ಬೆಂಗಳೂರು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಶ್ರೀ ಬಾಲಾಜಿ ವಿದ್ಯಾಪೀಠ ಪಾಂಡಿಚರಿ ಇವರ ಸಹಯೋಗದಲ್ಲಿ ‘ಮಾನಸಿಕ ಸ್ವಾಸ್ಥ್ಯಕ್ಕೆ ಯೋಗ’ ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. (Bengaluru News) ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ಡಾ. ವೈಷ್ಣವಿ ಕೆ. ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ಡಾ. ವೈಷ್ಣವಿ ಕೆ. ಅವರು, ವಿಶ್ವವಿದ್ಯಾಲಯವು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಅವರು ಶ್ಲಾಘಿಸಿದರು.
ಈ ಸುದ್ದಿಯನ್ನೂ ಓದಿ | Bengaluru News: ಬೆಂಗಳೂರಿನ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ; 10 ಲಕ್ಷ ರೂ. ಬಹುಮಾನ ಗೆಲ್ಲಿ!
ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಇ. ಸುಧೀಂದ್ರ, ಶ್ರೀ ಬಾಲಾಜಿ ವಿದ್ಯಾಪೀಠದ ಪ್ರೊ.ಡಿ.ಆರ್. ಬಾಲಾಜಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಕೆಎಸ್‌ಯು ಉಪಕುಲಪತಿ ಪ್ರೊ.ಎಸ್. ಅಹಲ್ಯಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು.
ಈ ಸುದ್ದಿಯನ್ನೂ ಓದಿ | Gruhalakshmi Scheme: ‘ಗೃಹಲಕ್ಷ್ಮೀ’ ಹಣದಿಂದ ಹೊಲಿಗೆ ಯಂತ್ರ ಖರೀದಿಸಿ ಮೊಮ್ಮಕ್ಕಳ ಬದುಕು ರೂಪಿಸಿದ ಮಹಿಳೆ!
ಈ ಸಂದರ್ಭದಲ್ಲಿ ವಿವಿಯ ಡಾ. ಗಿರೀಶ್ಚಂದ್ರ, ಡಾ. ಪಾಲಯ್ಯ, ಡಾ. ಶಿವಾನಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.