Saturday, 7th September 2024

ಡೆಂಘೀ ಹೆಚ್ಚಳ ಕಳವಳಕಾರಿ 

ಪ್ರತೀವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ಡೆಂಘೀ, ಮಲೇರಿಯಾದಂತಹ ಪ್ರಕರಣಗಳು ಹೆಚ್ಚುವುದು ಸರ್ವೇಸಾಮಾನ್ಯ. ಆದರೆ ಈ ಬಾರಿ ಡೆಂಘೀ ಪ್ರಕರಣಗಳು ರಾಜ್ಯವ್ಯಾಪಿಯಾಗಿ ಎಡೆ ಕಾಣಿಸಿಕೊಂಡಿರುವುದು ಕಳವಳಕಾರಿ ವಿಚಾರ. ಆರೋಗ್ಯ ಇಲಾಖೆಯ ಪ್ರಕಾರ ಬರೀ ಆರು ತಿಂಗಳ ಅವಧಿಯಲ್ಲಿ ೬,೩೭೭ ಡೆಂಘೀ ಪ್ರಕರಣಗಳು ದಾಖಲಾಗಿದ್ದು, ಕಳೆದ ಎರಡು ವಾರಗಳಲ್ಲಿ ಏಳು ಜನರನ್ನು ಬಲಿ ಪಡೆದಿದೆ.

ರಾಜಧಾನಿ ಬೆಂಗಳೂರಿನಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ೧೩೦೦ ದಾಟಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೂವರು ಮೃತಪಟ್ಟಿದ್ದಾರೆ. ಮೈಸೂರು
ಜಿಲ್ಲೆಯ ಹುಣಸೂರು ತಾಲೂಕಿನ ಸಮುದಾಯ ಯುವ ಆರೋಗ್ಯಾಧಿಕಾರಿಯೊಬ್ಬರು ಡೆಂಘೀ ಜ್ವರಕ್ಕೆ ಬಲಿಯಾಗಿzರೆ. ಹೊಳೆನರಸೀಪುರದಲ್ಲಿ ಇಬ್ಬರು ಬಾಲಕಿಯರು, ಬೆಳಗಾವಿ ಆಸ್ಪತ್ರೆಯಲ್ಲಿ ಒಬ್ಬರು, ಡೆಂಘೀ ಜ್ವರಕ್ಕೆ ಬಲಿಯಾಗಿದ್ದಾರೆ.

ಬೆಂಗಳೂರು, ಹಾಸನ, ಮೈಸೂರು, ಚಿಕ್ಕಮಗಳೂರು, ಹಾವೇರಿ, ಶಿವಮೊಗ್ಗ, ಉತ್ತರಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಕಂಡು ಬಂದಿದೆ. ಶೀಘ್ರದಲ್ಲಿ ಸೋಂಕು ಪತ್ತೆಯಾಗಿ ಚಿಕಿತ್ಸೆ ಪಡೆದರೆ ಡೆಂಘೀ ಮಾರಣಾಂತಿಕವಲ್ಲ. ಆದರೆ ಸಕಾಲಕ್ಕೆ ಪತ್ತೆಯಾಗದೆ ಹೋದರೆ ರಕ್ತಕಣಗಳ ಸಂಖ್ಯೆಯಲ್ಲಿ ಏರುಪೇರಾಗಿ ಈ ಜ್ವರ ಪ್ರಾಣಕ್ಕೆ ಕುತ್ತು ತರುತ್ತದೆ. ಈ ಬಗ್ಗೆ ಎಡೆ ಜಾಗೃತಿ ಮೂಡಿಸುವ ಜೊತೆಗೆ, ಸೊಳ್ಳೆಗಳ ಮೂಲಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇ ಕಾಗಿದೆ. ಈ ನಡುವೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಲ್ಲಿ (ಕೆಎಸ್‌ಎಂಎಸ್‌ ಸಿಎಲ್) ಡೆಂಘೀಯಿಂದ ಬಳಲುತ್ತಿರುವ ರೋಗಿಗಳಿಗೆ ನೀಡಲಾಗುವ ಪ್ಯಾರಸಿಟಮಾಲ್ ಮಾತ್ರೆಗಳ ದಾಸ್ತಾನು ಇಲ್ಲ ಎಂಬ ಮಾತು ಕೇಳಿ ಬಂದಿದೆ.

ಸರಕಾರ ಈ ಬಗ್ಗೆ ತುರ್ತಾಗಿ ಗಮನಹರಿಸಬೇಕಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಡೆಂ ಪರೀಕ್ಷೆಗೆ ರಕ್ತ ಮಾದರಿ ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಡೆಂಘೀ ಜ್ವರ ಪತ್ತೆ ಹಚ್ಚಲು ನಡೆಸುವ ಎಲಿಸಾ ಮತ್ತು ರ‍್ಯಾಪಿಡ್ ಟೆಸ್ಟ್‌ಗಳ ದರವನ್ನು ಸರಕಾರ ಪರಿಷ್ಕರಿಸಿದ್ದು, ಎರಡು ರೀತಿಯ ಟೆಸ್ಟಿಂಗ್‌ ಗಳಿಗೆ ಒಟ್ಟು ೬೦೦ ರು. ದರ ನಿಗದಿ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಿಗೂ ಇದಕ್ಕಿಂತ ಹೆಚ್ಚು ದರ ವಿಧಿಸುವಂತಿಲ್ಲ ಎಂದು ತಿಳಿಸಲಾಗಿದೆ.

ಸರಕಾರದ ಮುನ್ನೆಚ್ಚರಿಕೆ ಏನೇ ಇರಲಿ, ಪರಿಸರವನ್ನು ಶುಚಿಯಾಗಿ ಇಟ್ಟುಕೊಂಡರೆ ಸೊಳ್ಳೆ ಮತ್ತು ಡೆಂಘೀಯಿಂದ ದೂರವಿರಬಹುದು.

Leave a Reply

Your email address will not be published. Required fields are marked *

error: Content is protected !!