Saturday, 7th September 2024

ಮಳೆ ಮುನ್ನೆಚ್ಚರಿಕೆ ಅಗತ್ಯ

ರಾಜ್ಯಾದ್ಯಂತ ಮಳೆಯ ಅಬ್ಬರ ಜೋರಾಗಿದೆ. ದಿನದಿಂದ ದಿನಕ್ಕೆ ಮಳೆ ಸಂಬಂಧಿತ ಅವಘಡಗಳೂ ಹೆಚ್ಚುತ್ತಿವೆ. ಹೀಗಾಗಿ ಮಳೆ ಮುನ್ನಚ್ಚರಿಕೆ ಕ್ರಮ ಗಳನ್ನು ಪಾಲಿಸಬೇಕಾದದ್ದು ಅಗತ್ಯವಾಗಿದೆ. ಗುಡುಗು- ಮಿಂಚು ಬಂದಾಗ ತಗ್ಗು ಪ್ರದೇಶಕ್ಕೆ ತೆರಳಬೇಕು. ಮರಗಳಿದ್ದ ಪ್ರದೇಶದಲ್ಲಿ ಇರಬಾರದು. ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂತಹ ಹಸಿ, ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ.

ಮರದ ಬಳಿ ನಿಲ್ಲದೇ ಹೊರ ಬರಬೇಕು. ಸಿಡಿಲು ಆರ್ಭಟಿಸುತ್ತಿದ್ದರೆ ನದಿಯಲ್ಲಿ, ಕೆರೆಯಲ್ಲಿ ಈಜುವುದು,  ಸ್ನಾನ ಮಾಡುವುದು ಮಾಡಬಾರದು. ನೀರಿನಲ್ಲಿದ್ದರೆ ತಕ್ಷಣ ಹೊರ ಬರಬೇಕು. ವಿದ್ಯುತ್ ಕಂಬ, ಎಲೆಕ್ಟ್ರಿಕಲ್ ಟವರ್, ಮೊಬೈಲ್ ಟವರ್, ಟ್ರಾನ್ಸ್ ಫಾರ್ಮರ್ ಹತ್ತಿರ ಇರಕೂಡದು. ಸಿಡಿಲು ಬರುವಾಗ ಟೆರೇಸ್ ಮೇಲೇರ ದಿರಿ. ತಂತಿ ಬೇಲಿ, ಬಟ್ಟೆ ಒಣ ಹಾಕುವ ತಂತಿಗಳಿಂದ ದೂರವಿರಬೇಕು. ಮಳೆ ಬರುವ ಸಮಯದಲ್ಲಿ ಮನೆಯ ಟೆರೇಸ್ ಸ್ವಚ್ಛ ಮಾಡುವುದು, ಮನೆಯ ಕಿಟಕಿಯ ಬಳಿ ನಿಲ್ಲುವುದಕ್ಕಿಂತ ಮನೆಯ ಮಧ್ಯದಲ್ಲಿರುವುದು ಸುರಕ್ಷಿತ ಜಾಗವಾಗಿದೆ. ಗುಡುಗು-ಸಿಡಿಲಿನ ಸಂದರ್ಭ ಫೋನ್ ಬಳಕೆ ಮಾಡಬಾರದು. ಅದನ್ನು ಚಾರ್ಜ್ ಮಾಡುವ ಸಾಹಸ ಮಾಡಬಾರದು.

ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಬೇಕು. ಕಾರಿನ ಬಾಡಿ ಸಾಧ್ಯವಾದಷ್ಟು ಸ್ಪರ್ಶಿಸದಿರುವುದೊಳಿತು. ಕಂಪ್ಯೂಟರ್‌ಗಳಿಂದ ದೂರ ವಿರಬೇಕು. ಮನೆಯ ಕಾಂಕ್ರೀಟ್ ಗೋಡೆ ಸ್ಪರ್ಶಿಸದೆ ಕೋಣೆಯ ಮಧ್ಯದಲ್ಲಿದ್ದರೆ ಹೆಚ್ಚು ಸುರಕ್ಷಿತ. ಲೋಹದ ವಸ್ತುಗಳಿಂದ ಅಂತರವಿರುವು ದೊಳಿತು. ಸಿಡಿಲು ಆರ್ಭಟಿಸುವಾಗ ಲೋಹದ ವಸ್ತು ಮುಟ್ಟಬಾರದು. ಕುಡುಗೋಲು, ಕತ್ತಿ, ಹಾರೆ, ಕೊಡಲಿ ಇತ್ಯಾದಿ ಮುಟ್ಟಬಾರದು. ಮನೆಯಲ್ಲಿನ ವಿದ್ಯುತ್ ಪ್ರವಾಹದ ಮೈನ್ ಸ್ವಿಚ್ ಆಫ್ ಮಾಡಿ ವಿದ್ಯುತ್ ಪ್ರವಾಹವನ್ನು ಸ್ಥಗಿತಗೊಳಿಸಬೇಕು.

ದೂರದರ್ಶನ ಉಪಕರಣ, ಮಿಕ್ಸರ್ ಇತ್ಯಾದಿ ವಿದ್ಯುತ್ ಉಪಕರಣಗಳ ಪಿನ್ ಬೋರ್ಡ್‌ನಿಂದ ಕಳಚಿಡಬೇಕು. ಈ ಅವಽಯಲ್ಲಿ ಲಿ-, ಹವಾ ನಿಯಂತ್ರಕ
(ಎ.ಸಿ.), ಹೇರ್ ಡ್ರೈಯರ್‌ಗಳನ್ನು ಉಪಯೋಗಿಸಬಾರದು. ಫ್ರಿಡ್ಜ್ ಸ್ಪರ್ಶಿಸಬಾರದು. ಹೊರಗೆ ಹೋಗುವಾಗ ಎಚ್ಚರಿಕೆ ಅಗತ್ಯ. ಹಾಗೇ ಸಿಡಿಲು ಗುಡುಗು
ಇರುವಾಗ ಹೊರಗೆ ಹೋಗುವುದನ್ನು ತಪ್ಪಿಸಿ. ಇವೆಲ್ಲ ಮುಂಜಾಗ್ರತೆ ವಹಿಸುವುದರಿಂದ ಮಳೆ ಜತೆಗೆ ಉಂಟಾಗುವ ಸಿಡಿಲು ಮಿಂಚಿನ ಅಪಾಯದಿಂದ ಪಾರಾಗಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!