Viral News: ಬ್ರೇಕಪ್ ಮಾಡಿಕೊಂಡ ಹುಡುಗಿಗೆ ಮಾಜಿ ಲವರ್ ಕೊಟ್ಟ ಶಾಕ್ ಸಾಮಾನ್ಯದ್ದಲ್ಲ; ಹೀಗೂ ಇರ್ತಾರ ಜನ?!
ಬ್ರೇಕಪ್ ಮಾಡಿದ್ದಕ್ಕೆ ಸೇಡು ತೀರಿಸಿಕೊಂಡ ಮಾಜಿ ಗೆಳೆಯ ಸಂಬಂಧದಲ್ಲಿದ್ದಾಗ ತನಗಾಗಿ ಖರೀದಿಸಿದ ತಿಂಡಿಗಳಿಗೆ ನೀಡಿದ ಹಣವನ್ನು ಮರುಪಾವತಿ ಮಾಡುವಂತೆ ಕೇಳಿದ್ದಾನೆ. ಈ ವಿಚಾರವನ್ನು ಗೆಳತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಈಗ ವೈರಲ್ ಆಗಿದೆ.

ಸಾಂದರ್ಭಿಕ ಚಿತ್ರ.

ಪ್ರೀತಿಯಲ್ಲಿ ಮೋಸ, ವಂಚನೆ ಕಾಣಿಸಿಕೊಂಡು ಕೊನೆಗೆ ಬ್ರೇಕಪ್ ಆಗುವುದು ಸಹಜ. ಬ್ರೇಕಪ್ ನಂತರ ಕೆಲವರು ತಮ್ಮ ಪಾಡಿಗೆ ತಾವು ಇದ್ದು ಬಿಡುತ್ತಾರೆ. ಆದರೆ ಇಲ್ಲೊಬ್ಬ ಮಾಜಿ ಗೆಳೆಯ ಪ್ರೀತಿಸುವ ವೇಳೆ ಪ್ರಿಯತಮೆಗೆ ತಿನ್ನಿಸಿದ ತಿಂಡಿಗಳಿಗೆ ನೀಡಿದ ಹಣವನ್ನು ಮರುಪಾವತಿ ಮಾಡುವಂತೆ ಕೇಳಿದ್ದಾನೆ. ಇದು ಅವಳಿಗೆ ಶಾಕ್ ನೀಡಿದೆ. ಈ ವಿಚಾರವನ್ನು ಆಕೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಈಗ ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ. ಈ ವೈರಲ್ ಆಗಿರುವ ಪೋಸ್ಟ್ ಅನ್ನು ದಿವ್ಯಾ ಎಂಬವರು ಹಂಚಿಕೊಂಡಿದ್ದಾರೆ. ಅವರು ತನ್ನ ಮಾಜಿ ಗೆಳೆಯ ಆರ್ಯನ್ ಜತೆಗಿನ ವ್ಯಾಟ್ಸ್‌ಆ್ಯಪ್ ಸಂಭಾಷಣೆಯ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಇಬ್ಬರೂ ಒಟ್ಟಿಗೆ ಇದ್ದಾಗ ತನಗಾಗಿ ಖರ್ಚು ಮಾಡಿದ ಹಣವನ್ನು ಪಾವತಿಸಲು ಆತನೀಗ ಕೇಳುತ್ತಿದ್ದಾನೆ ಎಂದು ತಿಳಿಸಿದ್ದಾರೆ.
ಆರ್ಯನ್ ಆಕೆಗೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಆರ್ಡರ್‌ಗಳ ಎಲ್ಲ ಸ್ಕ್ರೀನ್‌ಶಾಟ್‌ಗಳನ್ನು ಕಳುಹಿಸಿದ್ದಾನೆ. ಆ ಪಟ್ಟಿಯಲ್ಲಿ ಮಖಾನಾ ಪ್ಯಾಕೆಟ್‌ಗಳು, ಮಸಾಲಾ ಚಿಪ್ಸ್, ಸ್ಪ್ರೈಟ್, ಸಾಫ್ಟ್ ಡ್ರಿಕ್ಸ್ ಬಾಟಲ್, ಜೆಲ್ಲಿ ಕ್ರಿಸ್ಟಲ್, ಡ್ರೈಫ್ರೂಟ್ಸ್ ಮತ್ತು ಟೊಮೆಟೊ ಮತ್ತು ಈರುಳ್ಳಿಯಂತಹ ಅಡುಗೆಮನೆಯಲ್ಲಿ ಬಳಸುವ ಕೆಲವು ವಸ್ತುಗಳು ಕೂಡ ಸೇರಿವೆ. ಹಾಗೇ ಅದರಲ್ಲಿ ಆ ಐಟಂಗಳಿಗೆ ಮಾಡಲಾದ ಬಿಲ್‍ಗಳಿವೆ. ಅದರ ಜತೆಗೆ ಆತ ಪ್ರೀತಿಯಿಂದ ಅವಳ ಮನೆ ಬಾಗಿಲಿಗೆ ಕಳುಹಿಸಿದ್ದ ಉಡುಗೊರೆಗಳಿಗೆ ಹಣವನ್ನು ನೀಡುವಂತೆ ಒತ್ತಾಯಿಸಿದ್ದಾನೆ. ದಿವ್ಯಾ ಇದನ್ನು ಕಂಡು ಶಾಕ್ ಆಗಿ ಪೋಸ್ಟ್ ಮಾಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ...
my ex is asking a refund for the snacks he sent me during our relationship. What stage of the breakup is this? 😭 pic.twitter.com/4ra6pbSUS5
— divya (@certifiedbkl) May 14, 2025
ಈ ಪೋಸ್ಟ್ ಕೂಡಲೇ ವೈರಲ್ ಆಗಿ ಒಂಬತ್ತು ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಹಾಗೇ ಸಿಕ್ಕಾಪಟ್ಟೆ ಜನ ಕಾಮೆಂಟ್ ಮಾಡಿದ್ದಾರೆ. "ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಭಯಾನಕವಾಗಿವೆ. ಅವರು ಸ್ನ್ಯಾಕ್ಸ್‌ನ ಹಣದ ಲೆಕ್ಕವನ್ನು ಇಟ್ಟುಕೊಂಡಿರುತ್ತಾರೆ" ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು, "ಆರ್ಯನ್ ಎಂಬ ವ್ಯಕ್ತಿ: ಬಹಳ ಡೆಂಜರಸ್" ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬರು, "ಬ್ರೋ ಇಡೀ ಪುರುಷ ಸಮುದಾಯದಿಂದ ನಿಮಗೆ ಗೌರವ ಸಲ್ಲಿಸುತ್ತೇನೆ" ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬ ತನ್ನ ಹುಟ್ಟುಹಬ್ಬದ ಸೆಲೆಬ್ರೆಷನ್ ದಿನವೇ ತನ್ನ ಹೆಂಡತಿಯ ಅಕ್ರಮ ಸಂಬಂಧದ ಬಗ್ಗೆ ಹೇಳಿ ನೆರೆದವರಿಗೆ ಶಾಕ್ ನೀಡಿದ್ದ. ಅದೂ ಅಲ್ಲದೇ, ತನ್ನ ಹೆಂಡತಿಯನ್ನು ಪಾರ್ಟಿಯಿಂದ ಹೊರ ಹಾಕಿದ್ದ. ಕೊನೆಗೆ ಹುಟ್ಟುಹಬ್ಬದ ಪಾರ್ಟಿ ವಿಚ್ಛೇದನ ಪಾರ್ಟಿ ಆಗಿ ಬದಲಾಯಿತು. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ಮಗಳಿಗೆ ಕಿರುಕುಳ ನೀಡಿದ ಯುವಕನಿಗೆ ಚಪ್ಪಲಿ ಸೇವೆ; ಈ ಮಹಾತಾಯಿಯ ವಿಡಿಯೊ ವೈರಲ್!
ಆತ ಉಂಗುರವನ್ನು ಹೆಂಡತಿಗಾಗಿ ಗಿಫ್ಟ್ ನೀಡಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ! ಅಗ್ನಿಶಾಮಕ ದಳದ ಸಿಬ್ಬಂದಿ ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗಿ ಅವಳ ಕೈಯಲ್ಲಿದ್ದ ಉಂಗುರವನ್ನು ತೆಗೆಯುವಂತೆ ಹೇಳಿದ್ದಾನೆ. ಅವಳ ಹಣೆಗೆ ಪ್ರೀತಿಯ ಮುತ್ತನಿಟ್ಟ ಆತ ಆಕೆ ಮಾಡಿದ ದಾಂಪತ್ಯ ದ್ರೋಹದ ಕುರಿತು ಹೇಳುತ್ತಾ ತನಗೆ ಆಕೆಯ ಪ್ಲ್ಯಾನ್ ಏನು ಎಂಬುದು ಎಲ್ಲ ತಿಳಿದಿದೆ ಎಂದಿದ್ದಾನೆ. ಅವನ ಆರೋಪಗಳನ್ನು ಹೆಂಡತಿ ತಳ್ಳಿಹಾಕಿದಾಗ ತನ್ನ ಬಳಿ ಪುರಾವೆಗಳಿರುವುದಾಗಿ ತಿಳಿಸಿದ್ದಾನೆ.