ಪಾಲಕ್ಕಾಡ್: ಮದರಸಾ ಶಿಕ್ಷಕಿಯೊಬ್ಬರು ತನ್ನ ಆರು ವರ್ಷದ ಮಗನ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಇಂತಹ ಆಘಾತಕಾರಿ ಘಟನೆ ಕೇರಳ ರಾಜ್ಯದ ಪಾಲಕ್ಕಾಡ್ ಎಂಬಲ್ಲಿ ನಡೆದಿದೆ.
‘ಅಲ್ಲಾಹ(ದೇವರು)ನನ್ನು ಮೆಚ್ಚಿಸಲು’ ಗರ್ಭಿಣಿ ತನ್ನ ಆರು ವರ್ಷದ ಮಗನನ್ನು ಅರ್ಪಣೆ ಮಾಡಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.
ಕೃತ್ಯದ ನಂತರ, ಮಹಿಳೆ ಅಪರಾಧದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಸಂಬಂಧಿಕರು ಮತ್ತು ನೆರೆಹೊರೆಯವರನ್ನು ಈ ಘಟನೆ ಬೆಚ್ಚಿಬೀಳಿಸಿದೆ. ಪ್ರಕರಣ ಸಂಬಂಧ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಸೋಮವಾರ 4 ಗಂಟೆಗೆ ಘಟನೆ ನಡೆದಿದೆ. ಮಹಿಳೆಯ ಮೂವರು ಗಂಡು ಮಕ್ಕಳಲ್ಲಿ ಮೃತ ಕಿರಿಯ ಮಗನಾಗಿದ್ದು ತಾಯಿ ಯೊಂದಿಗೆ ಮಲಗಿತ್ತು. ಬೆಳಗ್ಗೆ ಮಗುವನ್ನು ಎಬ್ಬಿಸಿದ ವಾಶ್ ರೂಂಗೆ ಕರೆದೊಯ್ದು ಹೋಗಿ ಕೈಕಾಲುಗಳನ್ನು ಕಟ್ಟಿ ಹಾಕಿ ಕತ್ತು ಸೀಳಿ ಕೊಲೆ ಮಾಡಿದ್ದಾಳೆ.
ಗಲ್ಫ್ ಹಿಂದಿರುಗಿದ ಪತಿ ಇನ್ನಿಬ್ಬರು ಗಂಡು ಮಕ್ಕಳೊಂದಿಗೆ ಮತ್ತೊಂದು ಕೋಣೆಯಲ್ಲಿ ಮಲಗಿದ್ದರು ಎನ್ನಲಾಗಿದೆ. ಆಶ್ಚರ್ಯಕರವೆಂದರೆ, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸುವವರೆಗೂ, ಶಿಕ್ಷಕಿಯ ಪತಿ ಹಾಗೂ ಇನ್ನಿಬ್ಬರು ಮಕ್ಕಳಿಗೆ ಘಟನೆ ಕುರಿತು ಅರಿವಿರಲಿಲ್ಲವೆನ್ನಲಾಗಿದೆ.
ಹೆಚ್ಚಿನ ವಿಚಾರಣೆಯಲ್ಲಿ, ಶಿಕ್ಷಕಿ ತಾಯಿ ತಮ್ಮ ಮಕ್ಕಳ ಆರೈಕೆಯನ್ನು ಉತ್ತಮವಾಗಿಯೇ ಮಾಡುತ್ತಿದ್ದರು ಎಂದು ಹೇಳಲಾಗಿದೆ.