಪೌರ ಪ್ರಜ್ಞೆಗಾಗಿ ಮಕ್ಕಳ ಚಳವಳಿಯ ಈ ನಡೆ ನಿರೀಕ್ಷಿತವೂ ಹೌದು. ಏಕೆಂದರೆ ಇಂತಹ ತಪ್ಪುುಗಳು ಸರಕಾರದಂತಹ ಉನ್ನತ ಆಡಳಿತ ಹಾಗೂ ಅದರಲ್ಲೂ ಸಾಕ್ಷರತಾ ಸಂಸ್ಥೆೆಯಾದ ಶಿಕ್ಷಣ ಇಲಾಖೆಯ ಮೂಗಿನಡಿಯಲ್ಲಿ ಇಂತಹ ತಪ್ಪುುಗಳು ಆಗುವುದೇ ಮೊದಲ ತಪ್ಪುು. ಅದರಲ್ಲೂ ತಪ್ಪುು ಆಗೇ ಹೋದಾಗ ಸುಮ್ಮನಿರುವುದು ಮತ್ತಷ್ಟು ತಪ್ಪುು ದಾರಿಗಳಿಗೆ ಎಡೆ ಮಾಡಿಕೊಡುವುದು ತಪ್ಪುುವುದಿಲ್ಲ.

ಹೀಗಾಗಿ ಕೂಡಲೇ ಎಚ್ಚೆೆತ್ತ ಈ ಸಂಸ್ಥೆೆ ತನ್ನ ತಪ್ಪನ್ನು ಅರಿತುಕೊಂಡು ಬೇಷರತ್ ಕ್ಷಮೆ ಕೋರಿದ್ದಲ್ಲದೇ ಮುಂದೆ ಇಂತಹ ಎಡವಟ್ಟುಗಳು ಜರುಗದಂತೆ ನೋಡಿಕೊಳ್ಳುವ ಭರವಸೆ ನೀಡಿದೆ. ಇಷ್ಟಕ್ಕೂ ಅಂಬೇಡ್ಕರ್ ಅವರ ಕುರಿತಾದ ಇಂತಹ ಅವಹೇಳನಗಳು ಅಥವಾ ವಿವಾದಗಳು, ಅಪಚಾರಗಳು ನಡೆದಾಗ ಅದನ್ನು ಖಂಡಿಸುವುದು ಮತ್ತು ಪ್ರಶ್ನಿಿಸುವುದು ಯಾರಿಂದ ಆಗಬೇಕು. ಅಂಬೇಡ್ಕರ್ ಅವರು ಬರಿಯ ಯಾವೊದೇ ಒಂದು ಜಾತಿಗೋ ಸಮುದಾಯಕ್ಕೋೋ ಸೀಮಿತರಲ್ಲ. ಈ ದೇಶ ಕಂಡ ರಾಷ್ಟ್ರ ನಾಯಕರು, ಹಾಗೂ ಪ್ರಾಾಮಾಣಿಕ ನಿಷ್ಠಾಾವಂತ ಕಾನೂನು ಪಂಡಿತರು. ಅಂದಿನ ಸರಕಾರದಲ್ಲಿ ಸಚಿವರಾದಾಗ ಹಲವಾರು ರೀತಿಯ ತಪ್ಪುುಗಳನ್ನು ಸರಿಪಡಿಸಿ ನೈಜ ಭಾರತೀಯತೆಯನ್ನು ಪ್ರತಿಪಾದಿಸಿದವರು.

ಅಂದು ದೇಶ ಸ್ವಾಾತಂತ್ರ್ಯಗೊಂಡು ಸರಕಾರ ರಚನೆಯಾದಾಗ ಈ ದೇಶಕ್ಕೆೆ ಬೇಕಿದ್ದ ಈ ದೇಶದ ಎಲ್ಲಾಾ ಜನತೆಯನ್ನು ಗೌರವಿಸುವ ಪ್ರೀತಿಸುವಂತ ಸಮಾನವಾದ ತತ್ತ್ವವನ್ನು ಸಾರುವ ಸಂವಿಧಾನ ಎಂಬ ಮಹಾಗ್ರಂಥವೊಂದು ಅವಶ್ಯಕವಾದಾಗ ಅದನ್ನು ಸಿದ್ದಪಡಿಸುವ ದೊಡ್ಡ ಹೊಣೆಗಾರಿಕೆಯನ್ನು ಹೊರುವ ಏಕೈಕ ವ್ಯಕ್ತಿಿಯಾಗಿ ಕಂಗೊಳಿಸಿದ್ದೇ ಅಂಬೇಡ್ಕರ್ ಅವರದು.
ಹಾಗೆಯೇ ಅಂದು ಇಂತಹ ಜವಾಬ್ದಾಾರಿಯನ್ನು ಇನ್ನಾಾರಿಗೋ ವಹಿಸಿದ್ದರೆ ಅಂದು ದೊಡ್ಡ ಪ್ರಮಾದವಾಗುತ್ತಿಿತ್ತೇನೋ.

ಅವರು ರಚಿಸಿದ ಸಂವಿಧಾನದ ತಿರುಳಿನಿಂದಲೇ ಮೊನ್ನೆೆ ಸರ್ವೋಚ್ಚ ನ್ಯಾಾಯಾಲಯದ ಮೂಲಕ ಭಾರತದ ಸಾಂಸ್ಕೃತಿಕತೆಯ ಪ್ರತೀಕವಾದ ರಾಮಜನ್ಮಭೂಮಿಯ ಅಯೋಧ್ಯ ಹಿಂದೂಗಳಿಗೆ ಮರಳಿ ಹಸ್ತಾಾಂತರಗೊಂಡಿದ್ದು. ದೇಶದ ನ್ಯಾಾಯಾಂಗ ಶಾಸಕಾಂಗ ಕಾರ್ಯಾಂಗ ಮತ್ತು ಪತ್ರಿಕಾರಂಗದ ಶಕ್ತಿಗೆ ಹೊಳಪು ನೀಡಿದ್ದು ಇದೇ ಸಂವಿಧಾನದಿಂದಾಗಿ ಮಾತ್ರ ನ್ಯಾಾಯ ಸಿಕ್ಕಿದು ಮರೆಯುತ್ತಿಲ್ಲ. ಎಂಬುದು ದೊಡ್ಡ ಹೆಮ್ಮೆ ಇದೆ.

ಆದರೆ, ಇಂದು ಅಂಬೇಡ್ಕರ್ ಅವರಂಥ ಹೆಸರು ಒಂದು ವರ್ಗದ ಸೂಚಕವಾಗಿರುವುದು ದುರದೃಷ್ಟಕರ. ದುರಂತವೆಂದರೆ ಅಂಬೇಡ್ಕರ್ ಅವರ ಮನಸ್ಥಿಿತಿಯನ್ನು ತಿಳಿದುಕೊಳ್ಳದೇ ಇಂದು ಹಲವಾರು ಸಂಘಟನೆಗಳು ಅವರನ್ನು ಮೇಲ್ವರ್ಗದ ವಿರೋಧಿ ಎಂದು ತಪ್ಪಾಾಗಿ ಭಾವಿಸಿ ಕುರುಡು ದ್ವೇಷವನ್ನು ಬೆಳೆಸಿದ್ದಾಾರೆ. ಕೆಳ ವರ್ಗದವರೆಂದರೆ ಅಂಬೇಡ್ಕರ್, ಮೇಲ್ವರ್ಗದವರೆಂದರೆ ವಿರೋಧಿಗಳು ಎಂಬ ಪೂರ್ವಾಗ್ರಹ ದೇಶದಲ್ಲಿ ನಾಶವಾಗಬೇಕಿದೆ. ಇಲ್ಲದಿದ್ದರೆ ಅಂಬೇಡ್ಕರ್ ಅವರ ಹೆಸರಿನಲ್ಲಿ ಹಲವು ರೀತಿಯ ಆಭಾಸಗಳು ಸಂಭವಿಸುವುದರಲ್ಲಿ ಸಂಶಯವಿಲ್ಲ. ಇದನ್ನು ಶೈಕ್ಷಣಿಕ ಸಂಸ್ಥೆೆಗಳು ಹೊರಬೇಕು. ಮುಂದಿನ ಪೀಳಿಗೆಯ ವಿದ್ಯಾಾರ್ಥಿಗಳಲ್ಲಿ ಗಾಂಧೀಜಿ, ನೇತಾಜಿ, ಅಂಬೇಡ್ಕರ್ ತಿಲಕ್ ಎಲ್ಲರೂ ಒಂದೇ ಎಂಬ ಭಾವವನ್ನು ಸೃಷ್ಟಿಿಸಬೇಕಿದೆ ಎಂಬುದು ಸಮಸ್ತ ಕರ್ತವ್ಯವಾಗಲಿ.

Leave a Reply

Your email address will not be published. Required fields are marked *

error: Content is protected !!