Vinay Khan Column: ಎಲ್ಲರ ನೆಟ್ ವರ್ಕ್ ಒಮ್ಮೆಲೇ ಹೋದರೆ ?
ಕೇಬಲ್ ಕನೆಕ್ಷನ್ ವೈರ್ ಬಂದರೆ, ಮೊಬೈಲ್ ಬರೀ ಫೋಟೋ ತಗೆದುಕೊಳ್ಳುವ ಒಂದು ಸಾಧನೆ ಅಷ್ಟೇ ಆದರೆ, ಜೀವನ ಹೇಗಿರಬಹುದು ಯೋಚಿಸಿ? ಪ್ರಪಂಚದಲ್ಲಿ ಎಷ್ಟೊಂದು ಸಿಮ್ ಕಂಪನಿಗಳಿದ್ದಾವೆ
Ashok Nayak
January 11, 2025
ವಿನಯ್ ಖಾನ್
1950ರಿಂದ ಇಲ್ಲಿಯವರೆಗೆ 50 ಸಾವಿರ ಟನ್‌ಗಿಂತಲೂ ಹೆಚ್ಚಿನ ತೂಕದ ವಸ್ತುಗಳು ಭೂಮಿಯಿಂದ ಈಗಾಗಲೇ ಅಂತರಿಕ್ಷವನ್ನು ಸೇರಿದ್ದಾವೆ. 2024ರಲ್ಲಿ 13 ಸಾವಿರಕ್ಕೂ ಟನ್‌ಗಿಂತಲೂ ಹೆಚ್ಚಿನ ತೂಕದ ವಸ್ತುಗಳು ಚಾಲ್ತಿಯಲ್ಲಿದೆ.
ಒಂದು ಕ್ಷಣ ಯೋಚಿಸಿ, ಯಾರ ಫೋನ್‌ಗೂ ನೆಟ್‌ವರ್ಕ್ ಇಲ್ಲ, ಬರೀ ನೆಟ್‌ವರ್ಕ್ ಇಲ್ಲದಿರುವ ಪ್ರದೇಶದಲ್ಲಿ ಅಷ್ಟೇ ಅಲ್ಲ. ಇಡೀ ವಿಶ್ವದಲ್ಲೇ ನೆಟ್‌ವರ್ಕ್ ಇಲ್ಲ. ಯಾರ ಫೋನ್‌ಗೂ ಡೇಟಾ ಕನೆಕ್ಟ್ ಇಲ್ಲ, ಟಿವಿಯಲ್ಲಿ ಏನೂ ಬರುತ್ತಿಲ್ಲ. ವೈಫೈ ಇಲ್ಲ, ಏನು ಅಂದರೆ ಏನೂ ಇಲ್ಲ. ಅದು ಒಂದೇ ಕ್ಷಣಕ್ಕೆ ನಮಗೆಲ್ಲ ವಿಚಿತ್ರ ಅನ್ನಿಸುತ್ತದೆ. ಇದೆಲ್ಲ ಬರೀ ಒಂದು ದಿನಕ್ಕಲ್ಲ, ಮುಂದೆಯೂ ಹೀಗೇ ಆದರೆ, ಮೊದಲಿನ ರೀತಿ ಪೋಸ್ಟ್ ಬಳಕೆ ಬಂದರೆ,
ಕೇಬಲ್ ಕನೆಕ್ಷನ್ ವೈರ್ ಬಂದರೆ, ಮೊಬೈಲ್ ಬರೀ ಫೋಟೋ ತಗೆದುಕೊಳ್ಳುವ ಒಂದು ಸಾಧನೆ ಅಷ್ಟೇ ಆದರೆ, ಜೀವನ ಹೇಗಿರಬಹುದು ಯೋಚಿಸಿ? ಪ್ರಪಂಚದಲ್ಲಿ ಎಷ್ಟೊಂದು ಸಿಮ್ ಕಂಪನಿಗಳಿದ್ದಾವೆ ಗೊತ್ತಾ? ಭಾರತದಲ್ಲೇ 8-10 ಇರಬಹುದು. ಇದರ ಜತೆಗೆ ಇಲಾನ್ ಮಸ್ಕ್‌ನ ಸ್ಟಾರ್‌ಲಿಂಕ್ಸ್ ಹಾಗೂ ಯೂಟೆಲ್‌ಸಾಟ್‌ನವರ ಒನ್ ವೆಬ್ ಗಳು ಉಪಗ್ರಹಗಳಿಂದ ಸೀದಾ ಮೊಬೈಲ್‌ಗೆ ನೆಟ್‌ವರ್ಕ್ ಸಿಗುವ ರೀತಿಯಲ್ಲಿ ವಿನೂತನ ತಂತ್ರಜ್ಞಾನವನ್ನು ರಚಿಸಿದ್ದಾರೆ. ಅದರೊಟ್ಟಿಗೆನೇ ಬಾಹ್ಯಾ ಕಾಶ ಸಂಸ್ಥೆಗಳಿಂದಲೂ ಹಲವಾರು ಉಪಗ್ರಹಗಳು ಉಡಾವಣೆಯಾಗಿ, ಎಷ್ಟೋ ಉಪಗ್ರಹಗಳು ಬಾಹ್ಯಾಕಾಶದಲ್ಲೇ ತೇಲಾಡುತ್ತಿವೆ.
ಅದರೊ ಟ್ಟಿಗೆ 36 ಸಾವಿರಕ್ಕೂ ಹೆಚ್ಚು ತ್ಯಾಜ್ಯ (debris) ಬಾಹ್ಯಾಕಾಶದಲ್ಲಿ ತುಂಬಿಕೊಂಡಿದೆ. ಇಲ್ಲಿ ಕುಳಿತು ಓದುವಾಗ ಇದು ದೊಡ್ಡ ಸಮಸ್ಯೆಯೇ ಅಲ್ಲ, ಆದರೆ, ಸ್ಯಾಟಲೈಟ್‌ಗಳ ಘರ್ಷಣೆಯಾಗಿ, ಒಂದಕ್ಕೊಂದು ಡಿಕ್ಕಿ ಹೊಡೆದು, ಯಾವ ಇಂಟರ್ನೆಟ್ ಕೆಲಸ ಮಾಡದೇ ಇದ್ದಾಗ, ಎಲ್ಲರಿ ಗೂ ಅಂದರೇ ಪ್ರಪಂಚದ ಪ್ರತಿಯೊಬ್ಬರಿಗೂ ತೊಂದರೆ ತಪ್ಪಿದ್ದಲ್ಲ!
ಕೆಸ್ಲರ್ ಎಫೆಕ್ಟ್ನಾಸಾದ ವಿಜ್ಞಾನಿ ಡೊನಾಲ್ಡ್ ಜೆ.ಕೆಸ್ಲರ್ ಪ್ರಕಾರ ಭೂಮಿಯ ಕಕ್ಷೆಯಲ್ಲಿ ಈಗಾಗಲೇ ಇರುವ ಉಪಗ್ರಹಗಳ ನಡುವೆ ಡಿಕ್ಕಿಯಾಗಬಹುದು. ಅದರಿಂದ ಮತ್ತಷ್ಟು ಕಸದ ತುಣುಕುಗಳು ಉಂಟಾಗಬಹುದು. ಹೀಗೆ ಕಸದ ಪ್ರಮಾಣ ಹೆಚ್ಚುತ್ತಾ ಹೋದರೆ, ಮತ್ತಷ್ಟು ಡಿಕ್ಕಿಗಳಾಗುತ್ತವೆ. ಇದು ಹೀಗೇ ಚೈನ್ ರಿಯಾಕ್ಷನ್ ರೀತಿಯಲ್ಲಿ ನಡೆದು, ಕೊನೆಗೆ ಭೂಮಿಯ ಲೋ ಅರ್ಥ್ ಆರ್ಬಿಟ್ ಮತ್ತು ಜಿಯೋಸ್ಟಾಟಿಕ್ ಆರ್ಬಿಟ್‌ಗಳು ಕಸದಿಂದ ತುಂಬಿ, ಉಪಗ್ರಹ ಮತ್ತು ಇತರ ಬಾಹ್ಯಾಕಾಶ ಸಾಧನೆಗಳನ್ನು ಬಳಸಲು ಆಗದೇಯೂ ಇರಬಹುದು ಎಂದು ಹೇಳಿದ್ದರು. ಅವರ ಆ ಮಾತನ್ನು ಕೆಸ್ಲರ್ ಎ-ಕ್ಟ್ ಅಥವಾ ಕೆಸ್ಲರ್ ಥೇರಿ ಅಂತಲೂ ಕರೆಯವಹುದು.
ನಿಜ ಹೇಳಬೇಕೆಂದರೆ, ಇಂದಿನ ದಿನಗಳಲ್ಲಿ ಕೆಸ್ಲರ್ ಥೇರಿ ಬಗ್ಗೆ ಹಲವಾರು ಚರ್ಚೆ ನಡೆಯುತ್ತಿದೆ. ಕೆಸ್ಲರ್ ಥೇರಿ ಒಂದು ವೇಳೆ ನಡೆದರೆ, ಭೂಮಿಯ ಸುತ್ತ ಬರೀ ಕಸದ ಕಾರ್ಮೋಡ ಹುಟ್ಟಿದರೆ, 5ಜಿ, 6ಜಿ ನೆಟ್ ವರ್ಕ್‌ಗಳೆಲ್ಲ ಒಮ್ಮೆಲೇ ಕೈಕೊಟ್ಟರೆ, ಬಾಹ್ಯಾಕಾಶ ಸಂಚಾರಕ್ಕೆ ಅನುವು ಆಗದಿದ್ದರೆ, ಭೂಮಿಯ ಮೇಲೆ ಮೋಡಗಳ ಬದಲು ಬಾಹ್ಯಾಕಾಶಗಳ ಕಸ ಕಾಣುತ್ತಿದ್ದರೆ ಹೀಗೆ ಹಲವಾರು ಪ್ರಶ್ನೆಗಳು ವಿಜ್ಞಾನಿಗಳಿಗೆ, ಬಾಹ್ಯಾಕಾಶ ಸಂಸ್ಥೆಗಳಿಗೆ ದೊಡ್ಡ ಪ್ರಶ್ನೆಯಾಗಿದೆ! 1950ರಿಂದ ಇಲ್ಲಿಯವರೆಗೆ 50 ಸಾವಿರ ಟನ್‌ಗಿಂತಲೂ ಹೆಚ್ಚಿನ ತೂಕದ ವಸ್ತುಗಳು ಭೂಮಿಯಿಂದ ಈಗಾಗಲೇ ಅಂತರಿಕ್ಷವನ್ನು ಸೇರಿದ್ದಾವೆ. 2024ರಲ್ಲಿ 13 ಸಾವಿರಕ್ಕೂ ಟನ್‌ಗಿಂತಲೂ ಹೆಚ್ಚಿನ ತೂಕದ ವಸ್ತುಗಳು ಚಾಲ್ತಿಯಲ್ಲಿದೆ. ಇದೆಲ್ಲವನ್ನೂ ಕೂಡಿಸಿ ಇಂಗ್ಲಿಷ್‌ನಲ್ಲಿ ಗ್ರ್ಯಾವಿಟಿ ಅಂತ ಒಂದು ಸಿನಿಮಾನೂ ಬಂದಿತ್ತು. ಅದನ್ನು ನೋಡಿದವರಿಗೆ ಕೆಸ್ಲರ್ ಎಫೆಕ್ಟ್ ಅತಿ ಬೇಗ ಅರ್ಥವಾಗುತ್ತದೆ.
ಎಷ್ಟೋ ಬಾರಿ ನಡೆದಿದೆ2009: ಅಮೆರಿಕದ ಸಕ್ರಿಯ ಸ್ಯಾಟಲೈಟ್ ಇರಿಡಿಯಮ್ 33 ಮತ್ತು ರಷ್ಯಾದ ಅಸಕ್ರಿಯ ಸ್ಯಾಟಲೈಟ್ ಕಾಸ್ಮೋಸ್ 2251ರ ನಡುವೆ ಡಿಕ್ಕಿ ಹೊಡೆದು 2000ಕ್ಕೂ ಹೆಚ್ಚು ಕಸದ ತುಣುಕುಗಳು ಸೃಷ್ಟಿಯಾಗಿತ್ತು.
2007: ಚೀನಾದ ಮಿಲಿಟರಿ ತಮ್ಮದೇ ದೇಶದ ಫೆನ್ ಗ್ಯುನ್-1ಸಿ ಉಪಗ್ರಹವನ್ನು ಮಿಸ್ಸೈಲ್‌ನಿಂದ ಡಿಕ್ಕಿ ಹೊಡೆದು ಅದನ್ನು ನಾಶ ಮಾಡಿದ್ದರು. ಇದರಿಂದ 3000ಕ್ಕೂ ಹೆಚ್ಚು ಟ್ರ್ಯಾಕೇಬಲ್ ಕಸ ಉತ್ಪತ್ತಿಯಾಗಿತ್ತು.
2019: ಭಾರತದಲ್ಲೇ ಮಿಷನ್ ಶಕ್ತಿ ಮೂಲಕ ನಮ್ಮ ದೇಶದ್ದೇ ಒಂದು ಉಪಗ್ರಹವನ್ನು ನಾಶ ಮಾಡಲಾಗಿತ್ತು. ಇದರಿಂದ ೪೦೦ಕ್ಕೂ ಹೆಚ್ಚು ತುಣುಕುಗಳು ಉತ್ಪತ್ತಿಯಾಗಿತ್ತು.
1996: ಪೆಗಾಸಸ್‌ನ ರಾಕೆಟ್ ಫ್ರೆಂಚ್ ಮಿಲಿಟರಿ ಸ್ಯಾಟಲೈಟ್ ಜತೆ ಸಂಘರ್ಷ ಉಂಟಾಗಿ ಉಪಗ್ರಹ ಕೆಟ್ಟುಹೋಗಿತ್ತು.2021 ಇತ್ತೀಚೆಗೆ ಎರಡು ಸ್ಟಾರ್‌ಲಿಂಕ್‌ನ ಉಪಗ್ರಹಗಳು ಡಿಕ್ಕಿಯಾಗುವ ಸಂಭವನೀಯತೆ ಹೆಚ್ಚಿತ್ತು. ಆದರೆ,ಸಣ್ಣದರಲ್ಲೇ ಮಿಸ್ ಆಗಿ ಹೋಗಿತ್ತು.
ಹೆಚ್ಚುತ್ತಿರುವ ಅಪಾಯಗಳುಈಗಾಗಲೇ 10 ಸೆಮಿಗಿಂತ ಹೆಚ್ಚಿನ ಉದ್ದದ 36 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ ಮಾಡಬಹುದಾದ ಕಸ (ಡೆಬ್ರಿ)ಗಳು ಸೇರಿದೆ, ಇದರಿಂದಲೇ ಸಮಸ್ಯೆ ಹೆಚ್ಚು. ಇತ್ತೀಚೆಗೆ ಉಪಗ್ರಹಗಳ ಉಡಾವಣೆಯ ಸಂಖ್ಯೆಗಳೂ ಹೆಚ್ಚಾಗುತ್ತಿದೆ, ಸ್ಟಾರ್ ಲಿಂಕ್ ಮತ್ತು ಒನ್‌ವೆಬ್ ಸಂಸ್ಥೆಗಳು ಸಾವಿರಾರು ಉಪಗ್ರಹಗಳನ್ನು ಉಡಾವಣೆ ಮಾಡುವ ಯೋಜನೆಯಲ್ಲಿದೆ. ಇದರಿಂದ ಲೋ ಅರ್ಥ್ ಆರ್ಬಿಟ್‌ನಲ್ಲಿ ಸಾಂದ್ರತೆ ಹೆಚ್ಚಾಗಬಹುದು.
ಕೆಸ್ಲರ್ ಎಫೆಕ್ಟ್ ನಿಜವಾಗಬಹುದಾ?ಹೇಳಬೇಕೆಂದರೆ, ಬಾಹ್ಯಾಕಾಶ ಭೂಮಿಗಿಂತಲೂ ದೊಡ್ಡದಾಗಿದೆ, ಆದರೆ, ಅಲ್ಲಿ ಬರೀ ಉಪಗ್ರಹಗಳನ್ನುತುಂಬುತ್ತಾ ಹೋದರೆ, ಅಲ್ಲಿನ ಸಾಂದ್ರತೆ ಹೆಚ್ಚಿ, ಸಂಘರ್ಷಗಳಾಗಬಹುದು. ಈಗಾಗಲೇ ಲೋ ಅರ್ಥ್ ಆರ್ಬಿಟ್‌ನಕೆಲ ಸ್ಥಳಗಳಲ್ಲಿ ಮಿತಿ ಮೀರಿ ಉಗ್ರಹಗಳಳು ತುಂಬಿಕೊಂಡಿದೆ. ಹಾಗೇ, ಈ ಡಿಕ್ಕಿಗಳು ಅಪರೂಪ, ಹಾಗಂತ ಆಗುವುದೇ ಇಲ್ಲ ಎಂದು ಹೇಳಲಿಕ್ಕಾಗುವುದಿಲ್ಲ.
ಇದನ್ನೂ ಓದಿ: Vinayakan