Sunil Gavaskar: ಬಿಸಿಸಿಐನ ಪ್ರಧಾನ ಕಚೇರಿಯ ಬೋರ್ಡ್ ರೂಮ್‌ಗೆ ಗವಾಸ್ಕರ್ ಹೆಸರು
1971ರ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಟೆಸ್ಟ್ ಕ್ರಿಕೆಟಿಗೆ ಅಡಿಯಿರಿಸಿದ್ದ ಗವಾಸ್ಕರ್. ಅಂದು ವಿಂಡೀಸಿನ ಅತ್ಯಂತ ಘಾತಕ ಹಾಗೂ ಭಯಾನಕ ವೇಗದ ಪಡೆಯನ್ನು ದಿಟ್ಟ ರೀತಿಯಲ್ಲಿ ಎದುರಿಸಿ ಒಂದು ದ್ವಿಶತಕ, 3 ಶತಕ, 3 ಅರ್ಧ ಶತಕಗಳ ನೆರವಿನಿಂದ 774 ರನ್ ಪೇರಿಸಿ ಅಸಾಮಾನ್ಯ ಸಾಧನೆಗೈದ ಸಾಹಸಿ.


ಮುಂಬಯಿ: ದಾಖಲೆಗಳ ವೀರ, 70-80ರ ದಶಕದ ಕ್ರಿಕೆಟ್ ಹೀರೋ, ಅಂಕಣಕಾರ, ಹಾಲಿ ಕಮೆಂಟೇಟರ್ ಸುನೀಲ್ ಗಾವಸ್ಕರ್(Sunil Gavaskar) ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ವಿಶೇಷ ಗೌರವವನ್ನು ನೀಡಿ ಸತ್ಕರಿಸಿದೆ. ಮುಂಬೈನಲ್ಲಿರುವ ಬಿಸಿಸಿಐನ ಪ್ರಧಾನ ಕಚೇರಿಯ ಬೋರ್ಡ್ ರೂಮ್‌ಗೆ(10000 Gavaskar boardroom) ಸುನೀಲ್ ಗವಾಸ್ಕರ್ ಹೆಸರನ್ನು ಅಧಿಕೃತವಾಗಿ ಇಡಲಾಗಿದೆ. ಟೆಸ್ಟ್ ಇತಿಹಾಸದಲ್ಲಿ 10 ಸಾವಿರ ರನ್ ಬಾರಿಸಿದ ಮೊದಲ ಆಟಗಾರನೆಂಬುದು ಇವರ ಹಿರಿಮೆಗೆ ಬಿಸಿಸಿಐ ಈ ಮೂಲಕ ಗೌರವ ಸೂಚಿಸಿದೆ.
ನೂತನವಾಗಿ ಉದ್ಘಾಟನೆಗೊಂಡಿರುವ ಕೊಠಡಿಗೆ ‘10,000 ಗವಾಸ್ಕರ್’ಎಂದು ಹೆಸರಿಡಲಾಗಿದ್ದು, ಇದರೊಂದಿಗೆ ಪ್ರತಿಷ್ಠಿತ ಮೈಲಿಗಲ್ಲಿಗೆ ಗೌರವ ಸಲ್ಲಿಸಲಾಗುತ್ತಿದೆ. 1971ರ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಟೆಸ್ಟ್ ಕ್ರಿಕೆಟಿಗೆ ಅಡಿಯಿರಿಸಿದ್ದರು. ಅಂದು ವಿಂಡೀಸಿನ ಅತ್ಯಂತ ಘಾತಕ ಹಾಗೂ ಭಯಾನಕ ವೇಗದ ಪಡೆಯನ್ನು ದಿಟ್ಟ ರೀತಿಯಲ್ಲಿ ಎದುರಿಸಿದ ಗಾವಸ್ಕರ್, ಒಂದು ದ್ವಿಶತಕ, 3 ಶತಕ, 3 ಅರ್ಧ ಶತಕಗಳ ನೆರವಿನಿಂದ 774 ರನ್ ಪೇರಿಸಿ ಅಸಾಮಾನ್ಯ ಸಾಧನೆಗೈದ ಸಾಹಸಿ.
Honouring a legend! 🙌
— BCCI (@BCCI) May 15, 2025
India great Sunil Gavaskar inaugurates 𝟭𝟬𝟬𝟬𝟬 𝗚𝗮𝘃𝗮𝘀𝗸𝗮𝗿 - a Board Room named in his honour and his iconic milestone at the BCCI HQ in Mumbai 👏 pic.twitter.com/laZI0cBL57
‘‘ಈ ಗೌರವವು ತುಂಬಾ ಖುಷಿ ಕೊಟ್ಟಿದೆ. ನನ್ನ ವೃತ್ತಿಜೀವನದಲ್ಲಿ ನನ್ನೊಂದಿಗೆ ನಿಂತಿದ್ದ ಬಿಸಿಸಿಐ ಹಾಗೂ ಎಲ್ಲ ಅಭಿಮಾನಿಗಳಿಗೆ ನಾನು ಕೃತಜ್ಞನಾಗಿದ್ದೇನೆ’’ಎಂದು ಗವಾಸ್ಕರ್ ಹೇಳಿದ್ದಾರೆ. ಭಾವನಾತ್ಮಕ ಅನಾವರಣ ಸಮಾರಂಭವನ್ನು ಸೆರೆ ಹಿಡಿದಿರುವ ವೀಡಿಯೊವನ್ನು ಬಿಸಿಸಿಐ ಹಂಚಿಕೊಂಡಿದೆ.
ಭಾರತ ಪರ 125 ಟೆಸ್ಟ್ ಪಂದ್ಯಗಳನ್ನು ಆಡಿರುವ ಸುನೀಲ್ ಗಾವಸ್ಕರ್ 10122 ರನ್ ಬಾರಿಸಿದ್ದಾರೆ. ಈ ವೇಳೆ 34 ಶತಕ ಮತ್ತು 45 ಅರ್ಧಶತಕ ದಾಖಲಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ 108 ಪಂದ್ಯ ಆಡಿ 3092 ರನ್ ಗಳಿಸಿದ್ದಾರೆ.
ಇದನ್ನೂ ಓದಿ IPL 2025: ಐಪಿಎಲ್ ಉಳಿದ ಪಂದ್ಯ ಆಡದಂತೆ ವಿದೇಶಿ ಆಟಗಾರರಿಗೆ ಮನವಿ ಮಾಡಿದ ಆಸೀಸ್ ವೇಗಿ