H K Patil Interview: ವಿಶ್ವಕ್ಕೆ ರಾಜ್ಯ ಪ್ರವಾಸೋದ್ಯಮದ ವಿಶ್ವ ದರ್ಶನ
ಕರ್ನಾಟಕ ಕೇವಲ ಐಷಾರಾಮಿ ಪ್ರವಾಸಕ್ಕೆ ಸೀಮಿತವಾಗಿರದೆ, ಕರ್ನಾಟಕದ ಇತಿಹಾಸ, ಸಂಸ್ಕೃತಿ, ಜ್ಞಾನವನ್ನು ವಿಶ್ವಕ್ಕೆ ಪಸರಿಸುವ ನಿಟ್ಟಿನಲ್ಲಿ ನಮ್ಮ ಸರಕಾರ ಕಾರ್ಯನಿರ್ವಹಿಸ ಲಿದೆ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಕೈಟ್ ಸಮಾವೇಶದ ಮೂಲಕ ವಿಶ್ವಕ್ಕೆ ಕರ್ನಾಟಕದ ಹಿರಿಮೆಯನ್ನು ತಿಳಿಸುವ ಕೆಲಸವನ್ನು ಮಾಡಲಿದೆ ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸ್ಕೃತಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ. ಕರ್ನಾಟಕ ಇಂಟರ್‌ನ್ಯಾಷನಲ್ ಎಕ್ಸ್‌ಪೋ 2025 ಸಮಾವೇಶದ ಹಿನ್ನೆಲೆಯಲ್ಲಿ ‘ವಿಶ್ವವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕೈಟ್ ಎಕ್ಸ್‌ಪೋ ಸೇರಿದಂತೆ ಕರ್ನಾಟಕದಲ್ಲಿರುವ ಪ್ರವಾಸೋದ್ಯಮಕ್ಕೆ ಒತ್ತು, ಮೂಲಸೌಕರ್ಯ ವೃದ್ಧಿಗೆ ಕ್ರಮ, ಅಂತಾರಾಷ್ಟ್ರೀಯ ಪ್ರವಾಸಿಗರನ್ನು ರಾಜ್ಯದತ್ತ ಸೆಳೆಯಲು ಸರಕಾರ ಕೈಗೊಂಡ ಕ್ರಮ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ಪ್ರವಾಸೋದ್ಯಮ, ಕಾನೂನು ಮತ್ತು ಸಂಸ್ಕೃತಿ ಸಚಿವ ಎಚ್.ಕೆ.ಪಾಟೀಲ್

ವಿಶ್ವವಾಣಿ ಸಂದರ್ಶನ: ರಂಜಿತ್ ಎಚ್.ಅಶ್ವತ್ಥ
ಕೈಟ್ ಸಮಾವೇಶದಲ್ಲಿ ಒಂದು ರಾಜ್ಯ, ಹಲವು ಜಗತ್ತು ಅನಾವರಣ
ಸುಮಾರು 500ಕ್ಕೂ ಹೆಚ್ಚು ಉದ್ಯಮಿಗಳು ಭಾಗಿ
ಕರ್ನಾಟಕ ಕೇವಲ ಐಷಾರಾಮಿ ಪ್ರವಾಸಕ್ಕೆ ಸೀಮಿತವಾಗಿರದೆ, ಕರ್ನಾಟಕದ ಇತಿಹಾಸ, ಸಂಸ್ಕೃತಿ, ಜ್ಞಾನವನ್ನು ವಿಶ್ವಕ್ಕೆ ಪಸರಿಸುವ ನಿಟ್ಟಿನಲ್ಲಿ ನಮ್ಮ ಸರಕಾರ ಕಾರ್ಯನಿರ್ವಹಿಸಲಿದೆ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಕೈಟ್ ಸಮಾವೇಶದ ಮೂಲಕ ವಿಶ್ವಕ್ಕೆ ಕರ್ನಾಟಕದ ಹಿರಿಮೆಯನ್ನು ತಿಳಿಸುವ ಕೆಲಸವನ್ನು ಮಾಡಲಿದೆ ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸ್ಕೃತಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ. ಕರ್ನಾಟಕ ಇಂಟರ್‌ನ್ಯಾಷನಲ್ ಎಕ್ಸ್‌ಪೋ 2025 ಸಮಾವೇಶದ ಹಿನ್ನೆಲೆಯಲ್ಲಿ ‘ವಿಶ್ವವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕೈಟ್ ಎಕ್ಸ್‌ಪೋ ಸೇರಿದಂತೆ ಕರ್ನಾಟಕದಲ್ಲಿರುವ ಪ್ರವಾಸೋದ್ಯಮಕ್ಕೆ ಒತ್ತು, ಮೂಲಸೌಕರ್ಯ ವೃದ್ಧಿಗೆ ಕ್ರಮ, ಅಂತಾರಾಷ್ಟ್ರೀಯ ಪ್ರವಾಸಿಗರನ್ನು ರಾಜ್ಯದತ್ತ ಸೆಳೆಯಲು ಸರಕಾರ ಕೈಗೊಂಡ ಕ್ರಮ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ಕರ್ನಾಟಕದಲ್ಲಿ ಹತ್ತಾರು ಜಗತ್ತುಗಳಿವೆ. ಈ ಜಗತ್ತನ್ನು ವಿಶ್ವಕ್ಕೆ ಪರಿಚಯಿಸುವ ದೃಷ್ಟಿ ಯಿಂದ ರಾಜ್ಯ ಸರಕಾರ ‘ಕೈಟ್’ (ಕರ್ನಾಟಕ ಇಂಟರ್‌ನ್ಯಾಷನಲ್ ಎಕ್ಸ್‌ಪೋ) ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ಕರ್ನಾಟಕ ಪ್ರವಾಸೋದ್ಯಮವನ್ನು ಮತ್ತೊಂದು ಸ್ತರಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತೇವೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಫೆ.26ರಿಂದ ಬೆಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ಇಂಟರ್ ನ್ಯಾಷನಲ್ ಎಕ್ಸ್‌ಪೋ 2025 ಸಮಾವೇಶದ ಹಿನ್ನೆಲೆಯಲ್ಲಿ ‘ವಿಶ್ವವಾಣಿ’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಕೈಟ್ ಎಕ್ಸ್‌ಪೋ ಸೇರಿದಂತೆ ಕರ್ನಾಟಕದಲ್ಲಿರುವ ಪ್ರವಾಸೋದ್ಯಮಕ್ಕೆ ಒತ್ತು, ಮೂಲ ಸೌಕರ್ಯ ವೃದ್ಧಿಗೆ ಕ್ರಮ, ಅಂತಾರಾಷ್ಟ್ರೀಯ ಪ್ರವಾಸಿಗರನ್ನು ರಾಜ್ಯದತ್ತ ಸೆಳೆಯಲು ಸರ ಕಾರದ ಕ್ರಮ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ಕೈಟ್ ಎಕ್ಸ್‌ಪೋ ಉದ್ದೇಶವೇನು?
ರಾಜ್ಯ ಸರಕಾರ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಎಕ್ಸ್‌ಪೋದ ಪ್ರಮುಖ ಉದ್ದೇಶ ಕರ್ನಾಟಕದ ಪ್ರವಾಸೋದ್ಯಮದ ತಾಕತ್ತು, ಹಿರಿಮೆ-ಗರಿಮೆಯನ್ನು ಇಡೀ ವಿಶ್ವಕ್ಕೆ ಪರಿಚ ಯಿಸಬೇಕು ಎನ್ನುವುದಾಗಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿರುವ ಪ್ರಮುಖ ಉದ್ಯಮಿ ಗಳನ್ನು ಒಂದೆಡೆ ಸೇರಿಸಿ, ಚರ್ಚಿಸಬೇಕು, ಬಿ2ಬಿ ಸಭೆಗಳು ನಡೆಸಿ, ಇದರಿಂದ ಕರ್ನಾಟಕದ ಪ್ರವಾಸೋದ್ಯಮಕ್ಕೆ ಅನುಕೂಲ ಮಾಡುವ ಜತೆಜತೆಗೆ ಹೆಚ್ಚು ಪ್ರವಾಸಿಗರನ್ನು ರಾಜ್ಯಕ್ಕೆ ಯಾವ ರೀತಿ ಸೆಳೆಯಬಹುದು ಎನ್ನುವ ಬಗ್ಗೆ ಚರ್ಚಿಸುವ ಉದ್ದೇಶ ಹೊಂದಿದ್ದೇವೆ.
ಎರಡನೇ ಕೈಟ್ ಎಕ್ಸ್‌ಪೋದ ವಿಶೇಷ ಏನು?
-ಫೆ 26ರಿಂದ 28ರವರೆಗೆ ನಡೆಯಲಿರುವ ಕೈಟ್ ಎಕ್ಸ್ ಪೋದಲ್ಲಿ ಭಾಗವಹಿಸಲು 350ಕ್ಕೂ ಹೆಚ್ಚು ಪ್ರವಾಸೋದ್ಯಮ ಕ್ಷೇತ್ರದ ಪ್ರಮುಖ ಉದ್ಯಮಿಗಳು ಬರುತ್ತಿದ್ದಾರೆ. ಇದರೊಂದಿಗೆ ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಉದ್ಯಮಿಗಳು ಪಾಲ್ಗೊಳ್ಳುತ್ತಿದ್ದಾರೆ. ಸಮಾವೇಶ ದಲ್ಲಿ ಭಾಗವಹಿಸುತ್ತಿರುವವರ ಮೂಲಕ ಕರ್ನಾಟಕಕ್ಕೆ ಪ್ರವಾಸಿಗರನ್ನು ಆಕರ್ಷಿಸುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ರಾಜ್ಯದಲ್ಲಿರುವ ಅನೇಕ ‘ಅನ್ ಎಕ್ ಪ್ಲೋರ‍್ಡ್‘ ಸ್ಥಳ ಗಳನ್ನು ವಿಶ್ವದ ಮುಂದೆ ಪರಿಚಯಿಸುವ ನಿಟ್ಟಿನಲ್ಲಿ ಈ ಸಮಾವೇಶ ಕೆಲಸ ಮಾಡಲಿದೆ.
ಈ ಎಕ್ಸ್‌ಪೋದ ಉದ್ದೇಶವೇನು?
ಪ್ರವಾಸಿಗರನ್ನು ಕರ್ನಾಟಕದತ್ತ ಸೆಳೆಯುವುದೇ ಈ ಎಕ್ಸ್‌ಪೋದ ಮುಖ್ಯ ಉದ್ದೇಶ. ಕರ್ನಾಟಕದಲ್ಲಿರುವ ಪ್ರವಾಸೋದ್ಯಮದ ತಾಕತ್ತು, ಹಿರಿಮೆ- ಗರಿಮೆಯನ್ನು ಇಡೀ ವಿಶ್ವಕ್ಕೆ ಪರಿಚಯಿಸಬೇಕು ಎನ್ನುವುದು ನಮ್ಮ ಗುರಿ. ಇದರೊಂದಿಗೆ ಪ್ರವಾಸೋದ್ಯಮ ಕ್ಷೇತ್ರದ ಪಾಲುದಾರರಾದ ಹೋಟೆಲ್ ಉದ್ಯಮಿಗಳನ್ನು, ಟ್ರಾವೆಲ್ ಏಜೆನ್ಸಿ, ಗೈಡ್ ಸೇರಿದಂತೆ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೂ ಉತ್ತೇಜಿಸುವ ಎಲ್ಲರನ್ನೂ ಒಂದೆಡೆ ಸೇರಿಸಿ, ಚರ್ಚಿಸ ಬೇಕು, ಬಿ೨ಬಿ ಸಭೆಗಳನ್ನು ನಡೆಸಬೇಕು. ಈ ಮೂಲಕ ಪ್ರವಾಸಿಗರಿಗೆ ಅನುಕೂಲ ಮಾಡು ವುದು ನಮ್ಮ ಉದ್ದೇಶವಾಗಿದೆ.
ಈ ಸಮಾವೇಶದಲ್ಲಿ ರಾಜ್ಯಕ್ಕೆ ಹೆಚ್ಚುವರಿ ಪ್ರವಾಸಿಗರನ್ನು ಯಾವ ರೀತಿ ಸೆಳೆಯಬಹುದು ಎನ್ನುವ ಬಗ್ಗೆ ಚರ್ಚಿಸಲಾಗುವುದು. ಹಾಗೇ ನೋಡಿದರೆ, ಕರ್ನಾಟಕದಲ್ಲಿ ಪ್ರವಾಸಿಗರನ್ನು ಆಕರ್ಷಿಸಬಲ್ಲ ಸಾವಿರಾರು ಸ್ಥಳಗಳಿವೆ.
ಜಗತ್ತಿನ ಹಲವು ದೇಶಗಳಲ್ಲಿ ಇಲ್ಲದ ಪ್ರವಾಸಿ ಪ್ರಪಂಚ ನಮ್ಮ ರಾಜ್ಯದಲ್ಲಿದೆ. ಯುನೆಸ್ಕೋ ಮನ್ನಣೆ ಪಡೆದಿರುವ ಹಲವು ಸ್ಥಳಗಳಿವೆ. ಈ ಎಲ್ಲವೂ ಕರ್ನಾಟಕದಲ್ಲಿದೆ ಎನ್ನುವುದು ನಮ್ಮ ಹೆಮ್ಮೆ. ಕರ್ನಾಟಕ ಯಾವುದೋ ಒಂದು ರೀತಿಯ ಪ್ರವಾಸೋದ್ಯಮವಿಲ್ಲ. ಒಂದೆಡೆ ರಾಜರು ಆಳ್ವಿಕೆ ನಡೆಸಿರುವ ಐತಿಹಾಸಿಕ ಪ್ರವಾಸೋದ್ಯಮವಿದ್ದರೆ, ಇನ್ನೊಂದೆಡೆ ಕಲೆ, ಸಂಸ್ಕೃತಿಯನ್ನು ವಿಶ್ವಕ್ಕೆ ತಿಳಿಸುವ ಹಲವಾರು ಸ್ಮಾರಕಗಳಿವೆ. ಮತ್ತೊಂದೆಡೆ ಸಹ್ಯಾದ್ರಿ ಬೆಟ್ಟ, ಕಪ್ಪತ್ತಗುಡ್ಡ, 320 ಕಿ.ಮೀ.ನಲ್ಲಿ ಚಾಚಿರುವ ಸಮುದ್ರ, ಧಾರ್ಮಿಕ, ಆಧ್ಯಾತ್ಮಿಕ ಕೇಂದ್ರಗಳು ನಮ್ಮ ರಾಜ್ಯದ ಸಂಪತ್ತು. ಯಲ್ಲಮ್ಮನ ಗುಡ್ಡ, ಹುಲಿಗೆಮ್ಮ, ದತ್ತಾತ್ರೇಯ, ಅಂಜನಾದ್ರಿ, ಬಸನಬಾಗೇವಾಡಿ ಸೇರಿದಂತೆ ರಾಜ್ಯಕ್ಕೆ ಹೆಮ್ಮೆ ಮೂಡಿಸಿದ ಕ್ಷೇತ್ರಗಳು ನಮ್ಮಲ್ಲಿವೆ. ಇವುಗಳೊಂದಿಗೆ ನಮ್ಮ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುವವರಿಗೆ, ಒಂದು ಶ್ರೇಷ್ಠ ಪ್ರವಾಸಿ ತಾಣ.
ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ), ಮೈಸೂರು, ಕರಾ ವಳಿ ಹೀಗೆ ಒಂದು ಪ್ರದೇಶದಲ್ಲಿ ಒಂದೊಂದು ಸಂಸ್ಕೃತಿ ಯೇ ಭಿನ್ನ. ಕರ್ನಾಟಕದ ಆಹಾರ ಪದ್ಧತಿಯೂ ಒಂದು ಸ್ಥಳದಿಂದ ಇನ್ನೊಂದು ಕಡೆ ಭಿನ್ನವಾಗಿದೆ. ಈ ಎಲ್ಲವನ್ನು ವಿಶ್ವಕ್ಕೆ ಪರಿಚಯಿಸಿ, ಆಕರ್ಷಣೆ ಮಾಡಿ ಕರೆತರುವ ಉದ್ದೇಶ ಈ ಸಮಾವೇಶದ್ದಾಗಿದೆ.
ದೇಶಿಯ ಪ್ರವಾಸಿಗರಿಗೆ ಹೋಲಿಸಿದರೆ, ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುವಲ್ಲಿ ರಾಜ್ಯ ಹಿಂದೆ ಉಳಿದಿದೆಯೇ?
ನೀವು ಹೇಳಿದಂತೆ ದೇಶಿ ಪ್ರವಾಸಿಗರ ಭೇಟಿಯಲ್ಲಿ ಟಾಪ್ 5ನೇ ಸ್ಥಾನದಲ್ಲಿ ಕರ್ನಾಟಕವಿದೆ. ಆದರೆ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಯಲ್ಲಿ ನಿರೀಕ್ಷಿತ ಸಂಖ್ಯೆಯಲ್ಲಿಲ್ಲ. ಅದಕ್ಕೆ ಹಲವು ಕಾರಣಗಳಿರಬಹುದು. ಪ್ರಮುಖವಾಗಿ, ಕರ್ನಾಟಕದ ಪ್ರವಾಸಿತಾಣಗಳ ಸುತ್ತ ಮುತ್ತ ವಿಮಾನ ನಿಲ್ದಾಣಗಳು ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಹಂಪಿ, ಗೋಕರ್ಣಕ್ಕೆ ಹೋಗ ಬೇಕು ಎಂದರೆ ಹುಬ್ಬಳ್ಳಿಗೆ ವಿಮಾನ ನಿಲ್ದಾಣಕ್ಕೆ ಬರಬೇಕು. ಬಾದಾಮಿ, ಐಹೊಳೆ ಸೇರಿ ದಂತೆ ಹಲವು ಪ್ರವಾಸಿ ಕ್ಷೇತ್ರಕ್ಕೆ ಹೋಗಲು ವಿಮಾನ ನಿಲ್ದಾಣಗಳಿಂದ 150ರಿಂದ 200 ಕಿಮೀ ವರೆಗೆ ರಸ್ತೆ ಪ್ರಯಾಣ ಮಾಡಬೇಕು. ಈ ಕಾರಣಕ್ಕೆ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ ಕಡಿಮೆಯಿರಬಹುದು.
ಆದ್ದರಿಂದ ಅಂತಾರಾಷ್ಟ್ರೀಯ ಹಾಗೂ ದೇಶಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ನಮ್ಮ ಸರಕಾರ ಸೀ ಪ್ಲೇನ್‌ಗಳ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಅಂದರೆ ನೀರಿನ ಮೇಲೆ ವಿಮಾನಗಳನ್ನು ಇಳಿಸಲು ಚಿಂತನೆ ನಡೆಸಿದ್ದೇವೆ. ಆಲಮಟ್ಟಿ, ಕಮಲಾಪುರ ಕೆರೆ, ಡಂಬಳ ಹಾಗೂ ಲಕ್ಕುಂಡಿಯ ಕೆರೆಗಳಲ್ಲಿ ಸೀ ಪ್ಲೇನ್ ವ್ಯವಸ್ಥೆಗೆ ಚಿಂತನೆ ನಡೆಸಿದ್ದೇವೆ. ಈ ದಿಸೆ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಇದರೊಂದಿಗೆ ವಿದೇಶಿ ಪ್ರವಾಸಿಗರಿಗೆಂದು ‘ಗೋಲ್ಡನ್ ಚಾರಿಯಟ್’ ಎನ್ನುವ ರೈಲು ಪ್ರವಾಸ ಆರಂಭಿಸಿದ್ದೇವೆ. ಇದು ಆರ್ಥಿಕವಾಗಿ ಹೊರೆಯಾ ದರೂ, ಕರ್ನಾಟಕದ ಅದ್ಭುತ ದರ್ಶನ ಮಾಡಲು ಸಹಾಯವಾಗುತ್ತದೆ. ಇದರಿಂದ ವಿದೇಶಿ ಪ್ರವಾಸಿಗರಿಗೆ ಅನೂಕಲವಾಗುತ್ತದೆ.
ಗ್ಯಾರಂಟಿ ಯೋಜನೆಯಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗಿದೆಯೇ ಅನಾನುಕೂಲವಾಗಿದೆಯೇ?
ಪ್ರವಾಸ ಮಾಡುವುದು ಚಿಂತೆ ಮಾಡುವ ಸಮಯದಲ್ಲಿ ಅಲ್ಲ. ಗ್ಯಾರಂಟಿ ಯೋಜನೆಗಳ ಜಾರಿ ಯಿಂದ ಆರ್ಥಿಕ ಚಿಂತನೆ ಕಡಿಮೆಯಾಗಿದೆ. ಇದರಿಂದಾಗಿ ಗ್ಯಾರಂಟಿ ಯೋಜನೆಯ ಮೂಲಕ ಬಡವರ ಬದುಕಲ್ಲಿ ಬದಲಾವಣೆ ಬಂದಿದೆ. ಶಕ್ತಿ ಯೋಜನೆ ಯಿಂದ ಉಚಿತವಾಗಿ ಪ್ರವಾಸ ಮಾಡಲು ಸಾಧ್ಯ ಎನ್ನುವ ಕಾರಣಕ್ಕೆ ಪ್ರವಾಸೋದ್ಯಮಕ್ಕೆ ಹೆಚ್ಚು ಅನುಕೂಲ ವಾಗಲಿದೆ. ಈ ಮೂಲಕ ದೇಶಿಯ ಪ್ರವಾಸೋದ್ಯಮ ಬಹುದೊಡ್ಡ ಪ್ರಮಾಣದಲ್ಲಿ ಬೆಳೆ ಯುತ್ತದೆ.
ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆಗಳೇನು?
ಪ್ರವಾಸೋದ್ಯಮ ಇಲಾಖೆಗೆ ಎಷ್ಟೇ ಅನುದಾನ ನೀಡಿದರೂ ಕಡಿಮೆಯಾಗುತ್ತದೆ. ಆದರೆ ಅನುದಾನ ನೀಡದಿದ್ದರೂ ನಡೆಯುವ ಇಲಾಖೆ ಇದಾಗಿದೆ. ಆದರೆ ಪ್ರವಾಸಿತಾಣಗಳಲ್ಲಿ ಮೂಲಸೌಕರ್ಯ ಯೋಜನೆ ಗಳನ್ನು ಹೆಚ್ಚಿಸಲು ಅನುದಾನ ಕೇಳುತ್ತಿದ್ದೇವೆ. ಮುಂದಿನ ದಿನದಲ್ಲಿ ಅನುದಾನ ದೊರಕುತ್ತದೆ ಎನ್ನುವ ವಿಶ್ವಾಸ ನನಗಿದೆ.
ಕೇಂದ್ರದ ಪ್ರಸಾದಂ ಸೇರಿದಂತೆ ಹಲವು ಯೋಜನೆಗಳ ಅನುಷ್ಠಾನ ಹೇಗಿದೆ?
ಕಳೆದ ಎರಡು ತಿಂಗಳಲ್ಲಿ ಕೇಂದ್ರ ಸರಕಾರ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಒಟ್ಟಾರೆ, ಮೂಲ ಸೌಕರ್ಯ ಸೃಷ್ಟಿಸಲು ಅನುದಾನ ನೀಡಿದ್ದಾರೆ. ಕೇಂದ್ರ ಸರಕಾರವೂ ಪ್ರವಾಸೋದ್ಯಮದ ಬೆಳವಣಿಗೆ ಕೇಂದ್ರ ಸರಕಾರ ಅನುದಾನ ನೀಡುತ್ತಿದೆ.
ನಿಮ್ಮ ನೆಚ್ಚಿನ ಪ್ರವಾಸಿ ಸ್ಥಳ ಯಾವುದು?
ಕರ್ನಾಟಕವೇ ನನ್ನ ನೆಚ್ಚಿನ ತಾಣ. ಅದಕ್ಕಿಂತ ದೊಡ್ಡ ಪ್ರವಾಸಿ ತಾಣವಿದೆ ಎಂದು ಅನಿ ಸಿಲ್ಲ. ಅನೇಕರಿಗೆ ಗೋವಾ ಪ್ರವಾಸೋದ್ಯಮದ ಬಗ್ಗೆ ಹೇಳುತ್ತಾರೆ. ಆದರೆ ಅಲ್ಲಿ ಕ್ಯಾಸಿನೋ ಆಡಲು ಹೋಗುತ್ತಾರೆ. ಆದರೆ ಕರ್ನಾಟಕದಲ್ಲಿ ನಮ್ಮ ಸಂಸ್ಕೃತಿಗೆ ಸೀಮಿತಗೊಳಿಸಿ ಪ್ರವಾ ಸೋದ್ಯಮಕ್ಕೆ ಅವಕಾಶ ನೀಡುತ್ತೇವೆ.
ಖಾಸಗಿ ಪಾಲುದಾರಿಕೆಯ ಕಾರ್ಯ ಹೇಗಿದೆ?
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಖಾಸಗಿಯವರು ಆಸಕ್ತಿ ವಹಿಸುತ್ತಿದ್ದಾರೆ. ಖಾಸಗಿ ಕ್ಷೇತ್ರದಿಂದ ನಮ್ಮ ಇತಿಹಾಸ, ಸಂಸ್ಕೃತಿ, ಕಲೆಯನ್ನು ಪ್ರೋತ್ಸಾಹಿಸುವುದಕ್ಕೆ ಕೇಳಿದ್ದು, ಅನೇಕರು ಸಹಾಯ ಮಾಡಲು ಒಪ್ಪಿದ್ದಾರೆ. ಕರ್ನಾಟಕದಲ್ಲಿ ಸುಮಾರು 25 ಸಾವಿರ ಸ್ಮಾರಕಗಳಿವೆ. ಈ ಪೈಕಿ ಸುಮಾರು ಐದು ಸಾವಿರ ದೊಡ್ಡ ದೇವಾಲಯಗಳಿವೆ. ಆ ಸ್ಮಾರಕಗಳನ್ನು ಉಳಿಸಿ, ಬೆಳೆಸಲು ಖಾಸಗಿ ಸಹಭಾಗಿತ್ವ ಅತ್ಯಗತ್ಯ. ಈ ಕಾರಣಕ್ಕಾಗಿಯೇ ಖಾಸಗಿಯವರಿಗೆ ಸ್ಮಾರಕ ಗಳನ್ನು ದತ್ತು ಪಡೆಯಲು ಅವಕಾಶ ನೀಡುತ್ತಿದ್ದೇವೆ. ಇದು ದೊಡ್ಡ ಚಳವಳಿಯಾಗಿ ಬೆಳೆಯಬೇಕು. ಇದರಿಂದ ನಮ್ಮ ಸ್ಮಾರಕಗಳು ಮೂಲಸ್ವರೂಪಕ್ಕೆ ಬಂದರೆ ರಾಷ್ಟ್ರ ದಲ್ಲಿಯೇ ಕರ್ನಾಟಕ ಅದ್ಭುತವಾಗಿರುವ ಪ್ರವಾಸಿ ಕೇಂದ್ರವಾಗಲಿದೆ. ಆದ್ದರಿಂದ ‘ಒಂದು ರಾಜ್ಯ ಹಲವು ಜಗತ್ತು‘ ಎಂದು ಕರೆಯುತ್ತೇನೆ. ಇದನ್ನು ಬೆಳೆಸಲು ಇನ್ನಷ್ಟು ಖಾಸಗಿ ಪಾಲು ದಾರಿಕೆ ಅಗತ್ಯ.
*
ಕರ್ನಾಟಕದಲ್ಲಿ ಕೇವಲ ಐಷಾರಾಮಿ ಅಥವಾ ಮನೋರಂಜನೆಗೆ ಸೀಮಿತಗೊಂಡಿರುವ ಪ್ರವಾಸವಲ್ಲ. ಕರ್ನಾಟಕದ ಪ್ರವಾಸ ಚಿಂತನೆ ಜ್ಞಾನವನ್ನು ತಂದುಕೊಡುವ ಪ್ರವಾಸ ವಾಗಿರಬೇಕು. ನಮ್ಮ ಇತಿಹಾಸ, ಸಂಸ್ಕೃತಿ ಅರಿಯುವಂತೆ ಮಾಡಬೇಕು.
-ಎಚ್.ಕೆ.ಪಾಟೀಲ್, ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು.