Saturday, 7th September 2024

ಸಕಾರಾತ್ಮಕ ಹೆಜ್ಜೆಗಳು

ಅಯೋಧ್ಯೆೆ ವಿವಾದವನ್ನು ಸುಸೂತ್ರವಾಗಿ ಮುಕ್ತಾಾಯಗೊಳಿಸಿದ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಾಯಮೂರ್ತಿಗಳು ಸೇರಿದಂತೆ ಐವರಿದ್ದ ಪೀಠದ ತೀರ್ಪಿಗೆ ಎಲ್ಲೆೆಡೆಯಿಂದ ಸಂತಸದ ಪ್ರತಿಕ್ರಿಿಯೆಗಳು ಬರುತ್ತಿಿವೆ. ಆದರೆ ಎಲ್ಲರನ್ನೂ ತೃಪ್ತಿಿಪಡಿಸಲು ಆ ಪರಮಾತ್ಮನಿಗೂ ಆಗುವುದಿಲ್ಲ ಎಂಬ ಮಾತು ಒಪ್ಪತಕ್ಕದ್ದೇ. ಅದೇ ರೀತಿ ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ವಿಷಯದಲ್ಲೂ ಒಂದು ಸಮುದಾಯದ ಕೆಲವು ಧಾರ್ಮಿಕ ಮುಖಂಡರು ಸ್ವಲ್ಪ ಬೇಸರ ವ್ಯಕ್ತಪಡಿಸಿದ್ದಾಾರೆ. ಪರ್ಯಾಾಯವಾಗಿ ಐದು ಎಕರೆಯಲ್ಲ 500 ಎಕರೆ ಜಾಗ ನೀಡಿದರೂ ನಮಗೆ ಸಮಾಧಾನ ಆಗಲು ಸಾಧ್ಯವಿಲ್ಲ ಎಂದು ಒಬ್ಬರು ಹೇಳಿದ್ದಾಾರೆ, ಸರ್ವೋಚ್ಚ ನ್ಯಾಾಯಾಲಯ ನಿಜಕ್ಕೂ ಸುಪ್ರೀಂ. ಆದರೆ ದೋಷಾತೀತವಲ್ಲ. ತೀರ್ಪು ನಮಗೆ ಸಮಾಧಾನ ತಂದಿಲ್ಲ ಎಂಬುದು ಮುಸ್ಲಿಿಂ ರಾಜಕಾರಣಿಯೊಬ್ಬರ ಅಭಿಪ್ರಾಾಯ. ಏನೇ ಆಗಲಿ ಹಲವು ವರ್ಷಗಳಿಂದ ‘ತಲೆನೋವಾಗಿದ್ದ’ ವಿವಾದ ಸುಖಾಂತ್ಯ ಕಂಡಿದೆ ಎಂಬ ಸಮಾಧಾನದ ಮಾತು ವ್ಯಾಾಪಕವಾಗಿ ಕೇಳಿಬಂದಿದೆ. ಇನ್ನು ಹೆಚ್ಚಿಿನ ಜವಾಬ್ದಾಾರಿ ಕೇಂದ್ರ ಸರಕಾರದ ಹೆಗಲಿಗೇರಿದೆ.

ಇದನ್ನು ಮನಗಂಡೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಎರಡೂ ಧರ್ಮದ ಪ್ರಮುಖ ಮುಖಂಡರ ಸಭೆ ನಡೆಸಿದ್ದು. ಧಾರ್ಮಿಕ ಮುಖಂಡರ ಪ್ರಭಾವ ಆಯಾ ಸಮುದಾಯದ ಮೇಲೆ ಪ್ರಖರವಾಗಿರುತ್ತದೆ ಎಂದು ಭಾವಿಸಿಯೇ ತೀರ್ಪು ಹೊರಬಿದ್ದ ಎರಡನೇ ದಿನವೇ ಈ ಸಭೆ ಆಯೋಜನೆಗೊಂಡಿದ್ದು. ದೋವಲ್ ಮನೆಯಲ್ಲಿ ನಡೆದ ನಾಲ್ಕು ತಾಸುಗಳ ಈ ಸಭೆಯಲ್ಲಿ, ದೇಶದಲ್ಲಿ ಶಾಂತಿ-ಸೌಹಾರ್ದತೆ ಕಾಪಾಡಲು ಸಕಲ ರೀತಿಯ ಬೆಂಬಲ ನೀಡುವುದಾಗಿ ಮುಖಂಡರು ಹೇಳಿದ್ದು ಕೇಂದ್ರ ಸರಕಾರಕ್ಕೆೆ ನೆಮ್ಮದಿ ತಂದಿದೆ. ಹಿಂದೂ- ಮುಸ್ಲಿಿಂ ಸಮುದಾಯಕ್ಕೆೆ ಸೇರಿದ್ದ 18 ಧಾರ್ಮಿಕ ಮುಖಂಡರು ಈ ಸಭೆಯಲ್ಲಿ ಪಾಲ್ಗೊೊಂಡಿದ್ದರು. ಅಯೋಧ್ಯೆೆ ವಿಷಯಕ್ಕೆೆ ಸಂಬಂಧಿಸಿದಂತೆ ತಮ್ಮ, ತಮ್ಮ ಸಮುದಾಯದವರಿಗೆ ಮನದಟ್ಟು ಮಾಡಬೇಕೆಂಬ ಮನವಿಯೂ ದೋವಲ್ ಅವರಿಂದ ಬಂದಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರವಿರೋಧಿ ಶಕ್ತಿಿಗಳು ಪರಿಸ್ಥಿಿತಿಯ ದುರ್ಲಾಭ ಪಡೆದು ಗಲಭೆ ಸೃಷ್ಟಿಿಸಿ ಶಾಂತಿ ಕದಡದಂತೆ ಎಚ್ಚರವಹಿಸಬೇಕಾಗಿದೆ ಎಂಬ ರಾಷ್ಟ್ರೀಯ ಭದ್ರತಾ ಸಲಹೆಗಾರರ ಕಳಕಳಿ ಸಮಯೋಚಿತವಾಗಿದೆ.

ತೀರ್ಪಿಗೆ ಮೊದಲು ಸಾಕಷ್ಟು ಮುನ್ನೆೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ತೀರ್ಪು ಏನೇ ಬರಲಿ ಎಲ್ಲರೂ ಅದನ್ನು ಮನಃಪೂರ್ವಕವಾಗಿ ತೆಗೆದುಕೊಳ್ಳಬೇಕು. ವಿಜೃಂಭಣೆ ಬೇಡ. ಎರಡೂ ಸಮುದಾಯದವರು ಶಾಂತಿ- ಸಮಾಧಾನದಿಂದ ಇದ್ದು, ಭಾರತದಲ್ಲಿ ಏಕತೆ, ಅಖಂಡತೆ ಇದೆ ಎಂದು ಹೊರಗಿನ ಪ್ರಪಂಚಕ್ಕೆೆ ತೋರಿಸಬೇಕು ಎಂಬ ಮನವಿಯೂ ಸಾಕಷ್ಟು ಫಲ ನೀಡಿದೆ. ಹಿಂದಿನ ಕಹಿ ಘಟನೆಗಳ ಪರಿಣಾಮ ಅರಿತ ಸರಕಾರ ಸಕಾರಾತ್ಮಕ ಹೆಜ್ಜೆೆಗಳನ್ನು ಇಡುತ್ತಿಿರುವುದನ್ನು ಮೆಚ್ಚಲೇಬೇಕು. ದೇವಸ್ಥಾಾನ ನಿರ್ಮಾಣಕ್ಕೆೆ ಎಲ್ಲ ಮುಸ್ಲಿಿಮರು, ಅದೇ ರೀತಿ ಮಸೀದಿ ನಿರ್ಮಿಸುವಲ್ಲಿ ಎಲ್ಲ ಹಿಂದೂಗಳು ಕೊಡುಗೆ ನೀಡಬೇಕು. ಇಂಥ ಪ್ರಾಾಯೋಗಿಕ ಹೆಜ್ಜೆೆ ಇಡಬೇಕು ಎಂದು ಬಾಬಾ ರಾಂದೇವ್ ಸಭೆಯಲ್ಲಿ ಅಭಿಪ್ರಾಾಯ ವ್ಯಕ್ತಪಡಿಸಿದ್ದು ನ್ಯಾಾಯೋಚಿತವಾದದ್ದು. ತೀರ್ಪು ಬಂದ ದಿನ ನ್ಯಾಾಯಾಲಯದ ಮುಂಭಾದಲ್ಲಿ ಹಿಂದೂ ಹಾಗೂ ಮುಸ್ಲಿಿಂನ ವ್ಯಕ್ತಿಿಯಿಬ್ಬರು ಆಲಿಂಗನ ಮಾಡಿಕೊಂಡು ಸಂತಸಪಟ್ಟಿಿದ್ದು ಸಾಂಕೇತಿಕವಾದದು. ದೇಶದ ಎರಡೂ ಸಮುದಾಯದವರು ಅಣ್ಣ-ತಮ್ಮಂದಿರಂತೆ ಜೀವನ ಸಾಗಿಸಿ, ನವ ಭಾರತ ನಿರ್ಮಾಣಕ್ಕೆೆ ಮುಂದಾದರೆ ಅದಕ್ಕಿಿಂತ ಸಂತೋಷ ಇನ್ನೇನಿದೆ.

Leave a Reply

Your email address will not be published. Required fields are marked *

error: Content is protected !!