ತುಮಕೂರು: ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ 2,63,505 ಮೌಲ್ಯದ 7 ದ್ವಿಚಕ್ರ ವಾಹನಗಳನ್ನು ಕ್ಯಾತ್ಸಂದ್ರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಮಂಚಕಲ್ ಕುಪ್ಪೆ ನಿವಾಸಿ ಸುನಿಲ್ ಬಂಧಿತ ಆರೋಪಿ.
ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ್ ಕುಮಾರ್ , ಸಿಬ್ಬಂದಿಗಳು ಮೇ.11ರಂದು ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊ.ನಂ:124/2024 ಕಲಂ:379 ಐಪಿಸಿ ಪ್ರಕರಣದಲ್ಲಿ ಕಳುವಾಗಿದ್ದ KA-06-HS-2235 ನೇ ದ್ವಿಚಕ್ರ ವಾಹನ ದೊಂದಿಗೆ ಆರೋಪಿ ಸುನೀಲ್ ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳ್ಳತನ ಪ್ರಕರಣ ಪತ್ತೆಯಾಗಿದೆ.
ಕ್ಯಾತ್ಸಂದ್ರ ಪೊಲೀಸ್ ಠಾಣೆಯ-02, ಕೆಸ್ತೂರು ಪೊಲೀಸ್ ಠಾಣೆಯ-01, ಜಯನಗರ ಪೊಲೀಸ್ ಠಾಣೆಯ-01, ಕೋರಾ ಪೊಲೀಸ್ ಠಾಣೆಯ-01, ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ-01 ಹೆಬ್ಬೂರು ಪೊಲೀಸ್ ಠಾಣೆಯ-01 ಸೇರಿ ಒಟ್ಟು 2,63,505 ಮೌಲ್ಯದ 7 ದ್ವಿ ಚಕ್ರವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪತ್ತೆ ಕಾರ್ಯದಲ್ಲಿ ಡಿವೈಎಸ್ಪಿ ಚಂದ್ರಶೇಖರ್, ಸಿಪಿಐ ರಾಮಪ್ರಸಾದ್, ಪಿಎಸ್ಐ ಚೇತನ್ ಕುಮಾರ್, ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಮಂಜುನಾಥ್, ಗಿರೀಶ್, ಶರಣಪ್ಪ, ಶಶಿಧರ ಮತ್ತು ಸಾಗರ್ ರಾಥೋಡ್ ಇವರುಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಅಭಿನಂದಿಸಿದ್ದಾರೆ.