Thursday, 19th September 2024

ಮುನಿದ ವರುಣ: ಸರಕಾರಕ್ಕೆಲ್ಲಿ ಕರುಣೆ?

ಈ ಬಾರಿಯ ಹಿಂಗಾರು ಮಳೆ ತನ್ನ ಆರ್ಭಟವನ್ನು ಹೆಚ್ಚಿಿಸಿಕೊಳ್ಳುತ್ತಲೇ ಹೋಗುತ್ತಿಿದೆ. ಉತ್ತರ ಕರ್ನಾಟಕದಲ್ಲಿ ಚೇತರಿಕೆಯ ದಿನಗಳನ್ನು ನಿರೀಕ್ಷಿಸುತ್ತಿಿರುವಾಗಲೇ ಮತ್ತೆೆ ಮಳೆರಾಯನ ಪ್ರತಾಪ ಮುಂದವರಿಯುತ್ತಲೇ ಇದೆ. ದಶಕಗಳಿಗೆ ಒಂದೋ ಎರಡೋ ಬಾರಿಗೆ ಬಾಗಿನ ಸ್ವೀಕರಿಸುವ ಜಲಾಶಯಗಳು ಈ ಬಾರಿ ತುಂಬಿ ಹರಿಯುತ್ತಿಿದೆ. ಸಂತ್ರಸ್ತರಿಗೆ ಸೂರು ಕಟ್ಟುವ ಕಾರ್ಯಕ್ಕೂ ಮಳೆ ಅಡ್ಡಿಿಯಾಗುತ್ತಿಿರುವುದು ಶೋಚನೀಯ ಸಂಗತಿ. ಇತ್ತ ಬೆಂಗಳೂರಿನಲ್ಲಿ ಸೂರ್ಯ ದೇವನ ದರ್ಶನಕ್ಕೆೆ ಜನರು ಹಾತೊರೆಯುವಂತಾಗಿದೆ. ಮೊದಲೇ ಚಳಿಗಾಲದ ಆರಂಭ.

ಅದರ ಜತೆಗೆ ತುಂತುರು ಮಳೆಯ ಧಾರೆಗೆ ಬೆಂಗಳೂರಿನಲ್ಲೂ ವಾಸಿಗಳಿಗೆ ಮಲೆನಾಡಿನ ಅನುಭವವಾಗುತ್ತಿಿದೆ. ಇದರ ತೀವ್ರತೆಗೆ ಅನಾರೋಗ್ಯದ ಆತಂಕ ಒಂದೆಡೆಯಾದರೆ, ಬೆಳ್ಳಂಬೆಳಗ್ಗೆೆಯೇ ಸುರಿಯುವ ಮಳೆಗೆ ಶಾಲೆಗೆ ಮಕ್ಕಳು, ಕರ್ತವ್ಯಕ್ಕೆೆ ಸಾರ್ವಜನಿಕರು ಸರಿಯಾದ ಸಮಯಕ್ಕೆೆ ತಲುಪುವುದು ಕಷ್ಟಕರ ಕೆಲಸವಾಗಿದೆ.

ಸಮಾಧಾನದ ವಿಚಾರವೆಂದರೆ ಈ ಬಾರಿಯ ನಿರಂತರ ಮಳೆಯಿಂದ ಶಬ್ದ ಮತ್ತು ವಾಯು ಮಾಲಿನ್ಯವನ್ನು ಇಮ್ಮಡಿಗೊಳಿಸುವ ಪಟಾಕಿಗಳುನ್ನು ಠುಸ್ ಆಗುವಂತೆ ಮಾಡಿದೆ. ಇದೆಲ್ಲದರ ಮಧ್ಯೆೆ ಬೆಂಗಳೂರಿಗರಿಗೆ ತಲೆನೋವಾಗಿರುವುದು ರಸ್ತೆೆಗಳ ದುರ್ಗತಿ. ಕಳಪೆ ಡಾಂಬರ್‌ಗಳ ರಸ್ತೆೆಗಳು ಸತತ ಮಳೆಗೆ ಸೋತು ಮೈತುಂಬ ಗಾಯಗಳನ್ನು ಮಾಡಿಕೊಂಡು ಮಲಗಿಬಿಟ್ಟಿಿದೆ. ಆದರೆ, ಮಳೆಯಲ್ಲಿ ನೆನೆದು ಹೋಗುವ ಪಾದಚಾರಿಗಳು ದ್ವಿಿಚಕ್ರ ವಾಹನ ಸವಾರರಿಗೆ ಸದ್ಯ ಮನೆ ತಲುಪಿಕೊಂಡರೆ ಸಾಕೆನ್ನುವ ಸ್ಥಿಿತಿ ನಿರ್ಮಾಣವಾಗಿದೆ. ವಾಹನ ಸವಾರರಿಗೆ ರಸ್ತೆೆಗಳು ಪರಿಚಯವಿದ್ದರೆ ತೊಂದರೆ ಇಲ್ಲ. ಆದರೆ, ಅಪರಿಚಿತ ರಸ್ತೆೆಗಳಲ್ಲಿ ಹಾದುಹೋಗುವ ಸವಾರರಿಗೆ ಈ ಹಳ್ಳಕೊಳ್ಳಗೊಂಡ ರಸ್ತೆೆಗಳು ಮೃತ್ಯುಕೂಪವಾದರೆ ಆಶ್ಚರ್ಯವಿಲ್ಲ.

ಡಾಂಬರ್ ರಸ್ತೆೆಗಳು ಯಾವತ್ತಿಿದ್ದರೂ ಸಮ್ಮಿಿಶ್ರ ಸರಕಾರದಂತೆ. ಬಿಸಿಬಿಸಿ ಡಾಂಬರ್ ಹಾಸಿದಾಗ ಮೊದಲು ಬಹಳ ಹಿತ ಎನಿಸುತ್ತದೆ. ಆದರೆ, ಮುಂದೆ ಮಳೆ ಸುರಿದು ಹಳ್ಳಕೊಳ್ಳಗಳಾದರೆ ಶಾಪಗ್ರಸ್ತವಾಗುತ್ತದೆ. ಹೋಗಲಿ ನಗರದ ರಸ್ತೆೆಗಳನ್ನೆೆಲ್ಲಾಾ ವೈಟ್ ಟಾಪಿಂಗ್ ರಸ್ತೆೆಗಳನ್ನಾಾಗಿ ಪರಿವರ್ತಿಸೋಣವೆಂದರೆ ಅದರಲ್ಲಿ ಬರಿಯ ಬ್ಲಾಾಕ್ ಟ್ಯಾಾಪಿಂಗ್ ಎಂಬ ಭ್ರಷ್ಟಾಾಚಾರದ ಹಗರಣಗಳು ಹುಟ್ಟಿಿಕೊಂಡು ಸಾರ್ವಜನಿಕರ ತೆರಿಗೆ ಹಣ ನುಂಗಿ ಕೂರುತ್ತದೆ. ಇವೆಲ್ಲವನ್ನು ಮರೆಸುವಂತೆ ರಾಜ್ಯದಲ್ಲಿ ಡಿಕೆಶಿ ವೈಭವ, ಸಿದ್ದರಾಮಯ್ಯನವರ ವಿಡಿಯೋ, ಅತೃಪ್ತ ಶಾಸಕರ ಹಣೆಬರಹ, ಬಿಜೆಪಿಗೆ ಜೆಡಿಎಸ್‌ನ ಆಫರ್, ಕಾಂಗ್ರೆೆಸ್‌ನ ಪಾದಯಾತ್ರೆೆ, ಮರು ಚುನಾವಣೆಗಳು, ರಾಜ್ಯೋೋತ್ಸವ ಪ್ರಶಸ್ತಿಿಗಳಲ್ಲಿನ ನಾನಾ ದೋಷಗಳು ಇಂಥ ವಿಚಾರಗಳು ಹೆಚ್ಚು ಭಾರಿ ಚರ್ಚೆಗೆ ಒಳಗಾಗಿವೆ. ಒಟ್ಟಿಿನಲ್ಲಿ ಮಹಾಪ್ರಜೆಗಳು ಎಲ್ಲವನ್ನೂ ಅನುಭವಿಸಿ ನೋಡಿಕೊಂಡು ಹೋಗುವ ಸಂದರ್ಭ ಬಂದಿದೆ. ಅಧಿಕಾರದಲ್ಲಿರುವವರು ನೆರೆ ಪೀಡಿತರ ಸಂಕಷ್ಟದತ್ತ ಗಮನ ಹರಿಸಿ ಅವರ ಬವಣೆ ನೀಗಿಸಬೇಕು. ಪ್ರತಿಪಕ್ಷಗಳೂ ಕೂಡ ರಾಜಕೀಯ ಮಾಡದೆ ಸಕಾರಾತ್ಮಕ ಸಹಕಾರ ನೀಡಬೇಕು.

Leave a Reply

Your email address will not be published. Required fields are marked *