Thursday, 19th September 2024

ಭಾರತದ ನಡೆ ಇತರ ದೇಶಗಳಿಗೂ ಮಾದರಿಯಾಗಲಿ

ದೇಶದಲ್ಲಿ ಕರೋನಾ ಇಷ್ಟೊಂದು ಪ್ರಮಾಣದಲ್ಲಿ ಹರಡುವ ಮೊದಲು ಕೆಲವು ರಾಷ್ಟ್ರಗಳಿಗೆ ಲಸಿಕೆ ಪೂರೈಸಿ ತನ್ನ ಸೇವಾ
ಮನೋಭಾವವನ್ನು ಪ್ರದರ್ಶಿಸಿತ್ತು ಭಾರತ.

ಸಂಕಷ್ಟಗಳಿಗೆ ಸಿಲುಕಿದ ರಾಷ್ಟ್ರಗಳಿಗೆ ಸಾಧ್ಯವಾದಷ್ಟು ನೆರವಾಗುತ್ತಲೇ ಬಂದಿದೆ ಈ ದೇಶ. ಇದೀಗ ಕರೋನಾ ವೈರಸ್ ಮೂಲ ವನ್ನು ಹುಡುಕುವ ಅಮೆರಿಕದ ಪ್ರಯತ್ನಕ್ಕೂ ಭಾರತ ಬೆಂಬಲ ಸೂಚಿಸಿದೆ. ಇದೊಂದು ಮಹತ್ವದ ನಡೆ. ಇತರ ದೇಶಗಳೂ
ಈ ನಡೆಯನ್ನು ಅನುಸರಿಸಬೇಕಿರುವುದು ಪ್ರಸ್ತುತ ಬಹುಮುಖ್ಯ. ಅನೇಕ ರಾಷ್ಟ್ರ ಗಳನ್ನು, ರಾಜ್ಯಗಳನ್ನು ಸಾವಿನ ಕೂಪಕ್ಕೆ
ದೂಡಲು ಕಾರಣವಾದ ಕೋವಿಡ್-19 ಸೋಂಕಿನ ಮೂಲ ಪತ್ತೆಯಾಗಬೇಕು.

ಪ್ರಾಕೃತಿಕವಾಗಿ ಅಲ್ಲದೆ ತಂತ್ರಜ್ಞಾನದ ಮೂಲಕ ಸೃಷ್ಟಿಸಿರುವ ವೈರಾಣು ಎಂಬುದು ಖಾತ್ರಿಯಾದರೆ ಸಂಬಂಧಿಸಿದ ದೇಶಕ್ಕೆ ತಕ್ಕ ಶಿಕ್ಷೆಯಾಗಬೇಕು. ಇಂಥದೊಂದು ಬೆಳವಣಿಗೆಗೆ ಅನೇಕ ರಾಷ್ಟ್ರಗಳ ಬೆಂಬಲ ಅಗತ್ಯ. ವಿಶ್ವದಾದ್ಯಂತ ಸಮಾನ ಮನಸ್ಕ ಪಾಲು ದಾರ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಬೈಡನ್ ಬೆಂಬಲ ಕೋರಿರುವ ಹಿನ್ನೆಲೆಯಲ್ಲಿ ಭಾರತ ಬೆಂಬಲ ಘೋಷಿಸಿದೆ. ಅನೇಕ ರಾಷ್ಟ್ರಗಳಲ್ಲಿ ವಿಜ್ಞಾನ ಕ್ಷೇತ್ರ ಮುಂದುವರಿದಿರುವಂತೆಯೇ ಅವುಗಳಿಂದ ಅಪಾಯಗಳೂ ಹೆಚ್ಚಾಗುತ್ತಿವೆ.

ಲಕ್ಷಾಂತರ ವೈರಸ್‌ಗಳಿದ್ದರೂ ಮೂವತ್ತು ಸಾವಿರಕ್ಕೂ ಅಧಿಕ ವೈರಸ್‌ಗಳ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆದಿವೆ ಹಾಗೂ ನಡೆಯುತ್ತಿವೆ. ಕರೋನಾ ಎಂಬ ವೈರಸ್ ಸೃಷ್ಟಿಸಿರುವ ದುರಂತವನ್ನು ಗಮನಿಸಿದಾಗ ವಿಜ್ಞಾನ ಕ್ಷೇತ್ರವೆಂಬುದು ಜನರ ಪ್ರಾಣ ಉಳಿಸುವುದಕ್ಕಿಂತ ಜನರ ಪ್ರಾಣಕ್ಕೆ ಸಂಚಕಾರ ತರುವಲ್ಲಿಯೇ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ. 2020ರ ದಶಕದಲ್ಲಿ ಅನೇಕ ರೀತಿಯ ವೈರಸ್‌ಗಳು ಬಹಳಷ್ಟು ಪ್ರಾಣಹಾನಿಗೆ ಕಾರಣವಾಗು ತ್ತಿವೆ.

ಇಂಥ ಸಂದರ್ಭದಲ್ಲಿ ನೈಸರ್ಗಿಕ ಸೋಂಕುಗಳಲ್ಲದೆ, ಕೃತಕ ಸೋಂಕುಗಳ ಬಗ್ಗೆ ಪರಿಶೀಲನೆ, ಕ್ರಮ ಬಹುಮುಖ್ಯ. ಇದಕ್ಕೆ ಅನೇಕ
ರಾಷ್ಟ್ರಗಳ ಒಗ್ಗೂಡಿಕೆ ಅವಶ್ಯಕ.

Leave a Reply

Your email address will not be published. Required fields are marked *