Saturday, 7th September 2024

ಏಕೀಕರಣ ಆಶಯಗಳ ಕಡೆಗಣನೆ

ಇಂದು ಅನೇಕ ಹೋರಾಟಗಾರರು ಅಭಿವೃದ್ಧಿಗಾಗಿ ಸರಕಾರವನ್ನು ಒತ್ತಾಯಿಸುವ ವೇಳೆಯಲ್ಲಿ ಪ್ರಾಂತ್ಯವಾರು ಅಭಿವೃದ್ಧಿಗಾಗಿ
ಆಗ್ರಹಿಸುತ್ತಿದ್ದಾರೆ. ಈ ಬೆಳವಣಿಗೆಯನ್ನು ಗಮನಿಸಿದರೆ, ಈ ಬೆಳವಣಿಗೆಯು ಸಮಗ್ರ ಕರ್ನಾಟಕದ ಕಲ್ಪನೆಗೆ  ವಿರೋಧಿ ಯಾಗಿರುವುದು ಕಂಡುಬರುತ್ತದೆ.

ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ, ಮಲೆನಾಡು ಪ್ರದೇಶಗಳ ಜಿಲ್ಲೆಗಳ ಪುನಶ್ಚೇತನಕ್ಕಾಗಿ ವರ್ಗೀಕರಣ ಗೊಳಿಸಲಾಗಿದೆ. ಇಂಥ ಬೆಳವಣಿಗೆ ಕೆಲ ಕಾಲದ ಅನಿವಾರ್ಯತೆ. ಆದರೆ ಇದೀಗ ಜಿಲ್ಲೆಗಳ ಸಂಖ್ಯೆ ಯಲ್ಲಿಯೂ ಏರಿಕೆ ಯಾಗಿದೆ. ಆದ್ದರಿಂದ ಪ್ರಸ್ತುತ ಜಿಲ್ಲೆಗಳಲ್ಲಿ ಸಮಸ್ಯೆ ಅಥವಾ ಅಭಿವೃದ್ಧಿಗಾಗಿ ಆಗ್ರಹಿಸುವ ವೇಳೆ ಆಗ್ರಹದ ವಿಷಯಗಳು ಮುಖ್ಯ
ವಾಗಬೇಕು. ಇಲ್ಲವಾದರೆ ಮತ್ತೊಮ್ಮೆ ಪ್ರಾಂತ್ಯವಾರು ಗೊಂದಲಗಳು ಏರ್ಪಟ್ಟು ಅಖಂಡ ಕರ್ನಾಟಕದ ಆಶಯಗಳಿಗೆ ಧಕ್ಕೆ ಉಂಟಾಗುವ ಸಾಧ್ಯತೆಯಿದೆ.

ಹಲವು ಪ್ರಾಂತ್ಯಗಳನ್ನು ಒಟ್ಟುಗೂಡಿಸಿ ಸಮಗ್ರ ಕರ್ನಾಟಕ ರೂಪಿಸಬೇಕೆಂಬ ಆಶಯದೊಂದಿಗೆ ಕರ್ನಾಟಕವನ್ನು ಏಕೀಕರಣ
ಗೊಳಿಸಲಾಗಿದೆ. ಈ ಏಕೀಕರಣಕ್ಕೆ ಕನ್ನಡ ಸಾಹಿತಿಗಳು ಹಾಗೂ ಸಾಹಿತ್ಯ ಸಮ್ಮೇಳನಗಳು ಪ್ರಮುಖ ಪಾತ್ರವಹಿಸಿದೆ. ಉದಯ ವಾಗಲಿ ಚೆಲುವ ಕನ್ನಡ ನಾಡು ಎಂಬ ಕಲ್ಪನೆಯೊಂದಿಗೆ ಅನೇಕ ಸಾಹಿತಿಗಳ, ಹೋರಾಟಗಾರರ ಶ್ರಮದ ಪ್ರತಿಫಲವಾಗಿ ನಾವಿಂದು ಸಮಗ್ರ ಕರ್ನಾಟಕವನ್ನು ಕಾಣುತ್ತಿದ್ದೇವೆ. ಆದರೆ ಇತ್ತೀಚಿನ ಬೆಳವಣಿಗೆಗಳು ಈ ಅಖಂಡ ಕರ್ನಾಟಕದ ಕಲ್ಪನೆಗೆ ಧಕ್ಕೆ ತರುವಂಥ ಸನ್ನಿವೇಶ ಸೃಷ್ಟಿಸುತ್ತಿವೆ. ಇದೀಗ ಎರಡನೆ ರಾಜಧಾನಿ ಸ್ಥಾಪನೆಯ ಕೂಗು ಸಹ ಕೇಳಿಬರುತ್ತಿದೆ.

ಇದೆಲ್ಲವೂ ಅಭಿವೃದ್ಧಿಯ ಒತ್ತಾಯದ ಹೆಸರಿನಲ್ಲಿ ರಾಜ್ಯವನ್ನು ಮತ್ತಷ್ಟು ವಿಭಜನೆಗೊಳಿಸುವ ಪ್ರಯತ್ನಗಳಾಗಿ ಕಂಡು ಬರುತ್ತಿದೆ. ಇಂಥದೊಂದು ಬೆಳವಣಿಗೆ ಸಮಗ್ರ ಕರ್ನಾಟಕದ ಆಶಯಗಳನ್ನು ನಾಶಗೊಳಿಸುತ್ತ ಸಾಗಿರುವುದು ವಿಪರ್ಯಾಸ.

Leave a Reply

Your email address will not be published. Required fields are marked *

error: Content is protected !!