Thursday, 19th September 2024

ಯಾವುದು ಹಿಂಸೆ, ಯಾವುದು ಅಹಿಂಸೆ?

ಅವಲೋಕನ

 ಡಾ. ಸಿ.ಜಿ. ರಾಘವೇಂದ್ರ ವೈಲಾಯು

 ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದ ನಲಂದಾ, ವಿಕ್ರಮಶಿಲಾ, ತಕ್ಷಶಿಲಾದಂಥ ಬೃಹತ್ ವಿಶ್ವವಿದ್ಯಾಲಯ ಗಳು ಕೇವಲ ಬೆರಳೆಣಿಕೆಯಷ್ಟು ಸಂಖ್ಯೆೆಯ ಆಕ್ರಮಣ ಕಾರರಿಂದ ನಾಶವಾಯಿತೆಂದರೆ, ಅದು ಅಹಿಂಸೆಯ ವಿಪರೀತಾಚರಣೆಯಲ್ಲವೇ?

ಭಾರತೀಯ ಧರ್ಮಶಾಸ್ತ್ರದಲ್ಲಿ ಹಲವು ಕಡೆ ಉಲ್ಲೇಖವಾಗಿರುವ ಅಹಿಂಸಾತತ್ವವು ಸನಾತನ ಧರ್ಮ, ಜೈನ ಹಾಗೂ ಬೌದ್ಧ ಪಂಥಗಳಲ್ಲೂ ಉಲ್ಲೇಖವಾಗಿ ಆಚರಿಸಲ್ಪಟ್ಟಿದೆ. ಪತಂಜಲಿಯ ಅಷ್ಟಾಾಂಗಯೋಗದಲ್ಲಿ ಮೊದಲ ಮೆಟ್ಟಿಲಾದ ಪ್ರಾಾಥಮಿಕ ಅಂಗವಾಗಿ ಅಹಿಂಸೆಯು ಹೇಳಲ್ಪಟ್ಟಿದೆ. ಇದನ್ನು ಆಚರಿಸದೇ ಧ್ಯಾಾನ, ಸಮಾಧಿಗಳಿಗೆ ಅರ್ಹತೆಯೇ ಇಲ್ಲ. ಅಹಿಂಸಾಚರಣೆಯು ವ್ಯಕ್ತಿಿಗೆ ನೈತಿಕ ಶಕ್ತಿಿ, ಬೌದ್ಧಿಿಕ ಶುದ್ಧಿಿ ಮತ್ತು ಮಾನಸಿಕ ಸ್ಥಿಿರತೆಯನ್ನೊೊದಗಿಸಬಲ್ಲುದು. ಅಹಿಂಸಾ ಸತ್ಯಮಕ್ರೋೋಧ ಸ್ತ್ಯಾಗಃ ಶಾಂತಿರಪೈಶುನಂ, ಆತ್ಮೋೋದ್ಧಾಾರವೇ ಅಹಿಂಸೆ ಯೆಂಬುದು ಭಗವಾನ್ ಶ್ರೀಕೃಷ್ಣನ ಗೀತೋಪದೇಶಲ್ಲಿದೆ.

ಸಕಲ ವೇದ ಪುರಾಣಗಳಲ್ಲೂ ಅಹಿಂಸೆಯನ್ನೇ ಪ್ರತಿಪಾದಿಸಲಾಗಿದೆ. ರಾಮಾಯಣವು ಪ್ರಾಾರಂಭವಾಗುವುದೇ ಹಿಂಸೆಯ ಖಂಡನಾ ಶ್ಲೋೋಕದಿಂದ. ಅಘ್ನ್ಯಾಾ ಯಜಮಾನಸ್ಯ ಪಶೂನ್ಪಾಾಹಿ ಎಂದು ಯಜುರ್ವೇದದಲ್ಲಿ ಭ್ರೂಣ, ಪ್ರಾಾಣಿ ಇತರೇ ಹಿಂಸೆಯನ್ನು ಖಂಡಿಸಲಾಗಿದೆ. ಪ್ರಾಾಣಿಬಲಿಯೆಂಬುದು ಮ್ಯಾ್ಸಾೃ್‌ ಮುಲ್ಲರನಂಥ ದುರಾಗ್ರಹಪೀಡಿತ ಪಾಶ್ಚಾಾತ್ಯರು ತಮ್ಮ ಮೂಗಿನ ನೇರಕ್ಕೆೆ ನಿರಾಧಾರವಾಗಿ ಸೃಷ್ಟಿಿಸಿದ ಅಪಸಿದ್ಧಾಾಂತ ಗಳಲ್ಲೊಂದು. ಅರ್ಧಮರ್ಧ ಸಂಸ್ಕೃತವನ್ನು ತಿಳಿದು ವ್ಯಾಾಖ್ಯಾಾನ ಮಾಡಿದರೆ ಹೀಗೇ ಆಗೋದು.

ಯಜ್ಞಕ್ಕೆೆ ಅಧ್ವರವೆಂದೂ ಹೇಳುತ್ತಾಾರೆ. ಧ್ವರ ಎಂದರೆ ಹಿಂಸೆ / ದೌರ್ಜನ್ಯ. ಇದನ್ನು ವರ್ಜಿಸುವ ವೈದಿಕ ಕ್ರಿಿಯೆಯೇ ಅಧ್ವರ. ಹೀಗಾಗಿ ಯಜ್ಞವೆಂದರೆ ಶ್ರೇಷ್ಠವಾದ ಆಜ್ಯಗಳನ್ನು (ನಮ್ಮ ದುಷ್ಟ ಕರ್ಮಗಳನ್ನೂ) ಇದಂ ನ ಮಮ ಎಂದು ಅಗ್ನಿಿಯಲ್ಲಿ ಹೋಮಿಸಿ ಅರ್ಪಣೆ (ತ್ಯಾಾಗ)ದಿಂದ ನವಸೃಷ್ಟಿಿ ಯೆನ್ನುವ ಪ್ರತೀಕ. ಇದು ಆಧುನಿಕ ಭೌತವಿಜ್ಞಾನದ ಸಿದ್ಧಾಾಂತಕ್ಕೆೆ ಸರಿಹೊಂದುತ್ತದೆ.

‘ಅಹಿಂಸಾ ಪರಮೋಧರ್ಮ’ ಎಂಬುದು ಮಹಾಭಾರತದ ಅಮರ ಸಂದೇಶಗಳಲ್ಲೊಂದು. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ. ಇಲ್ಲವೇ ಅದು ಜೈನ, ಬೌದ್ಧರಂತೆ ವಿಪರೀತಾರ್ಥವಾಗಿ ಕೊನೆಗೆ ಅಪಾರ್ಥವಾಗಿ ಅಪಾಯ ತಂದೊಡ್ಡಬಹುದು. ಸಮಕಾಲೀನ ಭಾರತೀಯ ಇತಿಹಾಸದಲ್ಲಿ ಘಟಿಸಿದ್ದೂ ಹೀಗೇ. ಧರ್ಮಶಾಸ್ತ್ರಗಳು ಎಂದಿಗೂ ಏಕಪಕ್ಷೀಯ ಹಿಂಸೆಯನ್ನು ಖಂಡಿಸಿವೆ. ಆದರೆ ಅವು ಏಕಪಕ್ಷೀಯ ಅಹಿಂಸೆಯನ್ನೂ ವಿರೋಧಿಸಿವೆ. ಅಭಿನವ ಗಾಂಧಿವಾದಿಗಳು ಇದೇ ಶ್ಲೋೋಕದ ಮುಂದಿನ ಭಾಗವಾದ ‘ಧರ್ಮ ಹಿಂಸಾ ತಥೈವಚ’ವನ್ನು ತಪ್ಪಿಿಯೂ ಅವರ ದುರ್ವಾದದ ಸುಳಿಯಿರುವುದು ಅಲ್ಲೇ. ತಾವೇ ಮೊದಲಾಗಿ ಮಾಡುವ ಏಕಪಕ್ಷೀಯ ಹಿಂಸೆಯನ್ನು ಶಾಸ್ತ್ರ ತಪ್ಪೆೆಂದರೂ, ಧರ್ಮದ ಉಳಿವಿಗಾಗಿ ಹಿಂಸೆಯನ್ನು ಮಾಡುವುದಕ್ಕೆೆ ಯಾವ ಅಡ್ಡಿಿಯೂ ಇಲ್ಲ. ವೈದಿಕೀ ಹಿಂಸಾ ಹಿಂಸಾ ನ ಭವತೀ. ಇಲ್ಲವಾದರೆ ಎಲ್ಲೆಲ್ಲೂ ಅಧರ್ಮದ ಕೈಮೇಲಾಗಿ ್ಠ್ಟಜ್ಝಿ ಟ್ಛ ಠಿಛಿ ್ಛಜಿಠಿಠಿಛಿಠಿ ಎಂಬ ಮಾತ್ಸ್ಯನ್ಯಾಾಯವೇ ವಿಜೃಂಭಿಸಬಹುದು.

ಅದನ್ನೇ ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ ಗೀತೆಯಲ್ಲಿ ಬೋಧಿಸಿದ್ದು. ಕರ್ಮದ ಉದ್ದೇಶ ಮುಖ್ಯ. ಸನಾತನ ಧರ್ಮದಲ್ಲಿ ಬೇರೆ ಬೇರೆ ಆಶ್ರಮಗಳಿಗೆ ಅಹಿಂಸಾಚರಣೆಯ ವ್ಯತ್ಯಾಾಸವಿದೆ. ಶುದ್ಧ ಅಹಿಂಸೆಯು ಸಂಸಾರಿಗಲ್ಲ. ಅದು ಕೇವಲ ಸನ್ಯಾಾಸಿಗಷ್ಟೇ ವಿಹಿತ. ಸಂಸಾರಿಗೆ ಅದು ಅಸಾಧ್ಯ. ಆದಾಗ್ಯೂ ಆಚಾರ್ಯ ಮಧ್ವರೊಮ್ಮೆೆ ತಮ್ಮ ದಂಡದಿಂದ ದರೋಡೆಕೋರರನ್ನು ತಾವೇ ಹೊಡೆದೋಡಿಸಿದ್ದೂ, ಅಧರ್ಮದ ನಾಶಕ್ಕಾಾಗಿ ಪರಶುರಾಮರು ಶಸ್ತ್ರಹಿಡಿದು ದುರುಳ ಕ್ಷತ್ರಿಿಯರ ನಾಶದಲ್ಲಿ ತೊಡಗಿದ್ದೂ ಇತ್ಯಾಾದಿ ಆಪದ್ಧರ್ಮದ ಸಂದರ್ಭಕ್ಕೆೆ ಸೂಕ್ತ ಉದಾಹರಣೆಗಳು. ಅಹಿಂಸೆಯು ದೌರ್ಬಲ್ಯವಾಗಬಾರದು.

ಹಾವಿಗೆ ಕಚ್ಚುವುದು ಬೇರೆ, ಭುಸುಗುಟ್ಟುವುದು ಬೇರೆ. ಸ್ವರಕ್ಷಣೆಗಾಗಿ ಮೊದಲು ಭುಸುಗುಟ್ಟುವುದು ಮತ್ತು ಕೊನೆಯದಾಗಿ ಕಚ್ಚುವುದೂ ಹಿಂಸೆಯಾಗಲಾರದು. ಹಾಗಿಲ್ಲದಿದ್ದರೆ ದೇವರು ಹಾವಿಗೆ ನೀಡುತ್ತಿಿರಲಿಲ್ಲ. ಅಕಾರಣವಾಗಿ ಕಚ್ಚಿಿದರೆ ಅದು ಹಿಂಸೆ. ಇದನ್ನು ರಾಮಕೃಷ್ಣ ಪರಮಹಂಸರು ಸುಂದರ ಕಥೆಯೊಂದರ ಮೂಲಕ ಹೇಳಿದ್ದಾರೆ. ಹಿಂಸೆಯು ಧರ್ಮಕ್ಕೆೆ ಅನುಕೂಲವಾಗಿದ್ದರೆ ಅದು ಅಹಿಂಸೆಯೆನ್ನಿಿಸುತ್ತದೆ. ಇಲ್ಲಿ ಧರ್ಮವೆಂದರೆ ಮತ ಪಂಥವಲ್ಲ. ವಿಶಾಲ ವೈಶ್ವಿಿಕ ರೀತಿಯ ಲೋಕನೀತಿ. ರಾಮನು ವಾಲಿಯನ್ನೋೋ, ರಾವಣನನ್ನೋೋ ಶಿಕ್ಷಿಸುವುದು ವಧೆಯೆನ್ನಿಿಸಿದರೆ, ರಾವಣನು ಋಷಿಗಳನ್ನು ಹಿಂಸಿಸುವುದು ಕೊಲೆಯೆನ್ನಿಿಸುತ್ತದೆ. ಇದು ಹಿಂಸೆ ಅಹಿಂಸೆಯ ಸತ್ಯವಾದ ಪರಿಕಲ್ಪನೆ. ಧರ್ಮಬಾಹಿರವಾದುದು ಅಹಿಂಸೆ. ಕಣ್ಣೆೆದುರೇ ಅಮಾಯಕರಿಗೆ ಅನ್ಯಾಾಯ, ಹಿಂಸೆಯಾದಾಗ ಪ್ರತಿಭಟಿಸದೆಯೇ ಮೂಕಪ್ರೇಕ್ಷಕರಂತೆ ಸುಮ್ಮನಿದ್ದರೆ ಅದೂ ಆದರೆ ಅಧರ್ಮಿಗಳನ್ನು ಸಕಾರಣವಾಗಿ ಶಿಕ್ಷಿಸಿದರೆ ಅದು ಅಹಿಂಸೆಯೆಂದೇ ಕರೆಸಿಕೊಳ್ಳುತ್ತದೆ.

ಹೀಗೆ ಅಹಿಂಸೆಯ ವಿಪರೀತಾರ್ಥಗಳಿಂದ ಭಾರತದಲ್ಲಿ ಪರಂಪರಾಗತವಾಗಿ ಬಲಿಷ್ಠವಾಗಿದ್ದ ಕ್ಷಾತ್ರವು ಹ್ರಾಾಸವಾಗಿ ಭಾರತವು 1000 ವರ್ಷಗಳ ಕಾಲ ಕೊಲೆ, ಸುಲಿಗೆ, ಹಿಂಸೆ, ದಬ್ಬಾಾಳಿಕೆ, ಪರಕೀಯರ ಆಕ್ರಮಣ ಮತ್ತು ಮತಾಂತರಗಳಿಗೆ ಸತತವಾಗಿ ಈಡಾಯಿತು. ಮೊದಲಿಗೆ ನಮ್ಮ ರಾಜರು ಬೌದ್ಧ ಮತ್ತು ಜೈನ ಧರ್ಮಗಳ ಪ್ರಭಾವಕ್ಕೆೆ ಒಳಗಾಗಿ ಅಹಿಂಸೆಯ ವಿಪರೀತಾರ್ಥದಿಂದ ಕ್ಷಾತ್ರವನ್ನು ಕಡೆಗಣಿಸಿ ದಂಡೆತ್ತಿಿ ಹೋಗಲು ಅಲ್ಲದಿದ್ದರೂ ಕನಿಷ್ಟ ದೇಶದ ರಕ್ಷಣಾರ್ಥವಾಗಿ ಬೇಕಾದಷ್ಟು ಪೋಷಿಸದೇ ಸಾಲುಸಾಲು ಸೋಲುಗಳ ಸರಮಾಲೆಯನ್ನೇ ಕಂಡು ಭಾರೀ ಬೆಲೆ ತೆತ್ತುದು ಚರಿತ್ರೆೆಯ ಪುಟಗಳಲ್ಲಿ ಸ್ಪಷ್ಟವಾಗಿ ದಾಖಲಿದೆ. ಆದರೂ ನಿರಂತರ ಪ್ರತಿರೋಧವಂತೂ ಇದ್ದೇ ಇತ್ತು. ಒಮ್ಮೆೆ ಮಾಡಿದ ತಪ್ಪಿಿನಿಂದ ತಿದ್ದಿಕೊಳ್ಳದಿದ್ದರೆ ಏನು ಪ್ರಯೋಜನ?

ಹೆಚ್ಚಿಿನ ಹಿಂದೂ ರಾಜರ ಸೋಲಿಗೆ ಪ್ರಮುಖ ಕಾರಣವೇ ಧರ್ಮಯುದ್ಧ (ಬೃಹಸ್ಪತಿ ನೀತಿ). ಅವರು ಕ್ರೂರಿ, ಕುಟಿಲ, ವಿದೇಶಿ ಆಕ್ರಮಣಕಾರರೊಂದಿಗೂ ಇತರರಂತೆ ಉದಾರವಾಗಿ ವರ್ತಿಸಿ ನಂಬಿ ಕೆಟ್ಟರು. ಅಪಾತ್ರನಿಗೆ ಅನುಗ್ರಹ ಸಲ್ಲದೆಂದು ಮನುಸ್ಮತಿಯಲ್ಲಿ ಹೇಳಲಾಗಿದೆ. ಕೃಷ್ಣ ಹೇಳುತ್ತಾಾನೆ, ಮಾಯಯಾ ವಧ್ಯಾಾ’ ಅರ್ಥಾತ್ ಅಧರ್ಮಿಯನ್ನು ಅಧರ್ಮದಿಂದಲೇ ಕೊಲ್ಲಬೇಕು. ಮುಳ್ಳನ್ನು ಮುಳ್ಳಿಿನಿಂದಲೇ ತೆಗೆಯಬೇಕು. ಇದು ಕಲಿಯುಗದ ಧರ್ಮ. ಅಧರ್ಮಿಗಳ ಜತೆಗೆ ಧರ್ಮಯುದ್ಧ ಮಾಡುವುದು ಮೂರ್ಖತನ ಮತ್ತು ಆತ್ಮನಾಶಕ್ಕೆೆ ಹೇತು. ರಾಜಕೀಯದ ಈ ಶುಕ್ರನೀತಿಯನ್ನು ಚಾಣಕ್ಯ, ಶಿವಾಜಿ, ಮಹಾರಾಣಾ ಪ್ರತಾಪನ ಹೊರತಾಗಿ ಬೇರಾರೂ ಪಾಲಿಸಿದಂತಿಲ್ಲ. ಹಾಗಾಗಿ ಹೆಚ್ಚು ಶಕ್ತಿಿಯಿದ್ದರೂ (ಕು)ಯುಕ್ತಿಿಯಿಲ್ಲದೆಯೇ ಸೋತ ಅನೇಕ ಸಂದರ್ಭಗಳಿವೆ.

ಆದರೆ 1857ರ ಮೊದಲ ಸ್ವಾಾತಂತ್ರ್ಯ ಸಂಗ್ರಾಾಮದ ಬಳಿಕ ಬೂದಿ ಮುಚ್ಚಿಿದ ಕೆಂಡದಂತಿದ್ದ ಭಾರತೀಯರ ಕ್ಷಾತ್ರವು ವಾಸುದೇವ ಫಡಕೆಯ ಬಲಿದಾನದಿಂದ ಮತ್ತೆೆ ಪ್ರಜ್ವಲಿಸಿ ಉರಿಯಿತು. ಅನೇಕ ಕ್ರಾಾಂತಿವೀರರು ತಮ್ಮ ಅಪ್ರತಿಮ ಕ್ಷಾತ್ರವನ್ನು ಮೆರೆದು ದೇಶಭಕ್ತಿಿಯ ಯಜ್ಞಜ್ವಾಾಲೆಗೆ ತಮ್ಮ ಆತ್ಮಾಾಹುತಿಯ ಸಮಿಧೆಯನ್ನು ಸಮರ್ಪಿಸಿ ಹುತಾತ್ಮರಾದರು. ಹೀಗೆ ಅನೇಕ ದಶಕಗಳವರೆಗೂ ಮೆರೆದ ಕ್ಷಾತ್ರವು ಸುಭಾಷರ ಐಎನ್‌ಎ ಹೋರಾಟದಿಂದ ದೇಶಕ್ಕೆೆ ಸ್ವಾಾತಂತ್ರ್ಯವನ್ನೂ ಕೊಡಿಸಿತು. ಆದರೆ ಅದರ ಶ್ರೇಯಸ್ಸನ್ನು ಪಡೆದುಕೊಂಡಿದ್ದು ಕಾಂಗ್ರೆೆಸ್.

ಇಂಥ ಘನ ಚರಿತ್ರೆೆಯಿರುವ ನಾವು ಸ್ವಾಾತಂತ್ರ್ಯಾಾ ನಂತರ ಎಡವಿದ್ದೆಲ್ಲಿ?* ಛಿ ಇ್ಟಜಿಠಿಜ್ಚಿಿ ಟ್ಛ ಎ್ಞಜಿ ಪುಸ್ತಕದ ಕರ್ತೃ ತತ್ತ್ವಶಾಸ್ತ್ರಜ್ಞ ಎಮ್.ಎಮ್.ಕೊಠಾರಿ ತರ್ಕದ ಆಧಾರವಿಲ್ಲದೆ ಗಾಂಧೀಜಿಯವರು ಏಕಪಕ್ಷೀಯವಾಗಿ ಅಹಿಂಸೆಯನ್ನು ಹಿಂದೂಗಳಿಗೆ ಹೇರುವುದರ ಮೂಲಕ ಕ್ಷಾತ್ರದ ವಿನಾಶಕ್ಕೆೆ ಕಾರಣವಾದರು. ಹಿಂದೂಗಳು ಯಕಃಶ್ಚಿಿತ್ ಆತ್ಮರಕ್ಷಣೆಗೂ ಹಿಂಸೆ ಮಾಡದಂತೆ ಅವರು ಪ್ರತಿಬಂಧಿಸಿದ ಪರಿಣಾಮವಾಗಿ ಮೋಪ್ಲಾಾ ದಂಗೆ, ದೇಶ ವಿಭಜನೆ, ಹೈದರಾಬಾದಿನ ರಜಾಕರರ ದಂಗೆಗಳ ಕಾಲದಲ್ಲಿ ಲಕ್ಷಾಂತರ ಅಮಾಯಕರು ಮಾನ, ಪ್ರಾಾಣಾದಿಗಳನ್ನು ಕಳೆದುಕೊಳ್ಳುವಂತಾಯಿತು. ಇದು ಅಹಿಂಸೆಯ ವಿಕೃತ ವ್ಯಾಾಖ್ಯಾಾನವಲ್ಲವೇ? ಈ ದುರ್ವಾದದ ವಿಷಫಲಗಳನ್ನು ನಾವು ಇಂದಿಗೂ ಅನುಭವಿಸುತ್ತಿಿದ್ದೇವೆ. ತಥಾಕಥಿತ ಕಮ್ಯುನಿಸ್ಟರ, ಸೆಕ್ಯುಲರ್ ವಾದಿಗಳ ಹಿಂಸೆ ಮತ್ತು ಭಯೋತ್ಪಾಾದನೆಯನ್ನು * ಛ್ಝಿಿಛ್ಚಿಿಠಿಜಿಛಿ ಮತ್ತು ಏಕಪಕ್ಷೀಯ ಆಖ್ಯಾಾನವನ್ನು ಕೇಳಿದರೆ ಧರ್ಮದೇವತೆಯೇ ನೇಣು ಹಾಕಿಕೊಂಡಾಳು.

ಶಿಕ್ಷೆಯಿಲ್ಲದೆ ಕ್ಷಮೆಗೆ ಅರ್ಥವಿದೆಯೇ? ಬೇಷರತ್ ಕ್ಷಮೆಯಿಂದ ಮನಃಪರಿವರ್ತನೆ ಆದೀತೇ? ಚತುರೋಪಾಯಗಳಲ್ಲಿ ಕೊನೆಯದಾಗಿದ್ದರೂ ದಂಡಕ್ಕೆೆ ತನ್ನದೇ ಆದ ಸ್ಥಾಾನವಿದೆ. ರಾಜದಂಡ (ಕಾನೂನು)ವಿಲ್ಲದೇ, ಸೈನ್ಯವಿಲ್ಲದೇ ದೇಶ ನಡೆಸಲು ಸಾಧ್ಯವೇ? ಅಂಥ ದೇಶದಲ್ಲಿ ಸ್ವಾಾತಂತ್ರ್ಯ ಸ್ಥಿಿರವಾಗಿ ಉಳಿದೀತೇ? ನಮ್ಮ ದೇಶದ ಪ್ರಸಕ್ತ ಸನ್ನಿಿವೇಶವೇ ಇದಕ್ಕೆೆ ನಿದರ್ಶನ. ಹೀಗಾಗಿ ಈ ಆದರ್ಶಗಳು ಅತಾರ್ಕಿಕ ಹಾಗಾಗಿ ಅನುಕರಣೀಯವಲ್ಲ. ಆದರೆ ಸರ್ದಾರ್ ಪಟೇಲ್, ಲೋಕಮಾನ್ಯ ಬೇರೆಯದೇ ಸಿದ್ಧಾಾಂತ. ಅವರೆಂದೂ ಸೈನ್ಯ ಕ್ಷಾತ್ರವನ್ನು ಕಡೆಗಣಿಸಿದವರಲ್ಲ. ನೆಹರೂರ ಪಂಚಶೀಲದ ಹಗಲು ಕನಸಿನ ಬಲಿಪೀಠದಲ್ಲಿ ಜೀವ ತೆತ್ತ ಸೈನಿಕರ ಸಂಖ್ಯೆೆ ಎಷ್ಟು ಗೊತ್ತೇ?

‘ಬ್ರಹ್ಮಕ್ಷತ್ರೇ ಹಿ ಸಮ್ಯಕ್ ಪರಿಪಾಲಿತೇ ಜಗತ್ ಪರಿಪಾಲಯುತುಮಲಂ’ ಎಂದು ಆಚಾರ್ಯ ಶಂಕರರು ಹೇಳಿದ್ದಾರೆ. ಬ್ರಹ್ಮನಿರ್ದೇಶಿತ ಕ್ಷಾತ್ರವು (ಸಮನ್ವಯವು) ಯಾವ ದೇಶದಲ್ಲಿ ಭದ್ರವಾಗಿದೆಯೋ ಅಲ್ಲಿ ಧರ್ಮ ಸಾಮಾಜಿಕ ಸುವ್ಯವಸ್ಥೆೆ ಸ್ಥಿಿರವಾಗಿ ನೆಲೆಸುತ್ತದೆ. ದಂಡದ ಭಯವಿಲ್ಲದೇ ಕಾನೂನು ಪಾಲನೆಯ ನಿರೀಕ್ಷೆ ಮಾಡುವುದು ಅಸಾಧ್ಯ. ಕ್ಷಾತ್ರವಿರುವುದೇ ಹಿಂಸೆಯ ದಮನಕ್ಕಾಾಗಿ. ಪ್ರತಿ ಶಾಠ್ಯಂ ಆದರೂ ನಾತಿ ಕ್ರೂರಃ ನಾತಿ ಮೃದುಃ. ನಮಗೆ ಬೇಕಿರೋದು ಈ ಮಧ್ಯದ ದಾರಿಯೇ.
ಸಾವಿರಾರು ವಿದ್ಯಾಾರ್ಥಿಗಳು ಓದುತ್ತಿಿದ್ದ ನಲಂದಾ, ವಿಕ್ರಮಶಿಲಾ, ತಕ್ಷಶಿಲಾದಂಥ ಬೃಹತ್ ವಿಶ್ವವಿದ್ಯಾಾಲಯ ಗಳು ಕೇವಲ ಬೆರಳೆಣಿಕೆಯಷ್ಟು ಸಂಖ್ಯೆೆಯ ಆಕ್ರಮಣ ಕಾರರಿಂದ ನಾಶವಾಯಿತೆಂದರೆ, ಅದು ಅಹಿಂಸೆಯ ವಿಪರೀತಾಚರಣೆಯಲ್ಲವೇ? ಅಲ್ಲಿನ ಒಬ್ಬೊೊಬ್ಬ ವಿದ್ಯಾಾರ್ಥಿಯೂ ಒಂದೊಂದು ಕಲ್ಲನ್ನು ಕೈಗೆತ್ತಿಿಕೊಂಡಿದ್ದರೆ ಹೀಗಾಗುತ್ತಿಿತ್ತೇ? ಕಾಶೀ ವಿಶ್ವನಾಥ, ಗುಜರಾತಿನ ಸೋಮನಾಥ ದೇವಾಲಯಗಳ ಮೇಲೆ ದಾಳಿಯಾದಾಗ ಅಲ್ಲಿ ಉತ್ಸವಕ್ಕೆೆ ಸೇರಿದ್ದ ಸಹಸ್ರ ಸಂಖ್ಯೆೆಯ ಒಟ್ಟಾಾಗಿ ಹೋರಾಡಿದ್ದರೆ, ಅನರ್ಥವನ್ನು ತಡೆಯಬಹು ದಿತ್ತಲ್ಲವೇ? ಕಡಲ್ಗಳ್ಳ ವಾಸ್ಕೋೋಡಗಾಮ ಭಾರತದಲ್ಲಿ ನೆಲೆಯೂರಿದ್ದೂ, ಮಹಮ್ಮದ್ ಘೋರಿ ಪೃಥ್ವಿಿರಾಜನನ್ನು ಸೋಲಿಸಿದ್ದು ಹೀಗೆಯೇ. ಇವೆಲ್ಲಾ ನಮ್ಮ ಅಸ್ಥಾಾನ ಔದಾರ್ಯಕ್ಕೆೆ ಕೆಲವು ಉದಾಹರಣೆಗಳು.

ಇಂದಿಗೂ ಕಾಶ್ಮೀರದ ಕಣಿವೆಗಳಲ್ಲಿ ರಕ್ತಚೆಲ್ಲುವ ಭಯೋತ್ಪಾಾದಕರನ್ನು ಸ್ವಾಾತಂತ್ರ್ಯ ಹೋರಾಟಗಾರರೆಂದು ಉದಾತ್ತೀಕರಿಸಿ, ಅವರ ವಿರುದ್ಧ ದೇಶಕ್ಕಾಾಗಿ ಹೋರಾಡುವ ಸೈನಿಕರನ್ನು ಹಿಂಸ್ರಕರೆಂದು ಹೀಗಳೆಯುವ ಬುದ್ಧು(ದ್ಧಿಿ) ಜೀವಿಗಳಿಗೆ ಮತ್ತು ವಿಕಾ(ಚಾ)ರವಾದಿಗಳಿಗೆ ನಮ್ಮಲ್ಲಿ ಕೊರತೆಯೇನಿಲ್ಲ. ಇದು ಪುರಾಣಕಾಲದಿಂದಲೂ ಅನೂಚಾನವಾಗಿ ನಡೆದುಬಂದಿದ್ದೇ. ಇವರೆಲ್ಲಾ ಈ ಅಪಸಿದ್ಧಾಾಂತವನ್ನು ಗುರಾಣಿಯಾಗಿಸಿ ಹೆಸರಿನಲ್ಲಿ ನಮ್ಮ ಸೈನ್ಯದ ಮೇಲೆ ಸುಖಾಸುಮ್ಮನೆ ಗೂಬೆ ಕೂರಿಸುತ್ತಾಾರೆ. ಇವರಿಗೆ ಸಿದ್ಧಾಾಂತಗಳನ್ನು ಸ್ಥಾಾನಪಲ್ಲಟ ಮಾಡುವುದು ಅಂಗೈನ ನಿಂಬೇಕಾಯಿಯಷ್ಟೇ ಸಲೀಸು.
ಈ ಜಡತ್ವಕ್ಕೆೆ ನಿಸ್ತೇಜತೆಗೆ ಕಾರಣ ಹಿಂಸೆ ಅಹಿಂಸೆಯ ಅಪಾರ್ಥವೇ. ಸಾಮಾಜಿಕ ಜಾಡ್ಯವೂ, ಉಪೇಕ್ಷೆಯೂ ಎರಡೂ ಸಮಾಜಕ್ಕೆೆ ಅನಾಹುತಕಾರಿಯೇ. ಹಾಗಾಗಿ ಅಹಿಂಸೆಯ ಬಗ್ಗೆೆ ಇರುವ ಪೂರ್ವಾಗ್ರಹಗಳನ್ನು ನೀಗಿಸಿ, ಹಿಂಸೆಯ ನೈಜ ಪರಿಕಲ್ಪನೆಯನ್ನು ಮೂಡಿಸುವುದೇ ಈ ಬರಹದ ಉದ್ದೇಶ. ಅದು ಸಾಧ್ಯವಾದರೆ ನಮ್ಮ ಪ್ರಯತ್ನ ಸಫಲವಾದಂತೆ. ಮತ್ತೊೊಮ್ಮೆೆ ಹೇಳಬಯಸುವುದಿಷ್ಟೇ ಅಹಿಂಸಾ ಪರಮೋಧರ್ಮ, ಹಿಂಸಾ ತಥೈವಚ.

Leave a Reply

Your email address will not be published. Required fields are marked *