Thursday, 19th September 2024

ಇಂಥ ದುರಂತ ಮರುಕಳಿಸದಿರಲಿ

ಮೊನ್ನೆೆಯಷ್ಟೇ ಪಕ್ಕದ ರಾಜ್ಯದಲ್ಲಿ ನಡೆದ ಈ ಘಟನೆ ಇದು ನಿಜಕ್ಕೂ ವ್ಯವಸ್ಥೆೆಯ ದುರಂತ. ತೆಲಂಗಾಣ ರಾಜ್ಯದ ರಂಗಾರೆಡ್ಡಿಿ ಜಿಲ್ಲೆೆಯ ವಿಜಯಾ ರೆಡ್ಡಿಿ ಎಂಬ ತಹಸೀಲ್ದಾಾರರನ್ನ ವ್ಯಕ್ತಿಿಯೊಬ್ಬ ಜೀವಂತ ಸುಟ್ಟು ಹತ್ಯಗೈದು ಪರಾರಿಯಾಗಿರುವುದು ಸಮಾಜದಲ್ಲಿ ಗಾಬರಿ ಹುಟ್ಟಿಿಸಿದೆ. ಭೂಮಿಗಾಗಿ ಕೋರ್ಟ್‌ನಲ್ಲಿ ಬಡಿದಾಡುತ್ತಿಿದ್ದ ವ್ಯಾಾಜ್ಯವೊಂದರ ಕುರಿತಾದ ಮಾತನಾಡಲು ಬಂದ ಈ ವ್ಯಕ್ತಿಿ ಮಾತುಕತೆಯ ನಂತರ ತಾನು ಅಂದುಕೊಂಡ ಹಾಗೆ ನಡೆಯಲಿಲ್ಲವೆಂಬ ನಿರಾಸೆಯಿಂದ ಆಕೆಯ ಮೇಲೆ ಪೆಟ್ರೋೋಲ್ ಸುರಿದು ಜೀವಂತ ಸುಟ್ಟು ಪರಾರಿಯಾಗಿ ಈ ಪರಿಯ ಕ್ರೌೌರ್ಯ ಮೆರೆದಿದ್ದಾಾನೆ. ಇದು ಸಮಾಜದ ಅನಾಗರಿಕತೆಯೋ ಅಥವಾ ಸರಕಾರಿ ವ್ಯವಸ್ಥೆೆಯಲ್ಲಿನ ದೋಷವೋ ನಿಜಕ್ಕೂ ಪರಾಮರ್ಶಿಸಬೇಕಾದ ವಿಚಾರ.

‘ಸರಕಾರಿ ಕೆಲಸ ದೇವರ ಕೆಲಸ’ ಎಂಬುದು ನಮ್ಮ ದೇಶದಲ್ಲಿನ ಕಾರ್ಯಾಂಗದ ಒಂದು ತಾತ್ವಿಿಕ ನೀತಿ. ಆದರೆ, ದೇಶದ ಭ್ರಷ್ಟಾಾಚಾರದ ಮೂಲಸ್ಥಾಾನ ಅಥವಾ ಉಗಮ ಸ್ಥಾಾನವೂ ಇದೇ ಸರಕಾರಿ ಕಚೇರಿಗಳು ಎಂಬುದು ಮಾತ್ರ ಸರ್ವಥಾ ಸತ್ಯ. ನಾವು ನೋಡಿರುವಂತೆ ಸರಕಾರಿ ಕೆಲಸಗಳು, ಕಡತ ವಿಲೇವಾರಿ ಆಗಲೇ ಬೇಕಾದಕ್ಕಿಿಂತ ಆಗಬಾರದಕ್ಕಿಿಂತ ಹೆಚ್ಚು ಸಮಯವನ್ನು ನುಂಗುತ್ತದೆ. ಒಂದು ಕಡತ ಗುಮಾಸ್ತನ ಟೇಬಲಲ್ಲಿನಿಂದ ಪಕ್ಕದ ಟೇಬಲ್ಲಿನ ಮೇಲಧಿಕಾರಿಯ ಸಹಿಗಾಗಿ ರವಾನೆಯಾಗಬೇಕಾದರೆ ಕೆಲ ದಿನಗಳು ಹಾಗೆಯೇ ಕೆಲ ಅಥವಾ ತಿಂಗಳ, ವರ್ಷಗಳ ಸಮಯ ಪಡೆದುಕೊಳ್ಳುವುದು ವ್ಯವಸ್ಥೆೆಯಲ್ಲಿನ ದೊಡ್ಡ ವ್ಯಂಗ್ಯ.

ಇಂತಹ ಪರಮ ಲೋಪವನ್ನು ಆಧರಿಸಿ ಗಿರೀಶ್ ಕಾಸರವಳ್ಳಿಿಯವರ ನಿರ್ದೇಶನದಲ್ಲಿ ಮೂವತ್ತು ಮೂರು ವರ್ಷಗಳ ಹಿಂದೆಯೇ ‘ತಬರನ ಕಥೆ’ ಎಂಬ ಸಿನಿಮಾವನ್ನು ನಿರ್ಮಿಸಿದ್ದರು. ಅದರಲ್ಲಿ ಅಸಹಾಯಕ ಬಡ ವೃದ್ಧನೊಬ್ಬ ತನ್ನ ಪಿಂಚಣಿಗಾಗಿ ಪ್ರತಿನಿತ್ಯ ಸರಕಾರಿ ಕಚೇರಿಗಳಿಗೆ ಎಡತಾಕಿ ನಿತ್ಯವೂ ನಿರಾಸೆಯಿಂದ ಹೊರಬಂದು ಕೊನೆಗೊಂದು ದಿನ ತನ್ನ ಸಹನೆಯ ಕಟ್ಟೆೆ ಒಡೆದು ಸರಕಾರಿ ನೌಕರರಿಗೆ ಬಾಯಿಗೆ ಬಂದಂತೆ ಬಯ್ದು ಶಪಿಸುತ್ತಾಾನೆ. ತಮಾಷೆ ಎಂದರೆ ಇದೇ ಚಿತ್ರಕ್ಕೆೆ ನಮ್ಮ ದೇಶದಲ್ಲಿ ರಾಷ್ಟ್ರ ಪ್ರಶಸ್ತಿಿ ದೊರೆಯುತ್ತದೆ.

ಆದರೆ, ವ್ಯವಸ್ಥೆೆ ಮಾತ್ರ ಇಂದಿಗೂ ಬದಲಾಗುವುದಿಲ್ಲ. ತೀರ ಇತ್ತೀಚೆಗೆ ಉಪೇಂದ್ರ ನಿರ್ದೇಶನದ ಚಿತ್ರವೊಂದರಲ್ಲಿ ಇದೇ ಮಾದರಿಯ ನಿವೃತ್ತ ವೃದ್ಧ ಶಿಕ್ಷಕ ಪಿಂಚಣಿಗಾಗಿ ಸತಾಯಿಸಿದ ಗುಮಾಸ್ತನೆದುರು ತನ್ನ ಚಪ್ಪಲಿ ಅಂಗಿ ಲುಂಗಿ ಚಡ್ಡಿಿ ಎಲ್ಲವನ್ನೂ ಬಿಚ್ಚಿಿಟ್ಟು ಇದನ್ನೇ ಲಂಚವನ್ನಾಾಗಿ ಸ್ವೀಕರಿಸಿ ಎಂದು ಗೋಗರೆಯುತ್ತಾಾನೆ. ಆದರೆ, ಆ ವಸ್ತುಗಳನ್ನು ಆ ಗುಮಾಸ್ತ ಎತ್ತಿಿಟ್ಟುಕೊಳ್ಳುತ್ತಾಾನೆ. ಸರಕಾರದ ಇಂತಹ ದೋಷಗಳನ್ನು ಸರಿಪಡಿಸಿಕೊಂಡು ಕಚೇರಿಗಳು ಸಾರ್ವಜನಿಕ ಸ್ನೇಹಿಯಾಗಿ ಸಕಾಲ ಗೊಂಡು, ತೆಲಂಗಾಣದಂತಹ ದುರ್ಘಟನೆಗಳು ಮತ್ತೆೆಲ್ಲೂ ಸಂಭವಿಸದಿರಲಿ.

Leave a Reply

Your email address will not be published. Required fields are marked *