Saturday, 7th September 2024

ಉಗ್ರರ ನಿಗ್ರಹಕ್ಕೆ ಇನ್ನಷ್ಟು ಕಠಿಣ ಕ್ರಮ ಅಗತ್ಯ

ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಸೇನಾವಾಹನದ ಮೇಲೆ ಸೋಮವಾರ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ನಾಲ್ವರು ಯೋಧರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

ಕಳೆದ ನಾಲ್ಕು ವಾರಗಳಲ್ಲಿ ಕಥುವಾದಲ್ಲಿ ನಡೆದ ಎರಡನೇ ಭಯೋತ್ಪಾದಕ ದಾಳಿ ಇದಾಗಿದ್ದು, ಜೂನ್ ೧೨ ಮತ್ತು ೧೩ರಂದು ಸೇನಾ ಕಾರ್ಯಾಚರಣೆ
ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಸಿಆರ್‌ಪಿಎಫ್ ಯೋಧ ಮತ್ತು ಇಬ್ಬರು ಭಯೋತ್ಪಾದಕರು ಮೃತಪಟ್ಟಿದ್ದರು. ೨೦೨೧ರ ಆರಂಭದಿಂದ ಜಮ್ಮು ಪ್ರದೇಶದಲ್ಲಿ ೨೯ ಭಯೋತ್ಪಾದಕ ದಾಳಿಗಳು ನಡೆದಿವೆ. ಇವುಗಳಲ್ಲಿ ನಾಗರಿಕರ ಸಾವಿನ ಪ್ರಮಾಣವೂ ಹೆಚ್ಚಾಗತೊಡಗಿದೆ. ೨೦೨೩ರಲ್ಲಿ ನಡೆದ ದಾಳಿಗಳಲ್ಲಿ ೧೨ ನಾಗರಿಕರು ಸಾವನ್ನಪ್ಪಿದರು. ಆದರೆ, ೨೦೨೪ರ ಮೊದಲ ಆರು ತಿಂಗಳ ಅವಧಿಯ ೧೭ ನಾಗರಿಕರು ಸಾವಿಗೀಡಾಗಿದ್ದಾರೆ.

ಆಗ ೨೦೧೯ರಲ್ಲಿ ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತತೆಯನ್ನು ರದ್ದುಪಡಿಸಿದ ಬಳಿಕ, ಮೋದಿ ಸರಕಾರ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳ ವಿರುದ್ಧದ ತನ್ನ ಕಠಿಣ ಕ್ರಮಗಳನ್ನು ಇನ್ನಷ್ಟು ತೀವ್ರಗೊಳಿಸಿದ ಪರಿಣಾಮವೇ ಭಯೋತ್ಪಾದಕರು ತಮ್ಮ ಚಟುವಟಿಕೆ ಗಳನ್ನು ಜಮ್ಮುವಿಗೆ ವರ್ಗಾಯಿಸಿದ್ದಾರೆ. ಕಳೆದ ಹದಿನೈದು ವರ್ಷಗಳ ಅವಧಿಯಿಂದ ಭಯೋತ್ಪಾದನಾ ಚಟುವಟಿಕೆಗಳಿಂದ ಮುಕ್ತವಾಗಿದ್ದ ಜಮ್ಮುವಿನಲ್ಲಿ ೨೦೨೧ರ ಬಳಿಕ ಮತ್ತೆ ಉಗ್ರ ದಾಳಿಗಳು ಆರಂಭಗೊಂಡವು.

ಕಾಶ್ಮೀರ ಕಣಿವೆಯಲ್ಲಿ ಬಹುಪಾಲು ಮುಸ್ಲಿಂ ಜನಸಂಖ್ಯೆ ಇದ್ದರೆ (೯೬.೪%), ಜಮ್ಮು ಹೆಚ್ಚು ವೈವಿಧ್ಯಮಯ ಜನಸಂಖ್ಯೆ ಹೊಂದಿದೆ. ಒಟ್ಟಾರೆಯಾಗಿ
ಜಮ್ಮುವಿನಲ್ಲಿ ಹಿಂದೂಗಳ ಸಂಖ್ಯೆ ೬೨.೫% ಇದ್ದರೂ, ಹಿಂದೂ ಮುಸ್ಲಿಮರ ಜನಸಂಖ್ಯಾ ಅನುಪಾತ ಜಿಯಿಂದ ಜಿಗೆ ಬದಲಾಗುತ್ತದೆ. ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಯುವ ಯಾವುದೇ ಭಯೋತ್ಪಾದಕ ದಾಳಿಗಳು ಹಿಂದೂ ಮುಸ್ಲಿಂ ಮತೀಯ ಉದ್ವಿಗ್ನತೆ ಮತ್ತು ಹಿಂಸಾಚಾರಗಳಿಗೆ ಹಾದಿಮಾಡಿಕೊಡುವ ಅಪಾಯಗಳಿವೆ. ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗಳು ಇನ್ನೂ ಹೆಚ್ಚಾಗಬಹುದು. ಆದ್ದರಿಂದ ಭಯೋತ್ಪಾದನೆ ನಿಗ್ರಹಕ್ಕೆ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇದಾದ ಅಗತ್ಯವಿದೆ. ಯೋಧರ ಸಾವಿಗೆ ಪ್ರತಿಕಾರ ತೀರಿಸಲೇ ಬೇಕಿದೆ.

Leave a Reply

Your email address will not be published. Required fields are marked *

error: Content is protected !!