ಏಕಿಷ್ಟು ಹೃದಯ ಸ್ತಂಭನ ?
ಪೋಷಕರು ತಮಗೆ ಸುಲಭವಾಗಲಿ ಎಂದು ಮ್ಯಾಗಿ ನೂಡಲ್ಸ್, ಪಾಸ್ತಾ, ಟೇಸ್ಟ್ ಪೌಡರ್ ಮುಂತಾದವುಗಳನ್ನು ಅಡುಗೆಯಲ್ಲಿ ಬಳಸುವುದು ಸರ್ವೇ ಸಾಮಾನ್ಯ. ಹೊರಗೆ ಹೋದ ಲ್ಲಿ ಗೋಬಿ ಮಂಚೂರಿ, ಚುರುಮುರಿ, ಪಾನಿಪೂರಿ, ಮಸಾಲ ಪೂರಿ ಎಲ್ಲವನ್ನೂ ಹಿರಿಯರು ಮಾತ್ರ ವಲ್ಲದೆ ಮಕ್ಕಳು ಕೂಡಾ ನಿರಂತರವಾಗಿ ತಿನ್ನು ಹೋಗುವ ಕಾರ್ಯ ಸದ್ದಿಲ್ಲದೆ ನಿರಂತರವಾಗಿ ನಡೆದೇ ಇದೆ


ಹೌದು, ಇತ್ತೀಚೆಗೆ ಹಲವಾರು ಜನರು ನಮ್ಮ ಕಣ್ಣೆದುರೇ ಇವತ್ತು ಇದ್ದವರು ನಾಳೆ ಹೃದಯ ಸ್ತಂಭನದಿಂದ ಇಹಲೋಕ ತ್ಯಜಿಸಿದ ಸುದ್ದಿಗಳನ್ನು ಕೇಳಿ ಮನನೊಂದು ಹೋಗುತ್ತದೆ. ಇದಕ್ಕೆ ಕೆಲವರು ಕೋವಿಡ್ ಇಂಜೆಕ್ಷನ್ ಪಡೆದ ಬಳಿಕ ಹೀಗೆ ಆಗುತ್ತಿದೆ ಎನ್ನುತ್ತಾರೆ. ಆದರೆ ಅದು ಸರಿಯೋ, ತಪ್ಪೋ ತಿಳಿಯದು. ಅದರ ಅಡ್ಡ ಪರಿಣಾಮ ಏನಾದರೂ ಹಾಗೆ ಇದೆಯೇ ಎಂದು ವೈದ್ಯರೇ ಹೇಳಬೇಕಷ್ಟೇ. ಆದರೆ ವೈಜ್ಞಾನಿಕ ದೃಷ್ಟಿಯಲ್ಲಿ, ಸಾಮಾನ್ಯ ಮಾನವರಾಗಿ ನಾವು ನಿತ್ಯ ಜೀವನವನ್ನು ಗಮನಿಸಿದಾಗ ಆಟ ಆಡುತ್ತಾ ಇರುವ ಮಗು ಆಟದ ಮೈದಾನದಲ್ಲಿ, ಓದುತ್ತಿದ್ದ ಮಗು ತರಗತಿಯಲ್ಲಿ ಹೀಗೆ ಆದಾಗ ಇಂತಹ ದುರ್ಘಟನೆ ಗಳು ಕೋವಿಡ್ ಚುಚ್ಚುಮದ್ದಿನಿಂದ ಆಗುತ್ತಿಲ್ಲ ಎಂದೂ ಸಮಾಧಾನ ಪಡೆಯುತ್ತಾರೆ.
ಇದನ್ನೂ ಓದಿ: Dr Sadhanashree Column: ಆಂತರಿಕ ರಿಪುಗಳು ಅರಿಷದ್ವರ್ಗವಾದರೆ, ಬಾಹ್ಯರಿಪುಗಳಾರು ಬಲ್ಲಿರಾ ?
ಹಾಗಾದರೆ ಮತ್ತೇಕೆ ಹಾಗಾಯಿತು, ವಿಮರ್ಶೆ ಬಂದು ಆಹಾರದಲ್ಲಿ ನಿಲ್ಲುತ್ತದೆ. ಪೋಷಕರು ತಮಗೆ ಸುಲಭವಾಗಲಿ ಎಂದು ಮ್ಯಾಗಿ ನೂಡಲ್ಸ್, ಪಾಸ್ತಾ, ಟೇಸ್ಟ್ ಪೌಡರ್ ಮುಂತಾದವು ಗಳನ್ನು ಅಡುಗೆಯಲ್ಲಿ ಬಳಸುವುದು ಸರ್ವೇ ಸಾಮಾನ್ಯ. ಹೊರಗೆ ಹೋದ ಲ್ಲಿ ಗೋಬಿ ಮಂಚೂರಿ, ಚುರುಮುರಿ, ಪಾನಿಪೂರಿ, ಮಸಾಲ ಪೂರಿ ಎಲ್ಲವನ್ನೂ ಹಿರಿಯರು ಮಾತ್ರವಲ್ಲದೆ ಮಕ್ಕಳು ಕೂಡಾ ನಿರಂತರವಾಗಿ ತಿನ್ನು ಹೋಗುವ ಕಾರ್ಯ ಸದ್ದಿಲ್ಲದೆ ನಿರಂತರವಾಗಿ ನಡೆದೇ ಇದೆ.
ಇನ್ನು ಸಂಜೆ ಮನೆಗೆ ಬರುವಾಗ ಪೋಷಕರು, ಬಂಧುಗಳು ಗಾಳಿ ತುಂಬಿದ ಲಕೋಟೆ ಒಳಗಿರುವ ಬಟಾಟೆ ಚಿಪ್ಸ್ ಅನ್ನು ತಂದು ಕೊಡುತ್ತಾರೆ. ಚೀಪ್ ಅಂಡ್ ಬೆಸ್ಟ್, ಟೇಸ್ಟಿ ಎಂದೇ ಮಕ್ಕಳು ಖುಷಿಯಿಂದ ತಿನ್ನುತ್ತಾರೆ. ಇನ್ನು ಬಣ್ಣ ಬಣ್ಣದ ತಂಪು, ಸಿಹಿ ಪಾನೀಯ ಸದ್ದಿಲ್ಲದೆ ಮಕ್ಕಳ, ಹಿರಿಯರ ಹೊಟ್ಟೆ ಸೇರುತ್ತಿದೆ. ಈ ಎಲ್ಲಾ ಆಹಾರ ವಸ್ತುಗಳಲ್ಲಿ ಬಳಸುವ ಬಣ್ಣಗಳು, ಪ್ರಿಸರ್ವೇಟಿವ್ಸ್, ಎಣ್ಣೆ ಮುಂತಾದವು ನಮ್ಮ ರಕ್ತನಾಳಗಳಲ್ಲಿ ಸರಿಯಾಗಿ ಸಂಚರಿಸಲು ಸಾಧ್ಯವಾಗದ ರಾಸಾಯನಿಕಗಳನ್ನು ಒಳಗೊಂಡಿದ್ದರೆ ಹಾಗಾ ಗುತ್ತದೆ, ಅಲ್ಲವೇ? ತಿಳಿದವರು ಊಟ ಬಲ್ಲವನಿಗೆ ರೋಗ ಇಲ್ಲ ಎಂದಿದ್ದಾರೆ.
ನಮ್ಮ ಹಾಗೂ ಮಕ್ಕಳ ಊಟ, ತಿಂಡಿಯ ಬಗ್ಗೆ ಕಾಳಜಿ ವಹಿಸಿ ಹೊರಗಿನ ಆಹಾರ ತಡೆಯೋಣ, ನೀವೇನಂತೀರಿ?
-ಹನಿಬಿಂದು