Thursday, 31st October 2024

Ben Stokes: ಕ್ರಿಕೆಟಿಗ ಸ್ಟೋಕ್ಸ್‌ ಮನೆಯಲ್ಲಿ ಭಾರಿ ಕಳ್ಳತನ; ಅಪಾರ ಮೌಲ್ಯದ ನಗನಗದು ಕಳವು

ಲಂಡನ್‌: ಇಂಗ್ಲೆಂಡ್‌ ಟೆಸ್ಟ್‌ ತಂಡದ ನಾಯಕ ಬೆನ್‌ ಸ್ಟೋಕ್ಸ್‌(Ben Stokes) ಅವರ ಮನೆಯಿಂದ ಅಪಾರ ಪ್ರಮಾಣದ ನಗನಗದು ಕಳ್ಳರ ಪಾಲಾಗಿದೆ ಎಂದು ಸ್ಟೋಕ್ಸ್‌ ತಮ್ಮ ಟ್ವಿಟರ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈಶಾನ್ಯ ಇಂಗ್ಲೆಂಡ್‌ನ ಕ್ಯಾಸಲ್ ಈಡನ್ ಪ್ರದೇಶದಲ್ಲಿರುವ ಮನೆಗೆ ಮುಸುಕುದಾರಿ ದರೋಡೆಕೋರರು ನುಗ್ಗಿ ಮನೆಯಲ್ಲಿದ್ದ ಆಭರಣಗಳು, ಬೆಲೆಬಾಳುವ ವಸ್ತುಗಳು ಮತ್ತು ಭಾವನಾತ್ಮಕ ಮೌಲ್ಯದ ಅನೇಕ ವೈಯಕ್ತಿಕ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಸ್ಟೋಕ್ಸ್ ತಿಳಿಸಿದ್ದಾರೆ. ಪತ್ನಿ ಮತ್ತು ಇಬ್ಬರು ಚಿಕ್ಕ ಮಕ್ಕಳು ಮನೆಯೊಳಗೆ ಇದ್ದಾಗ ಕಳ್ಳರು ಅಪರಾಧವನ್ನು ನಡೆಸಿದ್ದಾರೆ ಎಂದು ಸ್ಟೋಕ್ಸ್ ಬಹಿರಂಗಪಡಿಸಿದ್ದಾರೆ.

ಈ ಕಳ್ಳತನ ಪ್ರಕರಣ ಅಕ್ಟೋಬರ್‌ 17ರಂದು ನಡೆದಿತ್ತು. ಈ ವೇಳೆ ಸ್ಟೋಕ್ಸ್‌ ಟೆಸ್ಟ್‌ ಸರಣಿಯ ಭಾಗವಾಗಿ ಪಾಕಿಸ್ತಾನದಲ್ಲಿದ್ದರು. ತವರಿಗೆ ಮರಳಿದ ಬಳಿಕ ಸ್ಟೋಕ್ಸ್‌ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಪಕರಣ ದಾಖಿಲಿಸಲಾಗಿದ್ದು ಪೊಲೀಸ್‌ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ IND vs NZ 3rd Test: ಮುಂಬೈ ಟೆಸ್ಟ್‌ಗೆ ಸ್ಪರ್ಧಾತ್ಮಕ ಪಿಚ್‌

https://twitter.com/benstokes38/status/1851673500962226224
ವಂಚನೆ ಪ್ರಕರಣ; ಗಂಭೀರ್‌ ವಿರುದ್ಧ ತನಿಖೆಗೆ ಆದೇಶ

ನವದೆಹಲಿ: ಭಾರತ ಪುರುಷರ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌(Gautam Gambhir) ಸಂಕಷ್ಟವೊಂದರಲ್ಲಿ ಸಿಲುಕಿದ್ದಾರೆ. ರಿಯಲ್ ಎಸ್ಟೇಟ್ ವಂಚನೆ ಪ್ರಕರಣದ(Cheating Case)ಲ್ಲಿಗಂಭೀರ್ ವಿರುದ್ಧ ಹೊಸ ತನಿಖೆಗೆ ದೆಹಲಿ ನ್ಯಾಯಾಲಯವು(Delhi Court) ಆದೇಶ ನೀಡಿದೆ. ಫ್ಲಾಟ್ ಖರೀದಿದಾರರಿಗೆ ವಂಚನೆ ಮಾಡಿದ ಪ್ರಕರಣ ಇದಾಗಿದೆ. ಗಂಭೀರ್‌ ಅಂಬಾಸಿಡರ್‌ ಪಾತ್ರವನ್ನು ಮೀರಿ ಕಂಪೆನಿಯೊಂದಿಗೆ ಹಣಕಾಸಿನ ವಹಿವಾಟು ನಡೆಸಿದ್ದಾರೆ ಎನ್ನಲಾಗಿದೆ.

ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ಮ್ಯಾಜಿಸ್ಟ್ರೀಯಲ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ್ದರು. ಆರೋಪಗಳು ಗೌತಮ್ ಗಂಭೀರ್ ಪಾತ್ರದ ಬಗ್ಗೆ ಹೆಚ್ಚಿನ ತನಿಖೆಗೆ ಅರ್ಹವಾಗಿವೆ ಎಂದು ನ್ಯಾಯಾಧೀಶ ಗೋಗ್ನೆ ತಮ್ಮ ಅಕ್ಟೋಬರ್ 29 ರ ಆದೇಶದಲ್ಲಿ ಬರೆದಿದ್ದಾರೆ. ರಿಯಲ್ ಎಸ್ಟೇಟ್ ಸಂಸ್ಥೆಗಳಾದ ರುದ್ರಾ ಬಿಲ್ಡ್‌ವೆಲ್ ರಿಯಾಲ್ಟಿ ಪ್ರೈವೇಟ್ ಲಿಮಿಟೆಡ್, ಎಚ್ ಆರ್ ಇನ್‌ಫ್ರಾಸಿಟಿ ಪ್ರೈವೇಟ್ ಲಿಮಿಟೆಡ್, ಯುಎಂ ಆರ್ಕಿಟೆಕ್ಚರ್ಸ್ ಮತ್ತು ಗುತ್ತಿಗೆದಾರರು, ಕಂಪನಿಗಳ ಜಂಟಿ ಉದ್ಯಮದ ನಿರ್ದೇಶಕ ಮತ್ತು ಬ್ರಾಂಡ್ ಅಂಬಾಸಿಡರ್ ಆಗಿದ್ದ ಗಂಭೀರ್ ವಿರುದ್ಧ ಆಪಾದಿತ ವಂಚನೆ ಪ್ರಕರಣವನ್ನು ದಾಖಲಿಸಲಾಗಿದೆ.