BMC: ಬಿಎಂಸಿ ಜೇಷ್ಠತಾ ಪಟ್ಟಿಯಲ್ಲೇ ಗೋಲ್ ಮಾಲ್ !
BMC: ಬಿಎಂಸಿ ಜೇಷ್ಠತಾ ಪಟ್ಟಿಯಲ್ಲೇ ಗೋಲ್ ಮಾಲ್ !
Ashok Nayak
December 20, 2024
ಅಕ್ರಮದ ಸುಳಿಯಲ್ಲಿ ಪ್ರಭಾರಿ ನಿರ್ದೇಶಕರು, ಕಾವ್ಯ ಹೊಸ ನಿರ್ದೇಶಕಿ
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಅರ್ಧ ಶತಮಾನವನ್ನೇ ಪೂರೈಸಿರುವ ರಾಜ್ಯದ ಅಗ್ರಮಾನ್ಯ ಬಿಎಂಸಿ (ಬೆಂಗಳೂರು ಮೆಡಿಕಲ್ ಕಾಲೇಜ್)ಗೆ ನಾಲ್ಕು ವರ್ಷಗಳಿಂದ ನಿರ್ದೇಶಕರೇ ಸಿಗುತ್ತಿಲ್ಲ!
ಅನೇಕ ವರ್ಷಗಳಿಂದಲೂ ಪ್ರಭಾರಿಯ ಇರುವ ರಮೇಶ್ ಕೃಷ್ಣ ಅವರನ್ನು ಎಬ್ಬಿಸಿ, ಖಾಯಂ ನಿರ್ದೇಶಕರನ್ನು ನೇಮಿಸಲು ಈತನಕ ಯಾವುದೇ ವೈದ್ಯ ಶಿಕ್ಷಣ ಸಚಿವರಿಗೂ ಸಾಧ್ಯವಾಗಿಲ್ಲ. ಇದನ್ನು ಮನಗಂಡಿರುವ ರಾಜ್ಯ ಸರಕಾರ ಈ ಬಾರಿ ಖಾಯಂ ನಿರ್ದೇಶಕರನ್ನು ನೇಮಕ ಮಾಡಲೇ ಬೇಕೆಂದು ಹಠಕ್ಕೆ ಬಿದ್ದಿದೆ. ಆದರೆ ಆಯ್ಕೆಗಾಗಿಸಿದ್ಧಪಡಿಸಿರುವ ವೈದ್ಯ ಪ್ರೊಫೆಸರ್‌ಗಳ ಸೇವಾ ಹಿರಿತನದ ಪಟ್ಟಿಯನ್ನೇ ಕಾನೂನು ಬಾಹಿರವಾಗಿ ರಚಿಸಲಾಗಿದೆ ಎನ್ನುವ ಆರೋಪಗಳಿವೆ.
ಈಗ ಸಿದ್ಧವಾಗಿರುವ ಪಟ್ಟಿಯಂತೆ ನೇಮಕ ಪ್ರಕ್ರಿಯೆ ನಡೆಸಿದರೆ ಹಿರಿಯ ಪ್ರೊಫೆಸರ್‌ಗಳು ನಿರ್ದೇಶಕ ಹುದ್ದೆಯಿಂದ ವಂಚಿತರಾಗಿ ನಾಲ್ಕು ವರ್ಷಗಳಿಂದ ಪ್ರಭಾರಿಯಲ್ಲಿರುವ ರಮೇಶ್ ಕೃಷ್ಣ ಮತ್ತೆ ಮುಂದುವರಿಯಲಿದ್ದಾರೆ ಎಂದುಮೂಲಗಳು ತಿಳಿಸಿವೆ.
ಆದರೆ ಹಿಂದಿನ ನಾಲ್ಕು ವರ್ಷಗಳಲ್ಲಿ ಬಿಎಂಸಿ ವ್ಯಾಪ್ತಿಯ ವಿಕ್ಟೋರಿಯಾ, ಮಿಂಟೋ ಆಸ್ಪತ್ರೆ, ಟ್ರಾಮಾ ಸೆಂಟರ್ ಸೇರಿದಂತೆ 5 ಆಸ್ಪತ್ರೆಗಳಲ್ಲಿ ನಡೆದಿರುವ ಅಕ್ರಮಗಳ ಹಿನ್ನೆಲೆಯಲ್ಲಿ ಪ್ರಭಾರಿ ನಿರ್ದೇಶಕರನ್ನು ತೆಗೆಯಲು ಸರಕಾರ ನಿರ್ಧರಿಸಿದೆ ಎನ್ನಲಾಗಿದೆ. ಅಷ್ಟೇ ಅಲ್ಲ. ಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮಗಳ ಕಮಟು ವಾಸನೆಯಿಂದ ಬೇಸತ್ತಿರುವವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಬಿಎಂಸಿಯ ಪ್ರಭಾರಿ ನಿರ್ದೇಶಕರನ್ನು ದೂರ ಇರಿಸಲಾಗಿದ್ದು, ಭೇಟಿ ನೀಡುವುದಕ್ಕೂ ಆಸಕ್ತಿ ತೋರಿಸಿತ್ತಿಲ್ಲ ಎಂದು ಹೇಳಲಾಗಿದೆ.
ಹೀಗಾಗಿ ಸದ್ಯ ಇಡೀ ಬೆಂಗಳೂರು ಮೆಡಿಕಲ್ ಕಾಲೇಜಿನ ವೈದ್ಯ ಪ್ರೊಫೆಸರ್‌ಗಳಲ್ಲಿ ಹಿರಿಯರೆನಿಸಿರುವ ಹಾಗೂ ಉತ್ತಮ ಹೆಸರು ಪಡೆದಿರುವ ಡಾ.ಕಾವ್ಯ ಅವರನ್ನು ನೂತನ ನಿರ್ದೇಶಕರನ್ನಾಗಿ ನೇಮಿಸಲು ಸರಕಾರನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮೌಖಿಕ ಆದೇಶದ ಜತೆಗೆ ಶಿಫಾರಸ್ಸು ಪತ್ರವನ್ನು ರವಾನೆ ಮಾಡಿದ್ದಾರೆ. ಆದರೆ ಇವರನ್ನು ಖಾಯಂ ನಿರ್ದೇಶಕರನ್ನಾಗಿ ನೇಮಿಸಲು ಸಚಿವರು ಹಿಂದೇಟು ಹಾಕುತ್ತಿದ್ದು, ಪ್ರಭಾರಿ ನೇಮಕ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ನೇಮಕಕ್ಕೂ ಮುನ್ನ ಗೋಲ್‌ಮಾಲ್: ಬಿಎಂಸಿಗೆ ನಿರ್ದೇಶಕರನ್ನು ನೇಮಕ ಮಾಡಬೇಕಾದರೆ ನಿಯಮದಂತೆ ಹಾಗೂ ಹೈಕೋರ್ಟ್ ಆದೇಶದಂತೆ ತಜ್ಞ ವೈದ್ಯರು ಅಸೋಸಿಯಟ್ ಮತ್ತು ಪ್ರೊಓಎಸರ್ ಗಳಾಗಿ ಸೇವೆ ಸಲ್ಲಿಸಿರುವ 10 ಮಂದಿ ಹಿರಿಯ ಪ್ರೊಫೆಸರ್‌ಗಳನ್ನು ಪಟ್ಟಿ ಮಾಡಬೇಕು. ಅವರಲ್ಲಿ ಒಬ್ಬರನ್ನು ನಿರ್ದೇಶಕರನ್ನಾಗಿ ನೇಮಕಮಾಡಬೇಕು. ಆದರೆ ಇಲ್ಲಿ ಸೇವಾ ಹಿರಿತನ ಆಧರಿಸಿ ಮಾಡಬೇಕಾದ ಜ್ಯೇಷ್ಠತಾ ಪಟ್ಟಿಯ ಗೋಲ್ ಮಾಲ್ ಮಾಡ ಲಾಗಿದೆ ಎಂಬ ಆರೋಪವಿದೆ.
ಅಂದರೆ ೧೦ ಮಂದಿ ತಜ್ಞ ವೈದ್ಯರೂ ಕೆಪಿಎಸ್‌ಸಿ (ಕರ್ನಾಟಕ ಲೋಕಸೇವಾ ಆಯೋಗ) ಯಿಂದ ಆಯ್ಕೆಯಾದ ದಿನಾಂಕದಿಂದ ಸೇವೆಯನ್ನು ಪರಿಗಣಿಸಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಬೇಕು. ಆದರೆ ಇಲ್ಲಿ ವೈದ್ಯರು ಬಿಎಂಸಿಗೆ ಸೇರಿದ ದಿನಾಂಕ ಅಥವಾ ವಿಲೀನವಾದ ದಿನಾಂಕವನ್ನು ಪರಿಗಣಿಸಿ ಈಗಿನ ನಿರ್ದೇಶಕರು ಜ್ಯೇಷ್ಠತಾ ಪಟ್ಟಿ ತಯಾರಿಸಿzರೆಎನ್ನಲಾಗಿದೆ. ಇದರಿಂದಾಗಿ ಹಿರಿಯರೂ ಹಾಗೂ ಸಮರ್ಥರೂ ಆಗಿರುವ ನಾಲ್ಕೈದು ಪ್ರೊಫೆಸರ್‌ಗಳು (10 ಮಂದಿ ಪಟ್ಟಿಯಿಂದ )ಆಯ್ಕೆ ಪಟ್ಟಿಯಿಂದಲೇ ಹೊರಗೆ ಉಳಿಯುತ್ತಾರೆ. ಆದ್ದರಿಂದ ಇದನ್ನು ಆಕ್ಷೇಪಿಸಿ 20ಕ್ಕೂ ಪ್ರೊಫೆಸರ್ ಗಳು ಸರಕಾರಕ್ಕೆ ಪತ್ರ ಬರೆದಿದ್ದಾರೆ. ಕೆಲವರು ಕೋರ್ಟ್ ಮೆಟ್ಟಿಲೇರಲು ಸಿದ್ಧರಾಗಿದ್ದಾರೆ.
ಜ್ಯೇಷ್ಠತಾ ಕಡತವೇ ನಾಪತ್ತೆ: ಕಾನೂನು ಪ್ರಕಾರ ನಿರ್ದೇಶಕರ ನೇಮಕಕ್ಕೆ ಸಂಬಂಧಿಸಿದಂತೆ ಪ್ರೊಫೆಸರ್ಗಳ ಜ್ಯೇಷ್ಠತಾ ಪಟ್ಟಿಯನ್ನು ಮುಖ್ಯ ಆಡಳಿತಾಧಿಕಾರಿ ಅವರು ಸಿದ್ಧಪಡಿಸಬೇಕು. ಆದರೆ ಈ ಪ್ರಕಾರವಾಗಿ ಸಿದ್ಧ ಪಡಿಸಿರುವ ಜ್ಯೇಷ್ಠತಾ ಪಟ್ಟಿಯ ಕಡತವೇ ಈಗ ನಾಪತ್ತೆಯಾಗಿದೆ. ಅದೂ ಪ್ರಭಾರಿ ನಿರ್ದೇಶಕ ರಮೇಶ್ ಕೃಷ್ಣ ಕಚೇರಿಯ ಕಾಣೆಯಾಗಿದೆ ಎಂದು ತಿಳಿದು ಬಂದಿದೆ. ಅಷ್ಟಕ್ಕೂ ಪ್ರಭಾರಿ ನಿರ್ದೇಶಕ ರಮೇಶ್ ಕಷ್ಣ ಅವರೇನಿರ್ದೇಶಕರ ಆಕಾಂಕ್ಷಿಯಾಗಿರುವ ಕಾರಣ ಆಕಾಂಕ್ಷಿಗಳಾಗಿರುವ ಜ್ಯೇಷ್ಠತಾ ಪಟ್ಟಿಯನ್ನು ಅವರು ತಯಾರಿಸು ವಂತಿಲ್ಲ. ಆದರೂ ಅವರೇ ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ.
ಡಾ.ಕಾವ್ಯ ಮುಂದಿನ ನಿರ್ದೇಶಕರು?: ಈಗಿನ ಪ್ರಭಾರಿ ನಿರ್ದೇಶಕ ರಮೇಶ್ ಕೃಷ್ಣ, ಡಿಎಂಇ ಡಾ.ಬಿ.ಎಲ.ಸುಜಾತಾ ರಾಥೋಡ್, ಡಾ.ಕಾವ್ಯ, ಮೆಡಿಷಿನ್ ವಿಭಾಗದ ಮುಖ್ಯಸ್ಥ ಡಾ.ರವಿ, ಬಯೋಕೆಮಿಸ್ಟ್ರಿ ಪ್ರಭಾರಿ ಮುಖ್ಯಸ್ಥ ಡಾ.ವಿಶ್ವನಾಥ್, ಪ್ರಧಾನಮಂತ್ರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ದಿವ್ಯಪ್ರಕಾಶ್ ಹಾಗೂ ಡಾ.ಜಗದೀಶ್ ಸೇರಿದಂತೆ 10ಕ್ಕೂ ಹೆಚ್ಚು ಆಕಾಂಕ್ಷಿಗಳಿzರೆ. ಆದರೆ ಸರಕಾರ ಡಾ.ಕಾವ್ಯ ಅವರನ್ನೇ ಆಯ್ಕೆ ಮಾಡಿ ನೇಮಕ ಮಾಡುವಸಾಧ್ಯತೆ ಹೆಚ್ಚಾಗಿದೆ ಎಂದು ಮುಖ್ಯಮಂ ತ್ರಿ ಕಚೇರಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Shivakumar Bellithatte Story: ಚನ್ನಪಟ್ಟಣ ಉಪಸಮರಕ್ಕೆ ಯೋಗಿ ಅಭ್ಯರ್ಥಿ?