R T Vittalmurthy Column: ಸಂಪುಟ ಸರ್ಜರಿಗೆ ಸಿದ್ದು ರೆಡಿ

ಏಕಕಾಲಕ್ಕೆ ಸರಕಾರದ ಎಲ್ಲ ಇಲಾಖೆಗಳಿಗೆ ಅಗತ್ಯದ ಅನು ದಾನ ನೀಡಿ ಮತ್ತು ಶಾಸಕರ ಕ್ಷೇತ್ರಗಳಿಗೆ ಬಂಪರ್ ಕೊಡುಗೆ ನೀಡುವುದು ಸಿದ್ದರಾಮಯ್ಯ ಅವರ ಲೇಟೆಸ್ಟು

Profile Ashok Nayak December 30, 2024
ಮೂರ್ತಿಪೂಜೆ ಆರ್‌.ಟಿ.ವಿಠ್ಠಲಮೂರ್ತಿ ಕೆಲ ಕಾಲದಿಂದ ‘ಮುಡಾ’ ಸಂಕಟದಲ್ಲಿ ಮುಳುಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಸಂಪುಟ ಸರ್ಜರಿಗೆ ಅಣಿಯಾಗುತ್ತಿದ್ದಾರೆ. ಮೈಸೂರಿನ ಮುಡಾ ಎಪಿಸೋಡು ಆರಂಭವಾದ ನಂತರ ಸಂಪುಟ ಸರ್ಜರಿಯ ಬಗ್ಗೆ ಆಸಕ್ತಿ ತೋರದ ಸಿದ್ದರಾಮಯ್ಯ ಅವರಿಗೀಗ ಎಲ್ಲ ಕಡೆಯಿಂದ ಸಮಾಧಾನದ ಸುದ್ದಿಗಳು ಬರುತ್ತಿವೆ. ಅವರ ಆಪ್ತರು ಹೇಳುವ ಪ್ರಕಾರ, ಮುಡಾ ಎಪಿಸೋಡಿನ ಬಗ್ಗೆ ತನಿಖೆ ನಡೆಸುತ್ತಿರುವ ಕೇಂದ್ರದ ಜಾರಿ ನಿರ್ದೇಶನಾಲಯಕ್ಕೆ ಹೇಳಿಕೊಳ್ಳುವಂಥ ದಾಖಲೆಗಳೇನೂ ಸಿಕ್ಕಿಲ್ಲ. ಅರ್ಥಾತ್, ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಇದೆ ಎನ್ನಲು ಬೇಕಾದ ಸಾಕ್ಷ್ಯಗಳೇನೂ ಜಾರಿನಿರ್ದೇಶನಾಲಯಕ್ಕೆ ಸಿಕ್ಕಿಲ್ಲ. ಹೀಗಾಗಿ ಅದು ಮುಡಾ ಎಪಿ ಸೋಡಿನಲ್ಲಿ ಸಿದ್ದರಾಮಯ್ಯ ಅವರು ಪ್ರಭಾವ ಬೀರಿದ್ದಾರೆ ಅಂತ ಶಂಕೆ ವ್ಯಕ್ತಪಡಿಸಬಹುದೇ ವಿನಾ ಅವರ ಪಾತ್ರ ಇದೆ ಅಂತ ಖಚಿತವಾಗಿ ಹೇಳಲು ಸಾಕ್ಷ್ಯಾ ಧಾರಗಳು ಸಿಗುತ್ತಿಲ್ಲ. ಹೀಗಾಗಿ ತನಿಖೆಯ ದಿಕ್ಕನ್ನು ಬದಲಿಸಿರುವ ಅದು, ಸಿದ್ದರಾಮಯ್ಯ ಅವರ ಪತ್ನಿಗೆ ಭೂಮಿಯನ್ನು ಉಡುಗೊರೆ ಯಾಗಿ ನೀಡಿದ ಅವರ ಸಹೋದರನ ಮೂಲದ ಕಡೆ ಕಣ್ಣು ಹಾಕಿದೆ. ಒಂದು ವೇಳೆ ಅವರು ಭೂಮಿ ಖರೀದಿಸಲು ಸಿದ್ದರಾಮಯ್ಯ ಆಪ್ತರೇನಾದರೂ ಹಣ ನೀಡಿದ್ದರೆ, ಆ ಆಪ್ತರನ್ನೇ ಅಪ್ರೂವರ್ ಆಗಿಸಲು ಯತ್ನಿಸುತ್ತಿದೆ. ಹಾಗೆ ನೋಡಿದರೆ, ಇದು ಡಿಟ್ಟೋ ಕೇಜ್ರಿವಾಲ್ ಪ್ರಕರಣದ ತನಿಖೆ ಮಾಡೆಲ. ಆದರೆ ಇದರಲ್ಲಿ ಅದಕ್ಕೆ ಯಶಸ್ಸು ಸಿಗುವುದು ಅಸಾಧ್ಯ. ಹೀಗಾಗಿ ಅದರ ತನಿಖೆಯ ಸ್ವರೂಪ ಹೇಗೇ ಇದ್ದರೂ ಅದು ಸಿದ್ದರಾಮಯ್ಯ ಅವರ ಕುರ್ಚಿಗೆ ಧಕ್ಕೆ ತರಲು ಸಾಧ್ಯವಿಲ್ಲ ಎಂಬುದು ಸಿದ್ದು ಆಪ್ತರ ಮಾತು. ಯಾವಾಗ ಈ ಕುರಿತು ನಂಬಿಕೆ ಬಂತೋ, ಸಿದ್ದರಾಮಯ್ಯ ಏಕಕಾಲಕ್ಕೆ ಹಲವು ವಿಷಯಗಳ ಕಡೆ ಗಮನ ಹರಿಸತೊಡಗಿದ್ದಾರೆ. ಈ ವರ್ಷದ ಬಜೆಟ್ ಮೂಲಕ ಪಕ್ಷದ ಶಾಸಕರನ್ನು ಸಮಾಧಾನಪಡಿಸುವುದು ಅವರ ಮೊದಲ ಗುರಿ. ಹಾಗೆ ನೋಡಿದರೆ ಕಳೆದ ಎರಡು ಬಜೆಟ್ ಗಳಿಂದ ಕೈ ಪಾಳಯದ ಶಾಸಕರಿಗೆ ಸಮಾಧಾನವಾಗಿರಲಿಲ್ಲ. ಕಾರಣ? ಬಜೆಟ್‌ಗೆ ಬರುವ ಹಣದ ಪೈಕಿ ಮೇಜರ್ ಷೇರು ಸರಕಾರದ ಗ್ಯಾರಂಟಿ ಯೋಜನೆಗಳಿಗೆ ಹೋಗುತ್ತಿತ್ತು. ಈ ಮಧ್ಯೆ ಹಿಂದಿದ್ದ ಬಿಜೆಪಿ ಸರಕಾರ ಮಾಡಿಟ್ಟ ಕಮಿಟ್ ಮೆಂಟಿನ ಗಾತ್ರವೂ ದೊಡ್ಡದಿತ್ತು. ಹೀಗಾಗಿ ಇವುಗಳಿಗೆ ಹಣ ಹೊಂದಿಸಿ ಕೊಡುವುದರ ಬಜೆಟ್ ಸುಸ್ತಾಗುತ್ತಿದ್ದುದರಿಂದ ಶಾಸಕರ ಕ್ಷೇತ್ರಗಳಿಗೆ ನಿರೀಕ್ಷಿತ ಅನುದಾನ ಲಭ್ಯವಾಗುತ್ತಿರಲಿಲ್ಲ. ಅಷ್ಟೇ ಏಕೆ? ಸರಕಾರದ ಮೂವತ್ತಕ್ಕೂ ಹೆಚ್ಚು ಇಲಾಖೆಗಳಿಗೆ ಕೊಡುತ್ತಿದ್ದ ಅನುದಾನವನ್ನೂ ಕಡಿತಗೊಳಿಸ ಲಾಗುತ್ತಿತ್ತು. ಆದ್ದರಿಂದಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಯಾವತ್ತೇ ನಡೆಯಲಿ, ಶಾಸಕರ ಸಿಟ್ಟು ಸಹಿಸಿ ಕೊಳ್ಳುವುದೇ ಒಂದು ಕೆಲಸವಾಗಿ ಹೋಗಿತ್ತು. ಆದರೆ ಈ ವರ್ಷ ಪರಿಸ್ಥಿತಿ ಸುಧಾರಿಸಿಕೊಳ್ಳುತ್ತಿದ್ದು, ಏಕಕಾಲಕ್ಕೆ ಸರಕಾರದ ಎಲ್ಲ ಇಲಾಖೆಗಳಿಗೆ ಅಗತ್ಯದ ಅನುದಾನ ನೀಡಿ ಮತ್ತು ಶಾಸಕರ ಕ್ಷೇತ್ರಗಳಿಗೆ ಬಂಪರ್ ಕೊಡುಗೆ ನೀಡುವುದು ಸಿದ್ದರಾಮಯ್ಯ ಅವರ ಲೇಟೆಸ್ಟು ಲೆಕ್ಕಾಚಾರ. ಹೀಗಾಗಿಯೇ ತಮ್ಮ ಸಂಪುಟದ ಮಂತ್ರಿಗಳಿಗೆ ಮೆಸೇಜು ಕೊಟ್ಟಿರುವ ಅವರು, ಜನವರಿ ಎರಡರಿಂದ ನಡೆಯುವ ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಿಮ್ಮ ಇಲಾಖೆಯ ಹೊಸ ಯೋಜನೆಗಳ ವಿವರ ತನ್ನಿ ಅಂತ ಸೂಚಿಸಿದ್ದಾರೆ. ಈ ಹಿಂದೆ ಬಜೆಟ್ ಪೂರ್ವಭಾವಿ ಸಭೆಗೆ ಬರುವ ಮಂತ್ರಿಗಳು ತಮ್ಮ ಹೊಸ ಕಾರ್ಯಕ್ರಮಗಳ ವಿವರ ನೀಡುವುದಿರಲಿ, ಇರುವ ಅನುದಾನವನ್ನೇ ಕಡಿತಗೊಳಿಸುವ ಮೆಸೇಜು ಬರುತ್ತಿತ್ತು. ಆದರೆ ಈ ಸಲ ಇಲಾಖೆಗಳ ಬಜೆಟ್ ಕಡಿತ ಮಾಡುವ ಬದಲು ಹೊಸ ಕಾರ್ಯಕ್ರಮಗಳಿಗೂ ಹಣ ನೀಡುವ ಭರವಸೆ ಸಿಕ್ಕಿರುವುದರಿಂದ ಮಂತ್ರಿಗಳೂ ಖುಷಿಯಾಗಿದ್ದಾರೆ. ಅದೇ ರೀತಿ ಹಿಂದಿನ ಎರಡು ಬಜೆಟ್ ಗಳಿಂದ ಶಕ್ತಿ ದೊರೆಯದೆ ಸುಸ್ತಾಗಿದ್ದ ಶಾಸಕರೂ ಹೊಸ ನಿರೀಕ್ಷೆಯಲ್ಲಿದ್ದಾರೆ.ಇದರರ್ಥ ಬೇರೇನೂ ಅಲ್ಲ. ಮಂಕಾಗಿದ್ದ ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹ ಕಾಣುತ್ತಿದೆ ಮತ್ತು ಇಂಥ ಉತ್ಸಾಹಕ್ಕೆ ಕಾರಣರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ನೆಮ್ಮದಿಯ ಹಳಿಗೆ ಮರಳಿದ್ದಾರೆ. ಸಂಪುಟ ಸೇರುವವರು ಯಾರು? ಇನ್ನು ಸಚಿವ ಸಂಪುಟಕ್ಕೆ ಸರ್ಜರಿ ಮಾಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮತ್ತೊಂದು ಆದ್ಯತೆ. ವಸ್ತುಸ್ಥಿತಿ ಎಂದರೆ ಸಚಿವ ಸಂಪುಟಕ್ಕೆ ಈ ಹಿಂದೆಯೇ ಸರ್ಜರಿ ನಡೆಯಬೇಕಿತ್ತು. ಆದರೆ ಮುಡಾ ಎಪಿಸೋಡು ಶುರುವಾದ ನಂತರ ಕಾಣಿಸಿಕೊಂಡ ಗೊಂದಲ, ಕರಿಮೋಡವಾಗಿ ಆವರಿಸಿದ್ದರಿಂದ ಸರಕಾರವೇ ಮಂಕಾಗಿತ್ತು. ಹೀಗಾಗಿ ಆವರಿಸಿಕೊಂಡ ಕರಿಮೋಡ ತಿಳಿಯಾಗುವವರೆಗೆ ಸಂಪುಟ ಸರ್ಜರಿಯ ಬಗ್ಗೆ ಸಿದ್ದರಾಮಯ್ಯ ಅವರಿರಲಿ, ಪಕ್ಷದ ವರಿಷ್ಠರೂ ನಿರಾಸಕ್ತಿ ತೋರಿಸುತ್ತಿದ್ದರು. ಈ ಮಧ್ಯೆ ಮಂತ್ರಿ ಪದವಿಯ ಹಲವು ಆಕಾಂಕ್ಷಿಗಳು ದಿಲ್ಲಿಗೆ ಹೋಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನಖರ್ಗೆ ಅವರ ಬಳಿ ಇಲ್ಲವೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಬಳಿ ತಮ್ಮ ಬೇಡಿಕೆಮಂಡಿಸುತ್ತಿದ್ದರಾದರೂ, ‘ಮೊದಲು ಸರಕಾರ ಸೇಫ್ ಆಗಲಿ, ಅಲ್ಲಿಯವರೆಗೆ ಇಂಥ ಪ್ರಪೋಸಲ್ಲನ್ನೇ ತರಬೇಡಿ’ಎಂಬ ಉತ್ತರ ಸಿಡಿಯುತ್ತಿತ್ತು.‌ ಹೀಗಾಗಿ ಈ ವಿಷಯದಲ್ಲಿ ಮಂತ್ರಿ ಪದವಿ ಆಕಾಂಕ್ಷಿಗಳು ಬಹಿರಂಗವಾಗಿ ಇರಲಿ, ಆಂತರಂಗಿಕವಾಗಿಯೂ ಮಾತನಾಡುವ ಉತ್ಸಾಹ ಕಳೆದುಕೊಂಡಿದ್ದರು. ಆದರೆ ಈಗ ಸಿದ್ದರಾಮಯ್ಯ ಮರಳಿ ಲಯಕ್ಕೆ ಬಂದಿರುವುದರಿಂದ ಕೈ ಪಾಳಯದಲ್ಲಿ ಮಂತ್ರಿಗಿರಿಗೆ ಮೆಲ್ಲನೆ ಲಾಬಿ ಶುರುವಾಗಿದೆ. ಸಿದ್ದರಾಮಯ್ಯ ಅಪ್ತರ ಪ್ರಕಾರ, ಸಂಪುಟಕ್ಕೆ ಮೇಜರ್ ಸರ್ಜರಿ ಆಗದೇ ಇದ್ದರೂ ನಾಲ್ಕೈದು ಮಂದಿ ಮಂತ್ರಿಗಿರಿಕಳೆದುಕೊಂಡು ಐದಾರು ಮಂದಿ ಮಂತ್ರಿಗಳಾಗುವುದು ಬಹುತೇಕ ನಿಶ್ಚಿತ. ಕುತೂಹಲದ ಸಂಗತಿ ಎಂದರೆ ಸರಕಾರರಚನೆಯ ಸಂದರ್ಭದಲ್ಲಿ ತಮ್ಮ ಸಂಪುಟಕ್ಕೆ ಯಾರು ಬೇಕು? ಯಾರು ಬೇಡ? ಎಂಬ ವಿಷಯದಲ್ಲಿ ಸಿದ್ದರಾಮಯ್ಯ ಪರ್ಟಿಕ್ಯುಲರ್ ಆಗಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಅವರ ಮನಃಸ್ಥಿತಿಯೂ ಬದಲಾಗಿದೆಯಲ್ಲದೆ ಹಿಂದೆ ತಾವು ಯಾರನ್ನು ವಿರೋಧಿಸಿದ್ದರೋ, ಈಗ ಅವರ ಎಂಟ್ರಿ ವಿಷಯದಲ್ಲಿ ಸಿದ್ದರಾಮಯ್ಯ ಲಿಬರಲ್ ಆಗಿದ್ದಾರೆ. ಇದರ ಪರಿಣಾಮವಾಗಿ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರು ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಜಾಸ್ತಿ. ಇದೇ ರೀತಿ, ಹಲವು ಕಾಲದಿಂದ ತಮ್ಮ ಕ್ಯಾಂಪಿನಿಂದ ಹೊರಗಿದ್ದ ತನ್ವೀರ್ ಸೇಠ್ ಅವರನ್ನು ಈ ಬಾರಿ ಸಂಪುಟಕ್ಕೆ ತೆಗೆದುಕೊಳ್ಳಲು ಸಿದ್ದರಾಮಯ್ಯ ಬಯಸಿದ್ದಾರೆ. ಇದಕ್ಕೆ ತನ್ವೀರ್ ಸೇಠ್ ಬದಲಾಗಿರುವುದೂ ಮುಖ್ಯ ಕಾರಣ. ಮೂಲಗಳ ಪ್ರಕಾರ, ಇತ್ತೀಚಿನವರೆಗೆ ಸಿದ್ದರಾಮಯ್ಯ ಅವರ ಕ್ಯಾಂಪಿನಿಂದ ಹೊರಗಿದ್ದ ತನ್ವೀರ್ ಸೇಠ್ ಈಗ ಸಿದ್ದು ಕ್ಯಾಂಪಿನ ಒಳಗೆ ಬಂದಿದ್ದಾರೆ. ಇನ್ನು ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ ಅವರ ಪುತ್ರಿ ರೂಪಕಲಾ ಶಶಿಧರ್ ಅವರಿಗೆ ಮಂತ್ರಿಗಿರಿ ಕೊಡುವ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಲೆಕ್ಕಾಚಾರ ಸಿದ್ದರಾಮಯ್ಯ ಅವರಿಗಿದೆ. ಈ ಮಧ್ಯೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವಾದ ನಂತರ ಮಂತ್ರಿಗಿರಿ ಕಳೆದುಕೊಂಡಿದ್ದಬಿ.ನಾಗೇಂದ್ರ ಅವರು ಮರಳಿ ಮಂತ್ರಿಗಿರಿ ಪಡೆಯುವುದು ಗ್ಯಾರಂಟಿ. ಉಳಿದಂತೆ ಮಂತ್ರಿಮಂಡಲದಿಂದ ಹೊರ ಬೀಳುವವರು ಯಾರು ಎಂಬ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ ಸಂಪುಟಕ್ಕೆ ಯಾರ‍್ಯಾರು ಸೇರಲಿದ್ದಾರೆ ಎಂಬುದನ್ನು ಗಮನಿಸಿದರೆ ಹೊರಗೆ ಹೋಗುವವರು ಯಾರು ಎಂಬ ಅಸ್ಪಷ್ಟ ಚಿತ್ರಣವಾದರೂ ಸಿಗುತ್ತದೆ. ಕೆಪಿಸಿಸಿ ಪಟ್ಟಕ್ಕೆ ಲಾಬಿ ಜೋರು ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸಿಗೆ ಮತ್ತಷ್ಟು ರಂಗು ಬಂದಿದ್ದು, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮತ್ತುಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಹೆಸರುಗಳು ಎಂಟ್ರಿಯಾಗಿವೆ. ಅಂದ ಹಾಗೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳ ತನಕ ಹಾಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಮುಂದುವರಿಯಲಿದ್ದು, ತದನಂತರ ಈ ಹುದ್ದೆಗೆ ಬೇರೆಯವರು ಬರಲಿದ್ದಾರೆ. ಹೀಗೆ ಬರುವವರು ತಾವೇ ಆಗಿರಬೇಕು ಅಂತ ಲೋಕೋಪ ಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಯತ್ನಿಸುತ್ತಿರುವುದು ರಹಸ್ಯವೇನಲ್ಲ. ಆದರೆ ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತರೇ ಬರಬೇಕು ಎಂಬ ಇಂಗಿತ ಸಿದ್ದರಾಮಯ್ಯ ಅವರಿಂದವ್ಯಕ್ತವಾಗಿರುವುದರಿಂದ ಸಚಿವರಾದ ಎಂ.ಬಿ.ಪಾಟೀಲ್ ಮತ್ತು ಈಶ್ವರ ಖಂಡ್ರೆ ಅವರ ಹೆಸರುಗಳು ಎಂಟ್ರಿಯಾಗಿವೆ.ರಾಜ್ಯ ರಾಜಕಾರಣದ ಇವತ್ತಿನ ಸ್ಥಿತಿಯನ್ನು ಗಮನಿಸಿದರೆ ಲಿಂಗಾಯತರಿಗೆ ಅಧ್ಯಕ್ಷ ಸ್ಥಾನ ನೀಡುವುದು ಬೆಸ್ಟು.ಯಾಕೆಂದರೆ ಇವತ್ತು ಕಾಂಗ್ರೆಸ್ಸಿನ ಎದುರು ನಿಂತಿರುವ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಒಕ್ಕಲಿಗ-ಲಿಂಗಾಯತರೇಮೂಲಶಕ್ತಿಗಳು. ಜಾತ್ಯತೀತ ಜನತಾದಳದ ಮುಂಚೂಣಿಯಲ್ಲಿ ಒಕ್ಕಲಿಗ ಸಮುದಾಯದ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿಯ ಮುಂಚೂಣಿಯಲ್ಲಿ ಲಿಂಗಾಯತ ಸಮುದಾಯದ ಬಿ.ವೈ.ವಿಜಯೇಂದ್ರ ನಿಂತಿರುವುದು ಇದರ ಸಂಕೇತ. ಇದಕ್ಕೆ ಪ್ರತಿಯಾಗಿ ನಮ್ಮಲ್ಲಿ ಒಕ್ಕಲಿಗ ನಾಯಕ ಡಿ.ಕೆ.ಶಿವಕುಮಾರ್ ಸರಕಾರದಲ್ಲಿ ಪ್ರಭಾವಿಯಾಗಿದ್ದು, ಅದೇ ಕಾಲಕ್ಕೆ ಲಿಂಗಾಯತರು ಕೆಪಿಸಿಸಿ ಅಧ್ಯಕ್ಷರಾದರೆ ಕೌಂಟರ್ ಕೊಟ್ಟಂತಾಗುತ್ತದೆ ಎಂಬುದು ಸಿದ್ದು ಪ್ರಪೋಸಲ್ಲು. ಪರಿಣಾಮ? ಮೊನ್ನೆ ಮೊನ್ನೆಯ ತನಕ ಕೆಪಿಸಿಸಿ ಪಟ್ಟದ ರೇಸಿನಲ್ಲಿ ಸತೀಶ್ ಜಾರಕಿಹೊಳಿ ಮತ್ತು ಡಿ.ಕೆ.ಸುರೇಶ್ ಹೆಸರುಗಳಿದ್ದರೆ ಈಗ ಈಶ್ವರ ಖಂಡ್ರೆ ಮತ್ತು ಎಂ.ಬಿ.ಪಾಟೀಲರ ಹೆಸರುಗಳು ಕಾಣಿಸಿಕೊಂಡಿವೆ. ಈ ಪೈಕಿ ಖಂಡ್ರೆ ಅವರು, “ಕೊಡೋದಾದ್ರೆ ನಂಗೆ ಮಂತ್ರಿಗಿರಿಯ ಜತೆ ಅಧ್ಯಕ್ಷ ಹುದ್ದೆ ಕೊಡಿ" ಎನ್ನುತ್ತಿರುವುದರಿಂದ ಎಂ.ಬಿ.ಪಾಟೀಲ್ ಹೆಸರು ರೇಸಿನಲ್ಲಿ ಮುಂದಕ್ಕೆ ಹೋಗಿದೆ. ರಾಜಣ್ಣ ಲೆಟರ್ ಬಾಂಬುಇನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಎಐಸಿಸಿ ಅಧ್ಯಕ್ಷರಿಗೆ ಬರೆದಿದ್ದಾರೆನ್ನಲಾದ ಪತ್ರ ದೊಡ್ಡ ಸದ್ದುಮಾಡುತ್ತಿದೆ. ಮೂಲಗಳ ಪ್ರಕಾರ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿರುವ ರಾಜಣ್ಣಅವರು ಪಕ್ಷ ಸಂಘಟನೆಯಲ್ಲಿ ವಿವಿಧ ಜಾತಿಗಳಿಗೆ ಹೇಗೆ ಆದ್ಯತೆ ನೀಡಬೇಕು ಅಂತ ವಿವರಿಸಿದ್ದಾರೆ. ಒಂದು ಕ್ಷೇತ್ರ ದಲ್ಲಿ ಪಕ್ಷದ ವತಿಯಿಂದ ಯಾವ ಜಾತಿಯವರು ಶಾಸಕರಾಗಿದ್ದಾರೋ, ಅದೇ ಜಾತಿಯವರು ಬ್ಲಾಕ್ ಕಾಂಗ್ರೆಸ್ಸಿನಅಧ್ಯಕ್ಷರಾಗಬಾರದು. ಶಾಸಕ ಮತ್ತು ಅಧ್ಯಕ್ಷ ಒಂದೇ ಜಾತಿಯವರಾಗಿದ್ದರೆ ಬೇರೆ ಸಮುದಾಯಗಳಿಗೆ ಕಾಂಗ್ರೆಸ್ ಬಗ್ಗೆ ನಂಬಿಕೆ ಮೂಡುವುದು ಹೇಗೆ ಮತ್ತು ನಾವು ಸಾಮಾಜಿಕ ನ್ಯಾಯದ ಪರ ಎನ್ನುವುದು ಹೇಗೆ? ಎಂಬುದು ರಾಜಣ್ಣ ಲೆಟರಿನ ಸಾರಾಂಶ. ಹೀಗೆ ರಾಜಣ್ಣ ಅವರು ಬರೆದ ಪತ್ರ ಎಐಸಿಸಿ ಲೆವೆಲ್ಲಿನಲ್ಲಿ ಸಂಚಲನ ಮೂಡಿಸಿದೆಯಷ್ಟೇ ಅಲ್ಲ, ಈ ಬಗ್ಗೆ ಕರ್ನಾಟಕಘಟಕದಿಂದ ವಿವರ ತರಿಸಿಕೊಳ್ಳಲು ಖರ್ಗೆಯವರು ಬಯಸಿದ್ದಾರೆ ಎಂಬುದು ಲೇಟೆಸ್ಟು ಸುದ್ದಿ. ಇದನ್ನೂ ಓದಿ: R T Vittalmurthy Column: ವಿಜಯೇಂದ್ರ ಟೀಮಿಗೆ ಸರ್ಜರಿ ಫಿಕ್ಸ್‌
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ